ಮೂಲತಃ ಈ ಅಕ್ರಮ ಕಾಮಗಾರಿಯು ಆಗಿದ್ದಾದರೂ ಹೇಗೆ ? ರಾಜ್ಯದಲ್ಲಿ ಭಾಜಪದ ಸರಕಾರವಿರುವಾಗ ಹೀಗೆ ಆಗಬಾರದು ಮತ್ತು ಆದರೆ, ಆಡಳಿತವು ತಕ್ಷಣವೇ ಅದನ್ನು ಕೆಡವಬೇಕು, ಅದಕ್ಕಾಗಿ ಶಾಸಕರು ಏಕೆ ಕೃತಿ ಮಾಡಬೇಕಾಗುತ್ತದೆ ?

ನವದೆಹಲಿ – ದೆಹಲಿಯ ಪೀತಮಪುರಾ ಪರಿಸರದಲ್ಲಿ ರಾಮಲೀಲಾ ಮೈದಾನದ ಹತ್ತಿರವಿರುವ ಅನಧಿಕೃತ ನೂರೆ ಇಲಾಹಿ ಮಸೀದಿಯ ಹೊರಗೆ ಹಿಂದೂ ಸಂಘಟನೆಗಳು ಆಂದೋಲನ ಮಾಡುತ್ತಾ ಇಲ್ಲಿ ಕಟ್ಟುತ್ತಿದ್ದ ಅನಧಿಕೃತ ಮದರಸಾದ ಗೋಡೆಗಳನ್ನು ಕೆಡವಿದೆ. ಭಾಜಪದ ಶಾಸಕ ಕರನೈಲ ಸಿಂಗ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಭೂಮಿಯ ಮೇಲೆ ಈ ಮಸೀದಿಯನ್ನು ಕಟ್ಟಿದ್ದು ಅದನ್ನು ಕೆಡವಲು ನ್ಯಾಯಾಲಯವು ಆದೇಶ ನೀಡಿದೆ ಎಂದು ಶಾಸಕ ಸಿಂಗ್ ಈ ಸಮಯದಲ್ಲಿ ದಾವೆ ಮಾಡಿದರು. ಇದೇ ಭೂಮಿಯ ಮೇಲೆ ಮಸೀದಿಯ ಹತ್ತಿರ ಮದರಸಾವನ್ನು ಕಟ್ಟುತ್ತಿದ್ದರು. ಇದಕ್ಕೆ ಸಿಂಗ್ ಇದಕ್ಕೂ ಮುನ್ನವೇ ವಿರೋಧ ಮಾಡಿದ್ದರು. ಈಗ ಅದರ ಕಾಮಗಾರಿ ಮಾಡುತ್ತಿರುವುದರಿಂದ ಅವರು ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ಹೋಗಿ ಅದನ್ನು ಕೆಡವಿದರು. ಸಿಂಗ್ ಸ್ವತಃ ಕೈಯಲ್ಲಿ ಸುತ್ತಿಗೆ ಹಿಡಿದಿದ್ದರು.
‘ಸರಕಾರಿ ಭೂಮಿಯ ಮೇಲೆ ಯಾವುದೇ ಒತ್ತುವರಿಯನ್ನು ಸಹಿಸುವುದಿಲ್ಲ. ಈ ಕಾಮಗಾರಿಯು ಅಕ್ರಮವಾಗಿದೆ ಮತ್ತು ಪ್ರಾಧಿಕಾರದ ಭೂಮಿಯ ಮೇಲೆ ಯಾವುದೇ ರೀತಿಯ ಅಕ್ರಮ ಕೃತ್ಯಗಳನ್ನು ಮುಂದುವರಿಯಲು ಬಿಡುವುದಿಲ್ಲ’, ಎಂದು ಅವರು ಈ ಸಮಯದಲ್ಲಿ ಹೇಳಿದರು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath