ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದೆ ಎಂದ ಪಾಕ್ ನ ಸರಕಾರಿ ದೂರದರ್ಶನ

‘ಸತ್ಯ ಒಂದಿಲ್ಲೊಂದು ದಿನ ಹೊರ ಬರುತ್ತದೆ’ ಎಂಬುದು ಸಾಬೀತುಪಡಿಸುವ ಉದಾಹರಣೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿರುವಾಗ ಪಾಕಿಸ್ತಾನವು ಅದರ ಕೆಲವು ಪ್ರದೇಶಗಳನ್ನು ಅಕ್ರಮವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದೆ. ಇದು ಪಾಕ್ ಆಕ್ರಮಿತ ಕಾಶ್ಮೀರದ ಭಾಗವನ್ನು ಭಾರತದ ನಕ್ಷೆಯಲ್ಲಿ ತೋರಿಸಲಾಗುತ್ತದೆ, ಆದರೆ ಪಾಕ್ ಅದು ತನ್ನ ನಕ್ಷೆಯಲ್ಲಿ ತೋರಿಸುತ್ತದೆ. ಪಾಕ್ ನ ಸರ್ಕಾರಿ ದೂರದರ್ಶನ ‘ಪಿ.ಟಿವಿ’ಯು ಪಾಕ್ ಆಕ್ರಮಿತ ಕಾಶ್ಮೀರದ ಜನಸಂಖ್ಯೆಯನ್ನು ಹೇಳುತ್ತಿರುವಾಗ ಅದು ಭಾರತದ ಒಂದು ಭಾಗವಾಗಿದೆ ಎಂಬ ಸತ್ಯ ಮಾಹಿತಿಯನ್ನು ಹೇಳಿದೆ. ಇದು ಅರಿವಾದ ಕೂಡಲೇ ಪಿ.ಟಿವಿಯ ವಿರುದ್ಧ ಪಾಕ್ ನಲ್ಲೇ ಸಾಕಷ್ಟು ಟೀಕೆಗಳು ಬರಲಾರಂಭಿಸಿತು. ನಂತರ ಪಿ.ಟಿವಿಯವರಿಂದ ತಪ್ಪಾಗಿದೆ ಎಂದು ಹೇಳುತ್ತಾ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.