(ಹಸ್ತಾಂತರ ಎಂದರೆ ಒಬ್ಬ ಅಪರಾಧಿಯನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಒಪ್ಪಿಸುವ ಕಾನೂನು ಪ್ರಕ್ರಿಯೆ)

ವಾಷಿಂಗ್ಟನ್ (ಅಮೆರಿಕ) – ಭಾರತದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹಸ್ತಾಂತರಕ್ಕೆ ಅಮೆರಿಕದ ನ್ಯಾಯಾಂಗ ಇಲಾಖೆಯು ಭಾರತದ ಬಳಿ ಬೇಡಿಕೆ ಇಡಲಿದೆ. ಆತ 2014 ರಿಂದ ಗುಜರಾತ್‌ನ ಜೈಲಿನಲ್ಲಿದ್ದಾನೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ ಸಿಂಗ ನಿಜ್ಜರ ಹತ್ಯೆ ಸೇರಿದಂತೆ ಹಲವು ಅಪರಾಧಗಳಲ್ಲಿ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಆರೋಪ ಹೊರಿಸಲಾಗಿದೆ.
The U.S. is reportedly preparing to seek the extradition of jailed gangster Lawrence Bishnoi from India over allegations linked to the Hardeep Singh Nijjar case and other crimes.
If the U.S. can seek extradition from India, why isn't India demanding the extradition of Khalistani… https://t.co/tHEIADSHOp pic.twitter.com/9Il5Fym7kF
— Sanatan Prabhat (@SanatanPrabhat) July 12, 2026
ನ್ಯಾಯಾಂಗ ಇಲಾಖೆಯು ಕೆಲವು ದಿನಗಳ ಹಿಂದಷ್ಟೇ ‘ಆಪರೇಷನ್ ಹಾರ್ಡ್‌ಬಾಲ್’ ಅಡಿಯಲ್ಲಿ ದಾಖಲಿಸಿದ ದೋಷಾರೋಪ ಪಟ್ಟಿಯಲ್ಲಿ 37 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಅಮೆರಿಕ, ಕೆನಡಾ ಮತ್ತು ಯುರೋಪ್‌ನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ 3 ಭಾರತೀಯ ಅಪರಾಧಿ ಗ್ಯಾಂಗ್‌ಗೆ ಸೇರಿದ 24 ಜನರನ್ನು ಬಂಧಿಸಲಾಗಿದೆ. ಬಿಷ್ಣೋಯಿ ಮತ್ತು ಆತನ ಸಹಚರ ಗೋಲ್ಡಿ ಬ್ರಾರ ಸೇರಿದಂತೆ ಅಮೆರಿಕದ ದೋಷಾರೋಪ ಪಟ್ಟಿಯಲ್ಲಿ ಹೆಸರಿರುವ ಇತರ ಗ್ಯಾಂಗ್ ಲೀಡರ್‌ಗಳಲ್ಲಿ ಅಸ್ಸಾಂ ಜೈಲಿನಲ್ಲಿರುವ ಜಗ್ಗು ಭಗವಾನ್ಪುರಿಯಾ ಮತ್ತು ಕೆನಡಾ ನಿವಾಸಿ ರವೀಂದರ ಸಿಂಗ ಧಂಡಾ ಸೇರಿದ್ದಾರೆ. ಬಿಷ್ಣೋಯಿ ಮತ್ತು ಬ್ರಾರ ರವರು ನಿಜ್ಜರ ಹತ್ಯೆಗೆ ಆದೇಶ ನೀಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಬ್ರಾರನ ಸುಳಿವು ನೀಡಿದವರಿಗೆ ಅಮೆರಿಕ 50 ಸಾವಿರ ಡಾಲರ್ (47 ಲಕ್ಷದ 66 ಸಾವಿರದ 525 ರೂಪಾಯಿ) ಬಹುಮಾನ ಘೋಷಿಸಿದೆ.
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’
ಜರ್ಮನಿಯಲ್ಲಿ ಡ್ರಗ್ಸ್-ಲೈಂಗಿಕ ಶೋಷಣೆ ಜಾಲ ಬಯಲು : Germany Exploitation Gang
ಕೀನ್ಯಾ: ಹಲಾಲ್ ಪ್ರಮಾಣಪತ್ರಗಳ ವಿರುದ್ಧ ನ್ಯಾಯಾಲಯದಲ್ಲಿ ವ್ಯಾಪಾರಿಗಳ ಅರ್ಜಿ