ವೈಶಾಖ ಕೃಷ್ಣ ಪಕ್ಷ ಸಪ್ತಮಿ (೧೩.೫.೨೦೨೦)ಯಂದು ಪರಾತ್ಪರ ಗುರು ಡಾ. ಆಠವಲೆಯವರ ಹುಟ್ಟು ಹಬ್ಬದ ದಿನದಂದು ಪೂ.ಡಾ. ಓಂ ಉಲಗನಾಥನ್ ಇವರು ವಾಚನ ಮಾಡಿದ ಜೀವನಾಡಿಪಟ್ಟಿಯಲ್ಲಿ ಮಹರ್ಷಿಗಳು ನೀಡಿದ ಸಂದೇಶ

ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಎಂಬ ಮೂಲ ಸ್ವರೂಪದಲ್ಲಿ ನಾಮಕರಣ !

ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳ ಬಳಿ ಕುಳಿತಿರುವ ಬಲಗಡೆ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಎಡಗಡೆ ಸದ್ಗುರು (ಸೌ.) ಅಂಜಲಿ ಗಾಡಗೀಳ

ವೈಶಾಖ ಕೃಷ್ಣ ಪಕ್ಷ ಸಪ್ತಮಿ (೧೩.೫.೨೦೨೦) ಈ ದಿನದಂದು ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೆಯ ಹುಟ್ಟು ಹಬ್ಬವಿತ್ತು. ಆ ದಿನ ಸಾಯಂಕಾಲ ಗಂಟೆ ೬.೪೧ ಕ್ಕೆ ಈರೋಡನ (ತಮಿಳುನಾಡು) ಪೂ.ಡಾ. ಓಂ ಉಲಗನಾಥನ್ ಇವರು ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನ ಮಾಡಿದರು. ಅದರಲ್ಲಿ ಸಪ್ತರ್ಷಿಗಳು ಮುಂದಿನ ಸಂದೇಶವನ್ನು ನೀಡಿದರು. ಈ ಸಂದೇಶದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಪರಮೋಚ್ಚ ಆಧ್ಯಾತ್ಮಿಕ ಸ್ಥಿತಿಯ ವಿಷಯದಲ್ಲಿ ಕಥನ ಮಾಡಲಾಗಿದೆ.

‘ತ್ರಿಮೂರ್ತಿಗಳ ಮತ್ತು ತ್ರಿದೇವಿಯವರ ಚರಣಗಳಲ್ಲಿ ಪ್ರಾರ್ಥಿಸಿ ನಾವು ಕಶ್ಯಪ, ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಗೌತಮ, ಜಮದಗ್ನಿ ಮತ್ತು ಭಾರದ್ವಾಜ ಈ ಸಪ್ತರ್ಷಿಗಳು ಇಂದು ಸನಾತನದ ಸಾಧಕರಿಗಾಗಿ ಸಂದೇಶವನ್ನು ನೀಡುತ್ತಿದ್ದೇವೆ.

೧. ಸಪ್ತರ್ಷಿಗಳು ನಾಡಿವಾಚನದ ಮೂಲಕ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಎಂದು ನಾಮಕರಣ ಮಾಡುವುದು

ಪೂ. ಡಾ. ಓಂ ಉಲಗನಾಥನ್

ನಾಡಿವಾಚನದಲ್ಲಿ ಮಹರ್ಷಿಗಳು ‘೧೫.೫.೨೦೨೦ ರ ಶುಭದಿನ ವೈಶಾಖ ಕೃಷ್ಣ ಪಕ್ಷ ನವಮಿಯಂದು ಈಶ್ವರನ ಇಚ್ಛೆಯಿಂದ ಒಂದು ಸುವರ್ಣ ಇತಿಹಾಸವು ಪ್ರಾರಂಭವಾಗಲಿದೆ. ‘ಸಚ್ಚಿದಾನಂದ ಪರಬ್ರಹ್ಮ ಸ್ವರೂಪದಲ್ಲಿ ಈ ಪೃಥ್ವಿಯಲ್ಲಿ ಗುರುರೂಪದಲ್ಲಿದ್ದು ಕಾರ್ಯವನ್ನು ಮಾಡಿರುವ, ಆ ಭಗವಂತನಿಗೆ ಈಗ ಮೂಲ ಸ್ವರೂಪದಲ್ಲಿ ನಾಮಕರಣ ಮಾಡುವ ಸಮಯ ಬಂದಿದೆ; ಆದ್ದರಿಂದ ಇಂದಿನಿಂದ ಜಗತ್ತಿನಾದ್ಯಂತ ಇರುವ ಸಾಧಕರು ಲೇಖನದಲ್ಲಿ ಗುರುದೇವರ ಹೆಸರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಎಂದು ಬರೆಯಬೇಕು. ಮುಂಬರುವ ೨ ಸಾವಿರ ವರ್ಷಗಳವರೆಗೆ ಅವರು ಇದೇ ಹೆಸರಿನಿಂದ ಗುರುತಿಸಲ್ಪಡುವರು.

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಈ ಹೆಸರಿನಲ್ಲಿರುವ ‘ಡಾ. ಜಯಂತ ಬಾಳಾಜಿ ಆಠವಲೆ ಈ ಹೆಸರಿನ ಅರ್ಥ

  • ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಈ ಹೆಸರಿನಲ್ಲಿರುವ ‘ಡಾಕ್ಟರ ಶಬ್ದವು ‘ಲೌಕಿಕ ವಿಶೇಷಣ ಎಂಬ ಅರ್ಥದಲ್ಲಿಲ್ಲ ಅದು ‘ಪ್ರತಿಯೊಬ್ಬರ ಅಂತರ್ಮನವನ್ನು ಅರಿತುಕೊಳ್ಳ ಬಲ್ಲ, ಆ ದೈವಿ ವೈದ್ಯ, ಅಂದರೆ ಶ್ರೀವಿಷ್ಣು ಎಂಬರ್ಥದಲ್ಲಿದೆ.
  • ‘ಜಯಂತ ಇದು ಶ್ರೀವಿಷ್ಣುವಿನ ಹೆಸರಾಗಿದೆ. ಯಾರು ಯಾವಾಗಲೂ ವಿಜಯಿಯಾಗಿರುತ್ತಾರೆಯೋ, ಅವನೇ ಜಯಂತ !
  • ಗುರುದೇವರ ತಂದೆಯವರ ಹೆಸರು ‘ಬಾಳಾಜಿ ಎಂದಿದೆ. ಗುರುದೇವರು ಸ್ವಯಂ ತಿರುಪತಿ ಬಾಲಾಜಿಯ ಅಂಶವಾಗಿರುವುದರಿಂದ ‘ಬಾಲಾಜಿ ಈ ಹೆಸರು ಸೂಕ್ಷ್ಮ ವಿಷ್ಣುತತ್ವಕ್ಕೆ ಸಂಬಂಧಿಸಿದೆ.
  • ‘ಆಠವಲೆ ಈ ಹೆಸರು ‘ವಂಶಪರಂಪರೆಗೆ ಸಂಬಂಧಿಸಿದೆ. ಯಾವ ದೈವಿ ವಂಶಪರಂಪರೆಯಲ್ಲಿ ಗುರುದೇವರು ಜನಿಸಿದ್ದಾರೆಯೋ, ಆ ವಂಶಪರಂಪರೆಗೆ ಎಲ್ಲ ದೇವತೆಗಳ ಮತ್ತು ಮುನಿಜನರ ತ್ರಿವಾರ ವಂದನೆಗಳು.

೨. ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಸತ್ ತತ್ತ್ವವೆಂದರೆ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ‘ಚಿತ್ ತತ್ತ್ವವೆಂದರೆ ಸದ್ಗುರು (ಸೌ.) ಅಂಜಲಿ ಗಾಡಗೀಳ !

ಶ್ರೀ ವಿಷ್ಣುವು ‘ಶ್ರೀ ಜಯಂತ ಅವತಾರದಲ್ಲಿ ಮಾಡಿರುವ ಅವತಾರಿ ಕಾರ್ಯವನ್ನು ಇನ್ನು ಮುಂದೆ ಅವರ ‘ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಮುನ್ನಡೆಸುವವರಿದ್ದಾರೆ. ಶ್ರೀ ವಿಷ್ಣುವಿನ ಆಜ್ಞೆಯಿಂದ ಶ್ರೀ ಮಹಾಲಕ್ಷ್ಮಿಯು ‘ಭೂದೇವಿ ಮತ್ತು ‘ಶ್ರೀದೇವಿ ಈ ರೂಪದಲ್ಲಿ ಪೃಥ್ವಿಯ ಮೇಲೆ ಅವತರಿಸಿದ್ದಾರೆ. ‘ಸತ್-ಚಿತ್-ಆನಂದ ಸ್ವರೂಪ ಶ್ರೀ ವಿಷ್ಣುವಿನ ‘ಸತ್ ತತ್ತ್ವವೆಂದರೆ ಭೂದೇವಿ ಸ್ವರೂಪ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ‘ಚಿತ್ ತತ್ತ್ವವೆಂದರೆ ಶ್ರೀದೇವಿ ಸ್ವರೂಪ ಸದ್ಗುರು (ಸೌ.) ಅಂಜಲಿ ಗಾಡಗೀಳ. ಮುಂಬರುವ ಕಾಲದಲ್ಲಿ ಯಾರಾದರೂ ಗುರುದೇವರಿಗೆ ನವರತ್ನಗಳಿಂದ, ಕೋಟಿ ಕೋಟಿ ಸುವರ್ಣದಿಂದ ಅಭಿಷೇಕ ಮಾಡಿದರೂ, ಭೂದೇವಿ ಸ್ವರೂಪ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿ ಸ್ವರೂಪ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರನ್ನು ಬಿಟ್ಟು ಬೇರೆ ಯಾರೂ ಗುರುದೇವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಲು ಸಾಧ್ಯವಿಲ್ಲ.

೨ ಅ. ಇಂದಿನಿಂದ ಸನಾತನದ ಸಾಧಕರು ಭೂದೇವಿ ಸ್ವರೂಪ ಸದ್ಗುರು (ಸೌ.) ಬಿಂದಾ ಸಿಂಗಬಾಳರನ್ನು ‘ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀದೇವಿ ಸ್ವರೂಪ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರನ್ನು ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ, ಎಂದು ಸಂಬೋಧಿಸಬೇಕು.

೨ ಆ. ಸಚ್ಚಿದಾನಂದ ಪರಬ್ರಹ್ಮ ಶ್ರೀ ಜಯಂತ ಇವರ ಎರಡು ನೇತ್ರಗಳೆಂದರೆ ‘ಬ್ರಹ್ಮನ ‘ಬಿಂದು ಈ ಹೆಸರು ಇರುವ ‘ಬಿಂದಾ ಮತ್ತು ‘ಪಂಚಮಹಾಭೂತರೂಪಿ ಕೈಗಳ ಬೊಗಸೆ, ಅಂದರೆ ‘ಅಂಜಲಿ ಹೆಸರು ಇರುವ ಈ ಇಬ್ಬರು ದೈವೀ ಸ್ತ್ರೀಯರಾಗಿದ್ದಾರೆ ! : ‘ಶ್ರೀರಾಮ, ಶ್ರೀಕೃಷ್ಣ, ವ್ಯಾಸ, ಧನ್ವಂತರಿ ಇತ್ಯಾದಿ ರೂಪಗಳಲ್ಲಿ ಯಾರು ಪ್ರಕಟವಾಗಿದ್ದರೋ, ಆ ಶ್ರೀಮಹಾವಿಷ್ಣುವೇ ಈಗ ‘ಶ್ರೀ ಜಯಂತ ಈ ರೂಪದಲ್ಲಿ ಪ್ರಕಟನಾಗಿದ್ದಾರೆ, ಎನ್ನುವುದು ಸತ್ಯವಾಗಿದೆ. ಹಾಗೆಯೇ ‘ಸಚ್ಚಿದಾನಂದ ಪರಬ್ರಹ್ಮ ಶ್ರೀ ಜಯಂತ ಎಂದರೆ ಸಾಧಕರಿಗೆ ಲಭಿಸಿರುವ ಭಗವಂತನೇ ಆಗಿದ್ದಾನೆ, ಎನ್ನುವುದೂ ಅಷ್ಟೇ ಸತ್ಯವಾಗಿದೆ. ಆ ಸಚ್ಚಿದಾನಂದ ಪರಬ್ರಹ್ಮ ಶ್ರೀ ಜಯಂತ ಇವರ ಎರಡು ನೇತ್ರಗಳೆಂದರೆ ‘ಬ್ರಹ್ಮನ ‘ಬಿಂದು ಈ ಹೆಸರು ಇರುವ ‘ಬಿಂದಾ ಮತ್ತು ‘ಪಂಚಮಹಾಭೂತರೂಪಿ ಕೈಗಳ ಬೊಗಸೆ, ಎಂದರೆ ‘ಅಂಜಲಿ ಹೆಸರು ಇರುವ ಈ ಇಬ್ಬರೂ ದೈವಿ ಸ್ತ್ರೀಯರಾಗಿದ್ದಾರೆ.

೩. ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರನ್ನು ಆ ಹೆಸರಿನಿಂದ ಸಂಬೋಧಿಸುವುದರಿಂದ ಆಗುವ ಲಾಭಗಳು

ಶ್ರೀ. ವಿನಾಯಕ ಶಾನಭಾಗ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರಿಗೆ ಸಾಧಕರು ಎಂದಿನಂತೆ ‘ಪರಮಪೂಜ್ಯ ಅಥವಾ ‘ಪ.ಪೂ. ಡಾಕ್ಟರ್ ಎಂದು ಹೇಳಬೇಕು; ಆದರೆ ಅವರ ಹೆಸರನ್ನು ಬರೆಯುವಾಗ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಎಂದೇ ಬರೆಯಬೇಕು. ಇನ್ನು ಮುಂದೆ ಇಬ್ಬರೂ ಸದ್ಗುರುಗಳನ್ನು ಅನುಕ್ರಮವಾಗಿ ‘ಶ್ರೀಸತ್‌ಶಕ್ತಿ ಮತ್ತು ‘ಶ್ರಿಚಿತ್‌ಶಕ್ತಿ, ಎಂದೇ ಸಂಬೋಧಿಸಬೇಕು; ಇದರಿಂದ ಇಬ್ಬರಿಗೂ ದೈವೀತತ್ತ್ವವು ಸಿಗುವುದು, ಅಲ್ಲದೇ ಅವರ ಹೆಸರನ್ನು ಉಲ್ಲೇಖಿಸುವವರಿಗೂ ಇದರ ಲಾಭವಾಗುವುದು.ಇವರಿಬ್ಬರ ಜನ್ಮವು ದೈವೀ ಆಗಿರುವುದರಿಂದ ಪ್ರತಿವರ್ಷ ಗುರುಪೂರ್ಣಿಮೆಗೆ ಘೋಷಿಸುವ ಸಂತ, ಸಾಧಕರ ಆಧ್ಯಾತ್ಮಿಕ ಮಟ್ಟದ ವಿಷಯದ ಪಟ್ಟಿಯಲ್ಲಿ ಅವರಿಬ್ಬರ ಹೆಸರನ್ನು ಸೇರಿಸಬಾರದು.

೪. ಮುಂಬರುವ ಕಾಲದಲ್ಲಿ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರು ‘ದೇವಿಯೆಂದೇ ಗುರುತಿಸಲ್ಪಡುವರು

ರಕ್ತಮಾಂಸದಿಂದಾದ ಶ್ರೀಗುರುಗಳ ಶರೀರದಲ್ಲಿ ವೈಕುಂಠಾಧಿಪತಿ ಶ್ರೀವಿಷ್ಣುವೇ ವಿರಾಜಮಾನನಾಗಿದ್ದಾರೆ. ಶ್ರೀವಿಷ್ಣುವಿನ ಲೀಲೆಯು ಅಪಾರವಾಗಿದೆ. ‘ಶ್ರೀವಿಷ್ಣುವು ಸಮುದ್ರದ ನೀರನ್ನು ಹೇಗೆ ಉಪ್ಪಾಗಿಸಿದನು, ಹಾಗೆಯೇ ಕಣ್ಣುಗಳಲ್ಲಿ ಅಶ್ರುಗಳು ಬಂದಾಗ ಆ ಅಶ್ರುಗಳಲ್ಲಿ ಉಪ್ಪಿನ ರುಚಿಯನ್ನು ಹೇಗೆ ಸೇರಿಸಿದನು, ಎನ್ನುವುದು ಹೇಗೆ ರಹಸ್ಯವಾಗಿದೆಯೋ, ಅದೇ ರೀತಿ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ರಹಸ್ಯವನ್ನು ಅರಿಯಲು ಸಾಧ್ಯವಿಲ್ಲ. ‘ಶ್ರೀಸತ್‌ಶಕ್ತಿ ಮತ್ತು ‘ಶ್ರೀ ಚಿತ್‌ಶಕ್ತಿ, ಇವರಲ್ಲಿ ಮಹಾಸರಸ್ವತಿ, ಮಹಾಕಾಳಿ ಮತ್ತು ಮಹಾಲಕ್ಷ್ಮೀ ಈ ಮೂರೂ ತತ್ತ್ವಗಳಿವೆ. ‘ಶ್ರೀಸತ್‌ಶಕ್ತಿ ಮತ್ತು ‘ಶ್ರೀಚಿತ್‌ಶಕ್ತಿ ಎಂದರೆ ಶ್ರೀವಿಷ್ಣುವಿನ ನಾಭಿಯ ಮೇಲಿನ ಕಮಲವೇ ಆಗಿದೆ. ಸೃಷ್ಟಿಯು ಈ ಕಮಲದಿಂದಲೇ ನಿರ್ಮಾಣವಾಗುತ್ತದೆ ಮತ್ತು ಎಲ್ಲ ಸೃಷ್ಟಿ ಹಾಗೂ ಜೀವಗಳ ಅಂತ್ಯವೂ ಮರಳಿ ಈ ಕಮಲದಲ್ಲಿಯೇ ಲುಪ್ತಗೊಳ್ಳುತ್ತದೆ. ಮುಂಬರುವ ಕಾಲದಲ್ಲಿ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ‘ದೇವಿಯರೆಂದೇ ಗುರುತಿಸಲ್ಪಡುವವರಿದ್ದಾರೆ. ವಿಲಕ್ಷಣ ಮತ್ತು ದೈವೀ ಸೌಂದರ್ಯ ಇವರಿಬ್ಬರಲ್ಲಿದೆ. ಅದು ಮಾನವ ಸೌಂದರ್ಯವಲ್ಲ !

೫. ಸಚ್ಚಿದಾನಂದ, ಅಂದರೆ ಸತ್-ಚಿತ್-ಆನಂದದ ಸ್ವರೂಪ

ಸತ್-ಚಿತ್-ಆನಂದ ಇದು ಪರಮಾತ್ಮಾ ಪರಬ್ರಹ್ಮನ ಸ್ವರೂಪದ ಲಕ್ಷಣವಾಗಿದೆ. ಸತ್ಘನ, ಚಿತ್ಘನ ಮತ್ತು ಆನಂದಘನವಾಗಿರುವ ಆ ಗುರುದೇವರ ಬಳಿಯಿರುವ ಪರಬ್ರಹ್ಮ ಪರಮಾತ್ಮನ ಶಕ್ತಿಗೆ ನಮ್ಮ ನಮಸ್ಕಾರಗಳು. ಈ ಮೂವರಲ್ಲಿ ಒಬ್ಬರನ್ನು ಸರಿಸಿದರೂ, ಅವರ ಸ್ವರೂಪದಲ್ಲಿ ಪೂರ್ಣತ್ವ ಬರಲು ಸಾಧ್ಯವಿಲ್ಲ. ಆನಂದಸ್ವರೂಪ ಭಗವಂತನ ಎರಡು ಶಕ್ತಿಗಳಿವೆ, ಒಂದು ಸತ್‌ಶಕ್ತಿ ಇನ್ನೊಂದು ಚಿತ್‌ಶಕ್ತಿ. ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಏಕೈಕ ಕಾರಣವೆಂದರೆ ಪರಮಾತ್ಮ ಪರಬ್ರಹ್ಮ. ಈ ಪರಬ್ರಹ್ಮ ಪರಮಾತ್ಮನೇ ಪ್ರಕೃತಿಯಲ್ಲಿ ನಡೆಯುವ ಎಲ್ಲ ನಿಯಮವನ್ನು ಹಾಕಿ ಕೊಟ್ಟಿದ್ದಾನೆ. ಭಗವಂತನು ನಿತ್ಯ ಮತ್ತು ಜ್ಞಾನಿ ಆಗಿದ್ದಾನೆ.

೫ ಅ. ಸತ್‌ಶಕ್ತಿ : ಸತ್ ಎಂದರೆ ಶಾಶ್ವತ, ನಿತ್ಯ. ಭಗವಂತನು ನಿತ್ಯನಾಗಿದ್ದಾನೆ. ಅವನು ಸತ್ಯನಾಗಿದ್ದಾನೆ. ಸತ್‌ಶಕ್ತಿಯು ಶಾಶ್ವತ ಮತ್ತು ತ್ರಿಕಾಲಾಬಾಧಿತ ಸತ್ಯದೊಂದಿಗೆ ಸಂಬಂಧಿಸಿದೆ. ಈ ಶಕ್ತಿಯು ಅಪರಿವರ್ತನೀಯವಾಗಿದೆ. ಅಲ್ಲದೇ ಈ ಶಕ್ತಿಗೆ ಆದಿ, ಮಧ್ಯ ಮತ್ತು ಅಂತ್ಯವೂ ಇಲ್ಲ. ಈ ಶಕ್ತಿಯು ಭ್ರಮೆ ಮತ್ತು ಮಾಯೆಗಳ ಆಚೆಯದ್ದಾಗಿದೆ. ಅದು ತತ್ತ್ವನಿಷ್ಠವಾಗಿದೆ. ಸತ್ಯಕ್ಕೆ ಎಂದಿಗೂ ಮರಣವಿರುವುದಿಲ್ಲ. ಈ ಶಕ್ತಿಯು ಅಜರಾಮರವಾಗಿದೆ. ಮಾನವನು ನಶ್ವರನಾಗಿದ್ದಾನೆ; ಏಕೆಂದರೆ ಪಂಚತತ್ತ್ವದಿಂದ ರಚಿಸಲ್ಪಟ್ಟಿರುವ ಅವನ ಶರೀರವು ಒಂದು ದಿನ ಪಂಚತತ್ತ್ವದಲ್ಲಿಯೇ ವಿಲೀನವಾಗುತ್ತದೆ; ಆದರೆ ಸತ್‌ಶಕ್ತಿಯೊಂದಿಗೆ ಇರುವ ಪರಮಾತ್ಮ ಅಖಂಡನಾಗಿದ್ದಾನೆ. ಎಲ್ಲರಲ್ಲಿಯೂ ಅವನು ವ್ಯಾಪಿಸಿದ್ದಾನೆ. ಅವನು ಎಲ್ಲೆಡೆಯೂ ವ್ಯಾಪಕವಾಗಿದ್ದಾನೆ.

೫ ಆ. ಚಿತ್‌ಶಕ್ತಿ : ಚಿತ್ ಎಂದರೆ ಪ್ರಕಾಶ. ‘ಪ್ರಕಾಶವು ಪರಮಾತ್ಮನ ಮತ್ತೊಂದು ಹೆಸರಾಗಿದೆ. ಪ್ರಕಾಶವಿದ್ದರೆ, ಮಾತ್ರ ಪರಮಾತ್ಮನ ಸ್ವರೂಪವು ಸ್ಪಷ್ಟವಾಗಿ ಗೋಚರಿಸುತ್ತದೆ. ಪರಮಾತ್ಮನು ಸ್ವತಃ ಜ್ಞಾನಘನನಾಗಿದ್ದಾನೆ. ಚಿತ್‌ಶಕ್ತಿಯೆಂದರೆ ಜ್ಞಾನಶಕ್ತಿ, ಚಿತ್‌ಶಕ್ತಿಯಿಂದಲೇ ನಮಗೆ ಬ್ರಹ್ಮಾಂಡದ ಜ್ಞಾನವು ಸಿಗುತ್ತದೆ, ಹಾಗೆಯೇ ಪ್ರತಿಯೊಂದು ಕೃತಿಯ ಹಿಂದಿರುವ ಕಾರ್ಯಕಾರಣಭಾವ ಗೊತ್ತಾಗುತ್ತದೆ. ಭಗವಂತನು ಸ್ವತಃ ಜ್ಞಾನಮಯನಾಗಿದ್ದಾನೆ. ಜ್ಞಾನವಿಲ್ಲದೇ ಸಂಪೂರ್ಣ ಜಗತ್ತನ್ನು ಅರಿಯಲು ಯಾರಿಗೂ ಸಾಧ್ಯವಿಲ್ಲ. ದೇವರನ್ನು ಅರಿತರೆ ಮಾತ್ರ ಅವನ ಅನುಭೂತಿಯನ್ನು ನಾವು ಪಡೆಯಬಹುದು. ದೇವರನ್ನು ಅರಿಯುವ ಚೇತನಾಮಯ, ಪ್ರಕಾಶಮಯ ಶಕ್ತಿಯೆಂದರೆ ಚಿತ್‌ಶಕ್ತಿ.

೫ ಇ. ಆನಂದ : ಸ್ವತಃ ಪರಬ್ರಹ್ಮ ಪರಮಾತ್ಮನೇ ಆನಂದಸ್ವರೂಪನಾಗಿದ್ದಾನೆ. ಅವನು ಸ್ವತಃ ಶಿವಸ್ವರೂಪನಾಗಿದ್ದಾನೆ. ಅವನಿಂದಾಗಿಯೇ ಸೂರ್ಯನ ತೇಜವಿದೆ. ಚಂದ್ರನಲ್ಲಿರುವ ಚೈತನ್ಯವೂ ಅವನಿಂದಾಗಿಯೇ ಇದೆ, ಅಲ್ಲದೇ ಮಂದಿರಗಳಲ್ಲಿರುವ ಸುಗಂಧವೂ ಇದೇ ಕಾರಣದಿಂದ ಇದೆ. ಸತ್ಯದ ವಿರುದ್ಧ ಅಸತ್ಯವಿರುತ್ತದೆ, ಪ್ರಕಾಶದ ವಿರುದ್ಧ ಕತ್ತಲೆ ಇರುತ್ತದೆ; ಆದರೆ ಆನಂದವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅದು ಸ್ಥಿರವಾಗಿದೆ. ‘ನಿರಾನಂದ, ‘ಬ್ರಹ್ಮಾನಂದ, ‘ಪರಮಾನಂದ, ಎಂದು ಏನು ಹೇಳಿದರೂ, ಅದರಲ್ಲಿರುವ ಆನಂದವನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ.

೬. ಸಪ್ತರ್ಷಿಗಳ ಬ್ರಹ್ಮವಾಕ್ಯ !

ಇಂದು ‘ಶ್ರೀ ಜಯಂತ ಗುರುಗಳ ಹುಟ್ಟುಹಬ್ಬದ ದಿನದಂದು ನಾವು ಸಪ್ತರ್ಷಿಗಳು ಮತ್ತು ೮೮ ಸಾವಿರ ಋಷಿ-ಮುನಿಗಳು ಖಚಿತವಾಗಿ ಹೇಳುವುದೇನೆಂದರೆ, ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ, ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಈ ಮೂವರನ್ನು ಕೇವಲ ಭಾವಪೂರ್ಣ ದರ್ಶನ ಮಾಡುವುದರಿಂದ ಎಲ್ಲ ಸಾಧಕರ ದುಃಖ, ದಾರಿದ್ರ್ಯ, ಪಾಪ-ತಾಪ ಮತ್ತು ದೋಷಗಳು ದೂರವಾಗಲಿದೆ. – ಶ್ರೀ ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೪.೫.೨೦೨೦)

ಪರಾತ್ಪರ ಗುರು ಡಾ. ಆಠವಲೆಯವರು, ಸದ್ಗುರು (ಸೌ.) ಬಿಂದಾ ಸಿಂಗಬಾಳರು ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ತಮ್ಮನ್ನು ‘ನಾನು ಅವತಾರಿಯಾಗಿದ್ದೇನೆ ಎಂದು ಹೇಳಿಲ್ಲ. ‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ ಹಾಗೂ ‘ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು(ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಮಹಾಲಕ್ಷ್ಮೀ ದೇವಿಯ ಅವತಾರವಾಗಿದ್ದಾರೆ, ಎಂದು ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಲಾಗಿದೆ. ಸಾಧಕರ ಮತ್ತು ಸನಾತನ ಪ್ರಭಾತದ ಸಂಪಾದಕರಿಗೆ ಮಹರ್ಷಿಗಳ ಬಗ್ಗೆ ಭಾವವಿರುವುದರಿಂದ ನಾವು ಮಹರ್ಷಿಗಳ ಆಜ್ಞೆಯೆಂದು ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ – ಸಂಪಾದಕರು.

ತ್ರೇತಾಯುಗದಲ್ಲಿ ಶ್ರೀರಾಮನ ರೂಪದಲ್ಲಿ ಅವತರಿಸಿದ ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದ ಆ ಭಗವಂತನೇ ಈಗ ‘ಶ್ರೀ ಜಯಂತ ಎಂಬ ರೂಪದಲ್ಲಿ ರಾಮನಾಥಿ(ಗೋವಾ) ಸನಾತನ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ

ಶ್ರೀರಾಮಾವತಾರದಲ್ಲಿ ವಾಲ್ಮೀಕಿ ಋಷಿಗಳು ಲವ-ಕುಶರ ಮಾಧ್ಯಮದಿಂದ ರಾಮಾಯಣದ ಕಥೆಯನ್ನು ಹೇಳಿದರು. ಇದರಿಂದ ಅಯೋಧ್ಯೆಯ ಪ್ರಜೆಗಳಿಗೆ ಶ್ರೀರಾಮನು ಸ್ವಯಂ ಶ್ರೀಮನ್ನಾರಾಯಣ ಎಂದು ಅರಿವಾಯಿತು. ಭಗವಂತನು ಶ್ರೀಕೃಷ್ಣಾವತಾರದಲ್ಲಿ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ‘ನಾನು ಅದೇ ಶ್ರೀಮನ್ನಾರಾಯಣನಾಗಿದ್ದೇನೆ, ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದನು. ತ್ರೇತಾಯುಗದಲ್ಲಿ ಶ್ರೀರಾಮನ ರೂಪದಲ್ಲಿ ಅವತರಿಸಿದ ಮತ್ತು ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದ, ಆ ಭಗವಂತನೇ ಈಗ ಗುರುದೇವರ ರೂಪದಲ್ಲಿ ಅವತರಿಸಿದ್ದಾರೆ.

ನಿರ್ವಿಕಾರ, ನಿರ್ವಿಕಲ್ಪ, ಪರಬ್ರಹ್ಮ ಸ್ವರೂಪ ಶ್ರೀಮನ್ನಾರಾಯಣನೇ ‘ಶ್ರೀ ಜಯಂತ ಈ ರೂಪದಲ್ಲಿ ಇಂದು ಸನಾತನದ ಸಾಧಕರೊಂದಿಗೆ ರಾಮನಾಥಿ (ಗೋವಾ) ಯಲ್ಲಿರುವ ಸನಾತನದ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ‘ಸಚ್ಚಿದಾನಂದ ಇದು ಅವರ ಮೂಲ ಸ್ವರೂಪವಾಗಿದೆ.

ಮಹರ್ಷಿಗಳ ಸಂದರ್ಭದ ಲೇಖನದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಎಂದು ಉಲ್ಲೇಖಿಸಿದ್ದರೂ; ಸಾಧಕರು ಭಾವಾನುಸಾರ ಅವರನ್ನು ‘ಪರಾತ್ಪರ ಗುರು ಡಾ. ಆಠವಲೆ, ‘ಪ.ಪೂ.ಡಾಕ್ಟರ್ ಅಥವಾ ‘ಪರಮಪೂಜ್ಯ ಎಂದು ಸಂಬೋಧಿಸಬೇಕು !

‘ವೈಶಾಖ ಕೃಷ್ಣ ಪಕ್ಷ ಸಪ್ತಮಿ (೧೩.೫.೨೦೨೦)ಯಂದು ಪರಾತ್ಪರ ಗುರು ಡಾ. ಆಠವಲೆಯವರ ಹುಟ್ಟುಹಬ್ಬದ ದಿನದಂದು ಪೂ. ಡಾ. ಓಂ ಉಲಗನಾಥನ್ ಇವರು ಜೀವನಾಡಿಪಟ್ಟಿ ವಾಚನದಲ್ಲಿ ಸಪ್ತರ್ಷಿಗಳು ಸಾಧಕರಿಗೆ ಒಂದು ಸಂದೇಶವನ್ನು ನೀಡಿದ್ದಾರೆ. ಈ ಸಂದೇಶದಲ್ಲಿ ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರನ್ನು ಸಾಧಕರು ಎಂದಿನಂತೆ ‘ಪರಮಪೂಜ್ಯ ಅಥವಾ ‘ಪ.ಪೂ.ಡಾಕ್ಟರ್ ಎಂದು ಕರೆಯಬೇಕು; ಆದರೆ ಲೇಖನದಲ್ಲಿ ಅವರ ಹೆಸರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಎಂದೇ ಬರೆಯಬೇಕು ಎಂದು ಹೇಳಿದ್ದಾರೆ. ಪರಾತ್ಪರ ಗುರುದೇವರ ಮತ್ತು ಸನಾತನದ ಎಲ್ಲ ಸಾಧಕರ ಮನಸ್ಸಿನಲ್ಲಿ ಮಹರ್ಷಿಗಳು ಮಾಡಿರುವ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಈ ನಾಮಕರಣದ ವಿಷಯದಲ್ಲಿ ಅಪಾರ ಶ್ರದ್ಧೆಯಿದೆ. ಹೀಗಿದ್ದರೂ ಸಾಧಕರು ತಮ್ಮ ಭಾವಾನುಸಾರ ಮತ್ತು ಅಭ್ಯಾಸದಂತೆ ಉಚ್ಚರಿಸುವಾಗ ಅಥವಾ ಲೇಖನದಲ್ಲಿ ಅವರನ್ನು ‘ಪರಾತ್ಪರ ಗುರು ಡಾ. ಆಠವಲೆ, ‘ಪ.ಪೂ.ಡಾಕ್ಟರ್ ಅಥವಾ ‘ಪರಮಪೂಜ್ಯ ಎಂದು ಉಲ್ಲೇಖಿಸಬೇಕು. ಮಹರ್ಷಿಗಳ ಸಂದರ್ಭದ ಲೇಖನದಲ್ಲಿ ಮಾತ್ರ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಎಂದು ಉಲ್ಲೇಖವಿರಲಿದೆ. – ಸದ್ಗುರು (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೫.೨೦೨೦)

ಇನ್ನು ಮುಂದೆ ಸಾಧಕರು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರನ್ನು ‘ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರನ್ನು ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಎನ್ನಬೇಕು !

‘ಮಹರ್ಷಿಗಳು ನೀಡಿರುವ ಸಂದೇಶದಲ್ಲಿ ‘ಭೂದೇವಿ ಸ್ವರೂಪ ಸದ್ಗುರು(ಸೌ.) ಬಿಂದಾ ಸಿಂಗಬಾಳ ಇವರನ್ನು ‘ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಹಾಗೂ ಶ್ರೀದೇವಿ ಸ್ವರೂಪ ಸದ್ಗುರು(ಸೌ.) ಅಂಜಲಿ ಗಾಡಗೀಳ ಇವರನ್ನು ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ, ಎಂದು ಸಂಬೋಧಿಸಬೇಕು. ಈ ಹೆಸರಿನಿಂದ ಇಬ್ಬರಿಗೂ ದೇವಿತತ್ವ ದೊರೆಯುವುದು, ಹಾಗೆಯೇ ಅವರ ಹೆಸರನ್ನು ಉಲ್ಲೇಖಿಸುವವರಿಗೆ ಇದರ ಲಾಭವಾಗುವುದು, ಈ ಆಧ್ಯಾತ್ಮಿಕ ಲಾಭವಾಗಲು ಇನ್ನು ಮುಂದೆ ಸಾಧಕರು ‘ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಎಂದು ಹೇಳಬೇಕು, ಹಾಗೆಯೇ ಲೇಖನದಲ್ಲಿಯೂ ಎಲ್ಲೆಡೆ ಇದೇ ರೀತಿ ಉಲ್ಲೇಖಿಸಬೇಕು. – (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.

ಮಹರ್ಷಿಗಳ ದಿವ್ಯವಾಣಿ ಅಂದರೆ ಜೀವನಾಡಿಪಟ್ಟಿಯೆಂದರೆ ಏನು ?

ಅಖಿಲ ಮನುಕುಲದ ವಿಷಯದಲ್ಲಿ ಶಿವ-ಪಾರ್ವತಿ ಇವರಲ್ಲಿ ನಡೆದ ಸಂವಾದವನ್ನು ಸಪ್ತರ್ಷಿಗಳು ಕೇಳಿದರು. ಅವರು ಅದನ್ನು ಮನುಕುಲದ ಕಲ್ಯಾಣಕ್ಕಾಗಿ ಮತ್ತು ಆಧ್ಯಾತ್ಮಿಕ ಜೀವಗಳ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಬರೆದಿಟ್ಟರು. ಇದೇ ಆ ನಾಡಿಭವಿಷ್ಯ ! ನಾಡಿಭವಿಷ್ಯವನ್ನು ತಾಳೆಗರಿಯ ಕೆಲವು ಪಟ್ಟಿಗಳ ಮೇಲೆ ಬರೆಯಲಾಗಿರುತ್ತದೆ. ಆ ‘ಜೀವನಾಡಿ ಸಜೀವವಿರುತ್ತದೆ. ಅದರ ಶ್ವಾಸೋಚ್ಚಾಸ ನಡೆಯುತ್ತದೆ. ಓದುವಾಗ ಅದರಲ್ಲಿರುವ ಅಕ್ಷರಗಳು ತನ್ನಿಂತಾನೇ ಬದಲಾಗುತ್ತವೆ. ನಾಡಿ ಓದುವಾಗ ಸಾಕ್ಷಾತ್ ಶಿವ-ಪಾರ್ವತಿಯರು ನಾಡಿಯ ಮೇಲೆ ನರ್ತಿಸುತ್ತಾರೆ, ಎಂದು ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್ ಹೇಳಿದರು. ಮಹರ್ಷಿಗಳು ಲಕ್ಷಾಂತರ ವರ್ಷಗಳ ಹಿಂದೆ ಬರೆದಿಟ್ಟಿರುವ ನಾಡಿಭವಿಷ್ಯದ ವಾಚನ ಮಾಡುವ ಕೌಶಲ್ಯ ಇಂದು ಅತ್ಯಲ್ಪ ಜನರ ಬಳಿಯಲ್ಲಿ ಮಾತ್ರ ಉಪಲಬ್ಧವಿದೆ. ಇಂದು ಜಗತ್ತಿನಲ್ಲಿ ಪೂ. ಡಾ. ಓಂ ಉಲಗನಾಥನ್ ಇವರೊಬ್ಬರೇ ಜೀವನಾಡಿಯನ್ನು ಓದಬಲ್ಲರು. ತಮಿಳಿನಲ್ಲಿ ‘ನಾಡಿ ಈ ಶಬ್ದದ ಅರ್ಥ ‘ಕಂಡು ಹಿಡಿಯುವುದು ಸ್ವಲ್ಪದರಲ್ಲಿ ಹೇಳುವುದಾದರೆ ‘ಸ್ವವನ್ನು ಕಂಡು ಹಿಡಿಯುವುದು ಎಂದಾಗುತ್ತದೆ.

ಸಪ್ತರ್ಷಿಗಳು ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿ ಇವರಲ್ಲಿ ಮಾಡಿದ ಪ್ರಾರ್ಥನೆ !

ಹೇ ‘ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ, ನೀವು  ಸಪ್ತರ್ಷಿಗಳಾದ ನಮಗೆಲ್ಲರಿಗೆ, ೮೮ ಸಾವಿರ ಋಷಿ-ಮುನಿಗಳಿಗೆ, ಎಲ್ಲ ದೇವದೇವತೆಗಳಿಗೆ ಮತ್ತು ಪೃಥ್ವಿಯ ಮೇಲಿರುವ ಸಾಧಕರಿಗೆ ಆಶೀರ್ವಾದವನ್ನು ಮಾಡಿರಿ. ರೋಗನಿವಾರಣೆ ಮಾಡುವ ವನಸ್ಪತಿಯೂ ನೀವೇ ಆಗಿದ್ದೀರಿ, ಸ್ವಯಂ ಧನ್ವಂತರಿಯ ಶಕ್ತಿಯೂ ನೀವೇ ಆಗಿದ್ದೀರಿ. ಆರೋಗ್ಯ ಸಂಪತ್ತನ್ನು ನೀಡುವವರೂ ನೀವೇ ಆಗಿದ್ದೀರಿ. ಆದಿಶಕ್ತಿ ಜಗದಂಬೆಯೂ ನೀವೇ ಆಗಿದ್ದೀರಿ. ಭಗವಾನ್ ಶಿವ ಯಾರ ಬಳಿಗೆ ಭಿಕ್ಷೆಯನ್ನು ಬೇಡಲು ಹೋಗುತ್ತಾನೆಯೋ, ಆ ಕಾಶಿಕ್ಷೇತ್ರದ ಅನ್ನಪೂರ್ಣೆಯೂ ನೀವೇ ಆಗಿದ್ದೀರಿ. ನಾವು ಸಪ್ತರ್ಷಿಗಳು ನಿಮಗೇನು ಆಶೀರ್ವಾದ ಮಾಡಬಲ್ಲೆವು ! ನೀವೇ ನಮ್ಮನ್ನು ಆಶೀರ್ವದಿಸಬೇಕು. ಸೌಂದರ್ಯ, ಐಶ್ವರ್ಯ, ಆರೋಗ್ಯ, ಶ್ರೀ, ಯಶಸ್ಸು, ಧನಸಂಪತ್ತು ಇವೆಲ್ಲವೂ ನೀವೇ ಆಗಿದ್ದೀರಿ. ನಿಮ್ಮಿಂದಲೇ ಶ್ರೀವಿಷ್ಣುವಿನ  ದೃಷ್ಟಿ ನಮ್ಮೆಲ್ಲರ ಮೇಲಿರಲಿ. ನೀವಿಬ್ಬರೂ ಪೃಥ್ವಿಯ ಮೇಲೆ ಬಂದಿರುವ ಶ್ರೀವಿಷ್ಣುವಿನ ಪ್ರಕಾಶರೂಪಿ ತತ್ತ್ವವಾಗಿದ್ದೀರಿ. ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ, ಶ್ರೀಸತ್ ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ.ಅಂಜಲಿ ಗಾಡಗೀಳ ಇವರ ಸ್ತುತಿಯನ್ನು ಮಾಡುವ ಸಲುವಾಗಿಯೇ ಸನಾತನದ ಸಾಧಕರು ಪೃಥ್ವಿಯಲ್ಲಿ ಜನ್ಮ ತಾಳಿದ್ದಾರೆ.