ಪರಿಸರ ಮತ್ತು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿರುವ ಚೀನಿ ಉತ್ಪನ್ನಗಳು !

‘ಚೀನಿ ಉತ್ಪನ್ನಗಳು ಅತ್ಯಂತ ಕಡಿಮೆ ಗುಣಮಟ್ಟದ, ಕಡಿಮೆ ಸಮಯ ಬಾಳುವ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಉದಾ. ಆಟಿಕೆಗಳಲ್ಲಿ ‘ಸೀಸ’, ಪಟಾಕಿಗಳಲ್ಲಿ ‘ಗಂಧಕ’, ಆಹಾರಪದಾರ್ಥಗಳಲ್ಲಿ ‘ಮೆಲಾಮಾಯಿನ್’, ಬಟ್ಟೆಗಳಲ್ಲಿ ‘ಫಾರಮೆಲ್ಡಿಹೈಡ್’, ಹೊದಿಕೆಗಳಲ್ಲಿ ‘ಪ್ಲೂರೋಸೆಂಟ್’ ಅಥವಾ ‘ಮೆಥಾನಾಲ್’, ದಂತಮಂಜನದಲ್ಲಿ ‘ಡಾಗ್ಲೈಕೋಲ್’ ಇತ್ಯಾದಿ. ಈ ಉತ್ಪನ್ನಗಳು ಪರಿಸರವನ್ನು ಮಾಲಿನ್ಯದ ಭಯಾನಕ ಸ್ಥಿತಿಯನ್ನು ಉಂಟು ಮಾಡುತ್ತವೆ. ವಿದ್ಯುತ್ತಿನಿಂದ ನಡೆಯುವ (ಎಲೆಕ್ಟ್ರಾನಿಕ್) ಚೀನಿ ಉತ್ಪನ್ನಗಳು ತೀರಾ ನಿರುಪಯುಕ್ತವಾಗಿವೆ; ಏಕೆಂದರೆ ಅವುಗಳ ಬಾಳಿಕೆ ತುಂಬಾ ಕಡಿಮೆ ಇದೆ. ಅವುಗಳ ಮೂಲಕ ಪರಿಸರಕ್ಕೆ ಅತ್ಯಂತ ಹಾನಿಕರವಾದ ‘ವಿಕಿರಣಶೀಲ’ ಕಸಕಡ್ಡಿಗಳ (ಈ-ಡಸ್ಟ್) ರದ್ದಿ ಸಾಮಾನುಗಳನ್ನು ನಮ್ಮ ದೇಶದಲ್ಲಿ ಸಂಗ್ರಹಿಸಲಾಗುತ್ತಿದೆ.’

(ಆಧಾರ : ಗೀತಾ ಸ್ವಾಧ್ಯಾಯ, ಅಕ್ಟೋಬರ್ ೨೦೧೧)