
ಭುಸಾವಳ (ಜಲಗಾಂವ ಜಿಲ್ಲೆ) – ನಂಬಿಕೆಯಿಂದ ಕೆಫೆಗೆ ಕರೆದೊಯ್ದು ತಿಳಿಯದಂತೆ ತೆಗೆದ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಮತ್ತು ಕುಟುಂಬದವರನ್ನು ಜೀವಂತವಾಗಿ ಕೊಲ್ಲುವುದಾಗಿ ಬೆದರಿಕೆ ಹಾಕಿ, ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ನಿಕಾಹ್ (ಇಸ್ಲಾಮಿಕ್ ಪದ್ಧತಿಯಂತೆ ವಿವಾಹ) ಮಾಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಬಿಲ್ ಕಾಸಮ್ ಶೇಖ್ ನನ್ನು ಪೊಲೀಸರು ಮೇ ೧೭ ರಂದು ಮುಂಜಾನೆ ಬಂಧಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
೧. ಸಂತ್ರಸ್ತೆ ಯುವತಿಯು ಭುಸಾವಳದಲ್ಲಿ ತನ್ನ ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಅವಳು ೧೦ ನೆಯ ತರಗತಿಯಲ್ಲಿದ್ದಾಗ ನಬಿಲ್ ಅವಳೊಂದಿಗೆ ಸ್ನೇಹ ಬೆಳೆಸಿದ್ದನು.
೨. ಒಮ್ಮೆ ನಬಿಲ್ ಅವಳನ್ನು ಒಂದು ಅಪರಿಚಿತ ಕೋಣೆಗೆ ಕರೆದೊಯ್ದಿದ್ದನು. ಅಲ್ಲಿ ಮೌಲಾನಾ (ಇಸ್ಲಾಂ ಧರ್ಮದ ವಿದ್ವಾಂಸ) ಉಪಸ್ಥಿತನಿದ್ದನು. ಯುವತಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಅವಳಿಗೆ ಮತ್ತು ಅವಳ ಕುಟುಂಬದವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಯಿತು.
೩. ಮೌಲಾನಾ ಅವಳಿಂದ ಬಲವಂತವಾಗಿ ‘ಕಲ್ಮಾ’ (ಅಲ್ಲಾನ ಮಹಿಮೆಯನ್ನು ವರ್ಣಿಸುವ ಸೂಕ್ತಿಗಳು) ಪಠಣ ಮಾಡಿಸಿ, ಅವಳ ನಿಕಾಹ್ ನೆರವೇರಿಸಿದನು. ನಿಕಾಹ್ ಆದ ನಂತರ ನಬಿಲ್ ಅವಳನ್ನು ೮ ದಿನಗಳ ಕಾಲ ಒಂದು ಕೋಣೆಯಲ್ಲಿ ಬಂದಿಸಿಟ್ಟಿದ್ದನು. ಈ ಅವಧಿಯಲ್ಲಿ ಅವಳಿಗೆ ಬುರ್ಖಾ ಧರಿಸಲು ಮತ್ತು ನಮಾಜ್ ಗಾಗಿ ತೀವ್ರ ಒತ್ತಡ ಹೇರಲಾಗಿತ್ತು. ನಿರಾಕರಿಸಿದಾಗ ಅವಳಿಗೆ ಅಮಾನುಷವಾಗಿ ಥಳಿಸಲಾಯಿತು. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !