ಭಾರತವು ಚೀನಾದ ವಿರುದ್ಧ ಜಾಗತಿಕ ಆಕ್ರೋಶದ ಲಾಭವನ್ನು ಪಡೆದುಕೊಳ್ಳಬೇಕು ! – ಆರ್.ಎಸ್.ಎನ್. ಸಿಂಗ, ‘ರಾ’ದ ಮಾಜಿ ಅಧಿಕಾರಿ

ಕಲಂ ೩೭೦ ರದ್ದು ಪಡಿಸಿದ ನಂತರ ಭಾರತದ ಗಿಲಗಿಟ-ಬಾಲ್ಟಿಸ್ತಾನದ ಮೇಲೆ ಹಿಡಿತಸಾಧಿಸಿದೆ. ಭಾರತದ ನಿಲುವಿನಿಂದಾಗಿ ‘ಚೀನಾ-ಪಾಕಿಸ್ತಾನ ಕಾರಿಡಾರ್’ಕ್ಕೂ ಅಡಚಣೆ ನಿರ್ಮಾಣವಗಿದೆ. ಈ ದೃಷ್ಟಿಕೋನದಿಂದ ಸದ್ಯದ ಲಢಾಖನಲ್ಲಿ ಉದ್ಭವಿಸಿದ ಸಮಸ್ಯೆಯತ್ತ ಗಮನ ನೀಡಬೇಕು. ತೈವಾನ ರಾಷ್ಟ್ರಪತಿ ತ್ಸಾಯೀ ಇಂಗ-ವೆನ್ ಇವರು ಚುನಾವಣೆಯ ಮೊದಲು ಚೀನಾದ ಒತ್ತಡಕ್ಕೆ ಮಣಿಯದೇ ತೈವಾನ ಸ್ವತಂತ್ರವೆಂದು ಘೋಷಿಸಿದರು. ಎರಡನೇ ಮಹಾಯುದ್ಧದ ನಂತರ ಅಮೇರಿಕಾವು ಜಪಾನ, ದಕ್ಷಿಣ ಕೊರಿಯಾ ಹಾಗೂ ತೈವಾನ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಏಶಿಯಾ-ಪೆಸಿಫಿಕ್ ಪ್ರದೇಶಗಳಲ್ಲಿ ಅಮೇರಿಕಾದ ವರ್ಚಸ್ಸಅನ್ನು ಬೀರಲು ಚೀನಾವು ಪ್ರಯತ್ನಿಸುತ್ತಿದೆ. ಇದೇ ಕಾಲಾವಧಿಯಲ್ಲಿ ಚೀನಾದಿಂದ ಕೊರೋನಾದ ಸಂಕ್ರಮಣ ಹರಡಿತು. ಇದು ಚೀನಾ ಕರೆ ನೀಡಿದ ಜೈವಿಕ ಯುದ್ಧವೇ ಆಗಿದೆ. ಉತ್ತರ ಕೋರಿಯಾ ಹಾಗೂ ಪಾಕಿಸ್ತಾನ ದೇಶಗಳನ್ನು ಬಿಟ್ಟರೇ, ಚೀನಾ ಜಗತ್ತಿನಲ್ಲಿ ಒಂಟಿಯಾಗಿದೆ. ಈಗಿನ ಭೂ-ರಾಜಕೀಯವು ಭಾರತದ ಪಕ್ಷದಲ್ಲಿದೆ. ಭಾರತವು ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಅದರ ಲಾಭವನ್ನು ಪಡೆದುಕೊಳ್ಳಬೇಕು, ಎಂದು ಸುರಕ್ಷಾತಜ್ಞ ಮತ್ತು ‘ರಾ’ ಹಾಗೂ ‘ಮಿಲಿಟರಿ ಇಂಟಲಿಜೆನ್ಸ್’ನ ಮಾಜಿ ಅಧಿಕಾರಿ ಆರ್.ಎಸ್.ಎನ್.ಸಿಂಗ ಇವರು ಕರೆ ನೀಡಿದ್ದಾರೆ.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜೂನ್ ೧೮ ರಂದು ‘ಚರ್ಚೆ ಹಿಂದೂ ರಾಷ್ಟ್ರದ’ ಈ ಆನ್‌ಲೈನ್ ಕಾರ್ಯಕ್ರಮದಲ್ಲಿ ‘ಭಾರತದ ಸುರಕ್ಷೆ ಹಾಗೂ ಚೀನಾದ ಬಹಿಷ್ಕಾರ’ ಈ ವಿಷಯದ ವಿಶೇಷ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ, ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಅನೀಲ ಧೀರ್, ಅದೇರೀತಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರೂ ಮಾರ್ಗದರ್ಶನ ಮಾಡಿದರು. ‘ಫೇಸ್‌ಬುಕ್’ ಹಾಗೂ ‘ಯೂ ಟ್ಯೂಬ್’ನ ಮಾಧ್ಯಮದಿಂದ ಪ್ರಸರಣಗೊಂಡ ಈ ಆನ್‌ಲೈನ್ ಕಾರ್ಯಕ್ರಮವನ್ನು ಹೆಚ್ಚುಕಡಿಮೆ ೪೦ ಸಾವಿರ ಜನರು ವೀಕ್ಷಿಸಿದರೆ, ಫೇಸ್‌ಬುಕ್ ಮಾಧ್ಯಮದಿಂದ ೧ ಲಕ್ಷ ೧೩ ಸಾವಿರ ಜನರ ತನಕ ಈ ವಿಷಯ ತಲುಪಿತು.

ಭಾರತದ ಕೆಲವು ಚೀನಾಪ್ರೇಮಿಗಳಿಗೆ ‘ಭಾರತವು ಚೀನಾಗಿಂತ ದುರ್ಬಲವಾಗಿದೆ’, ಎಂಬ ಅಪಪ್ರಚಾರವನ್ನು ದೊಡ್ಡ ಪ್ರಮಾಣದಲ್ಲಿ ಹೇಳಿತ್ತಿವೆ. ಸರಕಾರ ಹಾಗೂ ಸೈನಿಕರ ಮೇಲೆ ಇದರ ಪರಿಣಾಮ ಆಗದಿದ್ದರೂ, ಕೆಲವು ಪ್ರಸಾರ ಮಾಧ್ಯಮಗಳು ಹಾಗೂ ಚೀನಾದ ಪಕ್ಷ ವಹಿಸುವ ತಥಾಕಥಿತ ತಜ್ಞರಿಂದಾಗಿ ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ವಾಸ್ತವದಲ್ಲಿ ಭಾರತವು ಸಮರದ ದೃಷ್ಟಿಯಲ್ಲಿ ಖಂಡಿತವಾಗಿಯೂ ದುರ್ಬಲವಿಲ್ಲ. ಲಢಾಖನಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರಿಗೆ ಪ್ರತ್ಯುತ್ತರ ನೀಡುವ ಮೂಲಕ ಇದನ್ನು ತೋರಿಸಿದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯನು ಭಾರತವಿರೋಧಿ ಸಂದೇಶವನ್ನು ಮುಂದೆ ಕಳುಹಿಸದೇ ಅದರ ಬಗ್ಗೆ ಪೊಲೀಸರಿಗೆ ತಿಳಿಸಬೇಕು, ಎಂದು ನಿವೃತ್ತ ಬ್ರಿಗೇಡಿಯರ ಹೇಮಂತ ಮಹಾಜನ ಇವರು ಹೇಳಿದರು.

ಚೀನಾ ಲಢಾಖದಲ್ಲಿ ಮಾಡಿದ ದುಸ್ಸಾಹಸ ಛಾಯಾಸಮರವಾಗಿದೆ. ಭಾರತದ ವಿರುದ್ಧ ಯುದ್ಧ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ಪರಿಣಾಮವಾಗಬಹುದು ಎಂಬುದರ ಬಗ್ಗೆ ಚೀನಾಗೆ ಕಲ್ಪನೆ ಇದೆ. ಆದುದರಿಂದ  ಭಾರತವು ಪಾಕಿಸ್ತಾನದಂತೆ ಚೀನಾದ ಕುಕೃತ್ಯಗಳ ಬಗ್ಗೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಬೇಕು. ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದರೊಂದಿಗೆ ಭಾರತದ ಸ್ವಯಂಪೂರ್ಣವಾಗುವುದೂ ಆವಶ್ಯಕವಾಗಿದೆ, ಎಂದು ಭಾರತ ರಕ್ಷಾ ಮಂಚ್ ಇದರ ಶ್ರೀ. ಅನೀಲ ಧೀರ ಇವರು ಪ್ರತಿಪಾದಿಸದರು. ಭಾರತದ ಸ್ವತಂತ್ರವಾದಾಗ ಚೀನಾದ ಗಡಿ ಭಾರತಕ್ಕೆ ತಾಗಿಕೊಂಡಿರಲಿಲ್ಲ. ಆದರೆ ಚೀನಾ ದೇಶವು ತೈವಾನ್, ಹಾಂಗ್‌ಕಾಂಗ್, ಆಕ್ಸಾಯಿ ಚೀನಾ, ಟಿಬೇಟ್ ಮುಂತಾದ ಭೂಪ್ರದೇಶಗಳನ್ನು ಕಬಳಿಸಿ ವಿಸ್ತಾರವಾದಿ ನಿಲುವನ್ನು ತಾಳಿತು. ಟಿಬೇಟ್ ಇದು ಮೊದಲು ಭಾರತದ ಅಂಗವಾಗಿತ್ತು. ಕೈಲಾಸ ಪರ್ವತ, ಮಾನಸರೋವರ ಈ ಹಿಂದೂಗಳ ಶ್ರದ್ಧಾಸ್ಥಾನಗಳು ಅಲ್ಲಿಯೇ ಇವೆ. ಸಾಮ್ರಾಜ್ಯವಾದಿ ಚೀನಾ ಅನೇಕ ದೇಶಗಳೊಂದಿಗೆ ಗಡಿವಿವಾದವಿದೆ. ಇಂತಹ ಸಮಯದಲ್ಲಿ ಭಾರತ ಟಿಬೇಟಿಗೆ ಸ್ವತಂತ್ರ ದೇಶವೆಂದು ಮಾನ್ಯತೆ ನೀಡಿ ಚೀನಾಗೆ ಮಣಿಸಬೇಕು, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಕರೆ ನೀಡಿದರು.