ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !

ಹಿಂದಿನ ಸಂಚಿಕೆಯಲ್ಲಿ ಈ ಲೇಖನದಲ್ಲಿ ಕೆಲವು ವಿಷಯ ನಾವು ತಿಳಿದುಕೊಂಡಿದ್ದೇವೆ. (https://sanatanprabhat.org/kannada/187575.html) ಇಂದು ಉತ್ತರಾರ್ಧವನ್ನು ನೋಡೋಣ.

೧. ಸಮುದ್ರಮಂಥನವಾಗುವಾಗ ಮೇಲಕ್ಕೆ ಬಂದಿದ್ದ ಮಂದಾರ ಪರ್ವತವನ್ನು  ಕೆಳಗೆ ನೂಕಲು ಭಗವಂತನು ಸಹಸ್ರ ಕೈಗಳಿರುವ ರೂಪದಲ್ಲಿ ಅವತರಿಸುವುದು

ಸಮುದ್ರಮಂಥನ ಪ್ರಾರಂಭ ಆದಾಗ ಮಂದಾರ ಪರ್ವತವು ಮೇಲಕ್ಕೆ ಎದ್ದಿತು. ಇದರಿಂದಾಗಿ ದೇವತೆಗಳಿಗೆ ಮತ್ತು ಅಸುರರಿಗೆ ಮಂಥನ ಮಾಡುವುದು ಕಠಿಣವಾಗತೊಡಗಿತು. ಆಗ  ಭಗವಂತನು ಸಹಸ್ರಬಾಹುಗಳ ರೂಪ ವನ್ನು ಧರಿಸಿದನು ಮತ್ತು ತನ್ನ ಕೇವಲ ಒಂದೇ ಕೈಯಿಂದ ಪರ್ವತವನ್ನು ಕೆಳಗೆ ನೂಕಿದನು.

(ಪೂ.) ಸೌ. ಉಮಾ ರವಿಚಂದ್ರನ್

೧ ಅ. ಗುರುದೇವರು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿ ಸಾಧಕರ ಅಹಂಕಾರವನ್ನು ಕಡಿಮೆ ಮಾಡುವುದು :

ಅದೇ ರೀತಿ ಸಾಧಕರ ಅಹಂಕಾರದು ಪ್ರಕಟವಾದಾಗಲೆಲ್ಲ ಅದನ್ನು ಕಡಿಮೆ ಮಾಡಲು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿದ್ದಾರೆ. ಆ ಪ್ರಕ್ರಿಯೆಯಿಂದ ಅವರೇ ಸಾಧಕರ ಅಹಂಕಾರವನ್ನು ಕಡಿಮೆ ಮಾಡುತ್ತಾರೆ. ಭಗವಂತನ ಸಹಸ್ರ ಬಾಹುಗಳು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಪ್ರತಿಯೊಬ್ಬ ಸಾಧಕನ ಕಾಳಜಿ ವಹಿಸುತ್ತಿದ್ದಾರೆ ಎಂಬುದರ ದ್ಯೋತಕವಾಗಿದೆ.

ಸಾಧಕರ ಅಹಂಕಾರ ಪ್ರಕಟವಾದಾಗ, ಗುರುದೇವರು ಸಾಧಕರಿಗೆ ಸತ್ಸಂಗದಲ್ಲಿ ತಪ್ಪುಗಳನ್ನು ಹೇಳಲು ಹೇಳಿ ಅವರೇ ಸಾಧಕರ ಅಹಂಕಾರವನ್ನು ಕಡಿಮೆ ಮಾಡುತ್ತಾರೆ.

೨. ಭಗವಂತನ ಚರಣಗಳಲ್ಲಿ ಸರ್ವಸ್ವ ತ್ಯಾಗ ಮಾಡಿದಾಗಲೇ ದೈವೀ ಶಕ್ತಿಯು ಪ್ರಕಟವಾಗುವುದು

ದೇವತೆಗಳು ಮತ್ತು ಅಸುರರು ಮಂಥನ ಮಾಡಿದರೂ ಸಮುದ್ರದಿಂದ ಅಮೃತವು ಇತರ ಮಾರ್ಗ ಸಿಗದಿದ್ದಾಗ, ಪ್ರಕಟವಾಗದಿದ್ದಾಗ, ಎಲ್ಲಾ ದೇವತೆಗಳು ಶ್ರೀವಿಷ್ಣುವಿಗೆ ಶರಣಾದರು

ದೇವತೆಗಳು ಮತ್ತು ಅಸುರರು ಮಂಥನ ಮಾಡಿದರೂ ಸಮುದ್ರದಿಂದ ಅಮೃತ ಪ್ರಕಟವಾಗಲಿಲ್ಲ. ಆಗ ಭಗವಂತನೇ ಸ್ವತಃ ಮಂಥನ ಮಾಡಲು ಪ್ರಾರಂಭಿಸಿದನು. ನಮಗೆ ಮಾರ್ಗ ಸಿಗದಿರುವಾಗ ದೀನರಾಗಿ ಅಶ್ರುಪೂರ್ಣ ನಯನಗಳಿಂದ ಗುರುದೇವರಲ್ಲಿ ಪ್ರಾರ್ಥಿಸಿದಾಗ ಆಗ ಅವರ ಕೃಪೆ ರೂಪದಲ್ಲಿ ಅನುಭೂತಿಗಳು ಬರುತ್ತವೆ.

೩. ಸಮುದ್ರಮಂಥನದಲ್ಲಿ ಎಲ್ಲವನ್ನು ಶ್ರೀವಿ? ಮಾಡಿದ್ದರೂ ಸ್ವತಃ ಅಲಿಪ್ತನಾಗಿರುವುದು

ಮೋಹಿನಿ ಅವತಾರ ಧರಿಸಿ ಚಾತುರ್ಯದಿಂದ ಅಮೃತವನ್ನು ದೇವತೆಗಳಿಗೆ ಹಂಚುವ ಶ್ರೀವಿಷ್ಣು

ಶ್ರೀ. ಸಂತೋಷ ಮತ್ತು ಡಾ. (ಸೌ.) ಸುಪ್ರಿಯಾ ಆಳಶಿ ಅವರ ಪ್ರಯತ್ನ ಹೇಳುವ ಗುರುದೇವರು

ಅಮೃತಪ್ರಾಪ್ತಿಯ ಸಮಯದಲ್ಲಿ ಧನ್ವಂತರಿ ರೂಪದಲ್ಲಿ ಅಮೃತಕಲಶವನ್ನು ಹಿಡಿದುಕೊಂಡು ಅವನೇ ಅವತರಿಸಿದನು. ತದನಂತರ ಅವನು ಅದ್ಭುತ ಮೋಹಿನಿ ಅವತಾರವನ್ನು ಧರಿಸಿ ಚಾತುರ್ಯದಿಂದ ಅಮೃತವನ್ನು ಕೇವಲ ದೇವತೆಗಳಿಗೇ ಹಂಚಿದನು ಆದರೂ ಅವನು ಸ್ವತಃ ಯಾವುದೇ ಶ್ರೇಯಸ್ಸನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ ಪೂರ್ಣ ಯಶಸ್ಸಿನ ಶ್ರೇಯಸ್ಸನ್ನು ದೇವತೆಗಳು ಮತ್ತು ದೈತ್ಯರಿಗೇ ನೀಡಿದನು ಮತ್ತು ಸ್ವತಃ ಮಾತ್ರ ಅಲಿಪ್ತನಾಗಿ ಉಳಿದನು.

ಅದೇ ರೀತಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮ್ಮಂತಹ ಸಾಧಕರಿಗೆ ಅಮೃತಸಮಾನ ಮೋಕ್ಷಪ್ರಾಪ್ತಿಗಾಗಿ ಗುರುಕೃಪಾಯೋಗ ಎಂಬ ಸಾಧನಾಮಾರ್ಗ ಕಲಿಸಿದ್ದಾರೆ. ಅವರು ಕೇವಲ ಅದನ್ನು ಕಲಿಸಿಲ್ಲ, ಬದಲಿಗೆ ಅವರು ಪ್ರೀತಿಯಿಂದ ನಮ್ಮ ಕೈಹಿಡಿದು ಪ್ರತಿಯೊಂದು ಹೆಜ್ಜೆಯಲ್ಲೂ ಮಾರ್ಗದರ್ಶನ ಮಾಡುತ್ತಿದ್ದಾರೆ. ನಾವು ಎಂದಾದರೂ ಎಡವಿದರೆ ಅವರು ನಮ್ಮನ್ನು ಎತ್ತಿಕೊಳ್ಳುತ್ತಾರೆ, ತಿಳಿಸಿ ಹೇಳುತ್ತಾರೆ, ಧೈರ್ಯ ತುಂಬುತ್ತಾರೆ ಮತ್ತು ಮುಂದೆ ಪ್ರಗತಿಯಾಗಲು ಪ್ರೇರಣೆಯನ್ನು ನೀಡುತ್ತಾರೆ. ಈ ಘೋರ ಕಲಿಯುಗದಲ್ಲಿ ಕೇವಲ ಅವರ ದಿವ್ಯ ಸಂಕಲ್ಪ ಮತ್ತು ಕೃಪೆಯಿಂದಲೇ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿದೆ, ಆದಾಗ್ಯೂ ಅವರು ಅಲಿಪ್ತರಾಗಿ ಇರುತ್ತಾರೆ. ನಮ್ಮ ಸಣ್ಣ ಪ್ರಯತ್ನವನ್ನೂ ಅವರು ಕೊಂಡಾಡು ತ್ತಾರೆ ಮತ್ತು ಅದರ ಪೂರ್ಣ ಶ್ರೇಯಸ್ಸನ್ನು ಸಾಧಕರಿಗೇ ನೀಡುತ್ತಾರೆ.

೪. ಸಮುದ್ರಮಂಥನದಲ್ಲಿ ಹೊರಬಂದ ಹಲಾಹಲ ವಿಷವನ್ನು ಶಿವನು ಸೇವಿಸುವುದು

ಶ್ರೀಮನ್‌ನಾರಾಯಣದ ಮೇಲಿನ ಪ್ರೀತಿಯಿಂದ ಹಾಲಾಹಲ ವಿಷ ಪ್ರಾಶನ ಮಾಡುವ ಭಗವಾನ ಶಿವ

ಕೆಟ್ಟ ಶಕ್ತಿಗಳೊಂದಿಗಿನ ಸೂಕ್ಷ್ಮ ಹೋರಾಟದಿಂದ ಕೆಲವೊಮ್ಮೆ ಗುರುಗಳು ಮಲಗಬೇಕಾಗುವುದು

ಸಮುದ್ರಮಂಥನದ ಸಮಯದಲ್ಲಿ ವಾಸುಕಿಯ ಮುಖದಿಂದ ಮಹಾಭಯಂಕರ ಹಾಲಾಹಲ ವಿಷವು ಹೊರಬಂದಿತು. ಆಗ ಎಲ್ಲರೂ ರಕ್ಷಣೆ ಪಡೆಯಲು ಕೈಲಾಸಕ್ಕೆ ಶಿವನ ಬಳಿ ಓಡಿ ಹೋದರು. ಶಿವನು ಆ ಹಾಲಾಹಲ ವಿಷವನ್ನು ಸೇವಿಸಿ ಕಂಠದಲ್ಲಿ ಧರಿಸಿದನು. ಅವನು ಇದನ್ನು ಶ್ರೀಮನ್ನಾರಾಯಣನ ಮೇಲಿನ ಪ್ರೀತಿಯಿಂದಾಗಿ ಮಾಡಿದನು.

ಸಾಧನೆ ಮಾಡುವಾಗ ವರ್ಷ ೨೦೦೦ ರಲ್ಲಿ ಸಾಧಕರ ಮೇಲೆ ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳ ಆಕ್ರಮಣಗಳು ಪ್ರಾರಂಭವಾದವು. ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಸಾಧಕರಿಗಿರಲಿಲ್ಲ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರ ಮೇಲಿರುವ ಅಪಾರ ಪ್ರೀತಿಯಿಂದಾಗಿ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಲ್ಲಿ ಯುದ್ಧ ಮಾಡಿದರು ಮತ್ತು ತೊಂದರೆಗಳ ನಿವಾರಣೆಗಾಗಿ ವಿವಿಧ ಉಪಾಯಪದ್ಧತಿಗಳನ್ನು ಹುಡುಕಿದರು. ಇದರ ಪರಿಣಾಮವಾಗಿ ಅವರಿಗೂ ದೈಹಿಕ ಸ್ತರದಲ್ಲಿ ತೊಂದರೆಗಳು ಪ್ರಾರಂಭವಾದವು. ಇದರಿಂದಾಗಿ ಅವರು ಎಷ್ಟೋ ದಿನಗಳ ಕಾಲ ಮಲಗಿರಬೇಕಾಯಿತು. ಸಾಮಾನ್ಯವಾಗಿ ಶಿಷ್ಯನು ಗುರು ಮತ್ತು ಗುರುಕೃಪೆಗಾಗಿ ಪ್ರಾಣಸಹಿತ ಎಲ್ಲವನ್ನೂ ಅರ್ಪಿಸಲು ಸಿದ್ಧನಿರುತ್ತಾನೆ. ಸಾಧಕರ ಭಾಗ್ಯವೇನೆಂದರೆ, ಗುರುದೇವರು ಸಾಧಕರ ರಕ್ಷಣೆಗಾಗಿ ಯಾವುದೇ ಸ್ತರದಲ್ಲೂ ದುಃಖ ಸಹಿಸಲು ಸಿದ್ಧರಾಗಿದ್ದಾರೆ.

– (ಪೂ.) ಸೌ. ಉಮಾ ರವಿಚಂದ್ರನ್ (ಸನಾತನದ ೭೦ ನೇ ಸಮಷ್ಟಿ ಸಂತರು), ಚೆನ್ನೈ, ತಮಿಳುನಾಡು (ಮುಕ್ತಾಯ)