
ಬೀಜಿಂಗ್ (ಚೀನಾ) – ಜಪಾನ್ ವೇಗವಾಗಿ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದು ಅದನ್ನು ತಡೆಯದಿದ್ದರೆ, ಮುಂಬರುವ ದಿನಗಳಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಬಹುದೆಂದು ಚೀನಾ ವಿಶ್ವಸಂಸ್ಥೆಗೆ ವಿನಂತಿಸಿದೆ. ಚೀನಾದ ವಿದೇಶಾಂಗ ಸಚಿವಾಲಯವು ಬಿಡುಗಡೆ ಮಾಡಿದ ವರದಿಯಲ್ಲಿ, ಜಪಾನ್ ಪ್ಲುಟೋನಿಯಂ ಸಿದ್ಧಪಡಿಸುವ ಸಾಮರ್ಥ್ಯ ಗಳಿಸಿದೆ ಎಂದು ಆರೋಪಿಸಿದೆ. ಜಪಾನ್ ಬಳಿ ಅಗತ್ಯವಿರುವ ‘ರೀ-ಪ್ರೊಸೆಸಿಂಗ್’ ತಂತ್ರಜ್ಞಾನ ಮತ್ತು ಸೌಲಭ್ಯಗಳು ಲಭ್ಯವಿವೆ. ಚೀನಾ ತನ್ನ ಈ ಪ್ರತಿಪಾದನೆಗಳನ್ನು ದೃಢೀಕರಿಸಲು ಕೆಲವು ಅಂಕಿ-ಅಂಶಗಳನ್ನು ಸಹ ಮಂಡಿಸಿದೆ.
ಜಪಾನ್ ಬಳಿ ೫,೫೦೦ ಅಣು ಬಾಂಬ್‌ಗಳನ್ನು ಸಿದ್ಧಪಡಿಸುವಷ್ಟು ಸಂಗ್ರಹ ?
ಚೀನಾದ ಹೇಳಿಕೆಯ ಪ್ರಕಾರ, ಜಪಾನ್ ಬಳಿ ನಾಗರಿಕ ಅಣುಶಕ್ತಿ ಕಾರ್ಯಕ್ರಮಕ್ಕೆ ಅವಶ್ಯಕತೆಗಿಂತ ಹೆಚ್ಚಿನ ಪ್ಲುಟೋನಿಯಂ ಸಂಗ್ರಹವಿದೆ. ಜಪಾನ್ ಸರಕಾರದ ಅಂಕಿ-ಅಂಶಗಳ ಪ್ರಕಾರ, ೨೦೨೪ ರ ಅಂತ್ಯದ ವೇಳೆಗೆ ಜಪಾನ್ ಬಳಿ ೪೪.೪ ಟನ್ ಪ್ರತ್ಯೇಕಿಸಿದ ಪ್ಲುಟೋನಿಯಂ ಇತ್ತು. ಈ ಪ್ಲುಟೋನಿಯಂನಿಂದ ಅಂದಾಜು ೫,೫೦೦ ಅಣ್ವಸ್ತ್ರಗಳನ್ನು ತಯಾರಿಸಬಹುದು ಎಂದು ಚೀನಾ ದಾವೆ ಮಾಡಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !