ವಿತರಕರಾದ ತುಷಾರ್ ಮಾಳಿ ಮತ್ತು ಹಿಂದುತ್ವನಿಷ್ಠರ ಪ್ರಯತ್ನದಿಂದಾಗಿ, ‘ಫ್ರೂಟ್ ಬೈಟ್ ಈ ಬಿಸ್ಕತ್ತಿನ ಪ್ಯಾಕೆಟ್‌ನಲ್ಲಿರುವ ‘ಹಲಾಲ್ನ ಮುದ್ರೆಯನ್ನು ಸಂಸ್ಥೆಯು ತೆಗೆದು ಹಾಕಿದೆ !
ನಿಪ್ಪಾಣಿ (ಬೆಳಗಾವಿ ಜಿಲ್ಲೆ), ಜೂನ್ ೧೪ (ಸುದ್ದಿ.) – ‘ಸುಂದರ್ ಇಂಡಸ್ಟ್ರೀಸೀ ಸಂಸ್ಥೆಯ ‘ಫ್ರೂಟ್ ಬೈಟ್ನ ಬಿಸ್ಕತ್ ಪ್ಯಾಕೆಟ್ ಮೇಲೆ ಹಲಾಲ್‌ನ ಮುದ್ರೆ ಇರುವುದು ಗಮನಕ್ಕೆ ಬಂದನಂತರ ನಿಪ್ಪಾಣಿಯಲ್ಲಿನ ವಿತರಕರಾದ ಶ್ರೀ. ತುಷಾರ್ ಮಾಳಿ ಅವರು ‘ಹಲಾಲ್ನ ಮುದ್ರೆ ಇರುವಂತಹ ಉತ್ಪಾದನೆಗಳು ನಮಗೆ ಬೇಡ, ಎಂದು ಸಂಸ್ಥೆಗೆ ತಿಳಿಸಿದರು. ಅದೇ ಸಮಯದಲ್ಲಿ ಆ ಪ್ರದೇಶದ ಕೆಲವು ಪ್ರಜ್ಞಾವಂತ ಧರ್ಮಪ್ರೇಮಿಗಳೂ ಈ ಸಂಸ್ಥೆಗೆ ವಿ-ಅಂಚೆಗಳನ್ನು ಅದೇ ರೀತಿ ಇತರ ವಿಧಾನಗಳ ಮೂಲಕ ‘ಹಲಾಲ್ ಮುದ್ರೆಯನ್ನು ಹೊಂದಿರುವ ಉತ್ಪಾದನೆಗಳು ನಮಗೆ ಬೇಡ, ಎಂದು ತಿಳಿಸಿದರು. ಈ ವಿರೋಧದಿಂದಾಗಿ ಜೂನ್‌ನಲ್ಲಿ ‘ಸುಂದರ್ ಇಂಡಸ್ಟ್ರೀಸ್ ಸಂಸ್ಥೆಯು ತನ್ನ ‘ಫ್ರೂಟ್ ಬೈಟ್ ಈ ಬಿಸ್ಕತ್‌ನಲ್ಲಿದ್ದ ‘ಹಲಾಲ್ ಮುದ್ರೆಯನ್ನು ತೆಗೆದುಹಾಕಿತು. (ಹಲಾಲ್ ಉತ್ಪನ್ನಗಳನ್ನು ವಿರೋಧಿಸುವ ನಿಪ್ಪಾಣಿಯ ವಿತರಕ ಶ್ರೀ. ತುಷಾರ ಮಾಳಿ ಹಾಗೂ ಆ ಪ್ರದೇಶದ ಹಿಂದುತ್ವನಿಷ್ಠ ಅವರಿಗೆ ಅಭಿನಂದನೆಗಳು ! ಇದೇ ರೀತಿ ಇತರ ಕಡೆಗಳಲ್ಲಿಯ ಹಿಂದೂಗಳು ಜಾಗರೂಕತೆಯಿಂದ ಇದ್ದು ‘ಹಲಾಲ್ನ ಉತ್ಪಾದನೆಯನ್ನು ವಿರೋಧಿಸುವುದು, ಸಂಬಂಧಪಟ್ಟ ಸಂಸ್ಥೆಗೆ ತಿಳಿಸುವುದು, ಹೀಗೆ ಮಾಡಿದರೆ ಅವರೂ ಮುದ್ರೆಯನ್ನು ತೆಗೆದು ಹಾಕುವುದು ಹಾಗೂ ಹಲಾಲ್ ಪ್ರಾಮಾಣಿಕೃತ ತೆಗೆದುಕೊಳ್ಳದಿರುವುದು ಸಾಧ್ಯವಾಗುತ್ತದೆ ! – ಸಂಪಾದಕರು)
೧. ‘ಹಲಾಲ್ ಮುದ್ರೆ ಇರುವ ಉತ್ಪಾದನೆಗಳನ್ನು ಬಹಿಷ್ಕರಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಿಪ್ಪಾಣಿಯಲ್ಲಿ ಮಾರ್ಚ್‌ನಲ್ಲಿ ಒಂದು ಸಭೆಯನ್ನು ಆಯೋಜಿಸಿತ್ತು. ಈ ಸಭೆಯ ಮೊದಲು ವಿವಿಧ ಸಂಸ್ಥೆಗಳ ಉತ್ಪಾದನೆಗಳನ್ನು ವಿತರಿಸುವ ವಿತರಕರಾದ ಶ್ರೀ. ತುಷಾರ್ ಮಾಳಿ ಈ ವಿಷಯವನ್ನು ಅರ್ಥ ಮಾಡಿಕೊಂಡರು. ಆ ನಂತರ ಶ್ರೀ. ಮಾಳಿಯವರು ‘ಸುಂದರ್ ಇಂಡಸ್ಟ್ರೀಸ್ ಸಂಸ್ಥೆಗೆ ‘ಹಲಾಲ್ ಮುದ್ರೆಯುಳ್ಳ ಉತ್ಪಾದನೆಗಳು ನಮಗೆ ಬೇಡ, ಎಂದಿದ್ದರು.
೨. ಈ ಅವಧಿಯಲ್ಲಿ ಈ ಪ್ರದೇಶದ ಅನೇಕ ನಾಗರಿಕರು, ಹಿಂದುತ್ವನಿಷ್ಠ, ಧರ್ಮಪ್ರೇಮಿ ಹಾಗೂ ವಿತರಕರು ವಿವಿಧ ಮಾಧ್ಯಮಗಳಿಂದ ‘ಸುಂದರ್ ಇಂಡಸ್ಟ್ರೀಸ್ ಸಂಸ್ಥೆಗೆ ‘ಹಲಾಲ್ ಮುದ್ರೆ ಹೊಂದಿರುವ ಉತ್ಪಾದನೆಗಳು ನಮಗೆ ಬೇಡವೇ ಬೇಡ, ಎಂದು ತಿಳಿಸಿದರು.
೩. ಎಲ್ಲೆಡೆಯ ಒತ್ತಡದಿಂದ ‘ಸುಂದರ್ ಇಂಡಸ್ಟ್ರೀಸ್ ಸಂಸ್ಥೆಯು ‘ಫ್ರೂಟ್ ಬೈಟ್ ಬಿಸ್ಕೆಟ್‌ನಲ್ಲಿರುವ ‘ಹಲಾಲ್ ಮುದ್ರೆಯನ್ನು ತೆಗೆದುಹಾಕಿತು.