ರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿಯಿಂದ ನಾಟಕ ನಿರ್ಮಾಪಕರಿಗೆ ಆದೇಶ
ನಾಟಕದ ಹೆಸರನ್ನು ಬದಲಾಯಿಸಿ, ತಿದ್ದುಪಡಿ ಮಾಡಿದ ಸುಧಾರಿತ ಸಂಹಿತೆ (ಸ್ಕ್ರಿಪ್ಟ್) ಮರುಸಲ್ಲಿಸುವಂತೆ ನಿರ್ದೇಶನ!
ಹಿಂದೂ ಜನಜಾಗೃತಿ ಸಮಿತಿ ಮತ್ತು ವಾರಕರಿ ಸಂಪ್ರದಾಯದ ಹೋರಾಟಕ್ಕೆ ದೊರೆತ ದೊಡ್ಡ ಯಶಸ್ಸು!

ಮುಂಬಯಿ/ರತ್ನಾಗಿರಿ – ವಾರಕರಿ ಸಂಪ್ರದಾಯ, ಸಂತ ಪರಂಪರೆ ಮತ್ತು ವಿಠ್ಠಲ ಭಕ್ತಿಯನ್ನು ತೀವ್ರವಾಗಿ ನಿಂದಿಸುವ ಹಾಗೂ ವಿಠ್ಠಲ ಭಕ್ತರನ್ನು ಹಿಂಸಾತ್ಮಕವಾಗಿ ತೋರಿಸುವ ‘ಈಠ್ಠಲಾ’ ನಾಟಕದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಾರಕರಿ ಸಂಪ್ರದಾಯದವರು ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಮಹಾರಾಷ್ಟ್ರ ಸರಕಾರದ ‘ರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿ’ಯು ೮ ಜೂನ್ ೨೦೨೬ ರಂದು ಅಧಿಕೃತ ಪತ್ರವನ್ನು ಹೊರಡಿಸಿದ್ದು, ‘ವಾರಕರಿ ಸಂಪ್ರದಾಯಕ್ಕಾಗುವ ಅಪಮಾನವನ್ನು ತಡೆಯಲು ನಾಟಕದಲ್ಲಿನ ಎಲ್ಲಾ ಆಕ್ಷೇಪಾರ್ಹ ಭಾಗಗಳು, ಶ್ರೀ ವಿಠ್ಠಲನ ಮೂರ್ತಿ ಮತ್ತು ಸಂತರ ಹೆಸರುಗಳನ್ನು ತಕ್ಷಣವೇ ತೆಗೆದು ಹಾಕಬೇಕು’ ಎಂದು ನಾಟಕ ನಿರ್ಮಾಪಕರಿಗೆ ಆದೇಶಿಸಿದೆ.
೧. ರತ್ನಾಗಿರಿಯಲ್ಲಿ ನಡೆದ ೬೪ ನೇ ‘ರಾಜ್ಯ ಹವ್ಯಾಸಿ ಮರಾಠಿ ನಾಟಕ ಸ್ಪರ್ಧೆ’ಯಲ್ಲಿ ವೀರಶೈವ ಸಮಾಜ (ಲಾಂಜಾ) ನಿರ್ಮಿಸಿದ ಮತ್ತು ಅಮೋಲ್ ರೆಡೀಜ್ ಬರೆದು ನಿರ್ದೇಶಿಸಿದ ‘ಈಠ್ಠಲಾ’ ನಾಟಕ ಪ್ರದರ್ಶಿಸಲಾಯಿತು. ನಾಟಕದಲ್ಲಿನ ಪಾತ್ರಗಳಿಗೆ ‘ತುಕಾ’, ‘ಜನಾ’, ‘ನಾಮಾ’ ಎಂಬ ಸಂತರ ಹೆಸರುಗಳನ್ನಿಟ್ಟು, ಅವರ ಕೈಯಿಂದ ಕೊಲೆ ಮತ್ತು ಮಕ್ಕಳ ಹತ್ಯೆ ತೋರಿಸುವ ಮೂಲಕ ವಾರಕರಿಗಳನ್ನು ಅಪರಾಧಿಗಳನ್ನಾಗಿ ಬಿಂಬಿಸಲಾಗಿತ್ತು.
೨. ಹಿಂದೂ ಜನಜಾಗೃತಿ ಸಮಿತಿ ಮತ್ತು ವಾರಕರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿಯ ಕಾರ್ಯದರ್ಶಿ ಸಂ.ಪುಂ. ಖಾಮ್ಕರ್ ಅವರು ನಾಟಕದ ನಿರ್ಮಾಪಕರಿಗೆ ನೀಡಿದ ಆದೇಶದಲ್ಲಿ ಹೀಗೆ ಹೇಳಿದ್ದಾರೆ, ನಾಟಕದ ಪಾತ್ರಗಳಿಗೆ ನೀಡಿರುವ ಸಂತರ ಹೆಸರುಗಳನ್ನು ಬದಲಾಯಿಸಬೇಕು. ನಾಟಕದ ಶೀರ್ಷಿಕೆಯನ್ನು ಬದಲಾಯಿಸಬೇಕು. ನಾಟಕದಲ್ಲಿನ ಮುಖ್ಯ ಕುಟುಂಬವನ್ನು ‘ವಾರಕರಿ’ ಎಂದು ತೋರಿಸುವ ಬದಲಿಗೆ ಧಾರ್ಮಿಕ, ಮುಗ್ಧ ಸೇವಕ ಪರಿವಾರ ಎಂದು ತೋರಿಸಬೇಕು. ಅವರಿಂದ ಯಾವುದೇ ಕೊಲೆ ಮಾಡಿಸಬಾರದು, ಇದರಿಂದ ಯಾವುದೇ ನಿರ್ದಿಷ್ಟ ಸಂಪ್ರದಾಯದ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ರಂಗಮಂಟಪದ ಮೇಲೆ ಪ್ರತ್ಯಕ್ಷವಾಗಿ ವಿಠ್ಠಲನ ಮೂರ್ತಿ ಇಡುವುದನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿವಾದಾತ್ಮಕ ದೃಶ್ಯಗಳನ್ನು ತಪ್ಪಿಸಬೇಕು. ‘ಯಾರನ್ನೂ ಕೊಲ್ಲಬಾರದು’, ಎಂದು ವಿಠ್ಠಲ ಎಲ್ಲಾದರೂ ಬರೆದಿದ್ದಾನೆಯೇ?’ ಎಂಬ ಆಕ್ರೋಶಭರಿತ ವಾಕ್ಯವನ್ನು ಸಂಹಿತೆಯಿಂದ ಕೈಬಿಡಬೇಕು. ತಿದ್ದುಪಡಿ ಮಾಡಿದ ನಾಟಕದ ಸಂಹಿತೆ ಅನ್ನು ಅನುಮೋದನೆಗಾಗಿ ಮರುಸಲ್ಲಿಸಬೇಕು.
೩. ಸಮಿತಿಯ ನಿಯೋಗವು ಮುಂಬಯಿನಲ್ಲಿ ರಾಜ್ಯದ ಕೈಗಾರಿಕೆ ಮತ್ತು ಮರಾಠಿ ಭಾಷಾ ಸಚಿವರು ಹಾಗೂ ರತ್ನಾಗಿರಿಯ ಉಸ್ತುವಾರಿ ಸಚಿವರಾದ ಉದಯ್ ಸಾಮಂತ್ ಅವರನ್ನು ಭೇಟಿ ಮಾಡಿದಾಗ, ತಕ್ಷಣವೇ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿ ಈ ಬಗ್ಗೆ ಗಂಭೀರ ಗಮನ ಹರಿಸಿ ಆದೇಶ ನೀಡಿರುವುದಕ್ಕಾಗಿ ವಾರಕರಿ ಸಂಪ್ರದಾಯ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದೆ.
ರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿಯು ಈ ನಾಟಕಕ್ಕೆ ಅನುಮತಿ ನೀಡಿದ್ದಾದರೂ ಹೇಗೆ? – ಸುನೀಲ್ ಘನವಟ್![]() ಸಮಿತಿಯ ಮಹಾರಾಷ್ಟ್ರ ರಾಜ್ಯ ಸಂಘಟಕರಾದ ಶ್ರೀ ಸುನೀಲ್ ಘನವಟ್ ಅವರು ಈ ಕುರಿತು ಮಾತನಾಡಿ, ‘‘ಇದು ಕೇವಲ ಒಂದು ನಾಟಕದ ವಿರುದ್ಧದ ಪ್ರತಿಭಟನೆಯಲ್ಲ, ಇದು ಇಡೀ ವಾರಕರಿ ಸಂಪ್ರದಾಯ ಮತ್ತು ಹಿಂದೂಗಳ ಜಾಗೃತ ಅಸ್ಮಿತೆಗೆ ಸಿಕ್ಕ ದೊಡ್ಡ ವಿಜಯವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಮ್ಮ ಆರಾಧ್ಯ ದೈವ, ವಿಠಲ ಮೂರ್ತಿ ಮತ್ತು ಪೂಜನೀಯ ಸಂತರನ್ನು ನಿಂದಿಸುವ ಅಘೋರ ಕೆಲಸ ಈ ಆದೇಶದಿಂದಾಗಿ ಸಂಪೂರ್ಣ ನಿಂತಿದೆ; ಆದರೆ ನಮ್ಮ ಪ್ರಶ್ನೆ ಏನೆಂದರೆ, ‘ಚಲನಚಿತ್ರ ಪರಿಶೀಲನಾ ಮಂಡಳಿಯು ಇಂತಹ ನಾಟಕಕ್ಕೆ ಅನುಮತಿ ನೀಡಿದ್ದಾದರೂ ಹೇಗೆ?’ ಇನ್ಮುಂದೆ ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡುವಂತಹ ನಾಟಕಗಳಿಗೆ ಮಂಡಳಿಯು ಅನುಮತಿ ನೀಡಬಾರದು ಮತ್ತು ಇದಕ್ಕಾಗಿ ಸೂಕ್ತ ನಿಯಮಾವಳಿಗಳನ್ನು ಸಿದ್ಧಪಡಿಸಬೇಕು. ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವವರಿಗೆ ಇನ್ನು ಮುಂದೆಯೂ ಇದೇ ರೀತಿಯಾಗಿ ತಕ್ಕ ಉತ್ತರ ನೀಡಲಾಗುವುದು’’ ಎಂದರು. |

ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು! – ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ನಿಯತ್, ನೀತಿ ಮತ್ತು ನಿರ್ಣಯಗಳಿಂದ ದೇಶದ ಅಭಿವೃದ್ಧಿಗೆ ವೇಗ! – ಪ್ರಧಾನಮಂತ್ರಿ : PM Narendra Modi
‘ಶ್ರೀರಾಮನು ದಶರಥನ ಪುತ್ರನಾಗಿರಲಿಲ್ಲ !’ (ಅಂತೆ) : Prof. Bhagwan
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧನ!
ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್ಗೆ ಮಧ್ಯಂತರ ಜಾಮೀನು!