ಸೌದಿ ಅರೇಬಿಯಾದಿಂದ ಕಳುಹಿಸಲಾದ ಫ್ಯಾನ್ ಬಳಕೆ

ಕುಶಿನಗರ (ಉತ್ತರ ಪ್ರದೇಶ) – ಇಲ್ಲಿನ ಮದರಸಾವೊಂದರಲ್ಲಿ ಅಳವಡಿಸಲಾದ ಫ್ಯಾನ್ ಪಾಕಿಸ್ತಾನಿ ಕಂಪನಿಯದ್ದು ಎಂದು ಬೆಳಕಿಗೆ ಬಂದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದರಸಾದಲ್ಲಿ ಫ್ಯಾನ್ ದುರಸ್ತಿ ಮಾಡಲು ಬಂದ ವ್ಯಕ್ತಿಗೆ ಫ್ಯಾನ್ ಮೇಲೆ ‘ಮೇಡ್ ಇನ್ ಪಾಕಿಸ್ತಾನ್’ (ಪಾಕಿಸ್ತಾನ ನಿರ್ಮಿತ) ಎಂದು ಬರೆದಿರುವುದು ಕಂಡುಬಂದಿದೆ. ಆತ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ನಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕುಶಿನಗರ ಜಿಲ್ಲೆಯ ಪ್ರಾಂತ್ಯಾಧಿಕಾರಿ ಜಯಂತ್ ಯಾದವ್ ಈ ಬಗ್ಗೆ ಮಾತನಾಡಿ, “ಪೊಲೀಸರು ಮದರಸಾದ ವ್ಯವಸ್ಥಾಪಕ ಯೂನಸ್ ಅನ್ಸಾರಿಯ ವಿಚಾರಣೆ ಮಾಡಿದ್ದಾರೆ. ಈ ಫ್ಯಾನ್ ಅನ್ನು ಸ್ಥಳೀಯ ನಿವಾಸಿಯೊಬ್ಬರು ದಾನ ಮಾಡಿದ್ದಾರೆಂದು ಆತ ತಿಳಿಸಿದಾಗ, ಪೊಲೀಸರು ಆ ನಿವಾಸಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದರು. ಸೌದಿ ಅರೇಬಿಯಾದಲ್ಲಿರುವ ತನ್ನ ಮಗ ಈ ಫ್ಯಾನ್ ಕಳುಹಿಸಿದ್ದ ಎಂದು ಆತ ತಿಳಿಸಿದ್ದಾನೆ. ೨೦೨೩ ರಲ್ಲಿ ಈ ಫ್ಯಾನ್ ಅನ್ನು ಮದರಸಾಗೆ ನೀಡಲಾಗಿತ್ತು. ಪೊಲೀಸರು ಆ ವ್ಯಕ್ತಿಯ ಮಗನನ್ನು ಕೂಡ ಸಂಪರ್ಕಿಸಿದರು. ತಾನು ೨೦೨೦ ರಲ್ಲಿ ಸೌದಿ ಅರೇಬಿಯಾದಲ್ಲಿ ಈ ಫ್ಯಾನ್ ಖರೀದಿಸಿದ್ದಾಗಿ ಆತ ತಿಳಿಸಿದ್ದಾನೆ. ಆ ನಂತರ ತನ್ನ ತಂದೆಗಾಗಿ ಭಾರತಕ್ಕೆ ಕಳುಹಿಸಿದ್ದನು. ಫ್ಯಾನ್ ಖರೀದಿಸಿದ ಬಿಲ್ ಅನ್ನು ಸಹ ಆತ ನೀಡಿದ್ದಾನೆ. ನಾವು ಈ ಬಿಲ್ ಅನ್ನು ಪರಿಶೀಲಿಸುತ್ತಿದ್ದೇವೆ. ಹಾಗೆಯೇ ಫ್ಯಾನ್ ಅನ್ನು ಭಾರತಕ್ಕೆ ತರುವಾಗ ಕಸ್ಟಮ್ಸ್ ಸುಂಕ ಪಾವತಿಸಲಾಗಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದರು.
ಮದರಸಾದ ಶಿಕ್ಷಕ ಮಮೆರಾಜುದ್ದೀನ್ ಅನ್ಸಾರಿ ಮಾತನಾಡಿ, ಫ್ಯಾನ್ ಮೇಲೆ ‘ಮೇಡ್ ಇನ್ ಪಾಕಿಸ್ತಾನ್’ ಎಂದು ಬರೆದಿರುವ ಬಗ್ಗೆ ನಮಗೆ ಅರಿವಿರಲಿಲ್ಲ. ೧೯೯೪ ರಿಂದ ಸಾರ್ವಜನಿಕ ದೇಣಿಗೆಯ ಮೂಲಕ ಈ ಮದರಸಾ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಶ್ರೀರಾಮನ ಮೇಲಿನ ಆಘಾತ !
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ