ರತ್ನಗಿರಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಪತ್ರಿಕಾಗೋಷ್ಠಿ

ರತ್ನಾಗಿರಿ – ಹಿಂದವೀ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಸಿಂಧುದುರ್ಗ ಕೋಟೆಯಲ್ಲಿರುವ ‘ಶ್ರೀ ಶಿವರಾಜೇಶ್ವರ ಮಂದಿರ’ಕ್ಕೆ ಬರೋಬ್ಬರಿ ೫೫ ವರ್ಷಗಳ ನಂತರ ಸರಕಾರವು ವಾರ್ಷಿಕ ನಿಧಿಯನ್ನು ೩ ಸಾವಿರ ರೂಪಾಯಿಗಳಿಂದ ೧ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಆದಾಗ್ಯೂ ಈ ನಿಧಿಯು ಕ್ರೂರಿ ಔರಂಗಜೇಬನ ಗೋರಿಯ ನಿರ್ವಹಣಾ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ಔರಂಗಜೇಬನ ಸಮಾಧಿಯ ನಿರ್ವಹಣೆಗಾಗಿ ವರ್ಷಕ್ಕೆ ೨ ಲಕ್ಷ ೫೫ ಸಾವಿರ ೧೬೦ ರೂಪಾಯಿಗಳು (೨೦೨೨-೨೩) ಮತ್ತು ಮಹಾರಾಷ್ಟ್ರದ ಆರಾಧ್ಯ ದೇವರಿಗೆ ಕೇವಲ ೧ ಲಕ್ಷ ರೂಪಾಯಿ ನೀಡುವುದು ಅತ್ಯಂತ ಕ್ಲೇಶದಾಯಕ ಮತ್ತು ದುರದೃಷ್ಟಕರವಾಗಿದೆ. ಇದು ಛತ್ರಪತಿ ಶಿವರಾಯರಿಗೆ ಮಾಡಿದ ಅಪಮಾನವಾಗಿದೆ. ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಹಾರಾಜರ ಮಂದಿರಕ್ಕೆ ಪ್ರತಿ ತಿಂಗಳು ೫೦ ಸಾವಿರ ರೂಪಾಯಿ ಅನುದಾನವನ್ನು ನೀಡುವಂತೆ ನಿರ್ದೇಶನ ನೀಡಿದ್ದರು; ಹಾಗಿದ್ದರೂ ಈ ಅನುದಾನ ಇಷ್ಟೊಂದು ಕಡಿಮೆಯಾಗಿದ್ದು ಹೇಗೆ? ಆಡಳಿತಾಧಿಕಾರಿಗಳ ದೃಷ್ಟಿಯಲ್ಲಿ ಛತ್ರಪತಿ ಶಿವರಾಯರ ಮೌಲ್ಯವು ಔರಂಗಜೇಬನಿಗಿಂತ ಕಡಿಮೆಯಿದೆಯೇ, ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಂಯೋಜಕರಾದ ಶ್ರೀ. ಗೋವಿಂದ ಭಾರದ್ವಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶಿತ ಪ್ರಶ್ನೆಯನ್ನು ಎತ್ತಿದರು.
ರತ್ನಾಗಿರಿಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಶಿವಚರಿತ್ರೆ ಕಥೆಗಾರರಾದ ಶ್ರೀ. ಅರವಿಂದ ಬಾರಸ್ಕರ, ‘ಕೋಟೆ ಕೊತ್ತಲಗಳು ಸಂವರ್ಧನ ಪ್ರತಿಷ್ಠಾನ, ಮಹಾರಾಷ್ಟ್ರ ರಾಜ್ಯ’ದ ರತ್ನಗಿರಿ ವಿಭಾಗದ ಪ್ರಮುಖರಾದ ಶ್ರೀ. ಮಯೂರ ಭೀತಳೆ, ‘ಕೋಟೆ ಕೊತ್ತಲಗಳು ಸಂವರ್ಧನ ಪ್ರತಿಷ್ಠಾನ, ಮಹಾರಾಷ್ಟ್ರ ರಾಜ್ಯದ ಜಿಲ್ಲಾಧ್ಯಕ್ಷರಾದ ಶ್ರೀ. ದೀಪೇಶ ವಾರಂಗ, ನ್ಯಾಯವಾದಿ ಅಮಿತ ಕಾಟೆ, ‘ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ’ದ ಶ್ರೀ. ಸೋಹಮ ಖಾನವಿಲಕರ, ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಸಂಜಯ ಜೋಶಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಳೆದ ಹಲವು ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿ, ಹಿಂದೂ ವಿಧಿಜ್ಞ ಪರಿಷತ್ ಮತ್ತು ಶಿವಪ್ರೇಮಿಗಳು ಈ ನಿಧಿಯನ್ನು ಹೆಚ್ಚಿಸಲು ಹೋರಾಟ ನಡೆಸುತ್ತಿದ್ದಾರೆ.
ಕ್ರೂರಿ ಔರಂಗಜೇಬನ ಗೋರಿಗೆ ನೀಡಲಾಗುವ ನಿಧಿಯನ್ನು ತಕ್ಷಣವೇ ನಿಲ್ಲಿಸಿ! – ಸಂಜಯ ಜೋಶಿ, ಮಹಾರಾಷ್ಟ್ರ ಮಂದಿರ ಮಹಾಸಂಘ
ಹೆಸರಿಗೆ ‘ಛತ್ರಪತಿ ಶಿವರಾಯ’ ಎಂದು ಹೇಳುತ್ತಾ ಜಾತ್ಯತೀತತೆಯ ಡೋಲು ಬಾರಿಸುವ ಹಲವು ಸರಕಾರಗಳು ಈ ಹಿಂದೆ ಬಂದು ಹೋಗಿವೆ; ಆದರೆ ಯಾರೂ ಏನನ್ನೂ ಮಾಡಲಿಲ್ಲ. ಈಗಿನ ಹಿಂದುತ್ವವಾದಿ ಸರಕಾರವು ಛತ್ರಪತಿ ಶಿವರಾಯರ ವಿಚಾರಗಳ ಸರಕಾರವಾಗಿದೆ. ಆದ್ದರಿಂದ ಈ ನಿಧಿಯಲ್ಲಿ ಹೆಚ್ಚಳ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಶ್ಲಾಘನೀಯ ನಿರ್ಧಾರವಾಗಿದೆ; ಆದರೆ ಈ ಹೆಚ್ಚುವರಿ ನಿಧಿಯೂ ಸಹ ತೀರಾ ಅಲ್ಪವಾಗಿದೆ ಎಂಬುದನ್ನು ನಾವು ಸರಕಾರದ ಗಮನಕ್ಕೆ ತರಲು ಬಯಸುತ್ತೇವೆ. ಮಹಾರಾಜರ ಮಂದಿರವನ್ನು ನಿರ್ಲಕ್ಷಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಮಹಾರಾಷ್ಟ್ರದ ಮೇಲೆ ದಂಡೆತ್ತಿ ಬಂದ ಆಕ್ರಮಣಕಾರಿ ಕ್ರೂರಿ ಔರಂಗಜೇಬನ ಗೋರಿಗೆ ನೀಡಲಾಗುತ್ತಿರುವ ನಿಧಿಯನ್ನು ತಕ್ಷಣವೇ ನಿಲ್ಲಿಸಿ, ಆ ನಿಧಿಯನ್ನೂ ಶಿವಕಾರ್ಯಕ್ಕಾಗಿ ಬಳಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ.
ಛತ್ರಪತಿ ಶಿವಾಜಿ ಮಹಾರಾಜರ ಮಂದಿರದ ಕುರಿತು ಆಡಳಿತ ವ್ಯವಸ್ಥೆಯ ಉದಾಸೀನತೆಯು ದುಃಖದಾಯಕವಾಗಿದೆ! – ದೀಪೇಶ ವಾರಂಗ, ಜಿಲ್ಲಾಧ್ಯಕ್ಷರು, ಗಡ ಕಿಲ್ಲೆ ಸಂವರ್ಧನ ಪ್ರತಿಷ್ಠಾನ, ಮಹಾರಾಷ್ಟ್ರ ರಾಜ್ಯ
ಛತ್ರಪತಿ ರಾಜಾರಾಮ ಮಹಾರಾಜರು ಸ್ವತಃ ನಿರ್ಮಿಸಿದ ಸಿಂಧುದುರ್ಗ ಕೋಟೆಯಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಮಂದಿರಕ್ಕೆ ಸರಕಾರವು ಅಪೇಕ್ಷಿತ ನಿಧಿಯನ್ನು ಒದಗಿಸದಿದ್ದರೆ, ಇದಕ್ಕಿಂತ ಮಹಾರಾಷ್ಟ್ರದ ದುರದೃಷ್ಟ ಬೇರೇನಿದೆ? ಜಗತ್ತಿನಾದ್ಯಂತ ಯಾವ ಮಹಾರಾಜರ ಯುದ್ಧತಂತ್ರವನ್ನು ಕಲಿಸಲಾಗುತ್ತದೆಯೋ ಮತ್ತು ಅಧ್ಯಯನ ಮಾಡಲಾಗುತ್ತದೆಯೋ, ಅಂತಹ ಛತ್ರಪತಿ ಶಿವಾಜಿ ಮಹಾರಾಜರ ಮಂದಿರದ ಕುರಿತು ಆಡಳಿತದ ಉದಾಸೀನತೆಯು ದುಃಖದಾಯಕವಾಗಿದೆ. ಹಿಂದವೀ ಸ್ವರಾಜ್ಯದ ಸ್ಮಾರಕಗಳೆಂದರೆ ಛತ್ರಪತಿ ಶಿವರಾಯರ ಕೋಟೆ-ಕೊತ್ತಲಗಳಾಗಿವೆ. ಅವುಗಳ ಸಂರಕ್ಷಣೆಗೆ ಶಿವಪ್ರೇಮಿ ಸಂಘಟನೆಗಳು ಪ್ರಯತ್ನಿಸುತ್ತಿವೆ; ಆದರೆ ಅದಕ್ಕಾಗಿ ಸರಕಾರವೂ ಸಹ ಮುಂಚೂಣಿಗೆ ಬಂದು ಸಹಾಯ ಮಾಡಬೇಕು. ಅಗತ್ಯವಿರುವ ನಿಧಿಯನ್ನು ಒದಗಿಸಿಕೊಡಬೇಕು.
ಛತ್ರಪತಿ ಶಿವಾಜಿ ಮಹಾರಾಜರ ಮಂದಿರಕ್ಕೆ ಅತ್ಯಲ್ಪ ನಿಧಿ ದೊರೆಯುತ್ತಿರುವುದು ಖಂಡನೀಯ! – ನ್ಯಾಯವಾದಿ ಅಮಿತ ಕಾಟೆ, ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ
ಯಾವ ಛತ್ರಪತಿ ಶಿವಾಜಿ ಮಹಾರಾಜರಿಂದಾಗಿ ನಮ್ಮ ಗುರುತು ಹಿಂದೂ ಎಂದು ಉಳಿದಿದೆಯೋ, ಯಾರಿಂದಾಗಿ ಹಿಂದೂಗಳ ಮಂದಿರಗಳು ಸುರಕ್ಷಿತವಾಗಿ ಉಳಿದಿವೆಯೋ, ಅವರ ಮಂದಿರಕ್ಕಾಗಿ ಸರಕಾರದ ಮುಂದೆ ಕೈಯೊಡ್ಡಬೇಕಾಗಿ ಬಂದಿರುವುದು ದುರದೃಷ್ಟಕರವಾಗಿದೆ. ಒಂದೆಡೆ ಸರಕಾರವು ಸಮುದ್ರದಲ್ಲಿ ಛತ್ರಪತಿ ಶಿವರಾಯರ ಸ್ಮಾರಕಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ; ಆದರೆ ಮತ್ತೊಂದೆಡೆ ಛತ್ರಪತಿ ಶಿವಾಜಿ ಮಹಾರಾಜರ ಮಂದಿರಕ್ಕೆ ಅತ್ಯಲ್ಪ ನಿಧಿಯನ್ನು ನೀಡುತ್ತಿರುವುದು ಖಂಡನೀಯವಾಗಿದೆ. ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಛತ್ರಪತಿ ಶಿವರಾಯರ ಸ್ಮಾರಕಕ್ಕೆ ನಿತ್ಯ ಪೂಜೆ ಮಾಡಲಾಗುತ್ತದೆ. ಅದಕ್ಕಾಗಿ ಪ್ರತಿದಿನ ಕೇವಲ ಒಂದು ಹಾರದ ಲೆಕ್ಕದಂತೆ ವರ್ಷದ ವೆಚ್ಚವೇ ಸುಮಾರು ೩ ಸಾವಿರದ ೬೦೦ ರೂಪಾಯಿಗಳು ಬರುತ್ತದೆ. ಇನ್ನು ಸರಿ ಪಡಿಸುವುದು, ನವೀಕರಣ, ಸ್ವಚ್ಛತೆ ಇತ್ಯಾದಿ ವಿಷಯಗಳಿಗೆ ಬರುವ ವೆಚ್ಚ ಬೇರೆಯೇ ಇದೆ. ಆದ್ದರಿಂದ ಸರಕಾರವು ಛತ್ರಪತಿ ಶಿವಾಜಿ ಮಹಾರಾಜರ ಮಂದಿರಕ್ಕೆ ನಿಧಿಯನ್ನು ಹೆಚ್ಚಿಸಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು