ಭಾರತವು ಕದನ ವಿರಾಮಕ್ಕೆ ಬೇಡಿಕೆ ಇಟ್ಟಿದೆ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು ಎಂಬುದನ್ನು ಅಮೇರಿಕಾ ಬಹಿರಂಗಪಡಿಸಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತವು ಅಮೇರಿಕಾದ ಮೂಲಕ ಮಧ್ಯಸ್ಥಿಕೆ ಮತ್ತು ಕದನ ವಿರಾಮಕ್ಕೆ ಇಚ್ಛೆ ವ್ಯಕ್ತಪಡಿಸಿತ್ತು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು; ಆದರೆ ಅವರ ಈ ಹೇಳಿಕೆಯನ್ನು ಅಮೇರಿಕಾದ ಅಧಿಕೃತ ದಾಖಲೆಗಳು ಸುಳ್ಳೆಂದು ಬಹಿರಂಗಪಡಿಸಿವೆ.
🚨 “If any misadventure is undertaken against Pakistan, the consequences will be painful!” – Pakistan Army Chief Asim Munir
After the condition Pakistan was left in during ‘Operation Sindoor’, such threats sound more like an attempt to mislead the Pakistani public and hide the… pic.twitter.com/lvr3Ly84Zi
— Sanatan Prabhat (@SanatanPrabhat) May 11, 2026
೧. ಅಸಿಮ್ ಮುನೀರ್ ಅವರು, ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದ ತಂತ್ರವು ಉತ್ತಮವಾಗಿತ್ತು ಮತ್ತು ಭಾರತವು ಅಮೇರಿಕಾದ ನಾಯಕತ್ವದ ಮೂಲಕ ಮಾತುಕತೆಗೆ ಪ್ರಯತ್ನಿಸಿತು. ಪ್ರಾದೇಶಿಕ ಶಾಂತಿಯ ಹಿತದೃಷ್ಟಿಯಿಂದ ಪಾಕಿಸ್ತಾನವು ಈ ಪ್ರಸ್ತಾವನೆಯನ್ನು ಒಪ್ಪಿಕೊಂಡಿತು ಎಂದು ಹೇಳಿದರು.
೨. ಅಮೇರಿಕಾದ ‘ಫಾರಿನ್ ಏಜೆಂಟ್ಸ್ ರಿಜಿಸ್ಟ್ರೇಷನ್ ಆಕ್ಟ್’ (ಫಾರಾ) ಅಡಿಯಲ್ಲಿ ಸಲ್ಲಿಸಲಾದ ದಾಖಲೆಗಳು ಪಾಕಿಸ್ತಾನದ ಹೇಳಿಕೆಗಳನ್ನು ಬಯಲಿಗೆಳೆದಿವೆ. ಈ ದಾಖಲೆಗಳಲ್ಲಿನ ನಮೂದಿಸಿದ ಪ್ರಕಾರ, ೬ ಮೇ ದಿಂದ ೯ ಮೇ ೨೦೨೫ ರ ಅವಧಿಯಲ್ಲಿ, ಪಾಕಿಸ್ತಾನವು ವಾಷಿಂಗ್ಟನ್‌ನಲ್ಲಿ ಸುಮಾರು ೬೦ ವಿವಿಧ ಸಂಪರ್ಕ ಅಭಿಯಾನಗಳನ್ನು ನಡೆಸಿತು. ಇದರಲ್ಲಿ ಅಮೇರಿಕಾದ ಸಂಸದರು, ಕಾಂಗ್ರೆಸ್ ಸಿಬ್ಬಂದಿ, ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ರಕ್ಷಣಾ ಅಧಿಕಾರಿಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗಿನ ನಿರಂತರ ಸಂಪರ್ಕಗಳು ಸೇರಿವೆ.
೩. ಪಾಕಿಸ್ತಾನವು ಅಮೇರಿಕಾದ ಅನೇಕ ಹಿರಿಯ ವ್ಯಕ್ತಿಗಳೊಂದಿಗೆ ಸಭೆ ಆಯೋಜಿಸಲು ವಿನಂತಿಸಿತ್ತು ಎಂಬುದನ್ನು ಈ ದಾಖಲೆಗಳು ತೋರಿಸುತ್ತವೆ. ಅದೇ ಸಮಯದಲ್ಲಿ, ಭಾರತದ ಕಡೆಯಿಂದ ಅಂತಹ ಯಾವುದೇ ದೊಡ್ಡ ಮಟ್ಟದ ಅಮೇರಿಕನ್ ಮಧ್ಯಸ್ಥಿಕೆಯ ಉಪಕ್ರಮದ ಉಲ್ಲೇಖ ಕಂಡುಬರುವುದಿಲ್ಲ.
೪. ಕದನ ವಿರಾಮದ ಉಪಕ್ರಮವನ್ನು ಪಾಕಿಸ್ತಾನದ ‘ಡಿ.ಜಿ.ಎಂ.ಒ.’ (‘ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್’-ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ತೆಗೆದುಕೊಂಡಿದ್ದರು ಮತ್ತು ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ದೂರವಾಣಿ ಮಾತುಕತೆಯ ನಂತರ ಕದನ ವಿರಾಮಕ್ಕೆ ಒಮ್ಮತ ಮೂಡಿತ್ತು ಎಂದು ಭಾರತವು ಈ ಹಿಂದೆಯೇ ಸ್ಪಷ್ಟಪಡಿಸಿತ್ತು.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ