ಆಸ್ತಿ ಲೂಟಿ ಮಾಡಲು ಹಿಂದೂ ಯುವಕನನ್ನು ಮತಾಂತರಗೊಳಿಸಿ ಆತನೊಂದಿಗೆ ವಿವಾಹ

ಶಾಮ್ಲಿ (ಉತ್ತರ ಪ್ರದೇಶ) – ಜಿಲ್ಲೆಯಲ್ಲಿ ಆಯುಷ ಮಲಿಕ ಎಂಬ 27 ವರ್ಷದ ಔಷಧ ಅಂಗಡಿ ಮಾಲೀಕನಿಗೆ ವಂಚಿಸಿ, ಹಾಗೆಯೇ ಆತನನ್ನು ಬಲವಂತವಾಗಿ ಮತಾಂತರಗೊಳಿಸಿದ ಪ್ರಕರಣದಲ್ಲಿ ಪೊಲೀಸರು ಮಹಿಳಾ ಜಿಮ್ ಟ್ರೈನರ್ ಚಾಂದಿನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಅವರನ್ನು ಬಂಧಿಸಿದ್ದಾರೆ. ಆಯುಷ ಮಲಿಕ ತನ್ನ ತಂದೆಯ ಒಬ್ಬನೇ ಮಗನಾಗಿದ್ದು, ಅವರು ಕೋಟ್ಯಧಿಪತಿಯಾಗಿದ್ದಾರೆ. ಅವರ ಆಸ್ತಿಯ ಮೇಲೆ ಕಣ್ಣಿಟ್ಟು ಚಾಂದಿನಿ ಖುರೇಷಿ ಆಯುಷ್‌ನನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದಾಳೆ ಎಂದು ಹೇಳಲಾಗುತ್ತಿದೆ.
🚨 Uttar Pradesh: Shamli "Love Jihad" Case Takes a New Turn 🚨
Gym trainer Chandni Qureshi and her father Islam Qureshi have been arrested in the alleged conversion case involving Ayush Malik, the only son of a wealthy Hindu family.
According to the complaint, Ayush was… pic.twitter.com/ahXfguWIq1
— Sanatan Prabhat (@SanatanPrabhat) June 8, 2026
1. ಸಂತ್ರಸ್ತ ಯುವಕ ಆಯುಷ ಮಲಿಕ ಸುಮಾರು 5 ವರ್ಷಗಳ ಹಿಂದೆ ‘ಖುರೇಷಿ ಪ್ಲಸ್’ ಎಂಬ ಸ್ಥಳೀಯ ಜಿಮ್‌ಗೆ ಹೋಗುತ್ತಿದ್ದನು. ಅಲ್ಲಿ 25 ವರ್ಷದ ಚಾಂದಿನಿ ಖುರೇಷಿ ತರಬೇತುದಾರಳಾಗಿ ಕೆಲಸ ಮಾಡುತ್ತಿದ್ದಳು.
2. ಚಾಂದಿನಿ ಒಂದು ವ್ಯವಸ್ಥಿತ ಸಂಚಿನ ಅಡಿಯಲ್ಲಿ ಆಯುಷ್‌ನನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದಾಳೆ ಎಂದು ಆಯುಷ್ ತಂದೆ ದೇವರಾಜ್ ಮಲಿಕ್ ಆರೋಪಿಸಿದ್ದಾರೆ. ಅಲ್ಲದೆ ಮದುವೆಯಾಗಲು ಆಕೆ ಆಯುಷ್ ಮೇಲೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ತೀವ್ರ ಒತ್ತಡ ಹೇರಿದ್ದಳು.
3. ಇಬ್ಬರೂ ನಕಲಿ ದಾಖಲೆಗಳ ಆಧಾರದ ಮೇಲೆ ದೆಹಲಿಯಲ್ಲಿ ರಹಸ್ಯವಾಗಿ ‘ನಿಕಾಹ್’ (ಇಸ್ಲಾಮಿಕ್ ಪದ್ಧತಿಯಂತೆ ಮದುವೆ) ಮಾಡಿಕೊಂಡರು. ಅದರ ನಂತರ ಆಯುಷ್‌ನ ಹೆಸರನ್ನು ಬದಲಾಯಿಸಿ ಮೊಹಮ್ಮದ್ ಅಲಿ ಎಂದು ಇಡಲಾಯಿತು.
4. ಆಯುಷ್‌ನ ಬದಲಾದ ಜೀವನಶೈಲಿಯಿಂದಾಗಿ ಕುಟುಂಬದವರಿಗೆ ಸಂಶಯ ಬಂದಿತು. ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಪ್ರತಾಪ್ ಸಿಂಗ್ ಅವರು, ಆಯುಷ್‌ಗೆ ಪಾಕಿಸ್ತಾನಿ ಧರ್ಮಪ್ರಚಾರಕ ಡಾ. ಇಸ್ರಾರ್ ಅಹ್ಮದ್ ಅವರ ಪ್ರಚೋದನಾಕಾರಿ ಭಾಷಣಗಳ ಯೂಟ್ಯೂಬ್ ವೀಡಿಯೊಗಳನ್ನು ತೋರಿಸಿ ಪ್ರಭಾವ ಬೀರಲಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
5. ಈ ಪ್ರಕರಣದಲ್ಲಿ 3 ಮೌಲ್ವಿಗಳು ಸೇರಿದಂತೆ ಒಟ್ಟು 9 ರಿಂದ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ‘ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ’ಯ ಅಡಿಯಲ್ಲಿ ಸುಲಿಗೆ (ಸೆಕ್ಷನ್ 308), ವಂಚನೆ (ಸೆಕ್ಷನ್ 318), ನಕಲಿ ದಾಖಲೆಗಳ ಸೃಷ್ಟಿ (ಸೆಕ್ಷನ್ 336, 338), ಕ್ರಿಮಿನಲ್ ಬೆದರಿಕೆ (ಸೆಕ್ಷನ್ 351) ಮುಂತಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
6. ಈ ಪ್ರಕರಣದ ಹಿಂದೆ ದೊಡ್ಡ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆಯೇ? ಎಂಬುದನ್ನು ಪತ್ತೆಹಚ್ಚಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
7. ಸ್ಥಳೀಯ ಹಿಂದೂ ಸಂಘಟನೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಪ್ರಸ್ತುತ ಪೊಲೀಸರ ಭಯ ಅಥವಾ ಒತ್ತಡದಿಂದಾಗಿ ಆಯುಷ ಮಲಿಕ ಅಜ್ಞಾತ ಸ್ಥಳಕ್ಕೆ ಹೋಗಿದ್ದು, ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ