ಪೊಲೀಸ್ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಹನುಮಾನ್ ಚಾಲೀಸಾ ಪಠಣ
ಭೀಮ್ ಆರ್ಮಿ ಸಂಘಟನೆಯ ಮೇಲೆ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಆರೋಪ

ಸಹಾರನ್‌ಪುರ (ಉತ್ತರಪ್ರದೇಶ) – ಇಲ್ಲಿ ದೇವಸ್ಥಾನವೊಂದರ ಅರ್ಚಕರ ಮೇಲೆ ಪೋಕ್ಸೊ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಮೊಕದ್ದಮೆ ದಾಖಲಾದ ನಂತರ ಭೀಮ್ ಆರ್ಮಿ ಸಂಘಟನೆಯ ವಿರುದ್ಧ ಬ್ರಾಹ್ಮಣ ಹಾಗೂ ಸವರ್ಣ ಸಮಾಜದ ಸಾವಿರಾರು ಜನರು ರಸ್ತೆಗಿಳಿದರು. ಪ್ರತಿಭಟನಾಕಾರರು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಹನುಮಾನ್ ಚಾಲೀಸಾ ಪಠಿಸಿದರು ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದರು.
ಇದು ಸಂಪೂರ್ಣವಾಗಿ ಒಂದು ಸುಯೋಜಿತ ಪಿತೂರಿಯಾಗಿದೆ ಎಂದು ಓರ್ವ ಬ್ರಾಹ್ಮಣರು ಹೇಳಿದರು. ೪೫ ವರ್ಷದ ಅರ್ಚಕ ವಿಜಯ ಶಾಸ್ತ್ರಿ ಅವರನ್ನು ಸುಳ್ಳು ಆರೋಪದಡಿ ಸಿಲುಕಿಸಲಾಗಿದೆ. ಕೆಲವು ಜನರಿಗೆ ದೇವಸ್ಥಾನದ ಅಮೂಲ್ಯವಾದ ಆಸ್ತಿಯನ್ನು ವಶಪಡಿಸಿಕೊಳ್ಳುವ ಆಸೆಯಿದೆ. ಅರ್ಚಕರನ್ನು ಹೆದರಿಸಿ ಅಲ್ಲಿಂದ ಓಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವ ಹುಡುಗಿಯ ಹೆಸರನ್ನು ತೆಗೆದುಕೊಳ್ಳಲಾಗುತ್ತಿದೆಯೋ, ಆ ಹುಡುಗಿ ದೇವಸ್ಥಾನಕ್ಕೆ ಆಟವಾಡಲು ಬರುತ್ತಿದ್ದಳು. ಅರ್ಚಕರು ಕೇವಲ ಮಕ್ಕಳಿಗೆ ಪ್ರಸಾದ ನೀಡುತ್ತಿದ್ದರು.
ದೇವಸ್ಥಾನಗಳ ಬಾಗಿಲು ಬಂದ್, ಸಮಾಜದಲ್ಲಿ ತೀವ್ರ ಆಕ್ರೋಶ
ಅರ್ಚಕರ ವಿರುದ್ಧ ದಾಖಲಾಗಿರುವ ದೂರನ್ನು ಪ್ರತಿಭಟಿಸಿ ಸಹಾರನ್‌ಪುರದ ಅನೇಕ ದೇವಸ್ಥಾನಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ದೇವಸ್ಥಾನದಲ್ಲಿ ಪೂಜೆ ಮಾಡಿ ಇಂತಹ ಸುಳ್ಳು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದರೆ ಅರ್ಚಕರು ಸೇವೆ ಹೇಗೆ ಮಾಡುತ್ತಾರೆ ? ಎಂದು ಸವರ್ಣ ಸಮಾಜದ ಜನರು ಹೇಳುತ್ತಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಭೀಮ್ ಆರ್ಮಿಯ ಕೆಲವು ಕಾರ್ಯಕರ್ತರನ್ನು ನೋಡಿ ಜನರು ಇನ್ನಷ್ಟು ಕೆರಳಿದರು. ಭೀಮ್ ಆರ್ಮಿಯ ಕೆಲವು ಜನರೇ ಎಲ್ಲಾ ಕಡೆಗೆ ಹೋಗಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತದನಂತರ ರಾಜಿ ಮಾಡಿಕೊಳ್ಳುವ ಹೆಸರಿನಲ್ಲಿ ಅವರು ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡುತ್ತಾರೆ. ಇಂತಹ ಮಾರ್ಗಗಳ ಮೂಲಕ ಸಂಪೂರ್ಣ ದೇಶದಲ್ಲಿ ಸವರ್ಣ ಸಮಾಜಕ್ಕೆ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಒತ್ತಡಕ್ಕೆ ಮಣಿದು ತಪ್ಪು ಕ್ರಮ ಕೈಗೊಂಡರೆ ಸಂಪೂರ್ಣ ಸಮಾಜವು ರಸ್ತೆಗಿಳಿಯುತ್ತದೆ ಮತ್ತು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ