ರಾಯಗಢ ಜಿಲ್ಲೆಯ ಮಂದಿರ ಟ್ರಸ್ಟಿಗಳ ಎಚ್ಚರಿಕೆ

ರಾಯಗಢ, ಮೇ 21 (ವಾರ್ತೆ ) – ಮಹಾರಾಷ್ಟ್ರ ಸರಕಾರದ ಕಂದಾಯ ಮತ್ತು ಅರಣ್ಯ ಇಲಾಖೆಯು ಪ್ರಸ್ತಾಪಿಸಿರುವ ‘ಮಹಾರಾಷ್ಟ್ರ ದೇವಸ್ಥಾನ ಇನಾಂ ನಿರ್ಮೂಲನೆ ಕರಡು ಕಾಯ್ದೆ, 2026’ ರಾಜ್ಯದ ಸಾವಿರಾರು ಹಿಂದೂ ದೇವಸ್ಥಾನಗಳ ಸ್ವಾಯತ್ತ ಅಸ್ತಿತ್ವ ಮತ್ತು ಅವುಗಳ ಆದಾಯದ ಮೂಲಗಳನ್ನು ಬುಡಸಮೇತ ಕಿತ್ತೊಗೆಯುವಂತಿದೆ. ಈ ಕಾಯ್ದೆಯ ಕರಡಿನಲ್ಲಿ ಅತ್ಯಂತ ಗಂಭೀರ ಕಾನೂನು ದೋಷಗಳಿದ್ದು, ಹಿಂದೂ ಧರ್ಮದ ಧಾರ್ಮಿಕ ಮತ್ತು ಆಸ್ತಿ ಹಕ್ಕುಗಳ ಮೇಲೆ ನೇರ ಪ್ರಹಾರ ಮಾಡುತ್ತದೆ.

ಈ ಪ್ರಜಾಪ್ರಭುತ್ವ ವಿರೋಧಿ ಕರಡನ್ನು ರಾಯಗಢ ಜಿಲ್ಲೆಯ ಹಲವು ಮಂದಿರಗಳ ಟ್ರಸ್ಟಿಗಳು ತೀವ್ರವಾಗಿ ಖಂಡಿಸಿದ್ದು, ಸರಕಾರವು ಪ್ರಸ್ತಾಪಿತ ಕಾಯ್ದೆಯನ್ನು ಬೇಷರತ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಾದ ಮನವಿ ಪತ್ರಗಳನ್ನು ಮೇ 20 ಮತ್ತು 21 ರಂದು ರಾಯಗಢ ಮಂದಿರಗಳ ಟ್ರಸ್ಟಿಗಳು ಸುಧಾಗಢ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಶ್ರೀ ಉತ್ತಮ ಕುಂಭಾರ್ ಅವರಿಗೆ ಸಲ್ಲಿಸಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!