ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೮ ನೇ ಹುಟ್ಟುಹಬ್ಬದ ನಿಮಿತ್ತ…

ದ್ವಿತೀಯ ರಾಷ್ಟ್ರೀಯ ‘ಆನ್‌ಲೈನ್ ಭಾವಸತ್ಸಂಗದಲ್ಲಿ ಸಾಧಕರಿಂದ ಭಾವಪೂರ್ಣ ಗುರುಸಂಕೀರ್ತನೆ !

ಬ್ರಹ್ಮಾನಂದಮ್ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್ ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ | ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷೀಭೂತಮ್ ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

ಅರ್ಥ : ಬ್ರಹ್ಮರೂಪ, ಆನಂದರೂಪ, ಪರಮೋಚ್ಚ ಸುಖವನ್ನು ನೀಡುವವರು, ಕೇವಲ ಜ್ಞಾನಸ್ವರೂಪ, ದ್ವಂದ್ವರಹಿತ, ಆಕಾಶದಂತೆ (ನಿರಾಕಾರ), ‘ತತ್ವಮಸಿ ಈ ಮಹಾವಾಕ್ಯದ ಲಕ್ಷ್ಯ (ಎಂಬುದು ನೀನಾಗಿರುವೆ ಎಂಬುದನ್ನು ವೇದವಾಕ್ಯವು ಯಾರನ್ನು ಉದ್ದೇಶಿಸಿ ಹೇಳಿದೆಯೋ ಅವರು), ಒಂದೇ ಒಂದು, ನಿತ್ಯ, ಶುದ್ಧ, ಸ್ಥಿರ ಸರ್ವಜ್ಞ, ಸರ್ವಸಾಕ್ಷಿ, ಭಾವಾತೀತ, ತ್ರಿಗುಣಾತೀತರಾಗಿರುವ ಇಂತಹ ಸದ್ಗುರುಗಳಿಗೆ (ಪರಾತ್ಪರ ಗುರು ಡಾ. ಆಠವಲೆಯವರಿಗೆ) ನಾನು ನಮಸ್ಕರಿಸುತ್ತೇನೆ.

ರಾಮನಾಥಿ (ಗೋವಾ) – ಸಾಧಕರಿಗೆ ಶೀಘ್ರ ಆಧ್ಯಾತ್ಮಿಕ ಉನ್ನತಿಯ ಮಾರ್ಗವನ್ನು ತೋರಿಸಿ ಮೋಕ್ಷಪ್ರಾಪ್ತಿಗಾಗಿ ಮಾರ್ಗದರ್ಶನ ಮಾಡುವ, ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಎಲ್ಲ ಶಾಸ್ತ್ರಗಳನ್ನು ಪುನರುಜ್ಜೀವಿತಗೊಳಿಸುವ ಸಂಕಲ್ಪವನ್ನು ಮಾಡುವ, ಅಖಿಲ ವಿಶ್ವದಾದ್ಯಂತ ಸನಾತನ ಹಿಂದೂ ಧರ್ಮದ ಪ್ರಸಾರ ಮಾಡುವ, ಶುದ್ಧ ಹಾಗೂ ಸಾತ್ತ್ವಿಕ ಧರ್ಮಾಚರಣೆಯನ್ನು ಕಲಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುವ, ಏಕೈಕರಾದಂತಹ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ! ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀ ಮಹಾವಿಷ್ಣುವಿನ ಅಂಶಾವತಾರವಾಗಿದ್ದಾರೆ. ಅವರು ಪ್ರಭು ಶ್ರೀರಾಮಸ್ವರೂಪ, ಭಗವಾನ ಶ್ರೀಕೃಷ್ಣನ ಸ್ವರೂಪ, ಶ್ರೀ ಸತ್ಯನಾರಾಯಣನ ಸ್ವರೂಪರಾಗಿದ್ದಾರೆ’, ಎಂದು ಅವರ ಮಹಿಮೆಯನ್ನು ವರ್ಣಿಸಿದ್ದಾರೆ. ಇಂತಹ ಈ ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರುಗಳ ಹುಟ್ಟುಹಬ್ಬವೆಂದರೆ ಸಾಧಕರಿಗಾಗಿ ಎರಡನೇ ಗುರುಪೂರ್ಣಿಮಾ ಉತ್ಸವವೇ ಆಗಿದೆ ! ಒಂದು ವೇಳೆ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಜನ್ಮೋತ್ಸವದ ಸಮಾರಂಭವನ್ನು ಆಚರಿಸಲು ಸಾಧ್ಯವಾಗದಿದ್ದರೂ, ‘ಆನ್‌ಲೈನ್’ ಭಾವಸತ್ಸಂಗದ ಮೂಲಕ ಸಾಧಕರು ತಮ್ಮ ಮನೆಯಲ್ಲಿಯೇ ಇದ್ದು ಪರಾತ್ಪರ ಗುರು ಡಾ. ಆಠವಲೆಯವರ ಗುಣ ಸಂಕೀರ್ತನ ಮಾಡುತ್ತಿದ್ದಾರೆ. ಮೇ ೧೫ ರಂದು ಇದೇ ಮಾಲಿಕೆಯಲ್ಲಿನ ಎರಡನೇ ‘ಆನಲೈನ್’ ಭಾವಸತ್ಸಂಗವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ತೇಜಲ ಪಾತ್ರೀಕರ ಇವರು ಈ ಭಾವಸತ್ಸಂಗದ ನಿರೂಪಣೆ ಮಾಡಿದರು.

ಹೀಗಾಯಿತು ‘ಆನಲೈನ್’ ಸತ್ಸಂಗ

೧. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಹಾಗೂ ಪ್ರಸ್ತಾವನೆಯನ್ನು ಮಾಡಿದ ನಂತರ ‘ಶ್ರೀಗುರು ಸಂಕೀರ್ತನೆ’ ಎಂಬ ಧ್ವನಿಚಿತ್ರ ಸುರುಳಿಯನ್ನು ತೋರಿಸಲಾಯಿತು.

೨. ಶೇ. ೬೪ ಮಟ್ಟದ ಆಧ್ಯಾತ್ಮಿಕ ಸ್ತರದ ಕು. ವೈಷ್ಣವಿ ವೆಸಣೇಕರ ಇವರು ‘ಭಾವಾರ್ಚನೆಯನ್ನು’ ಹೇಳಿದರು.

೩. ಈ ಸಮಯದಲ್ಲಿ ಭಾವಸತ್ಸಂಗದಲ್ಲಿ ತೋರಿಸಲಾದ ಇತರ ಧ್ವನಿಚಿತ್ರಮುದ್ರಿಕೆಗಳು !

ಅ. ‘ಸನಾತನ ಸಂಸ್ಥೆಯ ಶ್ರೀ ಗುರುಪರಂಪರೆ’

ಆ. ‘ಗುರುಪ್ರಾಪ್ತಿಯು ಹೇಗಾಯಿತು ?’, ಎಂಬ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮನೋಗತ

ಇ. ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯಮಯವಾಣಿಯ ಮೂಲಕ – ಸಗುಣ ಸೇವೆಯ ಮಹತ್ವ (ಹಿಂದಿನ ಸತ್ಸಂಗಗಳಲ್ಲಿ ಮಾಡಿದ ಮಾರ್ಗದರ್ಶನ)

ಈ. ಮಹರ್ಷಿಗಳು ವಿವಿಧ ಪ್ರಸಂಗಗಳಲ್ಲಿ ಬಹಿರಂಗಪಡಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವ

ಉ. ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯ) ಸ್ಥಾಪನೆಯ ನಿಶ್ಚಿತಿಯನ್ನು ನೀಡುವ ಮಹರ್ಷಿಗಳ ವಿವಿಧ ನಾಡಿಪಟ್ಟಿಗಳಲ್ಲಿನ ಆಶೀರ್ವಚನ (೨೦೧೫ ನೇ ಇಸವಿ)

ಊ. ಸನಾತನ ಸಂಸ್ಥೆ ಹಾಗೂ ಎಸ್.ಎಸ್.ಆರ್.ಎಫ್.ನ ಸಂತರು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತಾಪೂರ್ವಕವಾಗಿ ಅರ್ಪಿಸಿರುವ ಶಬ್ದಪುಷ್ಪಾಂಜಲಿ !

೪. ‘ಬಸ್ ರಹೆ ಮನ ಮೆ ಕೃತಜ್ಞತಾ’ ಈ ಗೀತೆಯ ಮೂಲಕ ಮುಕ್ತಾಯ