ಭಾರತದ ಬಗ್ಗೆ ನೇಪಾಳದ ಮುಂದುವರೆದ ದ್ವೇಷ !

೧. ಜಾತ್ಯತೀತವಾದಿಗಳು ಇಂತಹ ವಿಷಯಗಳಲ್ಲಿ ಮೌನವಾಗಿರುತ್ತಾರೆ !

ಮಧುರೈ (ತಮಿಳುನಾಡು)ಯಲ್ಲಿ ದ್ವಿಚಕ್ರ ವಾಹನದ ಕಳ್ಳತನದ ಪ್ರಕರಣದಲ್ಲಿ ೩೬ ವರ್ಷದ ವಿಜಯನ್ ಸ್ಯಾಮ್ಯುಯೆಲ್ ಎಂಬ ಪಾದ್ರಿಯನ್ನು ಬಂಧಿಸಲಾಗಿದೆ. ಲಾಕ್‌ಡೌನ್‌ದಿಂದಾಗಿ ಆದಾಯದ ಮೂಲವನ್ನು ಕಳಿದುಕೊಂಡಿದ್ದರಿಂದ, ಅವನು ಕದಿಯಲು ಪ್ರಾರಂಭಿಸಿದನು.

೨. ಭಾರತ ಚೀನಾಗೆ ನೀಡಿದ ಪ್ರತಿಕ್ರಿಯೆ ತಿಳಿಯಿರಿ !

ಲಡಾಖ್‌ನ ಗಾಲ್ವಾನ್ ವ್ಯಾಲಿಯಲ್ಲಿ ಚೀನಾ ಮತ್ತು ಭಾರತದ ಸೈನ್ಯಗಳ ನಡುವೆ ಘರ್ಷಣೆಯಾಯಿತು. ಇದರಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು ೪೩ ಚೀನಾದ ಸೈನಿಕರು ಕೊಲ್ಲಲ್ಪಟ್ಟರು.

೩. ಕೇರಳದ ಕಮ್ಯುನಿಸ್ಟ್ ಸರಕಾರದ ಕ್ರೈಸ್ತಪ್ರೇಮವನ್ನು ತಿಳಿಯಿರಿ !

ಹಿಂದೂ ಧರ್ಮದ ಪರಿಶಿಷ್ಟ ಜಾತಿಗಳಿಂದ ಮತಾಂತರಗೊಂಡ ಕ್ರೈಸ್ತರಿಗಾಗಿ ಕೇರಳದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ೨೦೨೦-೨೦೨೧ ನೇ ಸಾಲಿಗೆ ೫ ಕೋಟಿ ರೂಪಾಯಿಗಳ ಯೋಜನೆ ಮಾಡಿದೆ.

೪. ಕೇರಳದ ಕಮ್ಯುನಿಸ್ಟ್ ಸರಕಾರದ ಕಾನೂನುದ್ರೋಹ ತಿಳಿಯಿರಿ !

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರೇಶ ಬಾಬು ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಹಮ್ಮದ ಹಾಶಿಮ್ ಪೆರೋಲ್‌ನಲ್ಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳ ವಿವಾಹಕ್ಕೆ ‘ಅತಿಗಣ್ಯವ್ಯಕ್ತಿ’ ಎಂದು ಹಾಜರಾಗಿದ್ದನು.

೫. ರಕ್ಷಣೆಯ ಕುರಿತು ಅಕ್ಷಮ್ಯ ನಿರ್ಲಕ್ಷ್ಯವನ್ನು ತಿಳಿಯಿರಿ !

ಚೀನಾದ ದುಷ್ಟತೆಯು ಅದರ ‘ಫೈವ್ ಫಿಂಗರ್ಸ್ ಆಫ್ ಟಿಬೇಟ ಸ್ಟ್ರ್ಯಾಟಜಿಯ ಭಾಗವಾಗಿದ್ದು ಈ ಕುರಿತು ಟಿಬೆಟಿಯನ್ ನಾಯಕರು ಕಳೆದ ೬೦ ವರ್ಷ ಗಳಿಂದ ಭಾರತಕ್ಕೆ ಇದರ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಟಿಬೆಟಿಯನ್ ಆಡಳಿತದ ಅಧ್ಯಕ್ಷ ಲೋಬ್ಸಾಂಗ್ ಸಾಂಗೆ ಇವರು ಹೇಳಿದ್ದಾರೆ.

೬. ಮಾನಸಿಕ ರೋಗವನ್ನು ದೂರವಿರಿಸಲು ಸಾಧನೆ ಮಾಡಿರಿ !

ಖ್ಯಾತ ಜರ್ನಲ್ ‘ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಗನುಸಾರ, ‘೨೦೧೭ ರ ವರೆಗೆ ಭಾರತದಲ್ಲಿ ೧೯ ಕೋಟಿ ೭೩ ಲಕ್ಷ ಜನರು ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅದು ದೇಶದ ಜನಸಂಖ್ಯೆಯ ಶೇಕಡಾ ೧೫ ರಷ್ಟಿತ್ತು.

೭. ಭಾರತದ ಬಗ್ಗೆ ನೇಪಾಳದ ಮುಂದುವರೆದ ದ್ವೇಷ !

ನೇಪಾಳಿ ಪುರುಷರನ್ನು ಮದುವೆಯಾಗಿ ನೇಪಾಳಕ್ಕೆ ಹೋಗುವ ಭಾರತೀಯ ಮಹಿಳೆಯರಿಗೆ ಅಲ್ಲಿನ ಪೌರತ್ವ ಪಡೆಯಲು ಏಳು ವರ್ಷ ಕಾಯಬೇಕಾಗುವ ಮತ್ತು ಅವರಿಗೆ ಎಲ್ಲಾ ರಾಜಕೀಯ ಹಕ್ಕುಗಳಿಂದ ದೂರವಿಡುವ ಪೌರತ್ವ ವಿಷಯದ ತಿದ್ದುಪಡಿ ಕಾನೂನನ್ನು ನೇಪಾಳದ ಸಂಸತ್ತಿನಲ್ಲಿ ಅನುಮೋದಿಸಲಿದೆ.