ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಆಗ್ರಹ!
(ಹಲಾಲಾ ಅಂದರೆ ಮುಸ್ಲಿಂ ಮಹಿಳೆಗೆ ತಲಾಖ್ ನೀಡಿದ ನಂತರ, ಅವಳು ಅದೇ ವ್ಯಕ್ತಿಯನ್ನು ಮರುಮದುವೆಯಾಗಬೇಕಾದರೆ, ಮೊದಲು ಅವಳು ಬೇರೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಬೇಕಾಗುತ್ತದೆ.)

ಆಗ್ರಾ (ಉತ್ತರ ಪ್ರದೇಶ) – ಆಗ್ರಾ ಜಿಲ್ಲೆಯಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯೊಬ್ಬಳು, ತನ್ನ ಪತಿ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಮತ್ತು ನಂತರ ಹಲಾಲಾ ಹೆಸರಿನಲ್ಲಿ ತನ್ನ ಮಾವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ, ಅಷ್ಟೇ ಅಲ್ಲದೆ ಮೈದುನನೂ ತನ್ನ ಮಾನಭಂಗ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಸಂತ್ರಸ್ತ ಮಹಿಳೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
1. ಸಂತ್ರಸ್ತ ವಿವಾಹಿತ ಮಹಿಳೆಯು, ತನಗೆ ಇಬ್ಬರು ಮಕ್ಕಳಿದ್ದಾರೆ. ಗಂಡನ ಮನೆಯವರು ಪದೇ ಪದೇ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಡುತ್ತಿದ್ದಾರೆ ಎಂದು ಹೇಳಿದ್ದಾಳೆ.
2. ವರದಕ್ಷಿಣೆಯಾಗಿ 1 ಕೋಟಿ ರೂಪಾಯಿ ಮತ್ತು ಅತ್ಯಂತ ದುಬಾರಿ ನಾಲ್ಕು ಚಕ್ರದ ವಾಹನವಾದ ಮರ್ಸಿಡಿಸ್ ಬೆಂಜ್ ಕಾರು ನೀಡುವ ಬೇಡಿಕೆ ಈಡೇರದ ಕಾರಣ, ಮೇ 11 ರಂದು ಆಕೆಯ ಪತಿ ಅವಳಿಗೆ 3 ಬಾರಿ ತಲಾಖ್ ಹೇಳಿದ್ದಾನೆ.
3. ಮೇ 12 ರಂದು, ನೀನು ಮತ್ತೆ ನನ್ನೊಂದಿಗೆ ವಾಸಿಸಬೇಕಾದರೆ, ಹಲಾಲಾ ಮಾಡಬೇಕಾಗುತ್ತದೆ ಎಂದು ಆಕೆಯ ಪತಿ ಹೇಳಿದ್ದಾನೆ.
4. ಇದರ ನಂತರ, ಮಾವ ಮತ್ತು ಮೈದುನ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದನ್ನು ಸಂತ್ರಸ್ತೆ ವಿರೋಧಿಸಿದಾಗ ಪತಿ ಮತ್ತು ಗಂಡನ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.
5. ಸಂತ್ರಸ್ತ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯ ಪ್ರಾಣ ಉಳಿಸಿದ್ದಾರೆ.
6. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಟೋಲಾ ಪೊಲೀಸ್ ಠಾಣೆಯ ಮುಖ್ಯಸ್ಥರು, ಮಹಿಳೆಯ ದೂರಿನ ಮೇರೆಗೆ ಪತಿ, ಮಾವ, ಅತ್ತೆ, ಮೈದುನ ಮತ್ತು ನಾದಿನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
7. ಮತ್ತೊಂದೆಡೆ, ಸಂತ್ರಸ್ತ ಮಹಿಳೆಯ ಪತಿ ಕೂಡ ಹೆಂಡತಿಯ ಮನೆಯವರ ವಿರುದ್ಧ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ