ಇದರ ಶಾಸ್ತ್ರ

ಪ್ರಶ್ನೆ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ – ಕೇವಲ ಗುರುಮಂತ್ರದಿಂದ ಶಾಂತಿಯ ಅನುಭೂತಿ ಬರುತ್ತದೆ ‘ನಾನು ಇಲ್ಲಿಯ ವರೆಗೆ ಅನೇಕ ಸಂತರು ವಿಶಿಷ್ಟ ಕಾರಣಗಳಿಗಾಗಿ ನೀಡಿದ ನಾಮಜಪ ಮತ್ತು ಮಂತ್ರಪಠಣವನ್ನೂ ಮಾಡಿದ್ದೇನೆ ಮತ್ತು ಈಗಲೂ ಮಾಡುತ್ತಿದ್ದೇನೆ. ಅವೆಲ್ಲವೂ ಸಮಷ್ಟಿ ಕಾರ್ಯ ಮತ್ತು ನನ್ನ ಮಹಾಮೃತ್ಯುಯೋಗಕ್ಕೆ ಸಂಬಂಧಪಟ್ಟಿದ್ದವು ಮತ್ತು ಈಗಲೂ ಇವೆ. ಆದರೆ ಯಾವುದರಿಂದಲೂ ನನಗೆ ಶಾಂತಿಯ ಅನುಭೂತಿ ಬರುವುದಿಲ್ಲ; ಕೇವಲ ಗುರುಮಂತ್ರದಿಂದ ಮಾತ್ರ ಬರುತ್ತದೆ. ಇದರಿಂದ ನನಗೆ ಅರ್ಥವಾಗಿದ್ದೇನೆಂದರೆ, ‘ಇತರ ಎಲ್ಲಾ ಜಪಗಳು ಸಗುಣಕ್ಕೆ ಸಂಬಂಧಪಟ್ಟಿದ್ದರೆ, ಗುರುಮಂತ್ರವು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸುವುದರಿಂದ ಅದು ನಿರ್ಗುಣಕ್ಕೆ ಸಂಬಂಧಿಸಿದೆ. ಆದ್ದರಿಂದ ಅದನ್ನು ಜಪಿಸುವಾಗ ಶಾಂತಿಯ ಅನುಭೂತಿ ಬರುತ್ತದೆ.’ ಇದರ ಶಾಸ್ತ್ರವೇನು ? (೨೬.೧೧.೨೦೧೧)

ಉತ್ತರ – ಶ್ರೀ. ರಾಮ ಹೊನಪ :
೧. ಸಂತರು ವಿಶಿಷ್ಟ ಕಾರಣಗಳಿಗಾಗಿ ನೀಡಿದ ನಾಮಜಪ ಮತ್ತು ಮಂತ್ರಗಳ ಮೂಲಕ ಆಗುವ ಕಾರ್ಯಗಳು
೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆರೋಗ್ಯವು ಸುಸ್ಥಿತಿಯಲ್ಲಿರಲು ಸಹಾಯವಾಗುವುದು : ಪ್ರತಿಯೊಬ್ಬರ ಮೂಲಾಧಾರ ಚಕ್ರದಲ್ಲಿ ಜೀವನಶಕ್ತಿ ಇರುತ್ತದೆ. ಅದರಿಂದ ಶರೀರದೊಳಗೆ ಅಸಂಖ್ಯಾತ ಸೂಕ್ಷ್ಮ ಶಕ್ತಿಯ ಪ್ರವಾಹಗಳು ತಯಾರಾಗಿ ಅವುಗಳ ಮೂಲಕ ಶರೀರದಲ್ಲಿನ ರಕ್ತ, ಜೀವಕೋಶಗಳು, ಮಾಂಸ, ಚರ್ಮ, ಮೂಳೆಗಳು ಮುಂತಾದವುಗಳ ಕಾರ್ಯಗಳು ಸುಗಮವಾಗಿ ನಡೆಯಲು ಶಕ್ತಿ ದೊರೆಯುತ್ತದೆ.
ಕೆಲವು ಸಂತರು ನೀಡಿದ ವಿಶಿಷ್ಟ ನಾಮಜಪಗಳಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಉತ್ತಮ ಆರೋಗ್ಯಕ್ಕಾಗಿ ಅವಶ್ಯಕ ಜೀವನಶಕ್ತಿಯು ಹೆಚ್ಚಾಗುತ್ತದೆ, ಅವರ ಶರೀರದ ಸೂಕ್ಷ್ಮ ಶಕ್ತಿಪ್ರವಾಹಗಳಿಗೆ ಬಲ ದೊರಕಿ ಅವರ ಆರೋಗ್ಯ ಸುಸ್ಥಿತಿಯಲ್ಲಿರಲು ಸಹಾಯವಾಗುತ್ತದೆ.
೧ ಆ. ಪ್ರಾಣಶಕ್ತಿಯ ಉಳಿತಾಯ : ಕೆಲವು ಸಂತರು ನೀಡಿದ ಮಂತ್ರಜಪಿಸಿದ ಕಾರಣ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೂಲಾಧಾರ ಚಕ್ರದಲ್ಲಿನ ಜೀವನಶಕ್ತಿಯು ಹೆಚ್ಚಾಗಿ ಅವರ ಪ್ರಾಣಶಕ್ತಿಯು ಉಳಿದುಕೊಳ್ಳುತ್ತದೆ. ಪ್ರಾಣಶಕ್ತಿ ಕಡಿಮೆ ಆಗುವುದು ತಪ್ಪಿದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ‘ಮಹಾಮೃತ್ಯುಯೋಗ’ವು ತಪ್ಪುತ್ತದೆ.
೧ ಇ. ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೀವ್ರ ಆಕ್ರಮಣಗಳಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದೇಹದ ರಕ್ಷಣೆಯಾಗುವುದು : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಲ್ಲಿ ನಡೆಸುವ ಆಕ್ರಮಣಗಳಿಂದ ಅವರ ರಕ್ಷಣೆಯಾಗಬೇಕೆಂದು ಕೆಲವು ಸಂತರು ವಿಶಿಷ್ಟ ಮಂತ್ರಗಳನ್ನು ನೀಡಿದರು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈ ಮಂತ್ರಜಪ ಗಳನ್ನು ಮಾಡಿದಾಗ ಅವುಗಳಿಂದ ನಿರ್ಮಾಣವಾಗುವ ಮಾರಕ ಶಕ್ತಿಯು ಕೆಟ್ಟ ಶಕ್ತಿಗಳ ಬಲವನ್ನು ಕುಗ್ಗಿಸುತ್ತದೆ. ಪರಿಣಾಮದಿಂದ, ದೊಡ್ಡ ಕೆಟ್ಟ ಶಕ್ತಿಗಳ ಸೂಕ್ಷ್ಮದ ಆಕ್ರಮಣಗಳು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದೇಹದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
೧ ಈ. ಧರ್ಮಕಾರ್ಯದಲ್ಲಿನ ಅಡಚಣೆಗಳು ಕಡಿಮೆಯಾಗುವುದು : ಕೆಟ್ಟ ಶಕ್ತಿಗಳು ಸೂಕ್ಷ್ಮ ರೂಪದಲ್ಲಿ ಧರ್ಮಕಾರ್ಯದಲ್ಲಿ ತರುವ ವಿವಿಧ ಅಡಚಣೆಗಳನ್ನು ನಿವಾರಿಸಲು ಸಂತರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ವಿಶಿಷ್ಟ ನಾಮಜಪಗಳನ್ನು ನೀಡುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಆ ನಾಮಜಪ ಮಾಡಿದಾಗ ಉತ್ಪನ್ನವಾದ ಈಶ್ವರನ ಮಾರಕ ಶಕ್ತಿಯಿಂದ ‘ಕೆಟ್ಟ ಶಕ್ತಿಗಳ ಪ್ರಭಾವವು ಕಡಿಮೆಯಾಗುತ್ತದೆ ಮತ್ತು ಅಧ್ಯಾತ್ಮಪ್ರಸಾರ ಮಾಡುವ ಸಾಧಕರ ದೇಹದ ಸುತ್ತಲೂ ಸೂಕ್ಷ್ಮದಿಂದ ರಕ್ಷಣಾ ಕವಚವು ನಿರ್ಮಾಣವಾಗಿ ಅವರ ರಕ್ಷಣೆಯಾಗುವುದು’, ಈ ಕಾರ್ಯವು ಸಂಭವಿಸುತ್ತದೆ. ಈ ರೀತಿ ಧರ್ಮಕಾರ್ಯದಲ್ಲಿನ ಸೂಕ್ಷ್ಮದಲ್ಲಿನ ಅಡಚಣೆಗಳು ಕಡಿಮೆಯಾಗುತ್ತವೆ.
೨. ಗುರುಮಂತ್ರದ ಕಾರ್ಯ
ಗುರುಗಳ ಮುಖ್ಯ ಕಾರ್ಯವೆಂದರೆ ಶಿಷ್ಯನನ್ನು ಮೋಕ್ಷದ ವರೆಗೆ ಕರೆದೊಯ್ಯುವುದು. ಈ ಸಂಕಲ್ಪ ಸಾಕಾರವಾಗಲು ಗುರುಗಳು ಶಿಷ್ಯನಿಗೆ ಗುರುಮಂತ್ರವನ್ನು ನೀಡಿರುತ್ತಾರೆ. ಇದರಂತೆ ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಶಿಷ್ಯರಾದ ಡಾ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮೋಕ್ಷಪ್ರಾಪ್ತಿಗಾಗಿ ಗುರುಮಂತ್ರವನ್ನು ನೀಡಿದ್ದರು. ಗುರುಮಂತ್ರದಿಂದ ಮೊದಲು ಶಿಷ್ಯನ ಕುಂಡಲಿನಿಶಕ್ತಿಯು ಜಾಗೃತವಾಗುತ್ತದೆ. ಗುರುಕೃಪೆ ಮತ್ತು ಶಿಷ್ಯನ ಸಾಧನೆ ಹೆಚ್ಚಾದಂತೆ, ಕುಂಡಲಿನಿಶಕ್ತಿಯು ಮೇಲುಮೇಲಿನ ಕುಂಡಲಿನಿಚಕ್ರಗಳಲ್ಲಿ ಮಾರ್ಗಕ್ರಮಣ ಮಾಡತೊಡಗುತ್ತದೆ. ಕೊನೆಗೆ ಅದು ಶಿಷ್ಯನ ಸಹಸ್ರಾರಚಕ್ರದ ಸ್ಥಳದಲ್ಲಿ ಸ್ಥಿರವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೊದಲು ಶಕ್ತಿಯ ರೂಪಾಂತರ ಭಾವದಲ್ಲಿ ಆಗುತ್ತದೆ. ಅನಂತರ ಭಾವದ ರೂಪಾಂತರ ಚೈತನ್ಯದಲ್ಲಿ ಆಗುತ್ತದೆ. ನಂತರ ಚೈತನ್ಯದ ರೂಪಾಂತರ ಆನಂದದಲ್ಲಿ ಆಗುತ್ತದೆ. ಎಲ್ಲಕ್ಕಿಂತ ಕೊನೆಗೆ ಆನಂದದ ರೂಪಾಂತರ ಶಾಂತಿಯಲ್ಲಿ ಆಗುತ್ತದೆ.
ಈ ಕಾರ್ಯವು ಶಿಷ್ಯನ ಸುಷುಮ್ನಾ ನಾಡಿಯ ಮೂಲಕ ನಡೆಯುತ್ತಿರುತ್ತದೆ. ಗುರುಮಂತ್ರದ ಕಾರ್ಯವು ಪೂರ್ಣಗೊಂಡಾಗ, ಶಿಷ್ಯನಿಗೆ ಮೋಕ್ಷದ, ಅಂದರೆ ಶಾಂತಿಯ ಅನುಭೂತಿ ಬರುತ್ತದೆ. ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಕೇವಲ ಗುರುಮಂತ್ರದ ಮೂಲಕ ಶಾಂತಿಯ ಅನುಭೂತಿ ಬರುತ್ತದೆ.
೩. ಸಂತರು ಮತ್ತು ಗುರುಗಳು ನೀಡಿದ ನಾಮಜಪಗಳಲ್ಲಿನ ವ್ಯತ್ಯಾಸ
ಯಾವುದಾದರೊಬ್ಬ ಸಂತರು ನೀಡಿದ ವಿಶಿಷ್ಟ ಜಪವು ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ಮತ್ತು ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ. ಆದುದರಿಂದ ಆ ಸಂತರ ಸಂಕಲ್ಪ, ಹಾಗೆಯೇ ಅವರು ನೀಡಿದ ನಾಮಜಪವನ್ನು ಮಾಡುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವಿಶಿಷ್ಟ ಕಾರ್ಯವು ಸಂಪನ್ನಗೊಳ್ಳುತ್ತದೆ.
ಗುರುಗಳು ನೀಡಿದ ನಾಮಜಪದಿಂದ ಮುಖ್ಯವಾಗಿ ಶಿಷ್ಯನ ಆಧ್ಯಾತ್ಮಿಕ ಪ್ರಗತಿಯಾಗಿ ಅವನ ಮೋಕ್ಷ ಪ್ರಾಪ್ತಿಯವರೆಗಿನ ಪ್ರವಾಸವು ನಡೆದಿರುತ್ತದೆ. ಅದರಿಂದ ಆಧ್ಯಾತ್ಮಿಕ ಪ್ರಗತಿಯ ಅಂತಿಮ ಹಂತದಲ್ಲಿ ಶಿಷ್ಯನಿಗೆ ಶಾಂತಿಯ ಅನುಭೂತಿ ಬರುತ್ತದೆ. ಕೇವಲ ಗುರುಗಳು ಮಾತ್ರ ಶಿಷ್ಯನಿಗೆ ಶಾಂತಿ ಮತ್ತು ಸಮಾಧಾನವನ್ನು ನೀಡಬಲ್ಲರು. ಆದ್ದರಿಂದಲೇ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಕೇವಲ ಗುರುಮಂತ್ರದ ಮೂಲಕ ಶಾಂತಿಯ ಅನುಭವ ಬರುತ್ತದೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮ ಜ್ಞಾನವನ್ನು ಪಡೆಯುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನವನ್ನು ಪಡೆಯುವ ದಿನಾಂಕ : ೧.೧.೨೦೨೬, ಸಮಯ : ಬೆಳಗ್ಗೆ ೧೦.೩೦ ಮತ್ತು ಕಾಲಾವಧಿ :೨೦ ಸೆಕೆಂಡುಗಳು)
ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ
ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ
ಗುರುಗಳ ಆಜ್ಞಾಪಾಲನೆಯ ಮಹತ್ವವನ್ನು ತಿಳಿಸುವ ಒಂದು ಬೋಧಪ್ರದ ಕಥೆ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಂದ ಜೈಪುರದ ಪ್ರಸಿದ್ಧ ‘ಖೋಲೆ ಹನುಮಾನ’ಗೆ ಪ್ರಾರ್ಥನೆ !
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !