೧. ಸಾಧಕರ ಹಾಗೂ ಹಿಂದುತ್ವನಿಷ್ಠರ ರಕ್ಷಣೆಯಾಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ದೇಹವನ್ನು ಗುರಾಣಿಯನ್ನಾಗಿ ಮಾಡಿಕೊಂಡಿದ್ದಾರೆ ಹಾಗೂ ಅವರು ಸಾಧಕರು ಹಾಗೂ ಹಿಂದುತ್ವನಿಷ್ಠರ ಮೇಲಾಗುತ್ತಿರುವ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ತಾವೇ ಸಹಿಸುತ್ತಿದ್ದಾರೆ
‘ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಇವುಗಳಿಗೆ ಸಮಾಜದಿಂದ ಸ್ಥೂಲದಿಂದಾಗುತ್ತಿರುವ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತಿದೆ. ಅದೇ ರೀತಿ ಈ ಎರಡೂ ಸಂಘಟನೆಗಳೊಂದಿಗೆ ಜೋಡಿಸಲ್ಪಟ್ಟ ಸಾಧಕರು, ಕಾರ್ಯಕರ್ತರು ಹಾಗೂ ಹಿಂದುತ್ವನಿಷ್ಠರಿಗೆ ಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಸತತ ಆಕ್ರಮಣಗಳನ್ನು ನಡೆಸುತ್ತಿವೆ. ಹೀಗಿದ್ದರೂ ಸಾಧಕರು, ಕಾರ್ಯಕರ್ತರು ಹಾಗೂ ಹಿಂದುತ್ವನಿಷ್ಠರು ಜೀವಂತವಾಗಿದ್ದಾರೆ. ಇದು ಸಾಮಾನ್ಯ ಘಟನೆಯಾಗಿರದೇ ಇದೊಂದು ದೈವೀ ಚಮತ್ಕಾರವಾಗಿದೆ. ಈ ಚಮತ್ಕಾರದ ರಹಸ್ಯವನ್ನು ಹೇಳುವಾಗ ದೇವರು ನನಗೆ, ‘ಸಾಧಕರು ಹಾಗೂ ಹಿಂದುತ್ವನಿಷ್ಠರ ರಕ್ಷಣೆಗಾಗಿ ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮದಲ್ಲಿ ತಮ್ಮ ದೇಹವನ್ನು ಗುರಾಣಿಯನ್ನಾಗಿ ಮಾಡಿದ್ದಾರೆ ಹಾಗೂ ಅವರು ಪ್ರತಿಯೊಬ್ಬ ಸಾಧಕರ ಹಾಗೂ ಹಿಂದುತ್ವ ನಿಷ್ಠರ ಜೊತೆಗೆ ಸೂಕ್ಷ್ಮದಲ್ಲಿದ್ದು ಅವರ ಮೇಲಾಗುವ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರಿಗೆ ವಿವಿಧ ರೀತಿಯ ಶಾರೀರಿಕ ತೊಂದರೆಗಳು ಆಗುತ್ತಿವೆ. ಸಾಧಕರು ಹಾಗೂ ಹಿಂದುತ್ವನಿಷ್ಠರಿಗೆ ಪರಾತ್ಪರ ಗುರು ಡಾ. ಆಠವಲೆರೂಪಿ ಸಂರಕ್ಷಕ ಕವಚವು ಸಿಕ್ಕಿರುವುದರಿಂದ ಅವರು ಇಂದಿನವರೆಗೆ ಜೀವಂತವಾಗಿದ್ದಾರೆ. ಪರಾತ್ಪರ ಗುರುದೇವರು ತಾವು ಮಹಾಮೃತ್ಯುಯೋಗದ ದವಡೆಯಲ್ಲಿ ಸಿಲುಕಿ ಸಾಧಕರನ್ನು ಮೃತ್ಯುವಿನಿಂದ ಸೂಕ್ಷ್ಮದಲ್ಲಿ ಹಗಲು ರಾತ್ರಿ ರಕ್ಷಿಸುತ್ತಿದ್ದಾರೆ’, ಎಂದು ಹೇಳಿದರು.
೨. ಸನಾತನದ ಸಂತರು ದೇವರ ಚರಣಗಳಲ್ಲಿ ಭಾವಪೂರ್ಣ ಪ್ರಾರ್ಥನೆ, ಮಂತ್ರಜಪ ಹಾಗೂ ನಾಮಜಪ ಮಾಡುವುದು ಹಾಗೂ ಸಾಧಕರಿಗೆ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಹೇಳುವುದು
ಸನಾತನದ ಸಂತರು, ‘ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಶ್ರಮಿಸುತ್ತಿರುವ ಸಾಧಕರು ಹಾಗೂ ಹಿಂದುತ್ವನಿಷ್ಠರ ಮೇಲೆ ಸೂಕ್ಷ್ಮದಿಂದಾಗುವ ಆಕ್ರಮಣಗಳಿಂದ ಅವರ ರಕ್ಷಣೆಯಾಗಬೇಕೆಂದು ಹಾಗೂ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಸಮಷ್ಟಿ ಸ್ತರದಲ್ಲಾಗುವ ಸೂಕ್ಷ್ಮದಲ್ಲಿನ ವಿರೋಧವು ನಾಶವಾಗಲಿ, ಎಂದು ಪ್ರತಿದಿನ ದೇವರ ಚರಣಗಳಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ, ಗಂಟೆಗಟ್ಟಲೇ ಕುಳಿತುಕೊಂಡು ನೀಡಿರುವ ಮಂತ್ರಜಪ ಹಾಗೂ ನಾಮಜಪವನ್ನು ಪೂರ್ಣಗೊಳಿಸುತ್ತಾರೆ ಹಾಗೂ ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಹೇಳುತ್ತಾರೆ. ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಸಂತರು ಭಗವಂತನ ಅಸೀಮ ಭಕ್ತರಾಗಿದ್ದಾರೆ. ಸಂತರು ಮಾಡಿದ ಪ್ರಾರ್ಥನೆಯಿಂದ ದೇವರಿಗೆ ಧಾವಿಸಿ ಬರಲೇ ಬೇಕಾಗುತ್ತದೆ ಹಾಗೂ ಅವರ ಪ್ರಾರ್ಥನೆಯನ್ನು ಕೇಳಿಸಿಕೊಳ್ಳಲೇ ಬೇಕಾಗುತ್ತದೆ. ಸಂತರ ಆಶೀರ್ವಾದದಿಂದ ಸಮಸ್ತ ಸಾಧಕರು ಹಾಗೂ ಹಿಂದುತ್ವನಿಷ್ಠರ ಸುತ್ತಲೂ ಸಂರಕ್ಷಕಕವಚವು ನಿರ್ಮಾಣವಾಗಿ ಅವರ ರಕ್ಷಣೆಯಾಗುತ್ತಿದೆ.
೩. ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟ ವಿವಿಧ ಸಂತರು ಈಶ್ವರೀ ಕಾರ್ಯದಲ್ಲಿ ಅಮೂಲ್ಯ ಯೋಗದಾನ ನೀಡುವುದು
ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟ ಕೆಲವು ಸಂತರು ಪ್ರತಿದಿನ ಸಾಧಕರ ಹಾಗೂ ಹಿಂದುತ್ವನಿಷ್ಠರ ರಕ್ಷಣೆಗಾಗಿ ಜಪ, ತಪ, ಯಜ್ಞ, ಯಾಗ, ಧಾರ್ಮಿಕ ವಿಧಿ ಹಾಗೂ ಅನುಷ್ಠಾನಗಳನ್ನು ಮಾಡುತ್ತಾರೆ. ಅವರ ಕೃಪೆಯಿಂದಲೇ ಸಾಧಕರು ಹಾಗೂ ಹಿಂದುತ್ವನಿಷ್ಠರ ಮೇಲಿನ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ಹಿಂದಿರುಗಿ ಅವರ ರಕ್ಷಣೆಯಾಗುತ್ತಿದೆ.
೪. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆ ಹಾಗೂ ಎಲ್ಲ ಸಂತರ ಭಕ್ತಿಯ ಬಲದ ಮೇಲೆ ಸಾಧಕರು ಹಾಗೂ ಹಿಂದುತ್ವನಿಷ್ಠರ ರಕ್ಷಣೆಯಾಗುತ್ತಿರುವುದು, ಅದೇ ರೀತಿ‘ಧರ್ಮೋ ರಕ್ಷತಿ ರಕ್ಷಿತಃ |, ಎಂಬ ಈಶ್ವರನ ವಚನದ ಅನುಭವವನ್ನು ಸಾಧಕರು ಹಾಗೂ ಹಿಂದುತ್ವನಿಷ್ಠರಿಗೆ ಪ್ರತಿದಿನ ಪಡೆಯುವುದು
ಪರಾತ್ಪರ ಗುರು ಡಾ. ಆಠವಲೆಯವರ ಕೃಪೆ ಹಾಗೂ ಎಲ್ಲ ಸಂತರ ಭಕ್ತಿಯ ಬಲದ ಮೇಲೆ ಸಾಧಕರು ಹಾಗೂ ಹಿಂದುತ್ವನಿಷ್ಠರ ರಕ್ಷಣೆಯಾಗುತ್ತಿದೆ. ಈ ರೀತಿ ಧರ್ಮದ ಸಗುಣ ರೂಪವಾಗಿರುವ ಪರಾತ್ಪರ ಗುರು ಡಾ. ಆಠವಲೆ ಹಾಗೂ ಸಂತರಿಂದಾಗಿ ಕೇವಲ ಪೃಥ್ವಿಯಷ್ಟೇ ಅಲ್ಲದೆ, ಸಂಪೂರ್ಣ ಬ್ರಹ್ಮಾಂಡದಲ್ಲಿ ಹಗಲು ರಾತ್ರಿ ಎಲ್ಲ ಕರ್ಮ ಹಿಂದೂಗಳ ರಕ್ಷಣೆಯಾಗುತ್ತಿದೆ. ಇದರಿಂದ ‘ಧರ್ಮೋ ರಕ್ಷತಿ ರಕ್ಷಿತಃ | (ಮನುಸ್ಮೃತಿ, ಅಧ್ಯಾಯ ೮, ಶ್ಲೋಕ ೧೫), ಅಂದರೆ ‘ಧರ್ಮದ ರಕ್ಷಣೆ ಮಾಡುವವರನ್ನು ಧರ್ಮ, ಅಂದರೆ ಈಶ್ವರನು ರಕ್ಷಿಸುವನು, ಎಂಬ ಈಶ್ವರನ ವಚನದ ಅನುಭೂತಿಯನ್ನು ಸಾಧಕರು ಹಾಗೂ ಹಿಂದುತ್ವನಿಷ್ಠರು ಪ್ರತಿದಿನ ಪಡೆಯುತ್ತಿದ್ದಾರೆ.
೫. ಪರಾತ್ಪರ ಗುರು ಡಾ. ಆಠವಲೆ ಹಾಗೂ ಎಲ್ಲ ಸಂತರ ಮಹಾನತೆ ಹಾಗೂ ತ್ಯಾಗದ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕೆಂದು, ದೇವರು ಅವರ ಬಗೆಗಿನ ಮಾಹಿತಿಯನ್ನು ಹೇಳುತ್ತಿರುವುದು
ಪರಾತ್ಪರ ಗುರು ಡಾ. ಆಠವಲೆ ಹಾಗೂ ಸಂತರು, ಸಾಧಕರನ್ನು ಹಾಗೂ ಹಿಂದುತ್ವನಿಷ್ಠರನ್ನು ಕಾಪಾಡಲು ಸೂಕ್ಷ್ಮದಲ್ಲಿ ಯಾವ ರೀತಿ ಹಗಲು ರಾತ್ರಿ ಪ್ರಯತ್ನಿಸುತ್ತಿದ್ದಾರೆ, ಎಂಬುದು ಬಹುಶಃ ನಮಗೆ ಈ ಸ್ಥೂಲ ಕಣ್ಣುಗಳಿಗೆ ಕಾಣಿಸುವುದಿಲ್ಲ. ಅವರ ಕಾರ್ಯವು ಸೂಕ್ಷ್ಮದಲ್ಲಿ ನಡೆಯುತ್ತಿರುವುದರಿಂದ ಅದರ ಮಾಹಿತಿಯು ಕೇವಲ ದೇವರಿಗೆ ಮಾತ್ರ ತಿಳಿದಿದೆ. ‘ಪರಾತ್ಪರ ಗುರು ಡಾ. ಆಠವಲೆ ಹಾಗೂ ಸಂತರು ಇಲ್ಲಿಯವರೆಗೆ ಸಾಧಕರಿಗಾಗಿ ಏನೆಲ್ಲ ಮಾಡಿದ್ದಾರೆ’, ಎಂದು ಅವರು ತಾವಾಗಿಯೇ ಎಂದಿಗೂ ಹೇಳುವುದಿಲ್ಲ; ಏಕೆಂದರೆ ಅವರಿಗೆ ದೊಡ್ಡಸ್ತಿಕೆ ಬೇಕಾಗಿಲ್ಲ. ಪರಾತ್ಪರ ಗುರು ಡಾ. ಆಠವಲೆ ಹಾಗೂ ಸಂತರು ಸಾಧಕರಿಗಾಗಿ ಮಾಡಿದ ಕಠೋರ ಪ್ರಯತ್ನಗಳ ಬಗ್ಗೆ ದೇವರಿಗೆ ಮೆಚ್ಚುಗೆಯೆನಿಸುತ್ತದೆ. ‘ಅವರ ಮಹಾನತೆ ಹಾಗೂ ಅವರು ಸಾಧಕ ಹಾಗೂ ಹಿಂದುತ್ವನಿಷ್ಠರಿಗಾಗಿ ಮಾಡಿದ ತ್ಯಾಗ ಎಲ್ಲರಿಗೂ ತಿಳಿಯಲೆಂದೇ ದೇವರು ಅವರ ಬಗೆಗಿನ ಮೇಲಿನ ಮಾಹಿತಿಯನ್ನು ಹೇಳಿದ್ದಾನೆ.
ಕೃತಜ್ಞತೆಗಳು !
‘ಪರಾತ್ಪರ ಗುರು ಡಾ. ಆಠವಲೆ ಹಾಗೂ ಎಲ್ಲ ಸಂತರಿಂದಾಗಿ ಸಾಧಕರ ಹಾಗೂ ಹಿಂದುತ್ವನಿಷ್ಠರ ಮೇಲಾಗುವ ಕೆಟ್ಟ ಶಕ್ತಿಗಳ ಸೂಕ್ಷ್ಮ ಸ್ತರದಲ್ಲಿನ ಆಕ್ರಮಣಗಳಿಂದ ರಕ್ಷಣೆಯಾಗುತ್ತಿದೆ. ‘ಸಾಧಕರೇ ಈ ತೀವ್ರ ಆಪತ್ಕಾಲದಲ್ಲಿ ನಾವು ಜೀವಂತರಾಗಿದ್ದೇವೆ, ಎಂಬುದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಹಾಗೂ ಎಲ್ಲ ಸಂತರ ಚರಣಗಳಲ್ಲಿ ಮನಃಪೂರ್ವಕ ಹಾಗೂ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸೋಣ, ಅದೇ ರೀತಿ ಅವರಿಗೆ ಅಪೇಕ್ಷಿತವಿರುವಂತಗಲು ಪ್ರಯತ್ನಿಸೋಣ. – ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೭.೧೧.೨೦೧೮)