ಬರೇಲಿ (ಉತ್ತರ ಪ್ರದೇಶ)ಯಲ್ಲಿ ‘ಲವ್ ಜಿಹಾದ್’ ಪ್ರಕರಣ

ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಮಹಮ್ಮದ್ ಅರ್ಬಾಜ್ ಎಂಬಾತನು ಹಿಂದೂ ಹೆಸರನ್ನು ಹೇಳಿಕೊಂಡು ಹಿಂದೂ ಯುವತಿಯೊಬ್ಬಳನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ, ಅವಳ ಲೈಂಗಿಕ ಶೋಷಣೆ ಮಾಡಿದ್ದಾನೆ. ಆನಂತರ ಮತಾಂತರವಾಗುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನನ್ನು ದರ್ಗಾಕ್ಕೆ ಕರೆದೊಯ್ದು ಬಲವಂತವಾಗಿ ಕಲ್ಮಾ (ಅಲ್ಲಾಹನನ್ನು ಸ್ತುತಿಸುವ ವಾಕ್ಯಗಳು) ಓದಿಸಲಾಯಿತು ಎಂದು ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
೧. ತನ್ನನ್ನು ಹಿಂದೂ ಎಂದು ಹೇಳಿಕೊಂಡಿದ್ದ ವ್ಯಕ್ತಿ ವಾಸ್ತವವಾಗಿ ರೋಹ್ಲಿ ಟೋಲಾ ನಿವಾಸಿಯಾದ ಅರ್ಬಾಜ್ ಖಾನ್ ಆಗಿದ್ದು, ಆತನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬುದು ಸಂತ್ರಸ್ತೆ ಯುವತಿಗೆ ತಿಳಿದುಬಂದಿದೆ. ಯುವತಿಯು ಇದನ್ನು ವಿರೋಧಿಸಿದಾಗ, ಆತ ಆಕೆಗೆ ಥಳಿಸಲು ಪ್ರಾರಂಭಿಸಿದನು.
PS कैण्ट, बरेली – धर्म छिपाकर महिला का शोषण करने तथा धर्मांतरण के लिए दबाव बनाने के प्रकरण में वांछित अभियुक्त की गिरफ्तारी के संबंध में श्री आशुतोष शिवम क्षेत्राधिकारी नगर प्रथम, बरेली द्वारा दी गई बाइट।#UPPolice https://t.co/XKWQwHFAPZ pic.twitter.com/CSEaPBJDdw
— Bareilly Police (@bareillypolice) June 8, 2026
೨. ಅರ್ಬಾಜ್ ತನ್ನನ್ನು ಶರಾಫತ್ ಮಿಯಾ ಅವರ ದರ್ಗಾಕ್ಕೆ ಕರೆದೊಯ್ದು, ಅಲ್ಲಿ ಬಲವಂತವಾಗಿ ಕಲ್ಮಾ ಓದಿಸಿ, ನಮಾಜ್ ಮಾಡುವಂತೆ ಒತ್ತಾಯಿಸಿದನು ಎಂದು ಸಂತ್ರಸ್ತೆ ತಿಳಿಸಿದ್ದಾಳೆ. ಯುವತಿ ಇದಕ್ಕೆ ವಿರೋಧಿಸಿದಾಗ, “ನಮ್ಮದೊಂದು ದೊಡ್ಡ ಗ್ಯಾಂಗ್ ಇದ್ದು, ಹಿಂದೂ ಹುಡುಗಿಯರನ್ನು ಜಾಲಕ್ಕೆ ಸಿಲುಕಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುವುದೇ ನಮ್ಮ ಕೆಲಸ” ಎಂದು ಅರ್ಬಾಜ್ ಹೇಳಿದ್ದಾನೆ.
೩. ಅರ್ಬಾಜ್ ಜೊತೆಗೆ ಆತನ ಸ್ನೇಹಿತ ಆರಿಶ್, ಸಹೋದರಿ ಸಿಮ್ರಾನ್ ಮತ್ತು ಭಾವ ರಾಜಾ ಎಂಬುವವರು ತನಗೆ ನಿರಂತರವಾಗಿ ಕಳಂಕಿತ ಗೊಳಿಸುವ ಮತ್ತು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ವರದಿಯಲ್ಲಿ ತಿಳಿಸಿದ್ದಾಳೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!