ಗುಪ್ತಚರ ಇಲಾಖೆಯ ಅಧಿಕಾರಿಗಳು ಅಥವಾ ರಾಷ್ಟ್ರೀಯ ಸುರಕ್ಷಾ ತಜ್ಞರು ಮತ್ತು ಕೆಲವು ಪೊಲೀಸ್ ಅಧಿಕಾರಿಗಳನ್ನು ಹೊರತುಪಡಿಸಿದರೆ ಇತರ ಭಾರತೀಯರು ನಿಜಾಮುದ್ದೀನನಲ್ಲಿನ ಕೊರೋನಾ ಸೋಂಕಿನ ಸಂದರ್ಭದಲ್ಲಿ ಘಟಿಸಿದ ಘಟನೆಗೆ ಪ್ರಸಿದ್ಧಿ ಸಿಗುವ ಮೊದಲು (ಯಾವುದನ್ನು ಅವರು ಅಧ್ಯಯನ ಪೂರ್ವಕವಾಗಿ ಮುಚ್ಚಿಟ್ಟಿದ್ದರೋ) ‘ತಬಲಿಗೀ ಜಮಾತದ ಹೆಸರನ್ನು ಕೇಳಿರಲಿಲ್ಲ. ತಬಲಿಗೀ ಬಗ್ಗೆ ಹೇಳುವುದಾದರೆ, ಮೇಲ್ನೋಟಕ್ಕೆ ತಬಲಿಗೀ ಜಮಾತದ ಯಾವ ೬ ತತ್ತ್ವಗಳಿವೆಯೋ, ಅವುಗಳಲ್ಲಿ ಇಸ್ಲಾಮಿನ ಪರಾಕಾಷ್ಠೆಯ ಧಾರ್ಮಿಕತೆಯಿದೆ; ಆದರೆ ಇವು ಕೇವಲ ಅವರ ಮೇಲಿನಿಂದ ಕಾಣಿಸುವ ರೂಪವಾಗಿವೆ, ಅದರಲ್ಲಿ ಅಮಾಯಕ ಹಾಗೂ ತತ್ತ್ವವಾದಿ ಮುಸಲ್ಮಾನರನ್ನು ಇಸ್ಲಾಮಿನ ತತ್ತ್ವಜ್ಞಾನದ ಆಧಾರದಲ್ಲಿ ಆಕರ್ಷಿಸಿ ಕೊನೆಗೆ ಅವರನ್ನು ಉಗ್ರರನ್ನಾಗಿ ಮಾಡಲಾಗುತ್ತದೆ. ನೂರಾರು ವರ್ಷಗಳಷ್ಟು ಹಳೆಯದಾಗಿರುವ ಈ ತಬಲಿಗೀ ಜಮಾತದ ಅತ್ಯಂತ ಅಪಾಯಕಾರಿ ಭಾಗವು ೨೦೦೧ ರಿಂದ ಭಾರತವನ್ನು ಬಿಟ್ಟು ಜಗತ್ತಿನಾದ್ಯಂತ ಎಲ್ಲೆಡೆ ಬೆಳಕಿಗೆ ಬರಲು ಆರಂಭವಾಯಿತು.
೧. ತಬಲಿಗೀ ಜಮಾತ ಎಂದರೆ ಉಗ್ರವಾದದ ಕಡೆಗೆ ಹೋಗುವ ಮಾರ್ಗ
ಪಾಕಿಸ್ತಾನದಲ್ಲಿನ ಉಗ್ರವಾದವಿರೋಧಿ ಮತ್ತು ಸುರಕ್ಷಾತಜ್ಞರಾದ ಡಾ. ಫರಹಾನ ಝಾಹೀದ ಇವರು ‘ತಬಲಿಗೀ ಜಮಾತದ ಉಗ್ರವಾದ ದೊಂದಿಗಿರುವ ಜಾಲಗಳು, (Foreign Analysis March 2015 Center Francais de Research Sur le Renseignement) ಈ ವಿಷಯದ ವಿಶ್ಲೇಷಣೆಯನ್ನು ಮಾಡುವಾಗ, ‘ತಬಲಿಗೀ ಜಮಾತವು ದೇಶದ ಹೊರಗೆ ಹಿಂಸಾಚಾರ ಮಾಡುವ ಇಸ್ಲಾಮಿಕ್ ಗುಂಪುಗಳ ಒಂದು ಭಾಗವಾಗಿದ್ದು, ಅದು ಹಿಂಸಾಚಾರಗಳನ್ನು ನಡೆಸುವುದರ ಹಿಂದಿನ ಮುಖ್ಯ ಸೂತ್ರಧಾರವಾಗಿದೆ ಎಂದು ಹೇಳಿದ್ದಾರೆ. ಈ ಜಮಾತವು ಒಂದು ರೀತಿಯಲ್ಲಿ ಉಗ್ರವಾದಕ್ಕಾಗಿ ಮತಾಂಧರನ್ನು ಭರ್ತಿಮಾಡಿಕೊಳ್ಳುವ ಹಾಗೂ ಅವರಲ್ಲಿ ಉಗ್ರವಾದದ ಭಾವನೆಗಳನ್ನು ಸಿದ್ಧಪಡಿಸುವ ಪಾತ್ರವನ್ನು ನಿರ್ವಹಿಸುತ್ತದೆ. ಜಮಾತಿನ ಸಭೆಗಳಲ್ಲಿ ಜಗತ್ತಿನಲ್ಲಿನ ಕಟ್ಟಾ ಮತಾಂಧರನ್ನು ಹಿಂಸಾಚಾರ ಕೃತ್ಯಗಳ ಬಗ್ಗೆ ಚರ್ಚೆಯನ್ನು ಮಾಡಲು ಒಟ್ಟಿಗೆ ತರುತ್ತದೆ. ಅವರಿಗೆ ಪರಸ್ಪರ ಸಹಾಯ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ. ಜಮಾತಿನ ಅನೇಕ ಅನುಯಾಯಿಗಳು ಇತರ ಜಿಹಾದಿ ಗುಂಪುಗಳ ಸದಸ್ಯರಾಗಿದ್ದಾರೆ. ತಬಲೀಗಿ ಜಮಾತವು ಉಗ್ರವಾದದ ಕಡೆಗೆ ಹೋಗುವ ಮಾರ್ಗವಾಗಿದೆಯೆಂದು ನಂಬಲಾಗುತ್ತದೆ.
ಡಾ. ಫರಹಾನ ಇವರ ಹೇಳಿಕೆಯಂತೆ ೨೦೦೧ ನೇ ಇಸವಿಯಿಂದ ತಬಲೀಗಿ ಜಮಾತ ಮತ್ತು ಉಗ್ರವಾದಿ ಕೃತ್ಯವೆಸಗುವ ಮತಾಂಧರಲ್ಲಿ ನಂಟಿರುವುದು ಕಂಡು ಬಂದಿದೆ. ೨೦೦೧ ರಲ್ಲಿ ರಿಚರ್ಡ್ ರೆಡ್ ಇವನು ಅಮೇರಿಕಾದ ವಿಮಾನದಲ್ಲಿ ಬಾಂಬ್‌ಸ್ಫೋಟ ಮಾಡಲು ಮಾಡಿದ ಪ್ರಯತ್ನ, ೨೦೦೧ ರಲ್ಲಿ ಅಮೇರಿಕಾದಲ್ಲಿನ ತಾಲಿಬಾನಿ ಜಾನ್ ವಾಕರ್ ಇವನನ್ನು ಅಫ್ಘಾನಿಸ್ತಾನದಲ್ಲಾದ ಬಂಧನ, ೨೦೦೨ ರಲ್ಲಿ ಜೋಸ್ ಪಾಡಿಲ್ಲಾ ಇವನು ನ್ಯೂಯಾರ್ಕ್‌ನಲ್ಲಿ ಬಾಂಬ್ ಸಿದ್ಧಪಡಿಸಲು ಪ್ರಯತ್ನಿಸಿರುವುದು ಮತ್ತು ೨೦೦೮ ನೇ ಇಸವಿಯಲ್ಲಿ ಬಾರ್ಸಿಲೋನಾದಲ್ಲಿನ ಹಿಂಸಾಚಾರದ ಒಳಸಂಚು ಇವೆಲ್ಲ ಘಟನೆಗಳಿಗೆ ತಬಲೀಗಿ ಜಮಾತದೊಂದಿಗೆ ನಂಟಿದೆ.
ಅಮೇರಿಕಾದ ‘ಪೋರ್ಟ್‌ಲ್ಯಾಂಡ್ ಸೆವನ್ ಮತ್ತು ‘ಲಾಕಾವನ್ನಾ ಸಿಕ್ಸ್ ಈ ಸ್ಥಳಗಳಲ್ಲಿ ದಾಳಿ ಮಾಡುವ ಸಂಚಿನಲ್ಲಿ ಫ್ರಾನ್ಸ್‌ನಲ್ಲಿ ಭರ್ತಿಯಾದ ಮತಾಂಧರ ಕೈವಾಡವಿತ್ತು. ಅಲೆಕ್ಸ್ ಅಲೆಕ್ಸಿವ ಇವನು ೮ ಜನವರಿ ೨೦೧೬ರಂದು ಮಧ್ಯಪೂರ್ವದಲ್ಲಿನ ತ್ರೈಮಾಸಿಕದಲ್ಲಿ ‘ತಬಲಿಗೀ ಜಮಾತ ಜಿಹಾದ್ಸ್ ಸ್ಟೆಲ್ದಿ ಲೆಜನ್ಸ್ ಈ ಶೀರ್ಷಿಕೆಯ ಅಡಿಯಲ್ಲಿ ನೀಡಿದ ವಿಶ್ಲೇಷಣೆಯಲ್ಲಿ ‘ಶೇ. ೮೦ ರಷ್ಟು ಇಸ್ಲಾಮಿ ಉಗ್ರವಾದಿಗಳು ತಬಲಿಗೀ ಜಮಾತದವರಾಗಿದ್ದಾರೆ ಮತ್ತು ‘ಫ್ರಾನ್ಸ್‌ನ ಗುಪ್ತಚರ ಇಲಾಖೆಯು ಈ ಜಮಾತಕ್ಕೆ ಮೂಲಭೂತವಾದದತ್ತ ಹೋಗುವ ಮೊದಲ ಹಂತ, ಎಂದು ಸಂಬೋಧಿಸಿದೆ, ಎಂದು ಹೇಳಲಾಗಿದೆ.
೨೯ ಎಪ್ರಿಲ್ ೨೦೦೫ ರಂದು ‘ನ್ಯೂಯಾರ್ಕ್ ಟೈಮ್ಸ್ ಈ ದಿನಪತ್ರಿಕೆಯಲ್ಲಿ ಕ್ರೇಗ್ ಸ್ಮಿಥ್ ಇವರು ‘ಫ್ರೆಂಚ್ ಇಸ್ಲಾಮಿಕ್ ಗ್ರೂಪ್ ಆಫರ್ಸ್ ರಿಚ್ ಸಾಯಿಲ್ ಫಾರ್ ಮಿಲಿಟನ್ಸಿ ಈ ಶೀರ್ಷಿಕೆಂiಲ್ಲಿ ಬರೆದ ಒಂದು ಸಂಶೋಧನಾತ್ಮಕ ಲೇಖನದಲ್ಲಿ, ೯/೧೧ರಂದು ಅಮೇರಿಕಾದ ಮೇಲಿನ ದಾಳಿಯ ಆರೋಪಿ ಝಾಕಾರಿಯಸ್ ಮೌಸ್ಸಾಯೀ, ಹಾಗೆಯೇ ಅಫ್ಘಾನಿಸ್ತಾನದಲ್ಲಿನ ಟೋರಾ ಬೋರಾದಲ್ಲಿ ೨೦೦೧ ರಲ್ಲಿ ಅಮೇರಿಕಾ ಮಾಡಿದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಹರ್ವ ಜಮೇಲ ಲಾವೂಸ್, ೨೦೦೫ ರಲ್ಲಿ ಪ್ಯಾರೀಸ್‌ನಲ್ಲಿನ ಅಮೇರಿಕಾದ ರಾಯಬಾರಿ ಕಛೇರಿಯ ಮೇಲೆ ಬಾಂಬ್ ಎಸೆದು ಧ್ವಂಸ ಮಾಡಿರುವ ಪ್ರಕರಣದಲ್ಲಿನ ಆರೋಪಿ ‘ಅಲ್ ಕಾಯದಾ ಸಂಘಟನೆಯಲ್ಲಿ ಭರ್ತಿಯಾಗಿರುವ ಜಮೇಲ ಬೆಘಲ ಮುಂತಾದವರೆಲ್ಲ ಫ್ರಾನ್ಸ್ ದೇಶದವರಾಗಿದ್ದು ಅವರು ತಬಲಿಗೀ ಜಮಾತದ ಸದಸ್ಯರಾಗಿದ್ದರು ಎಂದು ಹೇಳಿದ್ದಾರೆ.
‘ಸ್ಟೇಟ್‌ಫಾರ್ ಗ್ಲೋಬಲ್ ಇಂಟಲಿಜೆನ್ಸ್ ಸೆಕ್ಯುರಿಟಿ ವೀಕ್ಲೀ ಈ ಸಾಪ್ತಾಹಿಕದಲ್ಲಿ ‘ತಬಲಿಗೀ ಜಮಾತ ಆನ್ ಇಂಡೈರೆಕ್ಟ್ ಲೈನ್ ಟೂ ಟೆರರಿಝಮ್ ಈ ಶೀರ್ಷಿಕೆಯಲ್ಲಿ ಫ್ರೇಥ್ ಬರ್ಟನ್ ಮತ್ತು ಸ್ಕಾಟ್ ಸ್ಟೀವರ್ಟ್ ಇವರು ಪ್ರಕಟಿಸಿದ ಲೇಖನದಲ್ಲಿ “ಬಾರ್ಸಿಲೋನಾದಲ್ಲಿನ ಮಸೀದಿಯ ಮೇಲೆ ಮಾಡಿದ ಕಾರ್ಯಾಚರಣೆಯಲ್ಲಿ ಹಲ್ಲೆ ಮಾಡಲು ರೂಪಿಸಿದ ಸಂಚಿನಲ್ಲಿ ಬಂಧಿಸಲ್ಪಟ್ಟ ೧೪ ಜನರಲ್ಲಿ ೧೨ ಜನ ತಬಲೀಗಿ ಜಮಾತದವರಾಗಿದ್ದರು. ೨೦೦೫ ರಲ್ಲಿ ಲಂಡನ್‌ನಲ್ಲಿ ನಡೆದ ಭೂಸುರಂಗದ ಸ್ಫೋಟದಲ್ಲಿ ೫೨ ಜನರು ಮೃತಪಟ್ಟರು, ಹಾಗೆಯೇ ಲಂಡನ್, ಗ್ಲಾಸ್ಗೋ ಮತ್ತು ಸ್ಕಾಟ್‌ಲ್ಯಾಂಡ್ ಈ ನಗರಗಳಲ್ಲಿ ಬಾಂಬ್ ದಾಳಿಯಾಯಿತು. ಈ ಘಟನೆಗಳ ಹಿಂದೆ ಪ್ರಾಮುಖ್ಯವಾಗಿ ತಬಲೀಗಿ ಜಮಾತದ ಹೆಸರು ಕೇಳಿಬಂದಿತ್ತು. ೨೭ ಡಿಸೆಂಬರ್ ೨೦೧೫ ರ ‘ನ್ಯೂಯಾರ್ಕ್ ಪೋಸ್ಟ್ ಈ ನಿಯತಕಾಲಿಕೆಯಲ್ಲಿ ಎಫ್.ಬಿ.ಐ. ಈ ಗುಪ್ತಚರ ಸಂಘಟನೆಯ ಸಹಾಯಕ ಸಂಚಾಲಕ ಮೈಕಲ್ ಹೈಂಬಕ್ ಹೇಳುತ್ತಾರೆ, ಅಮೇರಿಕಾದಲ್ಲಿ ತಬಲೀಗಿ ಜಮಾತದ ಸಂಖ್ಯೆ ಗಣನೀಯವಾಗಿದೆ ಹಾಗೂ ಈ ಜಮಾತದಲ್ಲಿನ ಜನರು ‘ಅಲ್ ಕಾಯದಾ ಸಂಘಟನೆಯಲ್ಲಿ ಸೇರಿಕೊಂಡಿರುವುದೂ ಕಂಡುಬಂದಿದೆ.
೨. ಪಾಕಿಸ್ತಾನ ಉಗ್ರವಾದದ ತಾಣ
ಪಾಕಿಸ್ತಾನದಲ್ಲಿನ ವಿದ್ವಾಂಸರು, ರಾಜಕಾರಣಿಗಳು ಮತ್ತು ಲೇಖಕರು ‘ಹಾರ್ಪರ್ ಕಾಲಿನ್ಸ್ ಪಬ್ಲಿಶರ್ಸ್ ಇಂಡಿಯಾ ೨೦೦೦ ಇವರು ಪ್ರಕಾಶಿಸಿದ ‘ಆನ್ ದ ಅಬಿಸ-ಪಾಕಿಸ್ತಾನ ಆಫ್ಟರ್ ದ ಕೂಪ್ ಎಂಬ ಪುಸ್ತಕದಲ್ಲಿ ಲೇಖನಗಳನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಬರೇಲ್ವೀ ಪಂಥದಲ್ಲಿನ ಮುಸಲ್ಮಾನರು ದರ್ಗಾದ ಪೂಜೆಯನ್ನು ಮಾಡುವುದು ಹಾಗೂ ಕೆಲವು ಸುಫೀ ಪರಂಪರೆಗಳನ್ನು ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ. ದೇವಬಂದಿ ವಿಚಾರಶೈಲಿಯ ತಬಲೀಗಿ ಜಮಾತದ ಸಹಾಯದಿಂದ ಅವರ ಮೇಲೆ ನಿಯಂತ್ರಣವನ್ನು ಪಡೆದರು ಹಾಗೂ ಇದರ ಪರಿಣಾಮದಿಂದ ಪಾಕಿಸ್ತಾನದಲ್ಲಿ ಉಗ್ರವಾದಿ ಚಟುವಟಿಕೆಗಳು ಹೆಚ್ಚಾದವು.
ಪಾಕಿಸ್ತಾನದ ಮಾಜಿ ರಾಜಕಾರಣಿ ಹಾಗೂ ‘ಫ್ರೈಡೇ ಟೈಮ್ಸ್ ಈ ದಿನಪತ್ರಿಕೆಯ ಸಂಪಾದಕರಾದ ಖಲೀದ ಅಹಮದ ಇವರು ಈ ಪುಸ್ತಕದಲ್ಲಿ, “ದೇವಬಂದಿ ಪಂಥದಲ್ಲಿನ ಉಗ್ರರಿಂದಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಬರೇಲ್ವೀ ಪಂಥದ ಪ್ರಭಾವವು ಕಡಿಮೆ ಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಲೇಖಕರು ನಮೂದಿಸಿದ ವಿಷಯವು ಒಂದು ವರ್ಷದ ನಂತರವೇ ನಿಜವಾಯಿತು. ಅಮೇರಿಕಾದ ೯/೧೧ ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಬಯಲಾಗಿತ್ತು. ಅನೇಕ ವರ್ಷಗಳಿಂದ ಜಾಗತಿಕ ಉಗ್ರವಾದದ ತಾಣವೆಂದು ಪಾಕಿಸ್ತಾನದ ಹೆಸರು ಎಲ್ಲೆಡೆ ಪ್ರಸಿದ್ಧವಾಗಿದೆ.
“ಮುಖ್ಯ ಪ್ರವಾಹದಲ್ಲಿರುವ ವಿದೇಶಗಳಲ್ಲಿನ ಅನೇಕ ಇಸ್ಲಾಮೀ ಉಗ್ರವಾದಿ ಸಂಘಟನೆಗಳು ಮೂಲದಲ್ಲಿ ತಬಲೀಗಿ ಜಮಾತದ ಧರ್ಮೋಪದೇಶಕರು ನೀಡಿದ ಬೋಧನೆಯೇ ಇದೆ. ಈ ಸಕ್ಷಮ ಜಿಹಾದಿಗಳ ಹಾಗೂ ದೇವಬಂದಿ ವಿಚಾರಶೈಲಿಯವರೊಂದಿಗೆ ಮಹತ್ವದ ನಂಟಿದೆ, ಎಂದು ಡಾ. ಫರಹಾನ ಹೇಳುತ್ತಾರೆ. ೧೯೮೦ ರಿಂದ ೧೯೯೦ ಈ ಕಾಲಾವಧಿಯಲ್ಲಿ ಅಫ್ಘಾನಿಸ್ತಾನದಲ್ಲಿನ ಯುದ್ಧದ ಸಮಯದಲ್ಲಿ ಇಸ್ಲಾಮಿ ಕಟ್ಟರವಾದಿಗಳನ್ನು ಭರ್ತಿ ಮಾಡಿಕೊಳ್ಳುವವರು ತಬಲೀಗಿ ಜಮಾತದವರೇ ಆಗಿದ್ದರು. ಡಾ. ಫರಹಾನ ಇವರು ಹೇಳುತ್ತಾರೆ, “ತಬಲಿಗೀ ಜಮಾತದ ಮಾಜಿ ಸದಸ್ಯ ಕುರಿ ಸೈಫುಲ್ಲಾ ಅಖ್ತರ್ ಮತ್ತು ಫಜಲ್ ಉರ್ ರೆಹಮಾನ ಕಾಲೀಲ ಇವರು ಇತರ ಕೆಲವರನ್ನು ಕರೆದುಕೊಂಡು ‘ಹರಕತ-ಉಲ್-ಜಿಹಾದ್-ಅಲ್-ಇಸ್ಲಾಮೀ (ಹುಜೀ) ಈ ಸಂಘಟನೆಯನ್ನು ಸ್ಥಾಪಿಸಿದರು. ಹುಜಿಯ ಆಧಾರದಲ್ಲಿ ಹರಕತ್-ಉಲ್-ಮುಜಾಹಿದ್ದೀನ (ಹಮ), ಜೈಶ-ಎ-ಮಹಮ್ಮದ (ಜೆಮ್), ‘ಸಿಫಾ-ಇ-ಸಾಹಾಬಾ (ಎಸ್.ಎಸ್.ಪಿ), ‘ಲಷ್ಕರ-ಎ-ಝಾಂಗವೀ ಈ ಉಗ್ರವಾದಿ ಸಂಘಟನೆಗಳ ಸ್ಥಾಪನೆಯಾದವು
೩. ಅನೇಕ ಉಗ್ರವಾದಿ ಘಟನೆಗಳ ಹಿಂದಿದೆ ತಬಲೀಗಿ ಜಮಾತ
‘ಇಂಡಿಯಾ ಅಬ್ರಾಡ್ ನ್ಯೂಸ್ ಸರ್ವಿಸ್ನವರ ‘ತಬಲಿಗೀ ಜಮಾತದ ಉಗ್ರವಾದಿಗಳೊಂದಿಗೆ ಸಂಬಂಧ ಎಂಬ ೧ ಎಪ್ರಿಲ್ ೨೦೨೦ ರ ವರದಿಯಲ್ಲಿ ಹೀಗೆ ಹೇಳಲಾಗಿದೆ. ‘ವಿಕಿಲಿಕ್ಸ್‌ನ ಹೇಳಿಕೆಗನುಸಾರ ಅಮೇರಿಕಾದಲ್ಲಿ ೯/೧೧ ರಂದು ನಡೆದ ದಾಳಿ ಪ್ರಕರಣದಲ್ಲಿ ಅಮೇರಿಕಾವು ವಶಪಡಿಸಿಕೊಂಡಿರುವ ‘ಅಲ್ ಕಾಯದಾದ ಉಗ್ರವಾದಿ ಸಂಘಟನೆಯಲ್ಲಿನ ಕೆಲವು ಶಂಕಿತ ಆರೋಪಿಗಳು ಕೆಲವು ವರ್ಷಗಳ ಹಿಂದೆ ನವ ದೆಹಲಿಯಲ್ಲಿನ ನಿಜಾಮುದ್ದೀನ (ಪಶ್ಚಿಮ) ಭಾಗದಲ್ಲಿರುವ ತಬಲೀಗಿ ಜಮಾತದ ಮುಖ್ಯ ಕಾರ್ಯಾಲಯದಲ್ಲಿ ತಂಗಿದ್ದರು. ಗುಜರಾತದ ಗೋಧ್ರಾದಲ್ಲಿನ ಕೋಮುಹಿಂಸಾಚಾರದಲ್ಲಿ ೫೯ ಹಿಂದೂ ಕರಸೇವಕರನ್ನು ಸುಟ್ಟು ಹತ್ಯೆ ಮಾಡಲಾಯಿತು. ಈ ಹಿಂಸಾಚಾರದ ಹಿಂದೆ ತಬಲಿಗೀ ಜಮಾತದವರಿದ್ದರು ಎಂಬ ಸಂಶಯವಿದೆ.
೪. ತಬಲಿಗೀಗಳು ‘ಧರ್ಮೋಪದೇಶಕರ ಹೆಸರಿನಲ್ಲಿ ಉಗ್ರವಾದಕ್ಕಾಗಿ ಮತಾಂಧರನ್ನು ಭರ್ತಿ ಮಾಡಿಕೊಳ್ಳುವುದು
ಭಾರತದ ಗುಪ್ತಚರ ಇಲಾಖೆ ಮತ್ತು ದಿವಂಗತ ಸಂರಕ್ಷಣ ತಜ್ಞ ಬಿ. ರಮಣ ಇವರ ಹೇಳಿಕೆಗನುಸಾರ ಲಷ್ಕರ-ಎ-ಮುಜಾಹಿದೀನ, ಹರಕತ-ಉಲ್-ಜಿಹಾದ್-ಅಲ್-ಇಸ್ಲಾಮೀ, ಲಷ್ಕರ-ಎ-ತೋಯಬಾ, ಜೈಶ್-ಎ-ಮಹಮ್ಮದ ಮತ್ತು ೧೯೯೮ ರಲ್ಲಿ ಒಸಾಮಾ ಬಿನ್ ಲಾದೇನನು ಸ್ಥಾಪಿಸಿದ ಅಂತರರಾಷ್ಟ್ರೀಯ ಇಸ್ಲಾಮಿಕ್ ಸಂಘಟನೆಗಳ ಸದಸ್ಯರೊಂದಿಗೆ ತಬಲಿಗೀ ಜಮಾತದ ಸಂಬಂಧವಿರುವುದರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅವರ ಕಡೆಗೆ ವಕ್ರದೃಷ್ಟಿಯಿಂದ ನೋಡಲಾಗುತಿತ್ತು. ೧೯೯೦ ನೇ ಇಸವಿಯಲ್ಲಿ ಪಾಕಿಸ್ತಾನದ ದಿನ ಪತ್ರಿಕೆಗಳ ವಾರ್ತೆಗಳ ಆಧಾರದಲ್ಲಿ ರಮಣ ಇವರು, ‘ಹರಕತ್-ಉಲ್-ಮುಜಾಹಿದ್ದೀನ (ಹಮ್) ಈ ಜಿಹಾದಿ ಉಗ್ರವಾದಿ ಸಂಘಟನೆಯಲ್ಲಿ ತರಬೇತಿ ಪಡೆದ ಸದಸ್ಯರು ತಬಲಿಗಿ ಜಮಾತದ ‘ಧರ್ಮೋಪದೇಶಕರು ಎಂದು ವೀಸಾ ಪಡೆದು ಪಾಕಿಸ್ತಾನದಲ್ಲಿ ಉಗ್ರವಾದಿ ಕೃತ್ಯಗಳನ್ನು ಮಾಡಲು ಹೊಸ ಮತಾಂಧ ಯುವಕರನ್ನು ಭರ್ತಿ ಮಾಡಿಕೊಳ್ಳಲು ವಿದೇಶಗಳಿಗೆ ಹೋಗುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ತಬಲೀಗಿ ಜಮಾತದ ಲಕ್ಷಗಟ್ಟಲೆ ಪ್ರಚಾರಕರು ಜಗತ್ತಿನಾದ್ಯಂತ ತಿರುಗಾಡುತ್ತಿರುವುದರಿಂದ ರಶ್ಯಾದಲ್ಲಿನ ಚೆಚನ್ಯಾ ಮತ್ತು ದಗೆಸ್ತಾನ ಈ ಭಾಗಗಳಲ್ಲಿ, ಹಾಗೆಯೇ ಸೋಮಾಲಿಯಾ ಮತ್ತು ಇತರ ಆಫ್ರಿಕಾ ದೇಶಗಳಲ್ಲಿ ಅವರ ಅನುಯಾಯಿಗಳಿದ್ದಾರೆ. “ಪಾಕಿಸ್ತಾನದಲ್ಲಿನ ಉಗ್ರವಾದಿ ಸಂಘಟನೆಗಳು ತಬಲೀಗಿ ಜಮಾತದ ಧರ್ಮಪ್ರಚಾರ ಮಾಡುವುದರ ಹೆಸರಿನಲ್ಲಿ ವಿವಿಧ ದೇಶಗಳಲ್ಲಿ ‘ಸ್ಲೀಪರ್ ಸೆಲ್ಸ್ಗಳನ್ನು ಸಿದ್ಧಪಡಿಸುತ್ತಿದ್ದಾರೆ, ಹೀಗೆ ಅನೇಕ ದೇಶಗಳ ಗುಪ್ತಚರ ಸಂಘಟನೆಗಳಿಗೆ ಸಂಶಯವಿದೆ ಎಂದು ರಮಣರವರು ಹೇಳಿದ್ದಾರೆ. ಇದರಿಂದ ತಬಲೀಗಿ ಜಮಾತದ ಹೆಸರು ಅನೇಕ ದೇಶಗಳಲ್ಲಿ ಕಪ್ಪು ಪಟ್ಟಿಯಲ್ಲಿದ್ದು ಅವರ ಧರ್ಮೋಪದೇಶಕರಿಗೆ ವೀಸಾ ನಿರಾಕರಿಸಲಾಗುತ್ತದೆ.
೫. ತಬಲೀಗಿ ಜಮಾತ ಮತ್ತು ಥೌಹಿಡ ಜಮಾತ ಇವರ ಸಂಬಂಧ
‘ರೆಡಿಫ್ ಡಾಟ್ ಕಾಮ್ ಈ ಜಾಲತಾಣದಲ್ಲಿ ಪ್ರಖ್ಯಾತ ಸುರಕ್ಷಾ ವಿಶೇಷತಜ್ಞ ಪ್ರವೀಣ ಸ್ವಾಮಿ ಇವರು ಪ್ರಕಟಿಸಿದ ‘ದ ರೋಡ್ ಟು ಶ್ರೀಲಂಕಾ ಕಾರನೇಜ್ ಈ ಲೇಖನದಲ್ಲಿ ಶ್ರೀಲಂಕಾದಲ್ಲಿನ ಮಹಮ್ಮದ ಮುಹಸೀನ ನಿಲಾಮನ ಕೋಲಂಬೋದಲ್ಲಿನ ಬಾಂಬ್ ಸ್ಫೋಟಕ್ಕೆ ಹೊಣೆಯಾಗಿರುವ ಝಹರಾನ ಹಾಶಿಮ್‌ರೊಂದಿಗೆ ಸಂಬಂಧವಿತ್ತು, ಎಂದು ಹೇಳಿದ್ದಾರೆ. ನಿಲಾಮ ಊರ್ಫ್ ಅಬೂ ಶೂರಯಾ ಇವನನ್ನು ಐಸಿಸ್‌ನ ರಾಜಧಾನಿ ಅಲ್-ರಕ್ಕಾದಲ್ಲಿ ಹತ್ಯೆ ಮಾಡಲಾಯಿತು. ನಿಲಾಮ್‌ನ ಹೇಳಿಕೆಯಿಂದ ಕೊಲಂಬೋದಲ್ಲಿನ ವಿದ್ವಾಂಸರಿಗಾಗಿ ಸಿದ್ಧಪಡಿಸಿರುವ ಜಾಲದಲ್ಲಿ (ನೆಟ್ವರ್ಕ್‌ನ) ಕಲ್ಪನೆ ಬರುತ್ತದೆ. ಪ್ರವೀಣ ಸ್ವಾಮಿ ಇವರು ಹೀಗೆ ಹೇಳಿದ್ದರು, ‘೨೧ ನೇ ಶತಕದಿಂದ ತಬಲೀಗಿ ಜಮಾತವು ಶ್ರೀಲಂಕಾದಲ್ಲಿನ ಮುಸಲ್ಮಾನರಲ್ಲಿ ತಮ್ಮ ವಿಚಾರಗಳನ್ನು ಬೇರೂರಲು ಆರಂಭಿಸಿದರು. ನಿಲಾಮನು ‘ಇಸ್ಲಾಮಾಬಾದ್ ಇಂಟರ್‌ನ್ಯಾಶನಲ್ ಇಸ್ಲಾಮಿಕ್ ವಿದ್ಯಾಪೀಠದಿಂದ ಶರಿಯಾ ಕಾನೂನುಗಳ ಅಭ್ಯಾಸ ಮಾಡಿದನು. ಈ ಸಂಸ್ಥೆಯಲ್ಲಿ ಒಸಾಮಾ ಬಿನ್ ಲಾದೇನನ ಮಾರ್ಗದರ್ಶಕ ಅಬ್ದುಲ್ಲಾ ಆಝಮ್ ಕಲಿಸುತ್ತಿದ್ದನು. ಇಲ್ಲಿ ನಿಲಾಮನ ತಬಲೀಗಿ ಜಮಾತದೊಂದಿಗೆ ಸಂಬಂಧ ಬಂದಿತು. ೨೦೧೧ ರಲ್ಲಿ ನಿಲಾಮ ಶ್ರೀಲಂಕಾದಲ್ಲಿನ ಕ್ಯಾಂಡಿಯಲ್ಲಿನ ತನ್ನ ಮನೆಗೆ ಹಿಂತಿರುಗಿದನು. ಅನಂತರ ಅವನು ಪ್ರಾರಂಭದಲ್ಲಿ ಕೊಲಂಬೋ ವಿದ್ಯಾಪೀಠದಲ್ಲಿ ಉರ್ದು ಭಾಷೆಯನ್ನು ಕಲಿಸಲು ಅರೆಕಾಲಿಕ ಶಿಕ್ಷಕನೆಂದು ಕೆಲಸ ಮಾಡುತ್ತಿದ್ದನು. ಯಾವಾಗ ಅವನು ಗಲೆವಾಲದಲ್ಲಿನ ಶಾಲೆಯಲ್ಲಿ ಪ್ರಾಧ್ಯಾಪಕನೆಂದು ಕಾರ್ಯವನ್ನು ಮಾಡುತ್ತಿದ್ದನೋ, ಆಗ ಝಹರಾನನ ಗುಂಪಿನಲ್ಲಿ ಅವನು ಮಹತ್ವದ ಪಾತ್ರ ನಿರ್ವಹಿಸಿದನು.
೨೦೧೪ ರಲ್ಲಿ ಯಾತ್ರೆಗೆ ಹೋಗುವ ನೆಪ ಮಾಡಿ ಅವನ ೬ ಮಕ್ಕಳು, ಗರ್ಭಿಣಿ ಪತ್ನಿ ಮತ್ತು ವೃದ್ಧ ತಾಯಿ-ತಂದೆಯರನ್ನು ಕರೆದುಕೊಂಡು ಅವನು ಟರ್ಕಿಗೆ ಹೋದನು. ಅನಂತರ ಅಲ್ಲಿನ ಗಡಿದಾಟಿ ಅವನು ಸಿರಿಯಾ ದೇಶಕ್ಕೆ ಹೋದನು ಮತ್ತು ನಂತರ ಅವನು ನಾಪತ್ತೆಯಾದನು. ಎಲ್ಲಿ ಹೋದನು ಯಾರಿಗೂ ತಿಳಿಯಲಿಲ್ಲ. ಅವನು ತನ್ನ ಫೇಸ್‌ಬುಕ್‌ನಲ್ಲಿ ಕಳುಹಿಸಿದ ಸಂದೇಶದಲ್ಲಿ ‘ನಾವು ಪುರುಷರು, ಮಹಿಳೆಯರು, ಮಕ್ಕಳು, ಶಿಯಾ, ಸುನ್ನಿ, ಝೋರಾಷ್ಟ್ರಿಯನ್, ಕುರ್ದ, ಕ್ರೈಸ್ತ ಇವರೆಲ್ಲರನ್ನೂ ಸಾಯಿಸುವೆವು, ಎಂದು ಹೇಳಿದ್ದನು. ನಿಲಾಮನು ಐಸಿಸ್‌ನಲ್ಲಿ ಸೇರಿಕೊಂಡನು. ಅವನ ಮಿತ್ರ ತೌಕಿರ್ ಅಹಮ್ಮದ ಥಾಜುದ್ದಿನನ ಜೊತೆಗೆ ಶ್ರೀಲಂಕಾದಲ್ಲಿನ ೧೧೦ ಜನರು ಐಸಿಸ್‌ಗೆ ಭರ್ತಿಯಾದರು. ಶ್ರೀಲಂಕಾದಲ್ಲಿನ ‘ಥೌಹಿಡ ಜಮಾತ ಮತ್ತು ತಬಲೀಗಿ ಜಮಾತ ಇವರ ಉದ್ದೇಶ ಒಂದೇ ಆಗಿದೆ. ತಮಿಳುನಾಡಿನ ಥೌಹಿಡ್ ಜಮಾತ ಶ್ರೀಲಂಕಾದಲ್ಲಿನ ನ್ಯಾಶನಲ್ ಥೌಹಿಡ್ ಜಮಾತಕ್ಕೆ ಮಾರ್ಗದರ್ಶನವನ್ನು ಮಾಡುತ್ತದೆ. ಅವರೇ ಶ್ರೀಲಂಕಾಗೆ ಬಾಂಬ್‌ಗಳನ್ನು ಪೂರೈಸಿದರು. ಭಾರತ ಮತ್ತು ಶ್ರೀಲಂಕಾದ ಹೊರತು ಹೊರಗೆ ಎಲ್ಲಿಯೂ ಥೌಹಿಡ ಜಮಾತ ಇಲ್ಲ.
೬. ಭಾರತದಲ್ಲಿ ಜನಿಸಿದ ತಬಲಿಗೀ ಜಮಾತ !
ಈಗಂತೂ ತಬಲೀಗಿ ಜಮಾತದ ಚಟುವಟಿಕೆಗಳು ಪರಾಕಾಷ್ಠೆಗೆ ತಲುಪಿವೆ. ಮೇಲ್ನೋಟಕ್ಕೆ ಒಳ್ಳೆಯದೆಂದು ಅನಿಸುವ ಈ ಪಾಪವು ಎಲ್ಲಿ ಜನ್ಮ ತಾಳಿತು ? ಅದು ನಮ್ಮ ಭಾರತದಲ್ಲಿಯೇ ! ಇದನ್ನು ಯಾರು ಹುಡುಕಿದರು ? ಅವನು ಒಬ್ಬ ಭಾರತೀಯ. ಅವನ ಹೆಸರು ಮೌಲಾನಾ ಮಹಮ್ಮದ ಇಲ್ಯಾಸಿ ! ೧೯೨೦ ರಿಂದ ಅವನ ಜಗತ್ತಿನಲ್ಲಿನ ಮುಖ್ಯ ಕಾರ್ಯಾಲಯವು ನವ ದೆಹಲಿಯಲ್ಲಿನ ನಿಜಾಮುದ್ದೀನದಲ್ಲಿದೆ. ೮೦ ದೇಶಗಳಲ್ಲಿ ಅವನ ೮ ಕೋಟಿ ಅನುಯಾಯಿಗಳಿದ್ದಾರೆ. ನಿಜಾಮುದ್ದೀನದಲ್ಲಿ ಅವರ ವಾರ್ಷಿಕ ಸಭೆ ನಡೆಯಿತು. ಅದರಲ್ಲಿ ಮಲೇಷ್ಯಾ, ಥೈಲ್ಯಾಂಡ್, ಇಂಡೋನೆಶಿಯಾ, ಚೀನಾ ಮತ್ತು ಕೊರೋನಾ ರೋಗಾಣು ಪ್ರಭಾವ ಹೆಚ್ಚು ಪ್ರಮಾಣದಲ್ಲಿರುವ ರಾಷ್ಟ್ರಗಳಲ್ಲಿನ ತಬಲಿಗೀ ಜಮಾತದವರು ಭಾಗವಹಿಸಿದರು. ನಿಜಾಮುದ್ದೀನದ ರಾಷ್ಟ್ರೀಯ ಸಂಕಟ ನಿರ್ಮಾಣವಾಗುವ ಮೊದಲು ಭಾರತದಲ್ಲಿ ಕೊರೋನಾದ ಪ್ರಮಾಣ ನಿಯಂತ್ರಣದಲ್ಲಿತ್ತು.
೭. ನಿಜಾಮುದ್ದೀನದಲ್ಲಿ ತಬಲಿಗೀಯ ಧರ್ಮೋಪದೇಶಕರು ನಿರ್ಧಿಷ್ಟವಾಗಿ ಏಕೆ ಒಟ್ಟಿಗೆ ಬಂದಿದ್ದರು ?
ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಜಿಹಾದ್ ವಿರೋಧಿ ಪತ್ರಕರ್ತ ಸಲಾಹುದ್ದೀನ ಶೋಹಿಬ ಚೌಧರಿ ಇವರು ಪ್ರಕಟಿಸಿದ ‘ತಬಲಿಗೀ ಜಮಾತ ವೂಲ್ಫ ಇನ್ ಶಿಪ್ಸ್ ಸ್ಕಿನ್ ಎಂಬ ೧೭೩ ಪುಟಗಳ ವರದಿಯಲ್ಲಿ ತಬಲಿಗೀ ಜಮಾತ ಮತ್ತು ಅದರ ಉಗ್ರರೊಂದಿಗಿರುವ ಸಂಬಂಧದ ಮೇಲೆ ಬೆಳಕು ಚೆಲ್ಲಿದೆ. ದೇಶದಲ್ಲಿನ ಹಾಗೂ ವಿದೇಶದಲ್ಲಿನ ತಬಲೀಗಿ ಜಮಾತದ ಸಾವಿರಾರು ಧರ್ಮೋಪದೇಶಕರು ಭಾರತಲ್ಲಿ ಒಟ್ಟಾಗುತ್ತಾರೆ. ಈಗ ನಿಜಾಮುದ್ದೀನನಲ್ಲಿ ಅದೇ ನಡೆಯಿತು. ಇವರೆಲ್ಲರೂ ತಬಲಿಗೀ ಜಮಾತದ ೬ ಒಳ್ಳೆಯ ತತ್ತ್ವಗಳ ವಿಷಯದಲ್ಲಿ ಚರ್ಚೆ ಮಾಡಲು ಬಂದಿದ್ದರೋ ಅಥವಾ ಡಾ. ಫರಹಾನನರು ಹೇಳಿದಂತೆ ಉಗ್ರವಾದಿ ಕೃತ್ಯಗಳ ವಿಷಯದಲ್ಲಿ ಚರ್ಚೆ ಮಾಡಿ ಪರಸ್ಪರರಲ್ಲಿ ಸಮನ್ವಯವನ್ನು ಸಾಧಿಸಲು ಬಂದಿದ್ದರೋ ?, ಎಂಬುದು ಭಾರತದಲ್ಲಿ ತಿಳಿಯುವಂತಹದ್ದಾಗಿರಲಿಲ್ಲ; ಏಕೆಂದರೆ ಇಲ್ಲಿ ಯಾವುದೇ ಸರಕಾರಕ್ಕೆ ಮಸೀದಿಯಲ್ಲಿ ಪ್ರವೇಶ ಮಾಡುವ ಧೈರ್ಯವಿಲ್ಲ. ಭಾರತದಲ್ಲಿನ ರಾಜಕಾರಣದಲ್ಲಿ ಯಾವ ಪದ್ದತಿಯಿಂದ ಸೆಕ್ಯುಲರಿಸಮ್ (ಜಾತ್ಯತೀತ) ಎಂದು ತಿಳಿಯಲಾಗುತ್ತದೆಯೋ, ಅದಕ್ಕೆ ಧನ್ಯವಾದ ! ಎಲ್ಲಿಯವರೆಗೆ ಈ ಮೇರೆಯನ್ನು ಮೀರಿ ಭಯವನ್ನು ದೂರಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಕುರಾನಿನ ಒಳ್ಳೆಯ ಅಂಶಗಳ ಕಡೆಗೆ ಆಕರ್ಷಿಸಲ್ಪಡುವ ಅಮಾಯಕ ಮುಸಲ್ಮಾನರನ್ನು ಅಪಾಯಕಾರಿ ಬಾಂಬ್‌ಗಳನ್ನು ತಯಾರಿಸುವುದು ಮತ್ತು ಅವುಗಳನ್ನು ಸಿಡಿಸುವುದರಿಂದ ರಕ್ಷಿಸಲು ಸಾಧ್ಯವಿಲ್ಲ. ಭಾರತದಲ್ಲಿ ಉಗ್ರವಾದದ ಬಗ್ಗೆ ಮಾರ್ಗದರ್ಶನ ಮಾಡುವ ತಬಲೀಗಿ ಜಮಾತದ ಅಧಿಕಾರವು ಸಂವಿಧಾನದಲ್ಲಿನ ಅಲ್ಪಸಂಖ್ಯಾತರ ಅಧಿಕಾರದಲ್ಲಿ ಬರುತ್ತದೆಯೇ ಎಂಬುದನ್ನು ಈಗ ನ್ಯಾಯಾಲಯವೇ ನಿರ್ಧರಿಸಲಿ ! – ಎಸ್. ಗುರುಮೂರ್ತಿ, ಲೇಖಕರು, ರಾಜಕೀಯ ಹಾಗೂ ಆರ್ಥಿಕ ಘಟನೆಗಳ ಬಗೆಗಿನ ವಿಶ್ಲೇಷಕರು. (ಆಧಾರ : ‘ಇಂಡಿಯನ್ ಎಕ್ಸ್‌ಪ್ರೆಸ್ ಜಾಲತಾಣ)