ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೮ ನೇ ಜನ್ಮದಿನ ನಿಮಿತ್ತ ‘ಆನ್‌ಲೈನ್ ಭಾವಸತ್ಸಂಗದ ಮೂಲಕ ಸಾಧಕರು ವ್ಯಕ್ತಪಡಿಸಿದ ಕೃತಜ್ಞತೆ !

ರಾಮನಾಥಿ (ಗೋವಾ) – ವೈಶಾಖ ಕೃಷ್ಣ ಪಕ್ಷ ಸಪ್ತಮಿ ಅಂದರೆ ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಹುಟ್ಟುಹಬ್ಬ ! ಸನಾತನದ ಪ್ರತಿಯೊಬ್ಬ ಸಾಧಕನ ಹೃದಯ ಕೃತಜ್ಞತಾಭಾವದಿಂದ ತುಂಬಿ ತುಳುಕುವ ದಿನ ! ಅಖಿಲ ಮನುಕುಲದ ಉದ್ಧಾರಕ್ಕಾಗಿ ಮತ್ತು ಸಾಧಕರ ರಕ್ಷಣೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯನಿರತವಾಗಿರುವ ಗುರುಗಳ ಚರಣಗಳಿಗೆ ಶರಣಾಗುವ ದಿನ ! ಮಹರ್ಷಿಗಳ ಆಜ್ಞೆಯಂತೆ ಕಳೆದ ೪ ವರ್ಷಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ ಸಮಾರಂಭವನ್ನು ಆಚರಿಸಲಾಗುತ್ತಿದೆ. ಈ ಬಾರಿ ಕೊರೋನಾದಿಂದಾಗಿ ಈ ಜನ್ಮೋತ್ಸವ ಸಮಾರಂಭವನ್ನು ಆಚರಿಸಲು ಸಾಧ್ಯವಾಗಲಿಲ್ಲ. ಆದರೂ ೧೩ ಮೇ ೨೦೨೦ ರಂದು ಪ್ರತಿಯೊಬ್ಬ ಸಾಧಕರು ಮನೆಯಲ್ಲಿದ್ದೇ ‘ಆನ್‌ಲೈನ್ ಭಾವಸತ್ಸಂಗದ ಮೂಲಕ ಪರಾತ್ಪರ ಗುರು ಡಾ. ಆಠವಲೆಯವರ ಹುಟ್ಟುಹಬ್ಬದ ನಿಮಿತ್ತ ಕೃತಜ್ಞತೆಯನ್ನು ಅರ್ಪಿಸಿದರು. ಅಂತರಂಗದ ಭಾವಕ್ಕೆ ಸ್ಥಳ-ಕಾಲದ ಬಂಧನವಿರುವುದಿಲ್ಲ.

ಸ್ಥೂಲದೇಹಕ್ಕಿಹುದು ಸ್ಥಳಕಾಲಗಳ ಪರಿಮಿತಿ |

ಹೇಗಿರಲಿ ಸದಾ ಎಲ್ಲ ಕಡೆಗಳಲ್ಲಿ

ಸನಾತನ ಧರ್ಮವಿಹುದು ನನ್ನ ನಿತ್ಯರೂಪ

ಆ ರೂಪದಲ್ಲಿರುವೆ ಎಲ್ಲ ಕಡೆಗಳಲ್ಲಿ ಸದಾ

(ಪರಾತ್ಪರ ಗುರು ಡಾ. ಆಠವಲೆಯವರ  ವಚನ)

ಪರಾತ್ಪರ ಗುರುದೇವರ ಈ ವಚನದ ಪ್ರತ್ಯಕ್ಷ ಅನುಭವವನ್ನು ಇಂದು ಸಾಧಕರು  ಅನುಭವಿಸಿದರು. ಧ್ವನಿಚಿತ್ರಮುದ್ರಿಕೆಯ ಮಾಧ್ಯಮದಿಂದ ಗುರುದೇವರ ವಿವಿಧ ಭಾವಮುದ್ರೆಗಳನ್ನು ಅನುಭವಿಸುವಾಗ ಭಾರತದಾದ್ಯಂತದ ಸಾಧಕರು ಭಾವಸಾಗರದಿಂದ ಮಿಂದೆದ್ದರು. ಈ ಸಂಕಟಕಾಲದಲ್ಲಿಯೂ ಧ್ವನಿಚಿತ್ರಮುದ್ರಿಕೆ ಮಾಧ್ಯಮದಿಂದ ಗುರುದೇವರ ದರ್ಶನವಾಯಿತು ಮತ್ತು ಸಾಧಕರಿಗೆ ಮುಂದಿನ ಆಪತ್ಕಾಲವನ್ನು ಎದುರಿಸಲು ಆಧ್ಯಾತ್ಮಿಕ ಬಲ ದೊರಕಿತು !

ಪರಾತ್ಪರ ಗುರುದೇವರ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದೇ, ಅವರಿಗೆ ಸಲ್ಲಿಸುವ ಕೃತಜ್ಞತೆ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಪರಾತ್ಪರ ಗುರುದೇವರ ಈ ಐತಿಹಾಸಿಕ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಸಾಧಕರು ಜವಾಬ್ದಾರಿಯನ್ನು ವಹಿಸಿಕೊಂಡು ಪ್ರಯತ್ನ ಮಾಡಬೇಕು. ‘ಜವಾಬ್ದಾರಿಯನ್ನು ವಹಿಸಿಕೊಳ್ಳುವುದು, ಇದು ಸಮಷ್ಟಿ ಸಾಧನೆಯ ಪ್ರಯತ್ನವಾಗಿದೆ. ಪರಾತ್ಪರ ಗುರುದೇವರು ಸಮಷ್ಟಿಗಾಗಿ ಜೀವನವನ್ನು ಮುಡಿಪಾಗಿಡಲು ಕಲಿಸಿದ್ದಾರೆ. ಈಗ ಅವರು ಕಲಿಸಿರುವುದನ್ನು ಪ್ರತ್ಯಕ್ಷ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನಗಳನ್ನು ಇಂದಿನಿಂದಲೇ ಪ್ರಾರಂಭಿಸಬೇಕು. ಒಂದು ವೇಳೆ ನಾವು ಪ್ರಾರಂಭದಿಂದಲೇ ಸಮಷ್ಟಿಗಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಪ್ರಯತ್ನ ಮಾಡುತ್ತಿದ್ದರೆ, ಈಗ ಇನ್ನೂ ಹೆಚ್ಚು ಜವಾಬ್ದಾರಿಯನ್ನು ವಹಿಸಿಕೊಂಡು ಸಮಷ್ಟಿ ಸಾಧನೆಯನ್ನು ಮಾಡಲು ಪ್ರಾರಂಭಿಸಬೇಕು. ಪರಾತ್ಪರ ಗುರುದೇವರ ಐತಿಹಾಸಿಕ ಧರ್ಮಸಂಸ್ಥಾಪನೆ ಕಾರ್ಯದ ಒಂದು ಅಂಗವಾಗುವುದೇ ಅವರಿಗೆ ಸಲ್ಲಿಸುವ ನಿಜವಾದ ಕೃತಜ್ಞತೆಯಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ನವ ದೆಹಲಿಯಿಂದ ಒಂದು ‘ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾಧಕರಿಗೆ ಮಾರ್ಗದರ್ಶನ ಮಾಡಿದರು.

ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಪರಾತ್ಪರ ಗುರುದೇವರ ಕುರಿತು ವ್ಯಕ್ತಪಡಿಸಿದ ಕೃತಜ್ಞತೆ !

‘ಕೊರೋನಾದ ಪಿಡುಗಿನ ಸಂಕಟದ ಸಮಯದಲ್ಲಿ ಗುರುದೇವರು ನಮಗೆ ಈ ಭಾವ ಸತ್ಸಂಗವನ್ನು ನೀಡಿ, ನಮಗೆಲ್ಲರಿಗೆ ಮುಂದಿನ ಸಾಧನೆಗಾಗಿ ಚೈತನ್ಯ ಮತ್ತು ಶಕ್ತಿ ನೀಡಿದ್ದಾರೆ. ಈ ಸಂಕಟದ ಸಮಯದಲ್ಲಿ ನಿಮ್ಮ ಈ ಚೈತನ್ಯರೂಪಿ ಭಾವಸತ್ಸಂಗದಿಂದ ನಮ್ಮ ಮುಂದಿನ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಖಂಡಿತವಾಗಿಯೂ ಒಳ್ಳೆಯದಾಗಲಿದೆ, ಎಂದು ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಈ ವೇಳೆ ಕೃತಜ್ಞತೆ ವ್ಯಕ್ತಪಡಿಸಿದರು.