ಹಲಾಲ್ ಪ್ರಮಾಣಿತ ಉತ್ಪನ್ನಗಳ ವಿರುದ್ಧದ #BoycottHalalProducts ಈ ‘ಟ್ರೆಂಡ್ ‘ರಾಷ್ಟ್ರೀಯ ಟ್ರೆಂಡ್ನಲ್ಲಿ ಎರಡನೇ ಸ್ಥಾನ !

ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಟ್ವಿಟ್ಟರ್‌ನಲ್ಲಿ ಆಗ್ರಹ

ಮುಂಬೈ – ಜಗತ್ತಿನ ಕಟ್ಟರ್ ಸಮುದಾಯವು ಪ್ರತಿಯೊಂದು ಆಹಾರ ಪದಾರ್ಥ ಅಥವಾ ವಸ್ತುಗಳು ಇಸ್ಲಾಂ ಪ್ರಕಾರ ಮಾನ್ಯತೆ ಪಡೆದ ಅಂದರೆ ‘ಹಲಾಲ್ ಇರುವುದನ್ನು ಒತ್ತಾಯಿಸುತ್ತಿದೆ. ಇದಕ್ಕಾಗಿ ಆಹಾರ ಪದಾರ್ಥ ಅಥವಾ ವಸ್ತುಗಳ ಮಾರಾಟಕ್ಕೆ ‘ಹಲಾಲ್ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.  ಈ ಪ್ರಮಾಣಪತ್ರವನ್ನು ನೀಡುವ ‘ಜಾಮಿಯತ್-ಉಲೆಮಾ-ಎ-ಇಸ್ಲಾಂ ಈ ಸಂಘಟನೆಯು ಜಿಹಾದಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ೭೦೦ ಆರೋಪಿಗಳ ಪ್ರಕರಣಗಳ ಖಟ್ಲೆ ನಡೆಸುತ್ತಿದೆ. ಅದಕ್ಕಾಗಿ ಹಲಾಲ್ ಪ್ರಮಾಣಪತ್ರಗಳಿಂದ ಸಿಗುವ ಹಣವನ್ನು ಬಳಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

ಈ ಪಿತೂರಿಯ ಬಗ್ಗೆ ಹಿಂದೂ ಧರ್ಮಪ್ರೇಮಿಗಳಿಗೆ ತಿಳಿದ ನಂತರ, ಅವರು ಟ್ವಿಟರ್‌ನಲ್ಲಿ #BoycottHalalProducts ಹೆಸರಿನಲ್ಲಿ ‘ಹ್ಯಾಶ್‌ಟ್ಯಾಗ್ ಪ್ರಾರಂಭಿಸಿದರು. ಪರಿಣಾಮವಾಗಿ ‘ಟ್ರೆಂಡ್ ರಾಷ್ಟ್ರೀಯ ಟ್ರೆಂಡ್‌ದಲ್ಲಿ ಮೊದಲು ನಾಲ್ಕನೇ ಮತ್ತು ನಂತರ ಮೂರನೇ ನಂತರ ಎರಡನೇಯ ಸ್ಥಾನದಲ್ಲಿತ್ತು. ಈ ‘ಟ್ರೆಂಡ್ನಲ್ಲಿ ೧ ಲಕ್ಷ ಜನರು ಟ್ವೀಟ್ಸ್ ಮಾಡಿದ್ದಾರೆ.

೧. ಈ ಟ್ವೀಟ್ಸ್‌ಗಳಲ್ಲಿ ಧರ್ಮಪ್ರೇಮಿಗಳು, ಹಲಾಲ್ ಉತ್ಪನ್ನಗಳನ್ನು ಮಾರಾಟ ಮಾಡಿ ಶರಿಯಾಕ್ಕನುಸಾರ ಪಾಲನೆ ಮಾಡಲು ಹೇಳಲಾಗುತ್ತಿದೆ ಎಂದು ಹೇಳಿದರು. ಭಾರತದ ಆರ್ಥಿಕತೆಗೆ ಸಮನಾಂತರವಾಗಿ ಹಲಾಲ್ ಆರ್ಥಿಕತೆಯನ್ನು ಸೃಷ್ಟಿಸುವ ಪಿತೂರಿ ಇದೆ.

೨. ಅನೇಕ ಧರ್ಮಪ್ರೇಮಿಗಳು ಇಂತಹ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಹೇಳುತ್ತ ಈ ಪ್ರಮಾಣಪತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.