ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಗವಾನ ಮುರುಗನ್‌ನ (ಕಾರ್ತಿಕೇಯನ) ರೂಪದಲ್ಲಿ ದರ್ಶನವಾಗಬೇಕೆಂಬ ಪೂ. (ಸೌ.) ಉಮಾ ರವಿಚಂದ್ರನ್ ಇವರ ಇಚ್ಛೆ ಪೂರ್ಣಗೊಳ್ಳುವುದು !

ಎಡದಿಂದ ಬಾಲಸುಬ್ರಹ್ಮಣ್ಯಮ್ ಮಹಾಲಿಂಗಮ್, ಶ್ರೀ. ಅರ್ಜುನ ಸಂಪತ್, ಮುರುಗನ್ ದೇವರಂತೆ ಕೈಯಲ್ಲಿ ವೇಲಾಯುಧವನ್ನು ಮತ್ತು ತಲೆಯ ಮೇಲೆ ಮುಕುಟವನ್ನು ಧರಿಸಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀ. ಕೀರ್ತಿವಾಸನ ಮತ್ತು ಪೊನ್ನುಸಾಮಿ ಸದಾಯಪ್ಪನ್

ಪ.ಪೂ. ಗುರುದೇವರು (‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ’) ಇಲ್ಲಿಯ ವರೆಗಿನ ಜನ್ಮೋತ್ಸವ ಸಮಾರಂಭಗಳಲ್ಲಿ ಭಗವಾನ ಶ್ರೀರಾಮ, ಶ್ರೀಕೃಷ್ಣ, ದತ್ತಗುರು, ಶ್ರೀವಿಷ್ಣು ಮತ್ತು ಸತ್ಯನಾರಾಯಣನ ವೇಷಭೂಷಣಗಳನ್ನು ಧರಿಸಿ ನಮಗೆ ದರ್ಶನ ನೀಡಿದ್ದಾರೆ. ‘ ೨೦೨೫ ರಲ್ಲಿ ಪ.ಪೂ. ಗುರುದೇವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಯಾವ ರೂಪದಲ್ಲಿ ದರ್ಶನ ನೀಡುವರು ?’, ಎಂಬ ಉತ್ಸುಕತೆ ನನಗಿತ್ತು.

ಯಾವುದೇ ಶುಭ ಕಾರ್ಯದ ಆರಂಭದ ಮೊದಲು ಮತ್ತು ಧರ್ಮಯುದ್ಧದ ಆರಂಭದಲ್ಲಿ ಶಂಖನಾದವನ್ನು ಮಾಡಲಾಗುತ್ತದೆ. ಮಹಾಭಾರತ ಯುದ್ಧದ ಆರಂಭವು ಭಗವಾನ ಶ್ರೀಕೃಷ್ಣನ ದಿವ್ಯ ಪಾಂಚಜನ್ಯ ಶಂಖದ ನಾದದೊಂದಿಗೆ ಆಯಿತು. ಕಾಲಮಹಾತ್ಮೆಗನುಸಾರ ಸ್ಥೂಲ ಮತ್ತು ಸೂಕ್ಷ್ಮ ಸ್ತರಗಳಲ್ಲಿ ಇಂದಿಗೂ ಧರ್ಮಯುದ್ಧವು ನಡೆಯುತ್ತಿದೆ. ಧರ್ಮಯೋಧರ ಸೇನೆಯನ್ನು ಮುನ್ನಡೆಸಲು ಒಬ್ಬ ತೇಜಸ್ವಿ ಮತ್ತು ಶೌರ್ಯವಂತ ‘ಸೇನಾಪತಿ’ಯ ಅವಶ್ಯಕತೆ ಇರುತ್ತದೆ. ಕೇವಲ ಇಂತಹ ಒಬ್ಬ ದಿವ್ಯ ‘ಸೇನಾಪತಿ’ಯು ಧರ್ಮಯೋಧರನ್ನು ವಿಜಯದತ್ತ ಕೊಂಡೊಯ್ಯಬಲ್ಲನು. ‘ಯತಃ ಕೃಷ್ಣಸ್ತತೋ ಧರ್ಮೋ ಯತೋ ಧರ್ಮಸ್ತತೋ ಜಯಃ |’ (ಮಹಾಭಾರತ, ಪರ್ವ ೬, ಅಧ್ಯಾಯ ೬೬, ಶ್ಲೋಕ ೩೫), ಅಂದರೆ ‘ಎಲ್ಲಿ ಭಗವಾನ ಶ್ರೀಕೃಷ್ಣನಿರುವನೋ, ಅಲ್ಲಿ ಧರ್ಮವಿರುತ್ತದೆ ಮತ್ತು ಎಲ್ಲಿ ಧರ್ಮವಿರುತ್ತದೋ ಅಲ್ಲಿ ವಿಜಯವು ನಿಶ್ಚಿತವಾಗಿರುತ್ತದೆ.’

ಎಡದಿಂದ ಬಾಲಸುಬ್ರಹ್ಮಣ್ಯಮ್ ಮಹಾಲಿಂಗಮ್, ಶ್ರೀ. ಅರ್ಜುನ ಸಂಪತ್, ಮುರುಗನ್ ದೇವರಂತೆ ಕೈಯಲ್ಲಿ ವೇಲಾಯುಧವನ್ನು ಮತ್ತು ತಲೆಯ ಮೇಲೆ ಮುಕುಟವನ್ನು ಧರಿಸಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀ. ಕೀರ್ತಿವಾಸನ ಮತ್ತು ಪೊನ್ನುಸಾಮಿ ಸದಾಯಪ್ಪನ್

ಭಗವಾನ ಶ್ರೀಕೃಷ್ಣನು ಸ್ವತಃ ಶ್ರೀಮದ್ಭಗವದ್ಗೀತೆಯ ಹತ್ತನೇ ಅಧ್ಯಾಯದ ‘ವಿಭೂತಿಯೋಗ’ದಲ್ಲಿ ಹೇಳಿದ್ದಾನೆ, ಸೇನಾನೀನಾಮಹಂ ಸ್ಕಂದಃ | ಅಂದರೆ ‘ನಾನು ಸೇನಾಪತಿಗಳಲ್ಲಿ ಸ್ಕಂದ ಅಂದರೆ ಭಗವಾನ ಶ್ರೀ ಮುರುಗನ್ (ಕಾರ್ತಿಕೇಯ) ಆಗಿದ್ದೇನೆ.’ ಭಗವಾನ ಶ್ರೀ ಮುರುಗನ್‌ರು ದೇವತೆಗಳ ಸೇನೆಯ ನೇತೃತ್ವವನ್ನು ವಹಿಸಿದ್ದರು ಮತ್ತು ಶೂರಪದ್ಮನ್ ಎಂಬ ಅಸುರನ ಸೇನೆಯನ್ನು ಸೋಲಿಸಿದರು.

ನಮ್ಮ ಕುಲದೇವರು ತಮಿಳುನಾಡಿನ ತಿರುತ್ತಣಿ ಕ್ಷೇತ್ರದಲ್ಲಿನ ಶ್ರೀ ಮುರುಗನ್ ಆಗಿದ್ದಾರೆ. ತಮಿಳುನಾಡಿನಲ್ಲಿ ಮುರುಗನ್ ಅವರು ಬಹುಸಂಖ್ಯಾತ ಹಿಂದೂಗಳ ಕುಲದೇವರು ಆಗಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಗವಾನ ಶ್ರೀ ಮುರುಗನ್‌ರ ಅಂಶಾವತಾರವೇ ಆಗಿದ್ದಾರೆ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಭಗವಂತನು ಇರುವೆಯ ಕಾಲುಗಳಲ್ಲಿನ ಗೆಜ್ಜೆಗಳ ಸದ್ದನ್ನೂ ಕೇಳಿಸಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಹಾಗಿರುವಾಗ ನನ್ನ ಭಗವಂತನು ನನ್ನ ಮನದ ಆಸೆಯನ್ನು ಕೇಳಿ ಅದನ್ನು ಪೂರೈಸುವುದಿಲ್ಲ, ಹೀಗಾಗಲು ಸಾಧ್ಯವೇ ? ಪ.ಪೂ. ಗುರುದೇವರು ನನ್ನ ಇಚ್ಛೆಯನ್ನು ಕೇವಲ ಸಾಮಾನ್ಯ ರೀತಿಯಲ್ಲಿ ಅಥವಾ ಸಾಮಾನ್ಯ ಸಮಯದಲ್ಲಿ ಅಲ್ಲ, ಬದಲಾಗಿ ‘ಶಂಖನಾದ ಮಹೋತ್ಸವ’ದ ಅವರ್ಣನೀಯ ಕಾಲದಲ್ಲಿ ಅದ್ವಿತೀಯವಾಗಿ ಮತ್ತು ಅದ್ಭುತ ರೀತಿಯಲ್ಲಿ ಪೂರೈಸಿದರು.

(ಪೂ.) ಸೌ. ಉಮಾ ರವಿಚಂದ್ರನ್

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಎರಡನೇ ದಿನ ಅಂದರೆ ೧೮.೫.೨೦೨೫ ರಂದು ಮಧ್ಯಾಹ್ನ ೩ ಗಂಟೆಗೆ ತಮಿಳುನಾಡಿನ ಶ್ರೀ. ಅರ್ಜುನ ಸಂಪಥ್ (ಹಿಂದೂ ಮಕ್ಕಲ್ ಕತ್ಛಿ’ಯ (ಹಿಂದು ಜನತಾ ಪಕ್ಷದ) ಅಧ್ಯಕ್ಷರು) ಇವರನ್ನು ವೇದಿಕೆಯ ಹತ್ತಿರ ಉಪಸ್ಥಿತರಿರುವಂತೆ ವಿನಂತಿಸಲು ನನಗೆ ಹೇಳಿದ್ದರು. ಆದ್ದರಿಂದ ನಾನು ಅವರನ್ನು ಹುಡುಕುತ್ತಾ ಹೊರಟ್ಟಿದ್ದೆ, ಆಗ ನನಗೆ ಸಾಕ್ಷಾತ್ ಭಗವಾನ ಶ್ರೀ ಮುರುಗನ್‌ರ ರೂಪದಲ್ಲಿ ಪ.ಪೂ. ಗುರುದೇವರ ದರ್ಶನವಾಯಿತು. ಒಬ್ಬ ಧರ್ಮಾಭಿಮಾನಿ ಶ್ರೀ. ಕೀರ್ತಿವಾಸನ್ ಇವರು ಪ.ಪೂ. ಗುರುದೇವರಿಗೆ ರುದ್ರಾಕ್ಷಿಗಳ ಮಾಲೆಯನ್ನು ಅರ್ಪಿಸಲಿದ್ದರು. ಅರ್ಜುನ್ ಸಂಪಥ್ ಇವರೂ ಅವರ ಜೊತೆಯಲ್ಲಿದ್ದರು. ಶ್ರೀ. ಕೀರ್ತಿವಾಸನ್ ಇವರು ಪ.ಪೂ. ಗುರುದೇವರ ಮಸ್ತಕದ ಮೇಲೆ ಮುಕುಟವನ್ನು ಇಟ್ಟರು ಮತ್ತು ಅವರ ಕೊರಳಿನಲ್ಲಿ ಮಾಲೆಯನ್ನು ಹಾಕಿದರು ಮತ್ತು ಅವರಿಗೆ ವೇಲಾಯುಧ (ಭಗವಾನ ಶ್ರೀ ಮುರುಗನ್‌ರ ಶಸ್ತ್ರ ದೈವೀ ಭರ್ಚಿ) ಅನ್ನು ಅರ್ಪಿಸಿದರು. ಇವೆಲ್ಲವನ್ನೂ ರುದ್ರಾಕ್ಷಿ ಮತ್ತು ಲಾವಂಚವನ್ನು ಬಳಸಿ ಸಿದ್ಧಪಡಿಸಲಾಗಿತ್ತು. ನಾನು ಅರ್ಜುನ್ ಸಂಪತ್ ಇವರನ್ನು ಭೇಟಿಯಾಗಲು ಹೋದಾಗ, ಪ.ಪೂ. ಗುರುದೇವರು ಭಗವಾನ ಶ್ರೀ ಮುರುಗನ್‌ರ ‘ವೇಲ್’ ಎಂಬ ಶಸ್ತ್ರವನ್ನು ಹಿಡಿದಿರುವ ರೂಪದಲ್ಲಿ ಅದ್ಭುತ ರೂಪದಲ್ಲಿ ದರ್ಶನ ನೀಡುತ್ತಾರೆ ಎಂಬ ಕಲ್ಪನೆಯನ್ನೂ ನಾನು ಮಾಡಿರಲಿಲ್ಲ. ನನ್ನ ಬಾಯಿಂದ ತಾನಾಗಿಯೇ ಸ್ವಯಂಪ್ರೇರಣೆಯಿಂದ ಈ ಕೆಳಗಿನ ಘೋಷವಾಕ್ಯಗಳು ಹೊರಬಂದವು.

ವೆಟ್ರಿ ವೇಲ್ ಮುರುಗನುಕ್ಕು ಆರೋಹರಾ !

ವೀರ ವೇಲ್ ಮುರುಗನುಕ್ಕು ಆರೋಹರಾ !

ಅರ್ಥ : ವಿಜಯವನ್ನು ತಂದುಕೊಡುವ ವೇಲ್ (ಶಸ್ತ್ರ)ಅನ್ನು ಕೈಯಲ್ಲಿ ಹಿಡಿದಿರುವ ಮುರುಗನ್ ದೇವರಿಗೆ ಜಯವಾಗಲಿ !

ಶೌರ್ಯವನ್ನು ಪ್ರದಾನಿಸುವ ವೇಲ್ (ಶಸ್ತ್ರ)ಅನ್ನು ಕೈಯಲ್ಲಿ ಹಿಡಿದಿರುವ ಮುರುಗನ್ ದೇವರಿಗೆ ಜಯವಾಗಲಿ !

ಇದು ಮುರುಗನ್ ದೇವರ ಭಕ್ತರ ವಿಜಯಘೋಷವಾಗಿದೆ. ನಾನು ನಿಶ್ಯಬ್ದಳಾದೆ. ನನಗೆ ಭಾವಜಾಗೃತಿಯಿಂದ ಕೃತಜ್ಞತೆ ಅನಿಸುತ್ತಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇಚ್ಛಾಶಕ್ತಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಆಗಿದ್ದಾರೆ ಮತ್ತು ಅವರ ಕ್ರಿಯಾಶಕ್ತಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಆಗಿದ್ದಾರೆ ಮತ್ತು ‘ವೇಲ್’ ಎಂಬುದು ಅವರ ಜ್ಞಾನಶಕ್ತಿಯಾಗಿದೆ, ಇದು ಪೃಥ್ವಿಯ ಎಲ್ಲಾ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ.

– (ಪೂ.) ಸೌ. ಉಮಾ ರವಿಚಂದ್ರನ್ (ಸನಾತನದ ೭೦ ನೇ ಸಂತರು), ಚೆನ್ನೈ, ತಮಿಳುನಾಡು. (೨೦.೫.೨೦೨೫)