ಅಂಗಡಿಯ ಬಳಿ ನಿಂತು ಹಿಂದೂ ಯುವತಿಯರ ಜೊತೆ ಅಸಭ್ಯ ವರ್ತನೆ

ಖೇಡ (ಗುಜರಾತ್) – ಜಿಲ್ಲೆಯ ಚಾಂದಣ್ ಗ್ರಾಮದಲ್ಲಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಅಕ್ರಮ ಅಂಗಡಿಗಳನ್ನು ನಿರ್ಮಿಸುವುದು ಮತ್ತು ಅಲ್ಲಿಯ ಹಿಂದೂ ಯುವತಿಯರ ಜೊತೆಗೆ ಅಸಭ್ಯ ವರ್ತನೆ ನಡೆಸಿರುವ ಘಟನೆಗಳು ಬೆಳಕಿಗೆ ಬಂದಿವೆ. ಗ್ರಾಮದ ಮಧ್ಯ ಭಾಗದಲ್ಲಿರುವ ಖಾಲಿ ಜಾಗವನ್ನು ಮುಸ್ಲಿಮರು ಅತಿಕ್ರಮಣ ಮಾಡಿಕೊಂಡು ಅಲ್ಲಿ ಅಕ್ರಮ ಅಂಗಡಿಗಳನ್ನು ಕಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಅಂಗಡಿಗಳ ಬಳಿ ಮುಸ್ಲಿಂ ಯುವಕರ ಗುಂಪುಗಳು ಜಮಾಯಿಸುತ್ತವೆ ಮತ್ತು ಅಲ್ಲಿಂದ ಹಾದುಹೋಗುವ ಹಿಂದೂ ಮಹಿಳೆಯರು ಹಾಗೂ ಯುವತಿಯರನ್ನು ನೋಡಿ ಅಶ್ಲೀಲ ಸನ್ನೆಗಳನ್ನು ಹಾಗೂ ಅಸಭ್ಯ ಟಿಪ್ಪಣಿಗಳನ್ನು ಮಾಡುತ್ತಾರೆಂದು ಹಿಂದೂಗಳು ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಲಾಗಿದೆ.
೧. ಈ ಅಂಗಡಿಗಳ ಸುತ್ತ-ಮುತ್ತ ದೇವಸ್ತಾನಗಳು ಮತ್ತು ಚಬೂತರಾ ಚೌಕಗಳಿವೆ, ಅಲ್ಲಿ ನವರಾತ್ರಿ ಮತ್ತು ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳ ಸಮಯದಲ್ಲಿಯೂ ಈ ಯುವಕರು ತಡರಾತ್ರಿಯವರೆಗೆ ಅಂಗಡಿಗಳನ್ನು ತೆರೆದಿಟ್ಟು ಭಕ್ತರ ಬಗ್ಗೆ ಅಸಭ್ಯವಾಗಿ ಟಿಪ್ಪಣಿ ಮಾಡುತ್ತಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಗರ್ಬಾ ನೃತ್ಯ ಮಾಡುವ ಮಹಿಳೆಯರ ವೀಡಿಯೊ ಮತ್ತು ಫೋಟೋಗಳನ್ನು ರಹಸ್ಯವಾಗಿ ತೆಗೆಯಲಾಗುತ್ತಿದ್ದು, ಇದರಿಂದಾಗಿ ಈ ಹಿಂದೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
೨. ಸ್ಥಳೀಯ ಹಿಂದೂ ಸಂಘಟನೆಯ ಪದಾಧಿಕಾರಿ ಧವಳಸಿಂಹ ಝಾಲಾ ಅವರು ಈ ಬಗ್ಗೆ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ವರ್ಷ ನವರಾತ್ರಿಯ ಸಂದರ್ಭದಲ್ಲಿ ಕೆಲವು ಮುಸ್ಲಿಂ ಯುವಕರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇಗವಾಗಿ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಾ ಅಶ್ಲೀಲವಾಗಿ ವರ್ತಿಸುತ್ತಿದ್ದರು. ಅಪ್ರಾಪ್ತ ಹಿಂದೂ ಹುಡುಗಿಯ ಮೇಲಿನ ಸಾಮೂಹಿಕ ಅತ್ಯಾಚಾರದ ನಂತರ ಗ್ರಾಮಸ್ಥರು ದಾಖಲೆಗಳನ್ನು ಪರಿಶೀಲಿಸಿದಾಗ, ಈ ಅಂಗಡಿಗಳು ಅಕ್ರಮ ಜಮೀನಿನಲ್ಲಿರುವುದು ಪತ್ತೆಯಾಗಿದೆ. ಪ್ರಸ್ತುತ ಆಡಳಿತ ಮಂಡಳಿಯು ಈ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಸಂಬಂಧಪಟ್ಟವರು ಸಿಂಧುತ್ವವಿರುವ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ದಾಖಲೆಗಳಿಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ