ಫರೀದಾಬಾದ್ (ಹರಿಯಾಣ), ಕನ್ನೌಜ (ಉತ್ತರ ಪ್ರದೇಶ), ಶಿವಪುರಿ (ಮಧ್ಯಪ್ರದೇಶ) ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ.
1. ಫರೀದಾಬಾದ್ (ಹರಿಯಾಣ) : ‘ಆರಿಫ್’ ಎಂಬ ವ್ಯಕ್ತಿ ‘ವೀರ್’ ಎಂಬ ಸುಳ್ಳು ಹೆಸರನ್ನು ಹೇಳಿ ತನ್ನ ಮೇಲೆ ಬಲಾತ್ಕಾರ ಮಾಡಿರುವ ಹಾಗೂ ಮದುವೆಯಾಗಿರುವುದಾಗಿ ಹಿಂದೂ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಆರಿಫ್ ಈಗಾಗಲೇ ಮೂರು ಮಕ್ಕಳ ತಂದೆ ಎಂಬುದು ನಂತರ ಬೆಳಕಿಗೆ ಬಂದಿದೆ. ಪೊಲೀಸರಿಗೆ ದೂರು ನೀಡುವಾಗ ‘ಗೋರಕ್ಷಾ ಬಜರಂಗ ದಳ’ದ ಬಿಟ್ಟು ಬಜರಂಗಿ ಅವರು ಕೂಡ ಸಂತ್ರಸ್ತೆಯೊಂದಿಗೆ ಉಪಸ್ಥಿತರಿದ್ದರು.
2. ಕನ್ನೌಜ್ (ಉತ್ತರ ಪ್ರದೇಶ) : ವಿವಾಹಿತ ಹಿಂದೂ ಮಹಿಳೆಯೊಬ್ಬರು ತನ್ನ ಪತಿಯನ್ನು ಬಿಟ್ಟು 8 ವರ್ಷದ ಮಗನೊಂದಿಗೆ ಅನ್ಯಧರ್ಮೀಯ ಪ್ರೇಮಿಯೊಂದಿಗೆ ವಾಸಿಸಲು ಪ್ರಾರಂಭಿಸಿದರು. ಆದರೆ ಮತಾಂತರಕ್ಕಾಗಿ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಗ್ರಾಮದಲ್ಲಿ ಚರ್ಚೆಯಾಗುತ್ತಿದೆ. ಪತಿಯ ದೂರಿನ ಮೇರೆಗೆ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.
3. ಶಿವಪುರಿ (ಮಧ್ಯಪ್ರದೇಶ) : ಸಮೀರ್ ಖಾನ್ ಎಂಬಾತನು ಹಿಂದೂ ಹುಡುಗಿಯೊಬ್ಬಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಲೆಗೆ ಬೀಳಿಸಿಕೊಂಡನು. ಹುಡುಗಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಆಕೆಯ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿದನು. ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಹಣದ ಬೇಡಿಕೆ ಮಾಡಿದ್ದಲ್ಲದೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಕೂಡ ಸಮೀರ್ ಒತ್ತಡ ಹೇರಿದನು. ವಿಶ್ವ ಹಿಂದೂ ಪರಿಷತ್ ಸಹಾಯದಿಂದ ಸಂತ್ರಸ್ತೆ ದೂರು ನೀಡಿದ ನಂತರ ಅಪರಾಧ ದಾಖಲಾಗಿದೆ.
ಕರ್ಣಾವತಿ (ಗುಜರಾತ) ಇಲ್ಲಿ ಮುಸಲ್ಮಾನನಿಂದ ಹಿಂದೂ ಯುವಕನ ಕೊಲೆಕರ್ಣಾವತಿ (ಗುಜರಾತ) : ಇಲ್ಲಿನ ‘ರಿಲೀಫ್ ರೋಡ್’ನಲ್ಲಿರುವ ಪತ್ಥರಕುವಾ ಪ್ರದೇಶದಲ್ಲಿ ಶಾಕಿಬ್ ಸಲೀಮ್ ಶೇಖ್ ಎಂಬಾತನು ಜಯಶಂಕರ್ ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹಣದ ವಿವಾದಕ್ಕಾಗಿ ಈ ಕೊಲೆ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಶಾಕಿಬ್ ನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !