
ಬೀಜಿಂಗ್ (ಚೀನಾ) – ಚೀನಾದ ಮಾಜಿ ರಕ್ಷಣಾ ಸಚಿವರಾದ ಲೀ ಶಾಂಗ್ಫೂ ಮತ್ತು ವೈ ಫೆಂಘೆ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇಬ್ಬರೂ ನಾಯಕರಿಗೆ ಎರಡು ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಚೀನೀ ಕಾನೂನಿನ ಪ್ರಕಾರ, ‘ಗಲ್ಲು ಶಿಕ್ಷೆಯೊಂದಿಗೆ ರಿಯಾಯಿತಿ ಅವಧಿ’ ಎಂದರೆ, ಅಪರಾಧಿಯನ್ನು ಕೂಡಲೇ ಗಲ್ಲಿಗೇರಿಸುವುದಿಲ್ಲ. ಒಂದು ವೇಳೆ ಅಪರಾಧಿಗಳು ಎರಡು ವರ್ಷಗಳವರೆಗೆ ಯಾವುದೇ ಹೊಸ ಅಪರಾಧ ಮಾಡದಿದ್ದರೆ, ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬಹುದು.
Crackdown on Corruption: A Lesson for India? ⚖️🚩
Two former Chinese Defence Ministers sentenced to death with a two-year reprieve in corruption cases linked to military procurement.
Their sentences will later be commuted to life imprisonment without parole.
When will India… pic.twitter.com/CqCvWGSLal
— Sanatan Prabhat (@SanatanPrabhat) May 8, 2026
ತಜ್ಞರ ಪ್ರಕಾರ, ಈ ಕ್ರಮವು ಅಧ್ಯಕ್ಷ ಶೀ ಜಿನ್‌ಪಿಂಗ್ ಅವರ ಭ್ರಷ್ಟಾಚಾರ ವಿರೋಧಿ ಅಭಿಯಾನದ ಭಾಗವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾದ ಸೈನ್ಯ ಮತ್ತು ರಕ್ಷಣಾ ಸಂಸ್ಥೆಗಳ ಅನೇಕ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!