ಆ ‘ಭಗವತಿ ಯೇ ಕೇವಲ ಸತ್ಯ !

‘ನೋಡಿದೆಯಾ ಈ ಪರ್ಸ ? ಈ ಪರ್ಸಗೆ ಇತಿಹಾಸವಿದೆ. ನನ್ನ ತಂದೆಯವರು ನನಗೆ ಈ ಪರ್ಸಕೊಟ್ಟರು, ಆಗ ನಾನು ಒಂದು ಪ್ರಾಥಮಿಕ ಶಾಲೆಯಲ್ಲಿಯ ವಿದ್ಯಾರ್ಥಿಯಾಗಿದ್ದೆ. ಅದರಲ್ಲಿ ನಾನು ಸ್ವಲ್ಪ ಹಣ ಮತ್ತು ತಂದೆ-ತಾಯಿಯರ ಛಾಯಾಚಿತ್ರ ಇಡುತ್ತಿದ್ದೆನು. ಬಳಿಕ ನಾನು ವಿಶ್ವವಿದ್ಯಾಲಯಕ್ಕೆ ಹೋದೆನು. ಈಗ ಪರ್ಸನಲ್ಲಿ ನಾನು ನನ್ನ ಸ್ವಂತ ಛಾಯಾಚಿತ್ರವನ್ನು ಇಡತೊಡಗಿದೆನು. ಈಗ ನನಗೆ ಸ್ವತಂತ್ರ ವ್ಯಕ್ತಿತ್ವ (individuality) ಬಂತು. ಈಗ ನನ್ನ ಉಡುಪು ಮತ್ತು ನನ್ನ ನಡತೆ ಅಧಿಕ ಬೆಲೆವುಳ್ಳದ್ದಾಗಿತ್ತು. ಬಳಿಕ ನನ್ನ ವಿವಾಹವಾಯಿತು ಮತ್ತು ನನ್ನ ಪರ್ಸನಲ್ಲಿ ಪತ್ನಿಯ ಛಾಯಾಚಿತ್ರ ಬಂತು. ನಾನು ತಂದೆಯಾದೆನು. ‘ವಾಟ್ ಏ ಜಾಯ್ (ಅದೆಷ್ಟು ಆನಂದವಿದು) ! ಪತ್ನಿಯ ಛಾಯಾಚಿತ್ರವು ಹೋಗಿ ಮಗುವಿನ ಛಾಯಾಚಿತ್ರ ಸೇರಿತು. ಒಮ್ಮಿಂದೊಮ್ಮೆಲೆ ಅವನ ಕಣ್ಣುಗಳಲ್ಲಿ ಅಶ್ರು ತುಂಬಿ ಬಂತು. ಅವನ ಧನಿ ನಡುಗುತ್ತಿತ್ತು. ಕಂಠ ತುಂಬಿ ಬಂತು. “ನನ್ನ ತಂದೆತಾಯಿಯಂದಿರು ೨೦ ವರ್ಷಗಳ ಹಿಂದೆ ತೀರಿಹೋದರು. ಪತ್ನಿ ೫ ವರ್ಷಗಳ ಹಿಂದೆ ಹೋದಳು. ನನ್ನ ಒಬ್ಬನೇ ಒಬ್ಬ ಮಗನ ಮದುವೆ ಆಯಿತು. ಈಗ ಅವನ ‘ಕರೀಅರ್ ಮತ್ತು ಅವನ ಕುಟುಂಬ. ಅವನಿಗೆ ಸ್ವಲ್ಪವೂ ಸಮಯವಿಲ್ಲ. ಈಗ ನನ್ನ ಉಳಿದ ಜೀವನ ! ಯಾರ ಮೇಲೆ ನಾನು ಪ್ರೀತಿ ಮಾಡಿದೆನು, ಯಾರನ್ನು ನನ್ನವರು ಎಂದು ತಿಳಿದೆನು, ಅವರೆಲ್ಲರೂ ದೂರ ದೂರ ಹೋದರು. ಈಗ ನನ್ನ ಪರ್ಸನಲ್ಲಿ ಶ್ರೀಚಕ್ರದ ಛಾಯಾಚಿತ್ರ, ‘ಭಗವತಿ ಲಲಿತಾ ಅಂಬೆಯ ಚಿತ್ರವಿದೆ. ಭಗವತಿಯು ನನಗೆ ಯಾವತ್ತೂ ಕೈಬಿಡಲಾರಳು. ನಾನು ವಿದ್ಯಾರ್ಥಿದಸೆಯಿಂದಲೂ ಆ ಭಗವತಿಯ ಆಧಾರವನ್ನು ಏಕೆ ತೆಗೆದುಕೊಳ್ಳಲಿಲ್ಲ ? ಆ ಭಗವತಿಯೇ ಕೇವಲ ಸತ್ಯವಿದೆ. ಉಳಿದೆಲ್ಲವೂ ಕ್ಷೀಣಗೊಳ್ಳುವ ನೆರಳುಗಳೇ, ಎಂದು ಕಣ್ಣು ಒರೆಸುತ್ತ ಅವನು ಉದ್ಗರಿಸಿದನು.

– (ಆಧಾರ : ಮಾಸಿಕ ‘ಘನಗರ್ಜಿತ ಸಪ್ಟೆಂಬರ್ ೨೦೦೭ )