ಪರಾತ್ಪರ ಗುರು ಡಾ. ಆಠವಲೆಯವರ ೭೮ ನೇ ಜನ್ಮದಿನ ನಿಮಿತ್ತ ಮೊದಲ ದಿನದ ‘ಆನ್‌ಲೈನ್ ಭಾವಸತ್ಸಂಗದಲ್ಲಿ ಸಾಧಕರು ವ್ಯಕ್ತಪಡಿಸಿದ ಕೃತಜ್ಞತೆ !

ಈ ರೀತಿ ನಡೆಯಿತು ‘ಆನ್‌ಲೈನ್ ಭಾವಸತ್ಸಂಗ !

೧. ಪ್ರಾರಂಭದಲ್ಲಿ ೧೦ ಫೆಬ್ರವರಿ ೨೦೧೯ ರಂದು ನಡೆದ ಪರಾತ್ಪರ ಗುರು ಡಾ. ಆಠವಲೆಯವರ ಪಾದುಕೆ ಧಾರಣೆ ಸಮಾರಂಭ ಮತ್ತು ಆ ಸಮಾರಂಭದಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಪರಾತ್ಪರ ಗುರು ಡಾಕ್ಟರರಿಗೆ ಮಾಡಿದ ಆರತಿಯ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು.

೨. ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಹೊಂದಿರುವ ಕು. ವೈಷ್ಣವಿ ವೇಸಣೆಕರ ಇವರು ಶ್ರೀ ಗುರುಪಾದುಕೆಗಳ ಮಾನಸಪೂಜೆ ಹೇಳಿದರು.

೩. ಸತ್ಸಂಗದಲ್ಲಿ ತೋರಿಸಲಾದ ಇತರ ಧ್ವನಿಚಿತ್ರಮುದ್ರಿಕೆಗಳು !

‘ವಿಶ್ವಕಲ್ಯಾಣಕ್ಕಾಗಿ ರಾಮನಾಥಿಯ ಸನಾತನ ಆಶ್ರಮದಲ್ಲಿ ೨೦೧೬ ರಲ್ಲಿ ನಡೆದ ‘ಉಚ್ಛಿಷ್ಟ ಗಣಪತಿ ಯಾಗ

೨೯ ಡಿಸೆಂಬರ್ ೨೦೧೮ರಂದು ನಡೆದ ‘ಶ್ರೀ ಬಗಲಾಮುಖಿ ಯಾಗ

೧೯ ರಿಂದ ೨೧ ಜನವರಿ ೨೦೨೦ ರ ಅವಧಿಯಲ್ಲಿ ‘ರಾಮನಾಥಿ ಆಶ್ರಮದಲ್ಲಿ ಸ್ಥಾಪಿಸಲಾದ ಶ್ರೀ ಭವಾನಿದೇವಿಯ ಮೂರ್ತಿಯ ಮೆರವಣಿಗೆ ಮತ್ತು ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭ ‘ಸನಾತನದ ದ್ವಿತೀಯ ಬಾಲಸಂತ ಪೂ. ವಾಮನ ರಾಜಂದೇಕರ ಇವರ ಗುಣವೈಶಿಷ್ಟ್ಯಗಳು

ಈ ಸಂದರ್ಭದಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರೊಂದಿಗೆ ಈ ಹಿಂದೆ ಸಾಧನೆಯ ವಿಷಯದಲ್ಲಿ ನಡೆಸಿದ ಸಂವಾದದ ಸಂಕಲನ ಮಾಡಿದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಅದರಲ್ಲಿ ಸಾಧಕರು ಸಾಧನೆಯ ವಿಷಯದಲ್ಲಿ ಕೇಳಿದ ಸಂದೇಹಗಳನ್ನು ಪರಾತ್ಪರ ಗುರು ಡಾಕ್ಟರರು ನಿವಾರಿಸಿದರು, ಅಲ್ಲದೇ ಪ್ರಯತ್ನಗಳಿಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು. ಧ್ವನಿಚಿತ್ರಮುದ್ರಿಕೆ ಮಾಧ್ಯಮದಿಂದ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರೊಂದಿಗೆ ಸಂವಾದವನ್ನು ನಡೆಸಿರುವಷ್ಟು ಆನಂದ ದೊರಕಿತು.

೪. ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರಿಂದ ‘ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾಧಕರಿಗೆ ಮಾರ್ಗದರ್ಶನ

೫. ಕು. ಯೋಗಿತಾ ಪಾಲನ ಇವರು ಹೇಳಿದ ‘ಭಾವಾಂಜಲಿ ನಂತರ ಸಾಧಕರು ಹಾಡಿದ ‘ಧನ್ಯ ಧನ್ಯ ಹಮ್ ಹೊ ಗಯೆ ಗುರುದೇವ ಈ ಹಾಡಿನ ಮೂಲಕ ಮುಕ್ತಾಯ.

ಗಮನಾರ್ಹ ಅಂಶ

ಪರಾತ್ಪರ ಗುರು ಡಾಕ್ಟರರ ಹುಟ್ಟುಹಬ್ಬದ ನಿಮಿತ್ತದಿಂದ ಸನಾತನದ ರಾಮನಾಥಿ (ಗೋವಾ)ಯಲ್ಲಿರುವ ಆಶ್ರಮದಲ್ಲಿ ವಿವಿಧ ಸ್ಥಳಗಳಲ್ಲಿ ರಂಗೋಲಿಗಳನ್ನು ಬಿಡಿಸಿ ಮತ್ತು ಹಣತೆಗಳನ್ನು ಬೆಳಗಿಸಿ ಅಲಂಕರಿಸಲಾಗಿತ್ತು.