ಭಟ್ಕಳದಲ್ಲಿ ಹಿಂದೂಗಳು ಪುನರ್ನಿರ್ಮಾಣ ಮಾಡಿದ್ದ ‘ಮೂರಿನಕಟ್ಟೆ’ಯನ್ನು ಮುಸಲ್ಮಾನರಿಂದ ಧ್ವಂಸ !

ಪೊಲೀಸರ ಮೇಲೆ ಕಲ್ಲು ತೂರಾಟ

(ಮೂರಿನಕಟ್ಟೆ ಅಂದರೆ ದೇವರ ಬುತ್ತಿಯನ್ನಿಡಲು ಕಟ್ಟಿರುವ ಒಂದು ಸಣ್ಣ ದೇವಸ್ಥಾನ)

ಭಟ್ಕಳ – ಇಲ್ಲಿನ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತರು ೨೪ ಮೇಯ ರಾತ್ರಿ ವೆಂಕಟಾಪುರದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಪುನರ್ನಿರ್ಮಾಣ ಮಾಡಿದ್ದ ಮೂರಿನಕಟ್ಟೆಯನ್ನು ರಾತ್ರಿಯ ವೇಳೆ ಅಲ್ಲಿ ಜಮಾಯಿಸಿದ ಮುಸಲ್ಮಾನ ಯುವಕರು ಕೆಡವಿದರು. ಆದ್ದರಿಂದ ಅಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ.

೧. ಕಳೆದ ನೂರಾರು ವರ್ಷಗಳಿಂದ ಹಿಂದೂಗಳ ಧಾರ್ಮಿಕ ಭಾವನೆಯ ಪ್ರತೀಕವಾಗಿರುವ ಈ ಜಾಗವನ್ನು ಹೆದ್ದಾರಿಗಾಗಿ ಹಿಂದೂಗಳು ಸ್ವತಃ ತೆರವುಗೊಳಿಸಿ ಕೊಟ್ಟಿದ್ದರು. ಹೆದ್ದಾರಿ ಇಲಾಖೆಯು ಮೂರಿನಕಟ್ಟೆಯನ್ನು ಬೇರೆಡೆ ಕಟ್ಟಿಸಿಕೊಡುವ ಆಶ್ವಾಸನೆ ನೀಡಿತ್ತು; ಆದರೆ ಅನೇಕ ಬಾರಿ ಇಲಾಖೆಗೆ ಹೇಳಿದರೂ ದೇವಸ್ಥಾನವನ್ನು ಬೇರೆಡೆ ಪುನರ್ನಿರ್ಮಾಣ ಮಾಡಲಿಲ್ಲ.

೨. ಕೊನೆಗೆ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಒಟ್ಟು ಸೇರಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮೂರಿನಕಟ್ಟೆಯನ್ನು ಕಟ್ಟಿದರು.

೩. ಮುಸಲ್ಮಾನ ನಾಯಕರು ಮಾತ್ರ ಕಾರಣವಿಲ್ಲದಿದ್ದರೂ ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅದನ್ನು ತೆರವುಗೊಳಿಸಲು ಬೇಡಿಕೆ ಇಟ್ಟರು. ಆಮೇಲೆ ರಾತ್ರಿ ನೂರಾರು ಮುಸಲ್ಮಾನರು ಒಟ್ಟು ಸೇರಿ ಅದನ್ನು ಕೆಡವಿದರು. ಹಾಗೆಯೇ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಲ್ಪ ಸಮಯದವರೆಗೆ ಬಂದ್ ಮಾಡಿ ಘೋಷಣೆಗಳನ್ನು ಕೂಗಿದರು. ಇದರಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶಗೊಂಡರು. (ಕೇವಲ ಆಕ್ರೋಶಗೊಂಡರೆ ಪ್ರಯೋಜನವಿಲ್ಲ. ಹಿಂದೂಗಳ ಸಿಟ್ಟು ಹೇಗಿರಬೇಕೆಂದರೆ, ಅದರಿಂದ ಹಿಂದೂವಿರೋಧಿಗಳು ಭಯಭೀತರಾಗಬೇಕು. ಇಲ್ಲದಿದ್ದರೆ ಬಾಂಗ್ಲಾದೇಶ-ಪಾಕಿಸ್ತಾನದಲ್ಲಿಯೂ ಹಿಂದೂಗಳ ದೇವಸ್ಥಾನಗಳನ್ನು ಕೆಡವುತ್ತಾರೆ ಮತ್ತು ಭಾರತದ ಕರ್ನಾಟಕದಲ್ಲಿಯೂ ! – ಸಂಪಾದಕರು)

೪. ದೇವಸ್ಥಾನದ ಪರಿಸರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೂ ಮುಸಲ್ಮಾನ ನಾಯಕರು ಆಕ್ರಮಣ ಮಾಡಿದರು. ಆದ್ದರಿಂದ ಭಟ್ಕಳದಲ್ಲಿ ಉದ್ವಿಗ್ನತೆಯ ಸ್ಥಿತಿ ನಿರ್ಮಾಣವಾಯಿತು.

೫. ಪೊಲೀಸರು ಮುಸಲ್ಮಾನರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಆರೋಪಿಸಿ ಹಿಂದುತ್ವನಿಷ್ಠ ಕಾರ್ಯಕರ್ತರು ಭಟ್ಕಳ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ತಡರಾತ್ರಿಯವರೆಗೆ ಪ್ರತಿಭಟನೆ ಮಾಡಿದರು. ಭಾಜಪ, ಹಾಗೆಯೇ ಹಿಂದೂ ಜಾಗರಣ ವೇದಿಕೆಯೊಂದಿಗೆ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿವೆ.

೬. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈ ಪ್ರಕರಣದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಆರೋಪಿಗಳ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಭಟ್ಕಳದಲ್ಲಿ ೩ ದಿನ ನಿಷೇಧಾಜ್ಞೆ !

ಮುನ್ನೆಚ್ಚರಿಕೆಯ ಕ್ರಮವಾಗಿ ೨೭ ಮೇಯವರೆಗೆ ಪೊಲೀಸ್ ಆಡಳಿತವು ಭಟ್ಕಳ ನಗರ, ಹಾಗೆಯೇ ಅದಕ್ಕೆ ಹೊಂದಿಕೊಂಡಿರುವ ಜಾಲಿ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಮುಸಲ್ಮಾನರು ಮೂರಿನಕಟ್ಟೆ ಕೆಡವಿರುವ ಕೃತ್ಯ ‘ಕ್ಷಮಿಸಲಾರ್ಹ’ ! – ಭಾಜಪ

ಭಾಜಪ ನಾಯಕ ಗೋವಿಂದ ನಾಯ್ಕ ಅವರು ಈ ಕುರಿತು ಮಾತನಾಡುತ್ತಾ, ಮೂರಿನಕಟ್ಟೆಯು ಅಚಾನಕ್ಕಾಗಿ ನಿರ್ಮಾಣವಾಗಿಲ್ಲ. ಹಿಂದಿನಿಂದಲಿದ್ದ ಈ ದೇವಸ್ಥಾನವನ್ನು ಪುನಃ ಕಟ್ಟಲಾಗಿತ್ತು; ಆದರೆ ಅದನ್ನು ತೆರವುಗೊಳಿಸುವ ಕೃತ್ಯವು ಅಕ್ಷಮ್ಯವಾಗಿದೆ. ಇದರ ವಿರುದ್ಧ ಉಗ್ರ ಸ್ವರೂಪದ ಪ್ರತಿಭಟನೆ ಮಾಡುವೆವು, ಎಂಬ ಎಚ್ಚರಿಕೆಯನ್ನೂ ನಾಯ್ಕ ಅವರು ಈ ಸಮಯದಲ್ಲಿ ನೀಡಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಂತೆಯೇ ಆಡಳಿತವಿರುವ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದಕ್ಕಿಂತ ಬೇರೆ ಇನ್ನೇನಾಗುವುದು ? ವ್ಯತ್ಯಾಸ ಕೇವಲ ಇಷ್ಟೇ, ಪಾಕಿಸ್ತಾನದಲ್ಲಿನ ಪೊಲೀಸರು ಮುಸಲ್ಮಾನರೇ ಆಗಿರುವುದರಿಂದ ಅವರ ಮೇಲೆ ಅಲ್ಲಿ ಕಲ್ಲು ತೂರಾಟವಾಗುವುದಿಲ್ಲ. ರಾಜ್ಯದಲ್ಲಿ ಮಾತ್ರ ಕಾನೂನು-ಸುವ್ಯವಸ್ಥೆಗೆ ಬೆಲೆಯೇ ಇಲ್ಲದಿರುವ ಮುಸಲ್ಮಾನರು ಬಹುಸಂಖ್ಯಾತ ಹಿಂದೂ ಪೊಲೀಸರ ಮೇಲೂ ಆಕ್ರಮಣ ಮಾಡುತ್ತಾರೆ !