ಜ್ಯೇಷ್ಠ ಶುಕ್ಲ ಪಕ್ಷ ನವಮಿ (೩೧.೫.೨೦೨೦) ರಂದು ಪೂ. ರಮಾನಂದ ಗೌಡ ಇವರ ಜನ್ಮದಿನ ಇದೆ. ಆ ನಿಮಿತ್ತ ಅವರ ಗುಣವೈಶಿಷ್ಟ್ಯಗಳನ್ನು ನೀಡುತ್ತಿದ್ದೇವೆ.
‘ಪರಾತ್ಪರ ಗುರುದೇವರ ಕೃಪೆಯಿಂದ ಪೂ. ರಮಾನಂದ ಅಣ್ಣ (ಪೂ. ಅಣ್ಣ) ನವರು ಕೆಲವು ತಿಂಗಳ ಹಿಂದೆ ಬೆಂಗಳೂರು ಜಿಲ್ಲೆಯ ಪ್ರವಾಸವನ್ನು ಮಾಡಿದ್ದರು. ಆಗ ಸೌ. ಗಾಯತ್ರಿ ಕೃಷ್ಣಮೂರ್ತಿ, ಸೌ. ನೀಲಾ ವೆಗಡ, ಸೌ. ಶೈಲಜಾ ಅಸಗಿ, ಶ್ರೀ. ಭರತ ಪ್ರಭು ಮತ್ತು ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಅವರೊಂದಿಗಿದ್ದು ಸೇವೆಯನ್ನು ಮಾಡುವ ಅವಕಾಶ ಲಭಿಸಿತು. ಆ ಸಮಯದಲ್ಲಿ ಪೂ. ಅಣ್ಣನವರಿಂದ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದ ಅನುಭೂತಿಗಳನ್ನು ಶ್ರೀ ಗುರುಚರಣಗಳಲ್ಲಿ ಕೃತಜ್ಞತೆಯ ಭಾವದಿಂದ ಸಮರ್ಪಿಸುತ್ತಿದ್ದೇನೆ.
೧. ಗುಣವೈಶಿಷ್ಟ್ಯಗಳು
೧ ಅ. ಸಮಯ ಪಾಲನೆಯನ್ನು ಮಾಡುವುದು : ‘ಪೂ. ರಮಾನಂದ ಅಣ್ಣನವರು ಸಮಯಕ್ಕೆ ಬಹಳ ಮಹತ್ವವನ್ನು ನೀಡುತ್ತಾರೆ. ಅವರು ‘ಯಾವ ಕಾರ್ಯಕ್ರಮ ಎಷ್ಟು ಗಂಟೆಗೆ ಪ್ರಾರಂಭವಾಗಲಿದೆ ? ಎನ್ನುವುದನ್ನು ಮೊದಲೇ ವಿಚಾರಿಸುತ್ತಾರೆ ಮತ್ತು ಅವರೊಂದಿಗೆ ಇರುವವರಿಗೂ ನಿಗದಿತ ಸಮಯದಲ್ಲಿಯೇ ಸಿದ್ಧರಾಗಿರಲು ಹೇಳುತ್ತಾರೆ. ಅವರು ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಉಪಸ್ಥಿತರಿರುತ್ತಾರೆ. ಇದರಿಂದ ಪೂ. ಅಣ್ಣನವರ ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಸಾಧಕರ ಅಡಚಣೆಗಳನ್ನು ತಿಳಿದುಕೊಳ್ಳಲು ಸಮಯ ಸಿಗುತ್ತದೆ ಮತ್ತು ಅದರ ಬಗ್ಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ.
೧ ಆ. ಅಧ್ಯಯನ ಪ್ರವೃತ್ತಿ : ಯಾವುದೇ ವಿಷಯದ ಬಗ್ಗೆ ಮಾತನಾಡುವುದಿದ್ದರೂ, ಸಾಧಕರ ವ್ಯಷ್ಟಿ ಮತ್ತು ಸಮಷ್ಟಿಯ ಸಭೆ ಇರಲಿ ಅಥವಾ ಧರ್ಮಪ್ರೇಮಿಗಳ ಸಭೆ ಇರಲಿ, ಪೂ. ಅಣ್ಣನವರು ಮೊದಲೇ ಚಿಂತನೆ ಮತ್ತು ಅಭ್ಯಾಸವನ್ನು ಮಾಡುತ್ತಾರೆ. ‘ಅವರ ಚಿಂತನೆ ಮತ್ತು ನಿರ್ಣಯಗಳು ಸರಿಯಾಗಿದೆಯಲ್ಲವೇ ? ಎಂಬ ಬಗ್ಗೆ ಜವಾಬ್ದಾರ ಸಾಧಕರೊಂದಿಗೆ ಕೇಳುತ್ತಾರೆ. ಆವಶ್ಯಕವಿದ್ದರೆ, ಅದರಲ್ಲಿ ಅವರು ಸುಧಾರಣೆಯನ್ನು ಮಾಡುತ್ತಾರೆ ಮತ್ತು ಬಳಿಕವೇ ಸಭೆಯಲ್ಲಿ ವಿಷಯವನ್ನು ಮಂಡಿಸುತ್ತಾರೆ. ಅವರು ಸಾಧಕರ ಸಾಧನೆಯ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾರೆ. ಮಾರ್ಗದರ್ಶನ ಮಾಡುವಾಗ ಸಾಧನೆ, ಆಧ್ಯಾತ್ಮಿಕ ದೃಷ್ಟಿಕೋನ ಮತ್ತು ಶ್ರೀ ಗುರುಗಳ ವಿಷಯದಲ್ಲಿ ಭಾವದ ಪ್ರಸಂಗ ಇತ್ಯಾದಿ ಅಂಶಗಳನ್ನು ಅವರು ಬರೆದು ತಂದಿರುತ್ತಾರೆ ಮತ್ತು ಅವುಗಳನ್ನು ಅಧ್ಯಯನ ಮಾಡಿ ಮಂಡಿಸುತ್ತಾರೆ. ಇದರಿಂದ ಅವರ ಕೃತಿ ಪರಿಪೂರ್ಣವಾಗಿರುತ್ತದೆ. ಈ ಕಾರಣದಿಂದ ಪ್ರತಿಯೊಂದು ಕೃತಿಯೂ ಆದರ್ಶವಾಗಿ ಮಾಡುವ ಅವರ ಪ್ರಯತ್ನ ಗಮನಕ್ಕೆ ಬಂದಿತು. – ಶ್ರೀಮತಿ ಅಶ್ವಿನಿ ಪ್ರಭು ಮತ್ತು ಶ್ರೀ. ಭರತ ಪ್ರಭು
೧ ಇ. ವಿವಿಧ ಸೇವೆಗಳನ್ನು ಒಂದೇ ಸಮಯದಲ್ಲಿ ಮಾಡುವುದು : ‘ಎರಡಕ್ಕಿಂತ ಹೆಚ್ಚು ಸೇವೆ ಬಂದಾಗ ನಾನು ಮೊದಲ ಸೇವೆ ಪಕ್ಕಕ್ಕಿಟ್ಟು ಎರಡನೇ ಸೇವೆಯನ್ನು ಮಾಡುವುದು ಹೀಗೆ ಮಾಡುತ್ತಿದ್ದೆನು. ‘ಎರಡು-ಮೂರು ಸೇವೆಯನ್ನು ಒಂದೇ ಸಮಯದಲ್ಲಿ ಮಾಡುವ ಕೌಶಲ್ಯವನ್ನು ಹೇಗೆ ಹೆಚ್ಚಿಸಬೇಕು ? ಎನ್ನುವುದು ಪೂ. ಅಣ್ಣನವರಿಂದ ಕಲಿಯಲು ಸಿಕ್ಕಿತು. ಸೇವೆಯ ವಿಷಯದಲ್ಲೂ ಸಾಧಕರ ಮಾರ್ಗದರ್ಶನ ಪಡೆದುಕೊಳ್ಳುವುದು ಮತ್ತು ಜವಾಬ್ದಾರ ಸಾಧಕರನ್ನು ಕೇಳಿ ಸೇವೆಯನ್ನು ಮಾಡಿದರೆ ಸಾಧನೆಯಲ್ಲಿ ಯಾವ ರೀತಿ ಸಹಾಯವಾಗುತ್ತದೆ ?, ಎನ್ನುವುದು ನನಗೆ ಪೂ. ಅಣ್ಣನವರ ಮಾತಿನಿಂದ ಮತ್ತು ಪ್ರತ್ಯಕ್ಷ ಕೃತಿಯಿಂದ ಕಲಿಯಲು ಸಿಕ್ಕಿತು. – ಶ್ರೀ ಭರತ ಪ್ರಭು
೧ ಈ. ದಣಿವಿಲ್ಲದೇ ಅಖಂಡ ಸೇವಾನಿರತರಾಗಿರುವುದು : ‘ದಿನವಿಡೀ ಸಭೆ, ಮಾರ್ಗದರ್ಶನ, ಸಾಧಕರ ಅಡಚಣೆಯನ್ನು ದೂರಗೊಳಿಸುವುದು ಇವೆಲ್ಲವೂ ಆದ ಬಳಿಕವೂ ತಡರಾತ್ರಿಯವರೆಗೆ ಸಾಧಕರು ಅವರೊಂದಿಗೆ ಮಾತನಾಡುತ್ತಿರುತ್ತಾರೆ. ಇದರಿಂದ ಅವರೊಂದಿಗೆ ಇರುವಾಗ ಚೈತನ್ಯ ಮತ್ತು ಆನಂದದ ಅರಿವಾಗುತ್ತದೆ, – ಸೌ. ಗಾಯತ್ರಿ ಕೃಷ್ಣಮೂರ್ತಿ ಮತ್ತು ಸೌ. ನೀಲಾ ಆಶಿಷ್ ವೆಗಡ
೧ ಉ. ಕುಟುಂಬದವರಿಗೆ ಸಮಯ ನೀಡುವುದು : ‘ಪೂ. ಅಣ್ಣನವರು ಸೇವೆಯಲ್ಲಿ ಸತತವಾಗಿ ವ್ಯಸ್ತರಾಗಿದ್ದರೂ, ಅವರು ತಮ್ಮ ಕುಟುಂಬದವರಿಗೆ ಸಮಯವನ್ನು ನೀಡಿ ಅವರೊಂದಿಗೆ ಮಾತನಾಡುತ್ತಾರೆ. – ಶ್ರೀ. ಭರತ ಪ್ರಭು
೧ ಊ. ಪ್ರೇಮಭಾವ : ‘ಸಾಧಕರ ಮನೆಗೆ ಹೋದರೂ ಪೂ. ಅಣ್ಣನವರ ವಿಶ್ರಾಂತಿಯ ಸಮಯವಾಗಿದ್ದರೂ, ಅವರು ಸಾಧಕರ ಕುಟುಂಬದವರಿಗೆ ಸಮಯವನ್ನು ನೀಡಿ ಅವರೊಂದಿಗೆ ಪ್ರೇಮದಿಂದ ಮಾತನಾಡಿ ಅವರ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಾರೆ. – ಸೌ. ಗಾಯತ್ರಿ ಕೃಷ್ಣಮೂರ್ತಿ.
೧ ಎ. ನಮ್ರತೆ : ‘ಪೂ. ಅಣ್ಣನವರು ನಮ್ಮ ಮನೆಗೆ ಬಂದ ಕೂಡಲೇ, ಅವರು ಕುಟುಂಬದವರೊಂದಿಗೆ ಪ್ರೀತಿಯಿಂದ ಮಾತನಾಡಿದರು. ಪೂ. ಅಣ್ಣನವರು ಸಂತರಾಗಿದ್ದರೂ ಅವರು ದೊಡ್ಡವರಿಗೆ ಬಗ್ಗಿ ನಮಸ್ಕರಿಸಿದರು. ಆಗ ಅವರಲ್ಲಿರುವ ನಮ್ರತೆ ಕಲಿಯಲು ಸಿಕ್ಕಿತು, – ಸೌ. ನೀಲಾ ಆಶಿಷ ವೇಗಡ
೧ ಏ. ಸ್ವಸುಖಕ್ಕೆ ಕಡಿಮೆ ಮಹತ್ವವನ್ನು ನೀಡುವುದು : ‘ಪೂ. ಅಣ್ಣನವರು ಪ್ರಸಾದ-ಮಹಾಪ್ರಸಾದ, ತಮ್ಮ ಇಷ್ಟಗಳಿಗೆ ಕಡಿಮೆ ಮಹತ್ವವನ್ನು ನೀಡುತ್ತಾರೆ. ಸಾಧಕರಿಂದ ಅವರ ಮಹಾಪ್ರಸಾದ ತಯಾರಿಸುವಲ್ಲಿ ಏನಾದರೂ ತಪ್ಪಾದರೂ, ಅವರು ಅದಕ್ಕೆ ಹೆಚ್ಚು ಮಹತ್ವವನ್ನು ನೀಡದೇ ‘ಚೆನ್ನಾಗಿದೆ, ಎಂದೇ ಹೇಳುತ್ತಾರೆ ಅಥವಾ ‘ಏನೂ ತೊಂದರೆಯಿಲ್ಲ, ಎಂದು ಸಾಧಕರಿಗೆ ಹೇಳುತ್ತಾರೆ.
೧ ಒ. ಸಾಧಕರು ಅವರ ಪಥ್ಯದ ವಿಷಯದಲ್ಲಿ ಏನಾದರೂ ತಪ್ಪುಗಳನ್ನು ಮಾಡಿದರೂ, ಅದನ್ನು ನಿರ್ಲಕ್ಷಿಸುವುದು : ಕೆಲವೊಮ್ಮೆ ಸಾಧಕರು ಪೂ. ಅಣ್ಣನವರನ್ನು ಊಟಕ್ಕೆ ಅವರ ಮನೆಗೆ ಕರೆಯುತ್ತಾರೆ. ಆಗ ಅವರ ಪಥ್ಯದಲ್ಲಿ ಅಥವಾ ಸಮಯದಲ್ಲಿ ಹೆಚ್ಚು-ಕಡಿಮೆಯಾಗುತ್ತಿರುತ್ತದೆ; ಆದರೆ ಅದಕ್ಕೆ ಹೆಚ್ಚು ಆದ್ಯತೆ ನೀಡದೇ ಆ ಸಾಧಕನಿಗೆ ಅವರ ಎಲ್ಲ ಕೌಟುಂಬಿಕ, ಆಧ್ಯಾತ್ಮಿಕ ಅಡಚಣೆಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ ಮತ್ತು ಕುಟುಂಬದ ಪ್ರತಿಯೊಬ್ಬರಿಗೂ ಅವರು ಪ್ರೀತಿಯಿಂದ ಉಪಾಯ ಹೇಳುತ್ತಾರೆ. ಆಗ ಅವರು ತಮಗಾದ ತೊಂದರೆಯನ್ನು ಮರೆತಿರುತ್ತಾರೆ. – ಶ್ರೀಮತಿ ಅಶ್ವಿನಿ ಪ್ರಭು
೧ ಓ. ವ್ಯಷ್ಟಿಯ ಗಾಂಭೀರ್ಯತೆ : ‘ಪೂ. ಅಣ್ಣನವರು ಸಂತರಾಗಿದ್ದರೂ ತಮ್ಮ ವ್ಯಷ್ಟಿ ಸಾಧನೆಯಲ್ಲಿ ಯಾವುದೇ ಸವಲತ್ತನ್ನು ತೆಗೆದುಕೊಳ್ಳುವುದಿಲ್ಲ. ಅವರು ತಮ್ಮ ದೈನಂದಿನ ಉಪಾಯಗಳನ್ನು ಪೂರ್ಣಗೊಳಿಸುವುದು, ಉಪಾಯಗಳ ಚಿತ್ರಗಳನ್ನು ಹಚ್ಚುವುದು, ಅದನ್ನು ೧೨ ಗಂಟೆಗಳ ಬಳಿಕ ಬದಲಾಯಿಸುವುದು, ದೇವಿಕವಚವನ್ನು ಕೇಳುವುದು, ಇವೆಲ್ಲವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಪ್ರವಾಸದಲ್ಲಿಯೂ ಅವರು ಅನಾವಶ್ಯಕವಾಗಿ ಮಾತನಾಡದೇ ನಾಮಜಪ ಇತ್ಯಾದಿಗಳಿಗೆ ಸಮಯ ನೀಡುತ್ತಾರೆ. – ಶ್ರೀಮತಿ ಅಶ್ವಿನಿ ಪ್ರಭು ಮತ್ತು ಶ್ರೀ. ಭರತ ಪ್ರಭು
೧ ಔ. ‘ಸಾಧಕರ ಸಾಧನೆಯಾಗಬೇಕು, ಎನ್ನುವ ತಳಮಳವಿರುವುದು : ‘ಪೂ. ಅಣ್ಣನವರು ‘ಪ್ರತಿಯೊಬ್ಬ ಸಾಧಕರ ಸಾಧನೆ ಹೇಗೆ ಆಗಬಹುದು ?, ಎಂಬ ಚಿಂತನೆಯನ್ನು ಮಾಡುತ್ತಾರೆ. ಸಾಧಕರ ಆವಶ್ಯಕತೆಗುನುಸಾರ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಅವರು ಎಲ್ಲ ಸಾಧಕರಿಗೆ ಆಧಾರ ನೀಡುತ್ತಾರೆ. ಸಾಧಕರ ಸಾಧನೆಯಲ್ಲಿ ಹಾನಿಯಾಗುತ್ತಿದ್ದರೆ, ಅವಶ್ಯಕತೆ ಗನುಸಾರ ಅದನ್ನು ನಿಷ್ಠುರತೆಯಿಂದ ಹೇಳುತ್ತಾರೆ. ಅವರು ಎಲ್ಲ ಸಾಧಕರಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
೧ ಅಂ. ಆದರ್ಶವಾಗಿ ನಡೆದುಕೊಳ್ಳುವುದು : ‘ಪೂ. ಅಣ್ಣನವರ ಅಚ್ಚುಕಟ್ಟುತನ, ಇತರರೊಂದಿಗೆ ಮಾತನಾಡುವುದು ಮತ್ತು ಅವರ ಪ್ರತಿಯೊಂದು ಕೃತಿಯೂ ಆದರ್ಶಮಯವಾಗಿರುತ್ತದೆ. ಪೂ. ಅಣ್ಣನವರು ಸಂತರಾಗಿದ್ದರೂ ಎಲ್ಲ ಸಾಧಕರೊಂದಿಗೆ ಸಹಜವಾಗಿ ಬೆರೆಯುತ್ತಾರೆ. – ಸೌ. ದಿವ್ಯಾ ಬಾಳೆಹಿತ್ತಲು
೨. ಪೂ. ರಮಾನಂದಅಣ್ಣನವರು ವ್ಯಷ್ಟಿಗೆ ಹಾನಿಕರವಾಗಿರುವ ಸ್ವಭಾವದೋಷ ಮತ್ತು ಅಹಂಗಳ ಅರಿವು ಮಾಡಿಸುವುದು
೨ ಅ. ‘ಸಾಧನೆಯನ್ನು ಮಾಡುವಾಗ ಸಾಧಕರು ಎಲ್ಲಿ ಕಡಿಮೆ ಬೀಳುತ್ತಾರೆ ? ಎಂದು ವೈಯಕ್ತಿಕವಾಗಿ ಅರಿವು ಮೂಡಿಸುವುದು : ‘ನಾವು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವಲ್ಲಿ ಎಲ್ಲಿ ಕಡಿಮೆ ಬೀಳುತ್ತೇವೆ ? ನಮ್ಮ ಸ್ವಭಾವದೋಷ ಯಾವುದು ? ಯಾವ ಅಹಂನ ಲಕ್ಷಣಗಳಿಂದ ನಮ್ಮಲ್ಲಿ ಬದಲಾವಣೆಯಾಗುತ್ತಿಲ್ಲ ?, ಎನ್ನುವುದನ್ನು ಪೂ. ರಮಾನಂದ ಅಣ್ಣನವರು ನಮಗೆ ಸ್ಪಷ್ಟವಾಗಿ ತಿಳಿಸಿಕೊಡುತ್ತಿದ್ದರು ಮತ್ತು ಮುಂದೆ ‘ಯಾವ ರೀತಿ ಪ್ರಯತ್ನವನ್ನು ಮಾಡಬೇಕು ?, ಎನ್ನುವುದನ್ನು ಪ್ರತಿಯೊಬ್ಬ ಸಾಧಕನಿಗೆ ವೈಯಕ್ತಿಕವಾಗಿ ತಿಳಿಸುತ್ತಿದ್ದರು. ಪ್ರತಿಯೊಬ್ಬ ಸಾಧಕನು ಮಾತನಾಡುತ್ತಿರುವಾಗ, ಅವರಲ್ಲಿರುವ ಸ್ವಭಾವದೋಷ, ಅಹಂ, ಗುಣ ಮತ್ತು ಕೌಶಲ್ಯಗಳನ್ನು ಸೂಕ್ಷ್ಮವಾಗಿ ಅರಿತುಕೊಂಡು ‘ಅವರನ್ನು ಮುಂದಕ್ಕೆ ಹೇಗೆ ಕರೆದುಕೊಂಡು ಹೋಗಬಹುದು ?, ಎಂದು ಪೂ. ಅಣ್ಣನವರು ಚಿಂತನೆಯನ್ನು ಮಾಡುತ್ತಾರೆ. ಅವರಲ್ಲಿರುವ ‘ಸಾಧಕರ ಸಾಧನೆ ಆಗಬೇಕು, ಎನ್ನುವ ತೀವ್ರ ತಳಮಳ, ಕಾಳಜಿ, ವ್ಯಾಪಕ ವಿಚಾರ ಮತ್ತು ಪ್ರೇಮಭಾವ ಈ ಗುಣಗಳು ಕಲಿಯಲು ಸಿಕ್ಕಿತು. – ಸೌ. ಗಾಯತ್ರಿ ಕೃಷ್ಣಮೂರ್ತಿ, ಸೌ. ನೀಲಾ ಆಶಿಷ ವೇಗಡ ಮತ್ತು ಸೌ. ಶೈಲಜಾ ಅಸಗಿ
೨ ಆ. ವಿಷಯಕ್ಕನುಸಾರ ಮಾತನಾಡಲು ಕಲಿಸುವುದು : ‘ನನ್ನಲ್ಲಿ ಮೊದಲು ‘ಅನಾವಶ್ಯಕವಾಗಿ ಮಾತನಾಡುವುದು ಎಂಬ ಸ್ವಭಾವದೋಷವಿತ್ತು. ಇದನ್ನು ಗುರುತಿಸಿ ಪೂ. ಅಣ್ಣನವರು ನನಗೆ ಕಡಿಮೆ ಶಬ್ದಗಳಲ್ಲಿ ವಿಷಯವನ್ನು ಸ್ಪಷ್ಟವಾಗಿ ಮಂಡಿಸುವಂತೆ ೨-೩ ಸಲ ಅರಿವು ಮೂಡಿಸಿದರು. – ಸೌ. ಗಾಯತ್ರಿ ಕೃಷ್ಣಮೂರ್ತಿ
೩. ಚಿಕ್ಕವರೊಂದಿಗೆ ಚಿಕ್ಕವರಾಗಿ ಮಾತನಾಡಿ ಅವರಿಗೆ ಸಾಧನೆಯ ಮತ್ತು ಸೇವೆಯ ಮಹತ್ವವನ್ನು ತಿಳಿಸಿಹೇಳುವುದು
‘ನಾನು ನನ್ನ ಮಗಳನ್ನು ಪೂ. ಅಣ್ಣನವರ ಬಳಿಗೆ ಕರೆದುಕೊಂಡು ಹೋಗಿದ್ದೆನು. ಅವರು ಅವಳೊಂದಿಗೆ ಚಿಕ್ಕವರಾಗಿ ಮಾತನಾಡುತ್ತಿದ್ದರು. ಅವರು ಅವಳಿಗೆ ನಾಮಜಪವನ್ನು ಮಾಡಲು ಹೇಳಿ ಆಗಾಗ ಮಂಗಳೂರು ಸೇವಾಕೇಂದ್ರಕ್ಕೆ ಸೇವೆಗಾಗಿ ಬರಲು ಹೇಳಿದರು. ನಾನು ಪೂ. ಅಣ್ಣನವರಿಗೆ ‘ಅವಳಲ್ಲಿ ‘ಸಿಟ್ಟು ಮಾಡಿಕೊಳ್ಳುವ ಸ್ವಭಾವದೋಷವಿದೆ, ಎಂದು ಹೇಳಿದಾಗ ಅವರು ‘ಸಿಟ್ಟು ಬರುವುದರಿಂದ ಆಗುವ ಹಾನಿ ಮತ್ತು ಸಿಟ್ಟು ಇವು ಮನುಷ್ಯನ ಎಷ್ಟು ದೊಡ್ಡ ಶತ್ರುವಾಗಿದೆ ? ಎನ್ನುವುದನ್ನು ಅವಳಿಗೆ ಪ್ರೀತಿಯಿಂದ ತಿಳಿಸಿದರು. ಅದರಂತೆ ‘ಸಿಟ್ಟು ಕಡಿಮೆಯಾಗಲು ಹೇಗೆ ಪ್ರಯತ್ನ ಮಾಡಬೇಕು ?, ಎಂದೂ ಅವಳಿಗೆ ಅವರು ತಿಳಿಸಿದರು. ಅವರ ವಾಣಿಯಲ್ಲಿನ ಚೈತನ್ಯದಿಂದ ಈಗ ಮಗಳಲ್ಲಿ ಬಹಳ ಬದಲಾವಣೆಯಾಗಿದೆ – ಸೌ. ಶೈಲಜಾ ಅಸಗಿ, ರಾಜಾಜಿ ನಗರ.
೪. ‘ತಾವು ಬರುವುದರಿಂದ ಸಾಧಕರಿಗೆ ಆನಂದ ಸಿಗಬೇಕು, ಎಂದು ಸತತವಾಗಿ ಪ್ರಯತ್ನನಿರತರಾಗಿರುವುದು
೪ ಅ. ಸಾಧಕಿಯ ಕುಟುಂಬದವರನ್ನು ಸಕಾರಾತ್ಮಕಗೊಳಿಸಲು ಅವರ ಮನೆಗೆ ಹೋಗಲು ಆದ್ಯತೆಯನ್ನು ನೀಡುವುದು: ಒಬ್ಬ ಸಾಧಕಿಗೆ ಸಾಧನೆಗಾಗಿ ಕುಟುಂಬದವರಿಂದ ತೊಂದರೆಯಾಗುತ್ತಿತ್ತು. ಆ ಸಾಧಕಿಯ ಮನೆಗೆ ಹೋಗುವ ಸಮಯದಲ್ಲಿ ಪೂ. ಅಣ್ಣನವರ ರಾತ್ರಿಯ ಊಟದ ಸಮಯವಾಗಿತ್ತು. ಆದರೂ ‘ಆ ಸಾಧಕಿಯ ತೊಂದರೆ ದೂರವಾಗಬೇಕು, ಎಂದು ಪೂ. ಅಣ್ಣನವರು ಮೊದಲು ಆ ಸಾಧಕಿಯ ಮನೆಗೆ ಹೋದರು ಮತ್ತು ಅವರ ಕುಟುಂಬದವರು ಸಕಾರಾತ್ಮವಾಗುವ ದೃಷ್ಟಿಯಿಂದ ಅವರೊಂದಿಗೆ ಮಾತನಾಡಿದರು. ಇದರಿಂದ ಆ ಸಾಧಕಿಗೆ ಸಾಧನೆಯಲ್ಲಿ ಪ್ರಯತ್ನಗಳನ್ನು ಹೆಚ್ಚಿಸಲು ಸಹಾಯವಾಯಿತು.
೪ ಆ. ದಿನವಿಡೀ ನಡೆಯುವ ಕಾರ್ಯಕ್ರಮಗಳು ಮುಗಿದ ಬಳಿಕ ರಾತ್ರಿ ಮರಳಿ ಮನೆಗೆ ಹೋಗುವಾಗ ನಾವು ಹೋಗುವ ಮಾರ್ಗದಲ್ಲಿರುವ ಒಬ್ಬ ಸಾಧಕನ ಮನೆಗೆ ಹೋಗಿ ಆ ಸಾಧಕನಿಗೆ ಮತ್ತು ಅವರ ಕುಟುಂಬದವರಿಗೆ ಆನಂದವನ್ನು ನೀಡಲು ಹೋಗುವುದು : ದಿನವಿಡೀ ನಡೆಯುವ ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ರಾತ್ರಿ ಸೇವಾಕೇಂದ್ರಕ್ಕೆ ಮರಳಿ ಹೋಗುವಾಗ ಓರ್ವ ಸಾಧಕನು ನಮಗೆ ದಾರಿ ತೋರಿಸಲು ನಮ್ಮೊಂದಿಗೆ ಬರುವವನಿದ್ದನು. ಆ ಸಾಧಕನ ಮನೆ ನಾವು ಮರಳಿ ಹೋಗುವ ಮಾರ್ಗದಲ್ಲಿಯೇ ಇತ್ತು. ಆಗ ರಾತ್ರಿ ಬಹಳ ತಡವಾಗಿದ್ದರೂ ಪೂ. ಅಣ್ಣನವರು ಆ ಸಾಧಕನ ಮನೆಗೆ ಹೋದರು. ಆ ಸಾಧಕನ ತಾಯಿ ಮತ್ತು ಇತರ ಕುಟುಂಬದವರೊಂದಿಗೆ ಮಾತನಾಡಿ ಅವರಿಗೆ ಆನಂದವನ್ನು ನೀಡಿದರು. ಆಗ ಆ ಕುಟುಂಬದವರು ಪೂ. ಅಣ್ಣನವರಿಗೆ ‘ನೀವು ಇಷ್ಟು ರಾತ್ರಿಯೂ ಎಷ್ಟು ಉತ್ಸಾಹಿಗಳಾಗಿ ಕಾಣಿಸುತ್ತೀರಿ ? ಇದು ಬಹುತೇಕವಾಗಿ ನಿಮ್ಮ ಸಾಧನೆಯಿಂದಲೇ ಸಾಧ್ಯವಾಗುತ್ತಿರಬೇಕು. ಇಲ್ಲವಾದರೆ ಈ ನಗರದಲ್ಲಿ (ಬೆಂಗಳೂರಿನಲ್ಲಿ) ಹೀಗೆ ಯಾರೂ ಕಾಣಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಇದರಿಂದ ‘ಸಂತರಲ್ಲಿರುವ ಚೈತನ್ಯ ಸಾಮಾನ್ಯ ಜನರಿಗೂ ಅರಿವಾಗುತ್ತದೆ, ಎಂದು ನಮಗೆ ಕಲಿಯಲು ಸಿಕ್ಕಿತು. – ಶ್ರೀಮತಿ ಅಶ್ವಿನಿ ಪ್ರಭು
೫. ಮಾರ್ಗದರ್ಶನದ ಬಳಿಕ ಸಾಧಕಿಯಲ್ಲಿ ಆಗಿರುವ ಬದಲಾವಣೆ
೫ ಅ. ನಿರಾಶೆಯಿಂದ ಹೊರಬರಲು ಸಾಧ್ಯವಾಗುವುದು : ‘ನನ್ನಲ್ಲಿ ‘ನಕಾರಾತ್ಮಕ ವಿಚಾರ ಮಾಡುವುದು, ಒತ್ತಡವನ್ನು ಮಾಡಿಕೊಳ್ಳುವುದು, ನಿರಾಶೆಯುಂಟಾಗುವುದು, ಇತ್ಯಾದಿ ದೋಷಗಳಿದ್ದವು. ಪೂ. ಅಣ್ಣ ನವರು ನನ್ನ ವ್ಯಷ್ಟಿ ವರದಿಯನ್ನು ತೆಗೆದುಕೊಂಡು ನನಗೆ ‘ಸಾಧನೆಯ ಪ್ರಯತ್ನವನ್ನು ಹೇಗೆ ಮಾಡುವುದು ? ಎಂಬ ಬಗ್ಗೆ ಹೇಳಿದರು. ಈಗ ಇಂತಹ ಯಾವುದಾದರೂ ಪ್ರಸಂಗಗಳು ಬಂದರೆ ನನ್ನಲ್ಲಿ ಒತ್ತಡ ನಿರ್ಮಾಣವಾಗುವುದಿಲ್ಲ ಮತ್ತು ನಿರಾಶೆಯೂ ಆಗುವುದಿಲ್ಲ. ಎಂದಾದರೂ ಆದರೂ ನನಗೆ ತಕ್ಷಣವೇ ಅದರ ಅರಿವಾಗುತ್ತದೆ ಮತ್ತು ಅದರಿಂದ ಹೊರಬರಲು ಪ್ರಯತ್ನಗಳೂ ಆಗುತ್ತವೆ.
೫ ಆ. ಸಾಧಕರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದು : ಮೊದಲು ನಾನು ಮನಸ್ಸು ಬಿಚ್ಚಿ ವರದಿಯನ್ನು ಕೊಡುತ್ತಿರಲಿಲ್ಲ. ‘ವ್ಯಷ್ಟಿ ಚೆನ್ನಾಗಿ ಆದರೆ ಮಾತ್ರ ಸಾಧನೆಯಾಗುವುದು, ಎನ್ನುವುದನ್ನು ಪೂ. ಅಣ್ಣನವರ ಮಾರ್ಗದರ್ಶನದಿಂದ ಗಮನಕ್ಕೆ ಬಂದಿದರಿಂದ ನಕಾರಾತ್ಮಕ ಮಾನಸಿಕತೆಯಿಂದ ಹೊರಗೆ ಬರಲು ಈಗ ಪ್ರಯತ್ನಗಳು ಆಗುತ್ತವೆ ಮತ್ತು ವ್ಯಷ್ಟಿ ವರದಿಯನ್ನು ನೀಡುವಾಗ ಸಾಧಕರೊಂದಿಗೆ ಮನಸ್ಸುಬಿಚ್ಚಿ ಮಾತನಾಡಲು ಸಾಧ್ಯವಾಗುತ್ತದೆ. – ಶ್ರೀಮತಿ ಶೈಲಜಾ ಫಡಕೆ
೭. ಪೂ. ರಮಾನಂದಅಣ್ಣನವರ ವಿಷಯದಲ್ಲಿ ಸಾಧಕರಿಗೆ ಬಂದಂತಹ ಅನುಭೂತಿ
೭ ಅ. ನಾಮಜಪ ತನ್ನಿಂತಾನೇ ಪ್ರಾರಂಭವಾಗಿ ಮನಸ್ಸು ಸ್ಥಿರ ಮತ್ತು ಶಾಂತವಾಗುವುದು : ‘ಸೇವೆಯನ್ನು ಮಾಡುವಾಗ ಎಷ್ಟೇ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ತೊಂದರೆಗಳು ಆಗುತ್ತಿದ್ದರೂ, ಪೂ. ಅಣ್ಣನವರಲ್ಲಿರುವ ಚೈತನ್ಯದಿಂದ ಅದು ಗಮನಕ್ಕೆ ಬರುವುದಿಲ್ಲ. ಅವರೊಂದಿಗೆ ಇರುವಾಗ ನಾಮಜಪ ತನ್ನಿಂತಾನೇ ಪ್ರಾರಂಭವಾಗಿ ಮನಸ್ಸು ಸ್ಥಿರ ಮತ್ತು ಶಾಂತವಾಗುತ್ತದೆ. ಮನಸ್ಸಿನಲ್ಲಿ ಯಾವುದೇ ಅನಾವಶ್ಯಕ ವಿಚಾರ ಬರುವುದಿಲ್ಲ. ಅವರಲ್ಲಿರುವ ಪ್ರೇಮಭಾವ ನಮಗೆಲ್ಲರಿಗೂ ಅನುಭವಿಸಲು ಸಾಧ್ಯವಾಯಿತು – ಸೌ. ಗಾಯತ್ರಿ ಕೃಷ್ಣಮೂರ್ತಿ
೭ ಆ. ಪೂ. ರಮಾನಂದ ಅಣ್ಣನವರ ಮಾರ್ಗದರ್ಶನ ಮುಗಿದ ಬಳಿಕ ನಾಮಜಪ ಪ್ರಾರಂಭವಾಗುವುದು, ವಸ್ತುಗಳಿಗೆ ಸುಗಂಧ ಬರುವುದು ಮತ್ತು ಅವುಗಳ ಮೇಲೆ ದೈವಿ ಕಣಗಳು ಕಾಣಿಸುವುದು
೧. ಪೂ ಅಣ್ಣನವರ ಚೈತನ್ಯಮಯ ವಾಣಿಯಿಂದ ಮನಸ್ಸು ಶಾಂತವಾಗಿ ನಾಮಜಪ ತನ್ನಿಂತಾನೇ ಪ್ರಾರಂಭವಾಯಿತು.
೨. ಪೂ. ಅಣ್ಣನವರು ಧರ್ಮಶಿಕ್ಷಣ ವರ್ಗದ ಸಾಧಕರಿಗೆ ‘ಅತ್ತರ, ಕರ್ಪೂರ ಮತ್ತು ‘ಸನಾತನ ಪ್ರಭಾತದ ಸಂಚಿಕೆ (ಆಪತ್ಕಾಲಿನ ಸಂಚಿಕೆ) ಇವುಗಳಿಂದ ಉಪಾಯವನ್ನು ಹೇಗೆ ಮಾಡುವುದು ? ಎನ್ನುವ ಮಹತ್ವವನ್ನು ಹೇಳುತ್ತಿದ್ದರು. ಪೂ. ಅಣ್ಣನವರ ಮಾರ್ಗದರ್ಶನದ ಸಮಯದಲ್ಲಿ ಉಪಯೋಗಿಸಿದ ಈ ವಸ್ತುಗಳನ್ನು ಕೈಯಲ್ಲಿ ತೆಗೆದುಕೊಂಡ ಬಳಿಕ ‘ಸನಾತನ ಪ್ರಭಾತದ ಆ ಸಂಚಿಕೆಗೆ ಸುಗಂಧ ಬರುವುದು ಅರಿವಾಯಿತು.
೩. ಪೂ. ಅಣ್ಣವರು ಕೈಯಲ್ಲಿ ತೆಗೆದುಕೊಂಡಿದ್ದ ತಾಯಿತದ ಮೇಲೆ ದೈವಿ ಕಣ ಬರುವುದು : ಪೂ. ಅಣ್ಣನವರು ಧರ್ಮಶಿಕ್ಷಣ ವರ್ಗದ ಸಾಧಕರಿಗೆ ಕೊರಳಿನಲ್ಲಿ ತಾಯಿತವನ್ನು (ತಾಯಿತದಲ್ಲಿ ಸ್ವರಕ್ಷಣೆಗಾಗಿ ಮಂತ್ರಜಪದ ಕಾಗದವಿದೆ) ಹಾಕಿಕೊಳ್ಳುವುದರ ಮಹತ್ವವನ್ನು ಹೇಳಿದರು. ಆಗ ಪೂ. ಅಣ್ಣನವರು ತಾಯಿತವನ್ನು ಕೈಯಲ್ಲಿ ಹಿಡಿದಿದ್ದ ಜಾಗದಲ್ಲಿ ದೈವಿಕಣ ಕಾಣಿಸಿತು. ಹಾಗೆಯೇ ಆ ತಾಯಿತದ ಬಣ್ಣದಲ್ಲಿಯೂ ಬದಲಾವಣೆಯಾಗಿ ಅದು ಹೊಳೆಯುತ್ತಿರುವುದು ಅರಿವಾಯಿತು. ಆ ದೈವಿ ಕಣವನ್ನು ಜೋಪಾನವಾಗಿಟ್ಟುಕೊಂಡು ಬಳಿಕ ಸಾಧಕರಿಗೆ ತೋರಿಸಿದೆನು.
೭ ಇ. ಪೂ. ಅಣ್ಣನವರನ್ನು ನೋಡಿದ ಬಳಿಕ ಪರಾತ್ಪರ ಗುರುದೇವರನ್ನು ನೋಡಿದಂತೆ ಅನಿಸಿ ಭಾವಜಾಗೃತಿಯಾಗುತ್ತಿತ್ತು.
೭ ಈ. ಕೈಗಳು ಹಗುರವಾಗಿರುವಂತೆ ಅನಿಸುವುದು : ಪೂ. ಅಣ್ಣನವರ ಮಾರ್ಗದರ್ಶನದ ಸಮಯದಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ಬರೆಯುವಾಗ ನನಗೆ ನನ್ನ ಕೈಗಳು ಹಗುರವಾಗಿರುವಂತೆ ಅನಿಸಿ ತನ್ನಿಂತಾನೇ ಮತ್ತು ಸಹಜವಾಗಿ ಬರೆಯಲು ಸಾಧ್ಯವಾಯಿತು. ಈ ಮೊದಲು ನನ್ನ ಕೈಗಳ ನರಗಳು ನೋಯುತ್ತಿದ್ದ ಕಾರಣ ನನಗೆ ಬರೆಯಲು ಬರುತ್ತಿರಲಿಲ್ಲ. – ಸೌ. ಸಂಗೀತಾ ಶೆಣೈ.
ಪೂ. ರಮಾನಂದ ಅಣ್ಣನವರ ಅಮೂಲ್ಯ ವಿಚಾರ ಸಂಪತ್ತು
ಅ. ಸ್ವಭಾವದೋಷದೊಂದಿಗೆ ಸೇವೆಯನ್ನು ಮಾಡಿದರೆ ಸಾಧನೆ ಆಗುವುದಿಲ್ಲ. ಗುಣ ಮತ್ತು ಭಾವಗಳೊಂದಿಗೆ ಸೇವೆಯನ್ನು ಮಾಡಿದರೆ ಸಾಧನೆಯಾಗುತ್ತದೆ ಮತ್ತು ಆನಂದವೂ ಸಿಗುತ್ತದೆ.
ಆ. ನಮ್ಮ ಅಂತಿಮ ಧ್ಯೇಯ ಈಶ್ವರಪ್ರಾಪ್ತಿಯಾಗಿದ್ದು, ರಜ-ತಮ ಮತ್ತು ಮನಸ್ಸು ಹಾಗೂ ಬುದ್ಧಿ ಇವುಗಳು ನಮ್ಮನ್ನು ಆ ಧ್ಯೇಯದಿಂದ ದೂರವಿಡಲು ಕಾರಣವಾಗುತ್ತಿರುತ್ತವೆ. ಅದಕ್ಕಾಗಿ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಗಂಭೀರವಾಗಿ ಪ್ರಯತ್ನಿಸಬೇಕು. ಇದರಿಂದಲೇ ನಾವು ರಜ-ತಮದಿಂದ ಹೊರಬಂದು ನಮ್ಮ ಮನಸ್ಸು ಮತ್ತು ಬುದ್ಧಿ ಸಾತ್ವಿಕವಾಗಲು ಸಾಧ್ಯವಾಗುವುದು.
ಇ. ನಮಗೆ ಸಾಧನೆಯನ್ನು ಅಂತರ್ಮನದಿಂದ ಮಾಡಬೇಕಾಗಿದೆ. ಆ ರೀತಿ ಸಾಧನೆಯಾದಾಗ ಮಾತ್ರ ಶ್ರೀ ಗುರುಗಳೇ ನಮ್ಮನ್ನು ಸಾಧನೆಯಲ್ಲಿ ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ.
ಈ. ‘ಯಾರು ಸತತವಾಗಿ ಗುರುಸೇವೆ ಮತ್ತು ಗುರುಕಾರ್ಯವನ್ನು ‘ಇದು ನನ್ನ ಕಾರ್ಯವಾಗಿದೆ, ಎಂದುಕೊಂಡು ಜವಾಬ್ದಾರಿಯನ್ನು ವಹಿಸಿಕೊಂಡು ಮಾಡುತ್ತಾರೆಯೋ, ಅವರಿಗಾಗಿ ಶ್ರೀ ಗುರುಗಳ ಶಕ್ತಿ ಸತತವಾಗಿ ಕಾರ್ಯನಿರತವಾಗಿರುತ್ತದೆ.
ಉ. ಸಾಧನೆಯಲ್ಲಿ ತಳಮಳವಿರಬೇಕು. ಸಂತ ಸಖುಬಾಯಿಯಂತೆ ಭಗವಂತ ಮತ್ತು ಶ್ರೀ ಗುರುಗಳಿಗಾಗಿ ನಾವು ವ್ಯಾಕುಲರಾಗಬೇಕು. ಅದಕ್ಕಾಗಿ ಅವರಿಗೆ ನಮ್ಮ ಹೃದಯದಲ್ಲಿ ಸ್ಥಾನವನ್ನು ನೀಡಬೇಕು.
ಊ. ಶ್ರೀಗುರುಗಳ ಒಂದೊಂದು ಶಬ್ದವೂ ಅವರ ಸಂಕಲ್ಪವೇ ಆಗಿರುತ್ತದೆ; ಆದ್ದರಿಂದ ಅವರು ತಿಳಿಸುವ ಪ್ರತಿಯೊಂದು ವಿಷಯವನ್ನು ನಾವು ಆಚರಣೆಯಲ್ಲಿ ತರಬೇಕು. ಉತ್ತಮ ಶಿಷ್ಯ ಸತತವಾಗಿ ಆಜ್ಞಾಪಾಲನೆಯನ್ನು ಮಾಡುತ್ತಿರುತ್ತಾನೆ.
ಎ. ನಮ್ಮ ಶ್ರೀ ಗುರುಗಳು ಸರ್ವಶ್ರೇಷ್ಠರಾಗಿದ್ದಾರೆ. ಅವರು ಸಾಧಕರಿಗೆ ಗುರುಮಂತ್ರವನ್ನು ನೀಡದೇ ‘ಸಂತರು, ಸದ್ಗುರುಗಳು ಮತ್ತು ಪರಾತ್ಪರ ಗುರು ಈ ಪದವಿಯವರೆಗೆ ತಲುಪಿಸಿದ್ದಾರೆ.
ಏ. ಕೃತಜ್ಞತೆಯನ್ನು ಹೆಚ್ಚಿಸಲು ನಾನು ಮಾಡಿದೆ ಎನ್ನುವ ಭಾವ ಕಡಿಮೆಯಾಗಬೇಕು.
ಒ. ನಮ್ಮ ಶ್ರೀಗುರುಗಳು ಸಾಧಕರಿಗಾಗಿ ಹಗಲು ರಾತ್ರಿ ಕಷ್ಟ ಸಹಿಸುತ್ತಿದ್ದಾರೆ. ಅವರ ವಿಷಯದಲ್ಲಿ ಎಷ್ಟು ಕೃತಜ್ಞತಾಭಾವವಿದ್ದರೂ ಅದೂ ಕಡಿಮೆಯೇ ಆಗಿದೆ.
ಔ. ನಮಗೆ ದೇವರ ಮೇಲೆ ಅಥವಾ ಶ್ರೀ ಗುರುಗಳ ಮೇಲೆ ಶ್ರದ್ಧೆಯಿದ್ದರೆ ಮಾತ್ರ ನಾವು ಎಲ್ಲಿದ್ದರೂ ದೇವರು ನಮಗೆ ಸಹಾಯ ಮಾಡುತ್ತಾರೆ.
ಅಂ. ಪ್ರಾಯಶ್ಚಿತ್ತದಿಂದ ಪಾಪಕ್ಷಾಲನೆಯಾಗುತ್ತದೆ ಮತ್ತು ಕ್ಷಮಾಯಾಚನೆಯಿಂದ ‘ಅಹಂ ನಷ್ಟವಾಗುತ್ತದೆ.
ಕ. ತನು, ಮನ, ಧನ ಮತ್ತು ಸಮಯ ಇವುಗಳ ತ್ಯಾಗವನ್ನು ಯಾರು ಮಾಡುತ್ತಾರೆಯೋ, ಅವರು ಮಾಯೆಯಿಂದ ಬಹುಬೇಗನೆ ಮುಕ್ತರಾಗುತ್ತಾರೆ.
ಖ. ಭಾವ ವೃದ್ಧಿಸಿದರೆ ಮನಸ್ಸು ಮತ್ತು ಬುದ್ಧಿ ಸಾತ್ವಿಕವಾಗುತ್ತದೆ.
ಗ. ‘ಯಾವಾಗಲೂ ಸೇವೆಯನ್ನು ಮಾಡುವಾಗ ಭಗವಂತ ನಮ್ಮೊಂದಿಗೆ ಇದ್ದಾನೆ, ಎಂಬ ಭಾವವನ್ನು ಇಟ್ಟುಕೊಂಡು ಸೇವೆಯನ್ನು ಮಾಡಬೇಕು.
ಘ. ‘ಜೀವನದಲ್ಲಿ ಪ್ರತಿಯೊಂದು ವಿಷಯವೂ ಭಗವಂತನಿಂದಲೇ ಆಗುತ್ತದೆ, ಎಂಬ ಶ್ರದ್ಧೆಯನ್ನಿಟ್ಟುಕೊಂಡು ಪ್ರಯತ್ನಿಸಿದರೆ ಪ್ರಗತಿ ಶೀಘ್ರಗತಿಯಿಂದ ಆಗುವುದು : ನಮ್ಮಲ್ಲಿ ತಳಮಳವಿದ್ದರೆ ಮಾತ್ರ ಸಾಧನೆ ಚೆನ್ನಾಗಿ ಆಗುತ್ತದೆ. ತಳಮಳದಿಂದ ಸಾಧನೆಯನ್ನು ಮಾಡಿದಾಗ ಅಡಚಣೆಗಳೂ ತನ್ನಿಂತಾನೇ ದೂರವಾಗುತ್ತದೆ. ತಳಮಳವೇ ಮುಂದೆ ಶ್ರದ್ಧೆಯಲ್ಲಿ ರೂಪಾಂತರವಾಗುತ್ತದೆ. ಸಾಧನೆ ಮತ್ತು ಶ್ರೀಗುರುಗಳ ವಿಷಯದಲ್ಲಿ ಸತತ ವಿಚಾರ ಮಾಡುವುದು, ಶ್ರೀಗುರುಗಳು ಹೇಳಿರುವುದನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ‘ಜೀವನದ ಪ್ರತಿಯೊಂದು ವಿಷಯವು ಭಗವಂತನ ಕಾರಣದಿಂದಲೇ ಆಗುತ್ತದೆ, ಎನ್ನುವ ಶ್ರದ್ಧೆಯನ್ನು ಇಡುವುದು ಹೀಗೆ ಮಾಡಿದರೆ ನಮ್ಮ ಪ್ರಗತಿ ಶೀಘ್ರವಾಗಿ ಆಗುತ್ತದೆ.