ಮಾರ್ಚ್ ೨೮ ರಂದು ನ್ಯಾಯವಾದಿ ಪ್ರಶಾಂತ ಭೂಷಣರು ಟ್ವೀಟ್ ಮಾಡಿ ‘ಕೋಟ್ಯವಧಿ ಜನರು ಉಪವಾಸವಿದ್ದಾರೆ; ರಸ್ತೆಯ ಮೇಲಿದ್ದಾರೆ; ಆದರೆ ಕೇಂದ್ರ ಸರಕಾರದ ಸಚಿವರು ರಾಮಾಯಣ ಮತ್ತು ಮಹಾಭಾರತ ಹೆಸರಿನ ಅಫೀಮನ್ನು ಸ್ವತಃ ತಿನ್ನುತ್ತಿದ್ದಾರೆ ಮತ್ತು ಜನರಿಗೂ ಅದನ್ನೇ ತಿನ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಮಾಜಿ ಸೈನಿಕ ಜಯದೇವ ಜೋಶಿಯವರು ಗುಜರಾತದ ರಾಜಕೋಟದ ಭಕ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಮೊಕದ್ದಮೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಶಾಂತ ಭೂಷಣರ ಬಂಧನಕ್ಕೆ ಸ್ಥಗಿತದ ಆದೇಶವನ್ನು ನೀಡಿದೆ. ಪ್ರಶಾಂತ ಭೂಷಣರು ಈ ವಿಷಯದಲ್ಲಿ ಕಾರ್ಲ್ ಮಾರ್ಕ್ಸನ ಸಂದರ್ಭವನ್ನು ನೀಡುತ್ತಾ ‘ಅವರ ಹೇಳಿಕೆಯನ್ನೇ ನಾನು ನೀಡಿದ್ದೇನೆ ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಶಾಂತ ಭೂಷಣರು ಯಾವ ಮಾರ್ಕ್ಸವಾದದ ಸಂದರ್ಭವನ್ನು ವಿವರಿಸಿದ್ದಾರೆಯೋ, ಆ ಸಾಮ್ಯವಾದವು ಕೋಟ್ಯವಧಿ ಅಮಾಯಕರನ್ನು ಬಲಿ ಪಡೆದಿದೆ. ಸಮಾನತೆ ಸ್ಥಾಪಿಸುವ ಹೆಸರಿನಲ್ಲಿ ಸಾಮ್ಯವಾದದ ಕೈಗಳಿಗೆ ಜನರ ರಕ್ತ ಮೆತ್ತಿದೆ. ಮಾರ್ಕ್ಸ್‌ವಾದ ಅಥವಾ ಸಾಮ್ಯವಾದವು ಧರ್ಮ, ಸಂಸ್ಕೃತಿ, ದೇವತೆ ಇವುಗಳ ವಿಷಯದಲ್ಲಿ ಜನರ ಮನಸ್ಸಿನಲ್ಲಿ ತಿರಸ್ಕಾರವನ್ನು ನಿರ್ಮಾಣ ಮಾಡುವಂತಹದ್ದಾಗಿದೆಯೆಂದು ಪ್ರಶಾಂತ ಭೂಷಣರಿಗೆ ಖಂಡಿತವಾಗಿಯೂ ತಿಳಿದಿದೆ.
ಪ್ರೇರಣೆ ನೀಡುವ ರಾಮಾಯಣ ಮತ್ತು ಮಹಾಭಾರತ
ರಾಮಾಯಣ ಮತ್ತು ಮಹಾಭಾರತ ಹಿಂದೂಗಳ ಚೈತನ್ಯಮಯ ಮತ್ತು ಗೌರವಶಾಲಿ ಇತಿಹಾಸವಾಗಿದೆ. ಧರ್ಮದ ಎಲ್ಲ ಮಿತಿಗಳನ್ನು ಪಾಲಿಸಿ ಮತ್ತು ಸರ್ವೋಚ್ಚ ತ್ಯಾಗದ ಆದರ್ಶವನ್ನು ರಾಮಾಯಣ ನೀಡುತ್ತದೆ, ಹಾಗೆಯೇ ಧರ್ಮ ಮತ್ತು ಮತ್ತು ನೈತಿಕತೆಯೊಂದಿಗೆ ಯಾವುದೇ ಪರಿಸ್ಥಿತಿಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳದೇ ಭಗವಂತನ ಸಹಾಯ ಲಭಿಸಿದಲ್ಲಿ ಅಧರ್ಮಿಯರ ವಿರುದ್ಧ ವಿಜಯಶ್ರೀಯನ್ನು ಯಾವ ರೀತಿ ಪಡೆಯಬಹುದು ಎನ್ನುವುದನ್ನು ಮಹಾಭಾರತ ಕಲಿಸುತ್ತದೆ. ಚಕ್ರವರ್ತಿ ಸಾಮ್ರಾಟನಾಗಿದ್ದ ಪ್ರಭು ಶ್ರೀರಾಮಚಂದ್ರನು ತಂದೆಯ ಆಜ್ಞಾಪಾಲನೆಯೆಂದು ವನವಾಸದ ಜೀವನವನ್ನು ಸ್ವೀಕರಿಸಿದನು. ಕೈಯಲ್ಲಿ ಸೈನ್ಯ ಮತ್ತು ಸೈನ್ಯ ಸಾಮಗ್ರಿಗಳು ಇಲ್ಲದಿರುವಾಗಲೂ ವಾನರರಿಗೆ ಶಕ್ತಿಯನ್ನು ನೀಡಿ ಮತ್ತು ಸಮುದ್ರವನ್ನು ದಾಟಿ ರಾವಣ ಮತ್ತು ರಾಕ್ಷಸರನ್ನು ಸಂಹರಿಸಿದನು. ರಾಮರಾಜ್ಯದ ಸ್ಥಾಪನೆ ಮಾಡಿದರು ಮತ್ತು ಕೇವಲ ಪ್ರಜೆಯಾಗಿದ್ದ ಅಗಸನು ಸಂಶಯಿಸಿದನೆಂದು ಸೀತೆಯನ್ನು ತ್ಯಜಿಸಿದನು. ಸಾಮ್ಯವಾದಿಗಳಲ್ಲಿ ಯಾರಲ್ಲಿಯಾದರೂ ಈ ರೀತಿ ನಡೆದುಕೊಳ್ಳುವ ಧೈರ್ಯವಿದೆಯೇ ? ಬದಲಾಗಿ ಸಾಮ್ಯವಾದವನ್ನು ‘ಮಾನವ ರಕ್ತಪಿಪಾಸು ಎಂದೇ ಸಂಬೋಧಿಸಬೇಕಾಗುವುದು.
ಸಾಮ್ಯವಾದವು ಮೂಲದಲ್ಲಿಯೇ ಅನೈಸರ್ಗಿಕ ವಿಷವಾಗಿರುವುದರಿಂದ ಅದು ನಿಸರ್ಗ ನಿಯಮದ ವಿರುದ್ಧ ಹಾಗೂ ಅದರ ಜೊತೆಯಲ್ಲಿಯೇ ಬಂದಿದೆ. ನಿಸರ್ಗದಲ್ಲಿ ವಿವಿಧತೆಯಿದೆ. ವೃಕ್ಷ, ವನಸ್ಪತಿ, ಪ್ರಾಣಿ, ಹೂವು, ಹಣ್ಣು ಇವುಗಳಲ್ಲಿ ವಿವಿಧತೆಗಳಿವೆ. ಹಾಗೆಯೇ ಮಾನವನ ಜೀವನದಲ್ಲಿಯೂ ಇದೇ ವಿವಿಧತೆ ಬೇರೆ ಸ್ವರೂಪದಲ್ಲಿದೆಯೆಂದು ಸಾಮ್ಯವಾದವು ಒಪ್ಪಿಕೊಳ್ಳುವುದಿಲ್ಲ. ಪ್ರತಿಯೊಬ್ಬರ ಗುಣ-ದೋಷ, ಆಸಕ್ತಿ-ಅನಾಸಕ್ತಿ, ಪ್ರಾರಬ್ಧ ಇವೆಲ್ಲವೂ ಭಿನ್ನವಾಗಿದೆ. ಮಾನವ ಜೀವನ ಭಾವ-ಭಾವನೆಗಳಿಂದ ತುಂಬಿದೆ. ಈ ಭಾವ-ಭಾವನೆಗಳಿಗೆ ಸರಿಯಾದ ದಿಕ್ಕನ್ನು ತೋರಿಸುತ್ತಾ, ತನ್ಮೂಲಕ ಮಾನವನ ಜೀವನ ಒಂದು ಪ್ರತ್ಯೇಕ ಆಯಾಮದಲ್ಲಿ ಎತ್ತರಕ್ಕೆ ಕೊಂಡೊಯ್ಯುವುದನ್ನು ಹಿಂದೂ ಧರ್ಮ ಕಲಿಸುತ್ತದೆ. ಷಡ್ರಿಪುಗಳ ಮೇಲೆ ನಿಯಂತ್ರಣ ಪಡೆಯುವುದು, ಷಡ್ರಿಪುಗಳ ನಿರ್ಮೂಲನೆ ಮಾಡುವುದು, ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು, ಶಿಕ್ಷೆಯನ್ನು ತೆಗೆದುಕೊಳ್ಳುವುದು ಈ ಪದ್ಧತಿಯಿಂದ ಹಿಂದೂ ಧರ್ಮ ಮಾನವನ ಮನಸ್ಸಿಗೆ ದಿಕ್ಕನ್ನು ತೋರಿಸುತ್ತ ಈಶ್ವರನ ಅಸ್ತಿತ್ವದ ಅನುಭೂತಿಯನ್ನು ನೀಡಿ ಜೀವನದಲ್ಲಿ ಆನಂದ, ಶಾಂತಿ ಮತ್ತು ಸಮಾಧಾನವನ್ನು ದೊರಕಿಸಿಕೊಡುತ್ತದೆ. ಬಾಹ್ಯ ವಿಷಯಗಳಿಗಿಂತ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಹಿಂದೂ ಧರ್ಮ ಒತ್ತು ಕೊಡುತ್ತದೆ. ಇದರಿಂದ ವ್ಯಕ್ತಿಯು ಆಧ್ಯಾತ್ಮಿಕ ದೃಷ್ಟಿಯಿಂದ ಪ್ರಗತಿ ಹೊಂದುತ್ತಾನೆ ಮತ್ತು ಸ್ವತಃ ಆನಂದಿತನಾಗಿ ಸಮಷ್ಟಿಗೂ ಆನಂದವನ್ನು ನೀಡುತ್ತಾನೆ. ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಗಳೊಂದಿಗೆ ತದಾತ್ಮ್ಯವನ್ನು ಹೊಂದಿ ವ್ಯಕ್ತಿ ಈಶ್ವರಸ್ವರೂಪನಾಗಿ ಆಯುಷ್ಯವನ್ನು ಬಂಗಾರವನ್ನಾಗಿಸುತ್ತಾನೆ. ಸಾಮ್ಯವಾದದ ಹಿಂಬಾಲಕರು ಹಿಂದೂ ಧರ್ಮದ ಎರಡು ಪ್ರೇರಣೆಯನ್ನು ನೀಡುವ ಇತಿಹಾಸದ ಮೇಲೆ ಕೆಸರು ಎರಚುವುದೆಂದರೆ ಕಾಗೆಯು ಕೋಗಿಲೆಗೆ ‘ನಿನ್ನ ಧ್ವನಿ ಕೆಟ್ಟದಾಗಿದೆ ಎಂದು ಹೇಳುವಂತಿದೆ.
ಸಾಮ್ಯವಾದದ ಅಸ್ತಂಗತ
ಎರಡನೇಯ ಮಹಾಯುದ್ಧದ ಬಳಿಕ ಸಾಮ್ಯವಾದ ಜಗತ್ತಿನಾದ್ಯಂತ ಹರಡಿತು; ಆದರೆ ೯೦ ನೇ ದಶಕದಲ್ಲಿ ಅದು ಕ್ಷೀಣಿಸಲು ಪ್ರಾರಂಭವಾಯಿತು. ಸಾಮ್ಯವಾದ ಕಾರ್ಯನಿರತವಾಗಿದ್ದ ರಶಿಯಾ ಅನೇಕ ತುಂಡುಗಳಾದವು. ಕಾಂಗೊ, ಕೆನಿಯಾ, ಯುಗೊಸ್ಲಾವಿಯಾ ಮತ್ತು ಇತರೆ ದೇಶಗಳಿಂದ ಸಾಮ್ಯವಾದ ನಾಮಾವಶೇಷವಾಯಿತು. ಈಗ ಕೇವಲ ಚೀನಾದಲ್ಲಿಯಷ್ಟೇ ಅದು ಸ್ವಲ್ಪ ಪ್ರಮಾಣದಲ್ಲಿ ಬಾಕಿ ಉಳಿದಿದೆ. ಚೀನಾದಲ್ಲಿ ಬಲಪ್ರಯೋಗಿಸಿ ಅಲ್ಲಿಯ ಜನರ ಭಾವನೆ ಯನ್ನು ತುಳಿಯುತ್ತಿದೆ. ತಿಯಾನ್‌ಮೆನ್ ಚೌಕದಲ್ಲಿ ಸಾಮ್ಯವಾದಿ ಸಾಮ್ರಾಜ್ಯದ ವಿರುದ್ಧ ಯುವಕರು ಆಂದೋಲನ ನಡೆಸಿದಾಗ ಚೀನಾ ಯುವಕರ ಮೈಮೇಲೆ ಅಕ್ಷರಶಃ ಯುದ್ಧ ವಾಹನಗಳನ್ನು ಓಡಿಸಿ ಅತ್ಯಂತ ಕ್ರೂರತೆಯಿಂದ ಆಂದೋಲನವನ್ನು ಹೊಸಕಿ ಹಾಕಿತ್ತು. ಕ್ರೂರತೆ, ಕಪಟತನ ಮತ್ತು ಧೂರ್ತತೆ ಚೀನಾದ ಸಾಮ್ಯವಾದಿಗಳ ನರನಾಡಿಗಳಲ್ಲಿ ಅದು ಆವರಿಸಿದೆಯೆಂದರೆ, ಅಲ್ಲಿಯ ಜನತೆಯೊಂದಿಗೆ ಅವರಿಗೆ ಯಾವುದೇ ಕೊಡು-ಕೊಳ್ಳುವಿಕೆಯಿಲ್ಲ. ಜನರ ಭಾವನೆಯನ್ನು ಎಷ್ಟೇ ಅದುಮಿದರೂ, ಒಂದಲ್ಲ ಒಂದು ದಿನ ಅದು ಉಮ್ಮಳಿಸಲಿದೆ. ‘ಯಾವ ಕನಸು ಅಂದರೆ ವಾಸ್ತವವೇ ಇಲ್ಲದಿರುವುದನ್ನು ವಾಸ್ತವದಲ್ಲಿ ತರುವ ಪ್ರಯತ್ನವೆಂದರೆ ಸಾಮ್ಯವಾದವಾಗಿದೆ, ಎಂದು ಸಾಮ್ಯವಾದದ ವಿಷಯದಲ್ಲಿ ಹೇಳಬೇಕಾಗಬಹುದು. ಧರ್ಮವನ್ನು ಅಫೀಮಿನ ಗುಳಿಗೆಯೆನ್ನುವುದು ಮತ್ತು ಕೇರಳದಲ್ಲಿ ಮತಾಂಧರನ್ನು ಓಲೈಸುವುದು, ಅವರ ಮೇಲೆ ಸೌಲಭ್ಯಗಳ ಸುರಿಮಳೆಯನ್ನೇ ಸುರಿಸುವುದು, ಅದೇ ಸ್ಥಳದಲ್ಲಿ ಹಿಂದೂ ಧರ್ಮದವರ ಕುತ್ತಿಗೆ ಹಿಸುಕುವುದು. ಇದು ಸಾಮ್ಯವಾದವೇ ? ಬಂಗಾಲದಲ್ಲಿಯೂ ಸಾಮ್ಯವಾದಿ ಆಡಳಿತದಲ್ಲಿ ಹಿಂದೂಗಳನ್ನು ಯಾವ ರೀತಿ ವಿರೋಧಿಸಿದರು, ಆನಂದ ಸಂಪ್ರದಾಯ ವನ್ನು ಮುಗಿಸಲು ಯಾವ ರೀತಿ ಪ್ರಯತ್ನಿಸಲಾಯಿತು, ಇವೆಲ್ಲವೂ ಎಲ್ಲರೂ ತಿಳಿದಿರುವ ವಿಷಯವಾಗಿದೆ.
ಶಾಸ್ತ್ರಶುದ್ಧ ಮತ್ತು ಸ್ವಯಂಭೂ ಆಗಿರುವ ಹಿಂದೂ ಧರ್ಮಕ್ಕೆ ಸಾಮ್ಯವಾದಿಗಳು ಬೊಟ್ಟು ಮಾಡುತ್ತಾರೆ ಮತ್ತು ಅತಾರ್ಕಿಕವನ್ನು ಸಾಧಿಸಲು ಚಡಪಡಿಸುತ್ತಾರೆ. ಸಾಮ್ಯವಾದಿಗಳು ಭಾರತದ ಇತಿಹಾಸವನ್ನು ತಿರುಚಿದರು ಅಲ್ಲದೇ ಪುಸ್ತಕಗಳಿಗೆ ‘ಹಸಿರು ಮತ್ತು ‘ಕೆಂಪು ಬಣ್ಣವನ್ನು ಲೇಪಿಸಿ ಅದನ್ನು ವಿದ್ಯಾರ್ಥಿಗಳ ಹಣೆಗೆ ಮೆತ್ತಿದರು. ಅದರ ಪರಿಣಾಮವಾಗಿ ಹೊರಬರುವ ವಿದ್ಯಾರ್ಥಿಗಳು ಇಲ್ಲಿಯ ಸಂಸ್ಕೃತಿಯ ಅವಹೇಳನ ಮಾಡುವವರು, ಕಟುವಾಗಿ ತಿರಸ್ಕಾರವನ್ನು ಮಾಡುವವರಾದರು. ಹಿಂದೂಗಳ ಪ್ರತಿಯೊಂದು ಧರ್ಮಾಚರಣೆಗೆ ಹೆಸರಿಡುವ ಮತ್ತು ಪಾಶ್ಚಿಮಾತ್ಯರ ಬೂಟನ್ನು ನೆಕ್ಕುವವರು, ಇವರು ಸಾಮ್ಯವಾದಿಗಳಾಗಿದ್ದಾರೆ !
ಪ್ರಶಾಂತ ಭೂಷಣರ ಸ್ವಂತ ವ್ಯಕ್ತಿತ್ವವಾದರೂ ಎಲ್ಲಿ ಚೆನ್ನಾಗಿದೆ ? ಮೋದಿ ಸರಕಾರವು ತೆಗೆದುಕೊಂಡು ಪ್ರತಿಯೊಂದು ರಾಷ್ಟ್ರಹಿತದ ನಿರ್ಣಯವನ್ನು ಭೂಷಣರು ತೀಕ್ಷ್ಣವಾಗಿ ವಿರೋಧಿಸಿದ್ದಾರೆ. ಜಮ್ಮೂ ಕಾಶ್ಮೀರದ ಜನತೆಗೆ ಸ್ವಂತ ನಿರ್ಣಯದ ಅಧಿಕಾರವನ್ನು ನೀಡುವ ಅವರ ಬೇಡಿಕೆಯು ಅವರಲ್ಲಿರುವ ರಾಷ್ಟ್ರಘಾತಕ ಪ್ರವೃತ್ತಿಯನ್ನು ತೋರಿಸುತ್ತದೆ. ಭಾರತದಲ್ಲಿ ಮಾಡುವ ಆಕ್ರಮಣ ಮಾಡುವ ಉಗ್ರ ಕಸಾಬನಿಗೆ ‘ಗಲ್ಲು ನೀಡಬಾರದು ಎನ್ನುವ ಅಭಿಪ್ರಾಯವನ್ನು ಪ್ರಶಾಂತ ಭೂಷಣರು ಮಂಡಿಸಿದ್ದರು. ಭಾರತ ಹೇಗೆ ಅಶಾಂತವಾಗುವುದು ಎಂದು ನೋಡುತ್ತ ಮೋದಿಯವರಿಗೆ ದೂಷಿಸುವುದರಲ್ಲಿಯೇ ಅವರ ಆಯುಷ್ಯ ವ್ಯಯವಾಗುತ್ತಿದೆ. ಆದ್ದರಿಂದ ಸಾಮ್ಯವಾದಿ ಮತ್ತು ಅವರ ಹಿಂಬಾಲಕರು ಹಿಂದೂದ್ವೇಷವನ್ನು ನಿಲ್ಲಿಸಬೇಕು. ಇಲ್ಲವಾದರೆ ‘ಎರಡನೆ ಮಹಾಭಾರತವಾಗುವುದು ಖಂಡಿತ ಎಂದು ಜನತೆಗೆ ಅನಿಸುತ್ತದೆ.