ಅಧಿಕಾರದ ಆಸೆಯ ರಾಜಕಾರಣಿಗಳ ಸ್ವಾತಂತ್ರ್ಯವೀರ ಸಾವರಕರ ದ್ವೇಷವನ್ನು ತಿಳಿಯಿರಿ !

೧. ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದರ ಅನಿವಾರ್ಯವನ್ನು ತಿಳಿಯಿರಿ !

ಜಮ್ಮುವಿನ ಶ್ರೀ ವೈಷ್ಣೋದೇವಿ ದೇವಾಲಯವನ್ನು ನಿರ್ವಹಿಸುವ ‘ವೈಷ್ಣೋದೇವಿ ಶ್ರೈನ್ ಬೋರ್ಡ್’ ಪ್ರತ್ಯೇಕಿಕರಣದಲ್ಲಿರುವ ೫೦೦ ಮುಸಲ್ಮಾನರಿಗೆ ಈದ್ ಆಚರಿಸಲು ವ್ಯವಸ್ಥೆ ಮಾಡಿತು. ಅವರ ವಸತಿಗೃಹ ಹಾಗೂ ಊಟತಿಂಡಿಯ ವೆಚ್ಚಕ್ಕೆ ಮಂಡಳಿಯಿಂದ ಹಣ ನೀಡಲಾಗುತ್ತಿದೆ.

೨. ಹಿಂದೂ ಸಂಘಟನೆಗಳಿಂದಾಗಿ ದೊರಕಿದ ಯಶಸ್ಸನ್ನು ತಿಳಿಯಿರಿ !

ಹಿಂದೂಗಳ ವಿರೋಧದಿಂದ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತಿರುಪತಿ ದೇವಸ್ಥಾನದ ೫೦ ಆಸ್ತಿಗಳ ಮಾರಾಟ ಮಾಡುವ ಆಂಧ್ರಪ್ರದೇಶದ ಸರಕಾರವು ತನ್ನ ನಿರ್ಧಾರವನ್ನು ಸ್ಥಗಿತಗೊಳಿಸಿದೆ.

೩. ಇದಕ್ಕೆ ಭಾರತೀಯರು ಸಿದ್ಧರಿರುವರೇ ?

ಭಾರತದೊಂದಿಗೆ ನಡೆಯುತ್ತಿರುವ ಗಡಿ ವಿವಾದದ ಹಿನ್ನೆಲೆಯಲ್ಲಿ ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನಪಿಂಗ್‌ರವರು ತಮ್ಮ ಸೈನ್ಯಕ್ಕೆ ಯುದ್ಧದ ಸಿದ್ಧತೆಯನ್ನು ಮಾಡುವಂತಹ ಆದೇಶ ನೀಡಿದ್ದಾರೆ. ಅವರು ಸೈನಿಕರ ತರಬೇತಿಯನ್ನು ಸಮಗ್ರ ರೀತಿಯಲ್ಲಿ ಹೆಚ್ಚಿಸಲು ಸಹ ಅವರು ಹೇಳಿದ್ದಾರೆ.

೪. ಅಧಿಕಾರದ ಆಸೆಯ ರಾಜಕಾರಣಿಗಳ ಸ್ವಾತಂತ್ರ್ಯವೀರ ಸಾವರಕರ ದ್ವೇಷವನ್ನು ತಿಳಿಯಿರಿ !

‘ಕರ್ನಾಟಕದ ದೇಶಭಕ್ತರ ಹೆಸರನ್ನು ಇತರ ರಾಜ್ಯಗಳಲ್ಲಿನ ಸೇತುವೆಗೆ ನೀಡಲಾಗಿದೆಯೇ ? ಹಾಗಾದರೆ ಯಲಹಂಕ ಸೇತುವೆಗೆ ಸಾವರಕರ ಇವರ ಹೆಸರನ್ನು ಏಕೆ ನೀಡಲಾಗುತ್ತಿದೆ ? ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇವರು ಟ್ವೀಟರ್ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ.

೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಆಂಧ್ರಪ್ರದೇಶದಲ್ಲಿ ಸರಕಾರಿ ಅಂಕಿಅಂಶಗಳಂತೆ ಕ್ರೈಸ್ತರ ಜನಸಂಖ್ಯೆಯು ಕೇವಲ ಶೇ. ೨.೫ ಮಾತ್ರ ಇದೆ. ಆದರೆ ವಾಸ್ತವದಲ್ಲಿ ಇದು ಶೇ. ೨೫ ರಷ್ಟಿದೆ, ಎಂದು ರಾಜ್ಯದ ಆಡಳಿತದ ಐ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು ಇವರು ಬಹಿರಂಗ ಪಡಿಸಿದ್ದಾರೆ.

೬. ದೇವಸ್ಥಾನಗಳನ್ನು ಮತ್ತು ಸಾಧು ಇವರ ರಕ್ಷಣೆಯನ್ನು ಮಾಡಿರಿ !

ಮಹಾರಾಷ್ಟ್ರದ ಪಾಲಘರ ಜಿಲ್ಲೆಯ ವಸಯಿ ತಾಲೂಕಿನಲ್ಲಿ ಜಾಗೃತ ದೇವಸ್ಥಾನವೊಂದರಲ್ಲಿ ಓರ್ವ ಸಾಧುಗಳ ಮೇಲೆ ಹಲ್ಲೆ ಮಾಡಿದರು ಮತ್ತು ದೇವಸ್ಥಾನದಲ್ಲಿ ದರೋಡೆ ಮಾಡಲಾಯಿತು. ಈ ಪ್ರಕರಣದಲ್ಲಿ ವಿರಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

೭. ಬಾಂಗ್ಲಾದೇಶದಲ್ಲಿ ಹಿಂದೂಗಳ ಅಸುರಕ್ಷಿತ ದೇವಾಲಯಗಳು

ಬಾಂಗ್ಲಾದೇಶದಲ್ಲಿ ಲಾಕ್ಷಾದಿಯಾ ಗ್ರಾಮದಲ್ಲಿ ಮಹಮ್ಮದ ರಕೀಬ ಎಂಬಾತನಿಗೆ ಕಾಳಿಮಾತೆಯ ದೇವಾಲಯದಲ್ಲಿ ಕುಳಿತು ಗಾಂಜಾ ಸೇವಿಸಲು ಮತ್ತು ದೇವಾಲಯದ ಮುಂದೆ ಮೂತ್ರವಿಸರ್ಜನೆ ಮಾಡುವುದನ್ನು ವಿರೋಧಿಸಿದಾಗ ಅವನು ದೇವಾಲಯದಲ್ಲಿನ ೫ ವಿಗ್ರಹಗಳನ್ನು ಒಡೆದನು. ಅವನು ೬ ತಿಂಗಳ ಹಿಂದೆಯೂ ವಿಗ್ರಹಗಳನ್ನು ಒಡೆದಿದ್ದನು.