ಪಾಕಿಸ್ತಾನದ ಬಗ್ಗೆ ಉಲ್ಟಾ ಹೊಡೆತ ಅಮೆರಿಕ!
ಅಮೆರಿಕದ ಗುಪ್ತಚರ ಇಲಾಖೆ ಮೂರು ತಿಂಗಳ ಹಿಂದೆಯೇ ಪಾಕ್ ಕ್ಷಿಪಣಿಗಳ ಬಗ್ಗೆ ಎಚ್ಚರಿಕೆ ನೀಡಿತ್ತು.

ಸಿಂಗಾಪುರ – ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮವನ್ನು ಅಮೆರಿಕಕ್ಕೆ ಅಪಾಯ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಸಿಂಗಾಪುರದಲ್ಲಿ ಆಯೋಜಿಸಲಾಗಿದ್ದ ‘ಶಾಂಗ್ರಿ-ಲಾ ಡೈಲಾಗ್’ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಹೆಗ್ಸೆತ್ ಅವರ ಈ ಹೇಳಿಕೆಯು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅಮೆರಿಕದ ಗುಪ್ತಚರ ಇಲಾಖೆ ನೀಡಿದ್ದ ವರದಿಗಿಂತ ಸಂಪೂರ್ಣ ಉಲ್ಟಾ ಆಗಿದೆ. ಆ ವರದಿಯಲ್ಲಿ ಪಾಕಿಸ್ತಾನದ ದೀರ್ಘ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವು ಅಮೆರಿಕಕ್ಕೆ ಸಂಭಾವ್ಯ ಅಪಾಯವನ್ನು ತಂದೊಡ್ಡಬಹುದು ಎಂದು ಹೇಳಲಾಗಿತ್ತು.
ಅಮೆರಿಕದ ‘ನ್ಯಾಷನಲ್ ಇಂಟೆಲಿಜೆನ್ಸ್’ ನಿರ್ದೇಶಕಿ ತುಳಸಿ ಗಬಾರ್ಡ್ ಅವರು ಸಂಸತ್ತಿನ ‘ಇಂಟೆಲಿಜೆನ್ಸ್ ಕಮಿಟಿ’ಯ ಮುಂದೆ ಪ್ರಕಟಿಸಿದ ವರದಿಯಲ್ಲಿ ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಇರಾನ್ ದೇಶಗಳೊಂದಿಗೆ ಪಾಕಿಸ್ತಾನವನ್ನು ಸಹ ಉಲ್ಲೇಖಿಸಿದ್ದರು. ಅಮೆರಿಕದ ಭೂಭಾಗವನ್ನು ತಮ್ಮ ವ್ಯಾಪ್ತಿಗೆ ತರುವಂತಹ ಕ್ಷಿಪಣಿ ತಂತ್ರಜ್ಞಾನವನ್ನು ಈ ದೇಶಗಳು ಅಭಿವೃದ್ಧಿಪಡಿಸುತ್ತಿವೆ ಎಂದು ಗಬಾರ್ಡ್ ಹೇಳಿದ್ದರು.
ಪಾಕಿಸ್ತಾನದ ಸೇನಾ ನಾಯಕತ್ವದ ಪ್ರಶಂಸೆ
ಹೆಗ್ಸೆತ್ ಅವರು ಪಾಕಿಸ್ತಾನದ ಮಿಲಿಟರಿ ಮತ್ತು ನಾಗರಿಕ ನಾಯಕತ್ವವನ್ನು ಸಹ ಪ್ರಶಂಸಿಸಿದರು. ಅವರು ಮಾತನಾಡುತ್ತಾ, ‘ನಾನು ಇಲ್ಲಿ ಭಾರತವನ್ನು ಉಲ್ಲೇಖಿಸಿದ್ದೇನೆ; ಆದರೆ ಅಷ್ಟೇ ಸಹಜವಾಗಿ ನಾನು ಪಾಕಿಸ್ತಾನವನ್ನು ಕೂಡ ಉಲ್ಲೇಖಿಸಬಹುದಿತ್ತು. ಶಾಂತಿ ಮಾತುಕತೆಯಲ್ಲಿ ಫೀಲ್ಡ್ ಮಾರ್ಷಲ್ ಮತ್ತು ಪ್ರಧಾನ ಮಂತ್ರಿಗಳು ವಹಿಸುತ್ತಿರುವ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಹೆಗ್ಸೆತ್ ಅವರು, ‘ಭಾರತವು ಒಂದು ಶಕ್ತಿಶಾಲಿ ದೇಶವಾಗಿದ್ದು, ಅದು ತನ್ನ ಸೈನ್ಯವನ್ನು ಆಧುನೀಕರಿಸುತ್ತಿದೆ. ಹಾಗೆಯೇ ಭಾರತವು ಉನ್ನತ ಮಟ್ಟದ ಮಿಲಿಟರಿ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ದೊಡ್ಡ ಕೈಗಾರಿಕಾ ಸಾಮರ್ಥ್ಯ ಮತ್ತು ಮೂಲಸೌಕರ್ಯಗಳನ್ನು ಸಹ ನಿರ್ಮಿಸುತ್ತಿದೆ’, ಎಂದು ಹೇಳಿದ್ದರು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid