ನುಡಿಯುತ್ತಿರುವ ‘ಅರ್ಣವ… !

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಷಯದಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತಿರುವುದಕ್ಕಾಗಿ ‘ರಿಪಬ್ಲಿಕ್ ಟಿ.ವಿ.ಯ ಸಂಪಾದಕರಾದ ಅರ್ಣವ ಗೋಸ್ವಾಮಿಯವರು ಕೆಲವು ದಿನಗಳಿಂದ ಚರ್ಚೆಯಲ್ಲಿದ್ದಾರೆ. ಮಹಾರಾಷ್ಟ್ರದ ಪಾಲಘರನಲ್ಲಿ ಘಟಿಸಿದ ಸಾಮೂಹಿಕ ಹಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಯಾಗಿರುವ ಘಟನೆಯನ್ನು ಹೆಚ್ಚಿನ ಮಾಧ್ಯಮಗಳು ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಮಹತ್ವವನ್ನು ನೀಡದಿರುವುದರಿಂದ ಅರ್ಣವ ಗೋಸ್ವಾಮಿಯವರು ‘ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾದ  ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ‘ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ ಸಂಘವು ದಿನಪತ್ರಿಕೆ ಮತ್ತು ಸುದ್ದಿವಾಹಿನಿಗಳ ಸಂಪಾದಕರ ಸಂಘಟನೆಯಾಗಿದೆ. ದಿನಪತ್ರಿಕೆಗಳ ಸ್ವಾತಂತ್ರ್ಯವನ್ನು ಕಾಪಾಡಲು ಮತ್ತು ಸಂಪಾದಕೀಯ ವಿಚಾರಗಳನ್ನು ಮೇಲ್ದರ್ಜೆಗೇರಿಸಲು ಈ ಸಂಘಟನೆಯ ಸ್ಥಾಪನೆಯಾಗಿದೆ. ಪಾಲಘರದಲ್ಲಿ ನಡೆದ ಸಾಧುಗಳ ಹತ್ಯೆಯ ಪ್ರಕರಣದಲ್ಲಿ ಮಾಧ್ಯಮಗಳು ಆವಶ್ಯಕತೆಯಿರುವಷ್ಟು ಧ್ವನಿಯನ್ನು ಎತ್ತದೇ ಇರುವುದರಿಂದ ಗೋಸ್ವಾಮಿಯವರು ಈ ಸಂಘಟನೆಯನ್ನು ಟೀಕಿಸಿದ್ದಾರೆ. ‘ಸಂಪಾದಕೀಯ ನಿಲುವಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಈ ಸಂಘಟನೆಯು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಸಂಘಟನೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಪತ್ರಿಕಾರಂಗದ ಕ್ಷೇತ್ರದಲ್ಲಿ ನುಸುಳಿರುವ ಭಾರತವಿರೋಧಿ ಮತ್ತು ಧರ್ಮವಿರೋಧಿ ವಿಷಯಗಳ ಬಗ್ಗೆ ಚಿಕಿತ್ಸೆಯಾಗಬೇಕಾಗಿದೆ.

ವಸ್ತುನಿಷ್ಠೆಯಲಯ !

ನಿಷ್ಪಕ್ಷ ಮತ್ತು ವಸ್ತುನಿಷ್ಠ ವರದಿ ಹಾಗೂ ಸಮಾಜಪ್ರಬೋಧನೆ ಮಾಡುವುದು ಇದು ಪತ್ರಿಕಾರಂಗದ ಪ್ರಾಥಮಿಕ ತತ್ವಗಳಾಗಿವೆ. ಆದರೆ ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇನ್ನಿತರರು ಇದನ್ನು ನಿರ್ಲಕ್ಷಿಸಿರುವುದು ಕಂಡು ಬರುತ್ತದೆ. ‘ಸಮಯಸಾಧಕ ವರದಿಗಾರಿಕೆ ಇದು ಇಂದಿನ ಪತ್ರಿಕಾರಂಗಕ್ಕೆ ತಟ್ಟಿದ ರೋಗವಾಗಿದೆ. ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳಿಗೆ ಪೂಜನೀಯರಾಗಿರುವ ಸಂತರ ಮೇಲೆ ಬಹಿರಂಗವಾಗಿ ಗುಂಪು ಹಲ್ಲೆ ನಡೆದು ಹತ್ಯೆಯಾಗಿದ್ದರೂ ಮಾಧ್ಯಮಗಳು ಅದನ್ನು ಹೇಳುವಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಅಖ್ಲಾಕ ಅಥವಾ ರೋಹಿತ ವೇಮುಲಾ ಪ್ರಕರಣದಲ್ಲಿ ಅನೇಕ ದಿನಗಳ ಕಾಲ ಚರ್ಚೆ ನಡೆಸಿದ್ದ ಹೆಚ್ಚಿನ ವಾಹಿನಿಗಳು, ಹಿಂದೂ ಸಾಧುಗಳ ಹತ್ಯೆಯ ಪ್ರಕರಣದ ಸುದ್ದಿಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಮುಗಿಸಿದವು. ಪಾಲಘರ ಘಟನೆಯ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಆಕ್ರೋಶ ವ್ಯಕ್ತವಾದ ಬಳಿಕ ಈ ವಿಷಯದ ವ್ಯಾಪ್ತಿ ವಿಸ್ತಾರವಾಯಿತು. ಬಹಿರಂಗವಾಗಿ ಎದುರಿಗೆ ಬಾರದಿದ್ದರೂ, ಇಂದು ಪತ್ರಿಕಾರಂಗದಲ್ಲಿಯೂ ಹಿಂದುತ್ವ ಬೆಂಬಲಿಗರು ಮತ್ತು ಹಿಂದುತ್ವವಿರೋಧಕರು ಹೀಗೆ ಎರಡು ಗುಂಪುಗಳಾಗಿವೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸಾಮ್ಯವಾದಿ ಮತ್ತು ಹಿಂದೂವಿರೋಧಿ ವಿಚಾರಸರಣಿಯ ವ್ಯಕ್ತಿಗಳು ದಿನಪತ್ರಿಕೆಗಳಲ್ಲಿ ಅನೇಕ ಕಾಲಂಗಳಷ್ಟು ಬರೆದು ಭಾರತೀಯ ಸಮಾಜದ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಅವರ ವಿಚಾರ ಪರಿವರ್ತನೆ ಮಾಡಿದರು. ಹಿಂದುತ್ವ ಮತ್ತು ಭಾರತೀಯತೆಯನ್ನು ಟೀಕಿಸುವವರನ್ನು ವಿಚಾರವಂತರು ಅಥವಾ ಅಧ್ಯಯನಕಾರರೆಂದು ಮೆರೆಸಲಾಯಿತು. ಹಿಂದುತ್ವನಿಷ್ಠ ವಿಚಾರಸರಣಿಯ ಪತ್ರಿಕಾ ವರದಿಗಾರರನ್ನು ‘ಕಾರ್ಯಕರ್ತರೆಂದು ಸಂಶಯದಿಂದ ನೋಡುವ ದೋಷ ನಿರ್ಮಾಣವಾಯಿತು. ಇದೊಂದು ರೀತಿ ವೈಚಾರಿಕ ಹೋರಾಟವೇ ಆಗಿತ್ತು. ಇದರಲ್ಲಿ ಸಾಮ್ಯವಾದದ ಪ್ರಾಬಲ್ಯವಿತ್ತು; ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಚಿತ್ರಣ ಸ್ವಲ್ಪಮಟ್ಟಿಗೆ ಬದಲಾಗುತ್ತಿದೆ. ‘ವ್ಯಾಟ್ಸಆಪ್, ‘ಟ್ವಿಟರ್, ‘ಫೇಸಬುಕ್ಗಳಂತಹ ಸಾಮಾಜಿಕ ಮಾಧ್ಯಮಗಳ ಮೇಲುಗೈಯಾದಾಗಿನಿಂದ ಬೇರು ಬಿಟ್ಟಿರುವ ಮಾಧ್ಯಮಗಳ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ. ಈ ಕಾರಣದಿಂದಲೇ ಪ್ರಸಾರ ಮಾಧ್ಯಮಗಳು ಯಾವುದೇ ವಿಷಯವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ, ಸಾಮಾಜಿಕ ಮಾಧ್ಯಮಗಳ ಮುಖಾಂತರ ಅವುಗಳ ಬಂಡವಾಳ ಹೊರಬೀಳುತ್ತದೆ. ಪಾಲಘರದಲ್ಲಿ ಜರುಗಿರುವ ಸಾಧುಗಳ ಹತ್ಯೆಯ ಪ್ರಕರಣವನ್ನು ಅದರ ಉದಾಹರಣೆಯೆಂದು ಹೇಳಬಹುದಾಗಿದೆ.

ವಿಚಾರಗಳ ಪ್ರತಿವಾದ ಗುಂಪುಗಾರಿಕೆಯಿಂದ !

‘ರಿಪಬ್ಲಿಕ್ ಭಾರತ ಸುದ್ದಿವಾಹಿನಿಯಲ್ಲಿ ಪ್ರಸಾರವಾಗುವ ‘ಪೂಛತಾ ಹೈ ಭಾರತ ಕಾರ್ಯಕ್ರಮದ ಮಾಧ್ಯಮದಿಂದ ಸಾಧುಗಳ ಹತ್ಯೆಯ ಪ್ರಕರಣದಲ್ಲಿ ಸಂಪಾದಕರಾದ ಅರ್ಣವ ಗೋಸ್ವಾಮಿಯವರು ನೇರವಾಗಿ ಸೋನಿಯಾ ಗಾಂಧಿಯವರ ಮೇಲೆ ಆರೋಪ ಮಾಡಿದರು. ‘ಇದೇ ಘಟನೆ ಒಂದು ವೇಳೆ ಮೌಲ್ವಿಯವರ ಅಥವಾ ಪಾದ್ರಿಗಳ ವಿಷಯದಲ್ಲಿ ಮತ್ತು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಘಟಿಸಿದ್ದರೆ, ಕಾಂಗ್ರೆಸ್ ಶಾಂತವಾಗಿ ಕುಳಿತಿರುತ್ತಿತ್ತೇ ? ಎಂಬಂತಹ ಪ್ರಶ್ನೆಯನ್ನು ಅವರು ಕೇಳುತ್ತಿದ್ದರು. ಅದು ನೇರವಾಗಿ ನಾಟಿದ್ದರಿಂದ ಕಾಂಗ್ರೆಸ್ಸಿನ ಮುಖಂಡರು ಗೋಸ್ವಾಮಿಯವರ ವಿರುದ್ಧ ಪ್ರತಿಭಟನೆ ನಡೆಸಿ, ಅವರ ಮೇಲೆ ಕ್ರಮ ಜರುಗಿಸುವಂತೆ ಕೋರಿದರು. ಅಂದೇ ರಾತ್ರಿ ಅರ್ಣವ್ ಗೋಸ್ವಾಮಿಯವರ ವಾಹನದ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಅವರು ಈ ಹಲ್ಲೆಯನ್ನು ಯುವ ಕಾಂಗ್ರೆಸ್ಸಿನ ಕಾರ್ಯಕರ್ತರು ನಡೆಸಿರುವರೆಂದು ಆರೋಪಿಸಿದರು. ವಿಶೇಷವೆಂದರೆ ಸಂಪಾದಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದರೂ ಪತ್ರಿಕಾ ಸಂಘಟನೆ ವತಿಯಿಂದ ಈ ಕುರಿತು ಖಂಡನೆ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿಲ್ಲ. ಒಂದು ವೇಳೆ ಆಕ್ರಮಣವನ್ನು ಕಾಂಗ್ರೆಸ್ಸಿನವರು ಮಾಡಿಸಿದ್ದರೆ, ಅದು ಅರ್ಣವ ಗೋಸ್ವಾಮಿ ಅಥವಾ ಪತ್ರಿಕಾರಂಗದ ಮೇಲೆ ಮಾಡಿರುವ ಹಲ್ಲೆ ಎನ್ನುವುದಕ್ಕಿಂತಲೂ ಗಾಂಧಿ ವಿಚಾರಗಳ ಮೇಲೆ ನಡೆಸಿರುವ ಹಲ್ಲೆಯಾಗಿದೆ. ಒಂದೆಡೆ ಹಗಲು ರಾತ್ರಿ ಗಾಂಧಿ ವಿಚಾರಗಳ ಜಪವನ್ನು ಮಾಡುವುದು ಮತ್ತು ಇನ್ನೊಂದೆಡೆ ಗಾಂಧಿ ವಿಚಾರಗಳ ಹತ್ಯೆಯನ್ನು ಮಾಡುತ್ತ ನೇರ ಹೊಡೆದಾಟಕ್ಕೆ ಇಳಿಯುವುದು. ಇದು ಯಾವ ನ್ಯಾಯ ? ‘ವಿಚಾರಗಳ ಪ್ರತಿಪಾದನೆಯನ್ನು ವಿಚಾರಗಳಿಂದ ಮಾಡಬೇಕು ಇತ್ಯಾದಿ ಭಾಷಣ ಮಾಡುವ ಇದೇ ಜನರು ಯಾವಾಗ ಅವರಿಗೆ ಗಾಯದ ಮೇಲೆ ಉಪ್ಪು ಸವರಿದಂತೆ ಆಗುವುದೋ, ಆಗ ಕೆರಳಿ ಹೊಡೆದಾಟಕ್ಕೆ ಇಳಿಯುತ್ತಾರೆ. ಇದು ದ್ವಂದ್ವನೀತಿಯಾಗಿದೆ. ‘ಒಂದೆಡೆ ವಿಚಾರ ಸ್ವಾತಂತ್ರ್ಯದ  ದೊಡ್ಡ ದೊಡ್ಡ ಮಾತುಗಳನ್ನು ಹೇಳುವುದು ಮತ್ತು ಇನ್ನೊಂದೆಡೆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ, ಗುಂಪುಗಾರಿಕೆ ಮಾಡುವುದು ಇದು ಗಾಂಧಿವಾದವೇ ? ಸೋನಿಯಾ ಗಾಂಧಿಯವರನ್ನು ವೈಚಾರಿಕ ಮಟ್ಟದಲ್ಲಿ ಗುರಿ ಮಾಡಿದಾಗ ಕೆರಳುವ ಈ ಗುಂಪು ಪಾಲಘರದಲ್ಲಿ ಹಿಂದೂ ಸಾಧುಗಳ ಹತ್ಯೆ ನಡೆದಾಗ, ಮಾತ್ರ ಮೌನವಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ರೀತಿ ಖಂಡಿಸಿ ಕ್ರಮ ಕೈಗೊಳ್ಳುವಂತೆ ಕೋರಲಿಲ್ಲ ಅಥವಾ ಕಾನೂನು ಸುವ್ಯವಸ್ಥೆಯು ಹದಗೆಟ್ಟಿರುವ ವಿಷಯದಲ್ಲಿ ‘ಚಕಾರವೆತ್ತಲಿಲ್ಲ. ಈಗಿನ ಪ್ರಕರಣದ ಕುರಿತು ಅರ್ಣವ ಗೋಸ್ವಾಮಿಯವರ ತೆಗೆದುಕೊಂಡಿರುವ ನಿರ್ಧಾರವು ಅಭಿನಂದನಾರ್ಹವಾಗಿದೆ. ಪ್ರಗತಿಪರರು ಮತ್ತು ಭಾರತವಿರೋಧಿ ಶಕ್ತಿಗಳ ಸೆರಗಿಗೆ ಅಂಟಿಕೊಂಡಿರುವ ತಥಾಕಥಿತ ವಿಚಾರವಂತರು ಮತ್ತು ಪತ್ರಿಕಾ ವರದಿಗಾರರು ಗೋಸ್ವಾಮಿಯವರ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿದ್ದರೂ. ದೇಶಾದ್ಯಂತ ಹಿಂದುತ್ವದ ಪರವಾಗಿವಾದಿಸುವವರಿಂದ ಸಮರ್ಥನೆ ದೊರೆಯುತ್ತಿದೆ. ಈ ಸ್ಪಂದನೆಯೇ ‘ಭಾರತದ ನಾಳೆ ಏನಿದೆ ? ಎನ್ನುವುದು ಸ್ಪಷ್ಟವಾಗುತ್ತದೆ.

ಸಂತ ಜ್ಞಾನೇಶ್ವರರು ಪಸಾಯದಾನ ಬೇಡುವಾಗ ಸಂತರೆಂದರೆ ಕಲ್ಪತರುವಿನ ಉದ್ಯಾನ, ಚೇತನಾರೂಪಿ ವಾತಾವರಣ ನಿರ್ಮಾಣ ಮಾಡುವ ರತ್ನವಾಗಿದ್ದಾರೆ. ಅವರ ಮಾತುಗಳು ಅಮೃತದಂತಿರುತ್ತವೆ, ಎಂದಿದ್ದಾರೆ. ಇಂತಹ ಸಂತರ ಸಂತಭೂಮಿಯಾಗಿರುವ ಮಹಾರಾಷ್ಟ್ರದಲ್ಲಿ ಹತ್ಯೆ ಘಟನೆಯಾಗುವುದು ಚಿಂತಾಜನಕವಾಗಿದೆ. ಈ ವಿಷಯದ ವಿರುದ್ಧ ಧ್ವನಿ ಎತ್ತುವ ವರದಿಗಾರರ ಮೇಲೆ ಹಲ್ಲೆಯಾಗುವುದು ಖಂಡನೀಯ. ಈ ರೀತಿ ಘಟಿಸಬಾರದು; ಆದ್ದರಿಂದ ದೇವರು, ದೇಶ ಮತ್ತು ಧರ್ಮಗಳ ಪರವಾಗಿ ವೈಚಾರಿಕ ಹೋರಾಟ ನಡೆಸುವವರ ಸಂಘಟನೆಯ ಸ್ಥಾಪನೆ ಮತ್ತು ಧರ್ಮ ಹಾಗೂ ದೇಶ ಹಿತದ ಧ್ವನಿ ದೃಢಗೊಳಿಸುವ ಆವಶ್ಯಕತೆಯಿದೆ.