ಬಾಂಗ್ಲಾದೇಶ: ಸಂಸದ ಅಖ್ತರ್ ಹುಸೇನ್ ಅವರ ಆತಂಕ

ಢಾಕಾ (ಬಾಂಗ್ಲಾದೇಶ) – ಪಶ್ಚಿಮ ಬಂಗಾಳದಲ್ಲಿ ಭಾಜಪ ಸರಕಾರ ಅಸ್ತಿತ್ವಕ್ಕೆ ಬಂದರೆ, ಅಲ್ಲಿರುವ ಎಲ್ಲಾ ಬಾಂಗ್ಲಾದೇಶಿಯರನ್ನು ಅವರು ವಾಪಸ್ ಕಳುಹಿಸುತ್ತಾರೆ. ಇದು ನಮಗೆ ದೊಡ್ಡ ನಿರಾಶ್ರಿತರ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಈ ಬಗ್ಗೆ ನಾವು ಆತಂಕದಲ್ಲಿದ್ದೇವೆ ಎಂದು ಬಾಂಗ್ಲಾದೇಶದ ಎನ್‌ಸಿಪಿ ಪಕ್ಷದ ಸಂಸದ ಅಖ್ತರ್ ಹುಸೇನ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ.
Bangladeshi MP’s Fear Confirms BJP’s Rising Wave in Bengal! 🚩
The fear of a BJP victory in Bengal has reached the Bangladesh Parliament! 🇧🇩
MP Akhtar Hussain expressed deep concern, stating that if BJP comes to power, infiltration will be stopped and illegal occupants will… pic.twitter.com/Md4DNeXDvV
— Sanatan Prabhat (@SanatanPrabhat) May 2, 2026
ಚುನಾವಣೋತ್ತರ ಸಮೀಕ್ಷೆಗಳ ಅಂದಾಜಿನ ಪ್ರಕಾರ ಭಾಜಪ ಜಯಗಳಿಸಬಹುದು, ಇದರಿಂದಾಗಿ ಲಕ್ಷಾಂತರ ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಸಾಧ್ಯತೆಯಿದೆ. ಇಂತಹ ಕ್ರಮವು ಬಾಂಗ್ಲಾದೇಶದಲ್ಲಿ ವಲಸಿಗರ ಮಹಾಪೂರವನ್ನೇ ಹರಿಸಬಹುದು. ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಆದ್ದರಿಂದ ನಾವು ಒಗ್ಗಟ್ಟಾಗಿ ಇರಬೇಕೆಂದು ಸಂಸದ ಹುಸೇನ್ ಹೇಳಿದ್ದಾರೆ.
Bangladeshi MP Akhter Hossen says exit polls showing BJP victory in West Bengal is a big worry for Bangladesh.
He says if BJP wins, illegal Bangladeshis will be thrown back to Bangladesh creating crisis for them.
Now understand why Bangladeshis love TMC pic.twitter.com/m1x21HF7Mq
— Frontalforce 🇮🇳 (@FrontalForce) April 30, 2026
ತೃಣಮೂಲ ಕಾಂಗ್ರೆಸ್ ವಿರುದ್ಧ ಭಾಜಪ ಸಂಸದ ನಿಶಿಕಾಂತ್ ದುಬೆ ಟೀಕೆ
ಭಾಜಪ ಸಂಸದ ನಿಶಿಕಾಂತ್ ದುಬೆ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದು, “ಬಂಗಾಳದಲ್ಲಿ ಭಾಜಪಯ ಗೆಲುವು ಅಕ್ರಮ ವಲಸೆಯನ್ನು ತಡೆಯುತ್ತದೆ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರಹಾಕುತ್ತದೆ ಎಂದು ಬಾಂಗ್ಲಾದೇಶದ ಸಂಸದ ಅಖ್ತರ್ ಹುಸೇನ್ ಇಂದು ಬಾಂಗ್ಲಾದೇಶದ ಸಂಸತ್ತಿನಲ್ಲಿ ಹೇಳಿರುವುದು ಅಪಾಯಕಾರಿ ಸಂಗತಿಯಾಗಿದೆ. ತೃಣಮೂಲ ಕಾಂಗ್ರೆಸ್‌ನ ಸಹಾಯಕರು ಈಗ ನಿಧಾನವಾಗಿ ಮುನ್ನೆಲೆಗೆ ಬರುತ್ತಿದ್ದಾರೆ” ಎಂದು ದುಬೆ ಹೇಳಿದ್ದಾರೆ.
बंगलादेश के सांसद अख़्तर हुसैन ने आज बांग्लादेश के संसद में कहा कि भाजपा की पश्चिम बंगाल की जीत घुसपैठ को रोकेगी और बांग्लादेशी मुसलमानों को भगाएगी,यह ख़तरनाक है । तृणमूल कांग्रेस के मददगार धीरे-धीरे सामने आ रहे हैं pic.twitter.com/wt1ZZUK7Un
— Dr Nishikant Dubey (@nishikant_dubey) April 30, 2026
ಬಾಂಗ್ಲಾದೇಶಿ ನಾಗರಿಕರಿಗೂ ಭಾಜಪ ಸರಕಾರ ಬರುವ ಅರಿವಾಗಿದೆ!
Patna, Bihar: On Bangladesh MP Akhtar Hussain’s statement, BJP leader Syed Shahnawaz Hussain says, "Now even Bangladeshis feel that a BJP government is going to be formed, and they will stop sending infiltrators…" pic.twitter.com/mJQGonFdnY
— IANS (@ians_india) May 1, 2026
ಭಾಜಪ ನಾಯಕ ಸೈಯದ್ ಶಹನವಾಜ್ ಹುಸೇನ್ ಈ ಬಗ್ಗೆ ಮಾತನಾಡಿ, “ಈಗ ಬಾಂಗ್ಲಾದೇಶಿಯರಿಗೂ ಬಂಗಾಳದಲ್ಲಿ ಭಾಜಪ ಸರಕಾರ ಬರಲಿದೆ ಮತ್ತು ಅಕ್ರಮ ವಲಸೆ ತಡೆಯಲಿದೆ ಎಂಬ ಭಾವನೆ ಮೂಡಿದೆ. ಭಾಜಪಯ ಆಡಳಿತಾವಧಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ಅವರು ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ವಾಪಸ್ ಕಳುಹಿಸಲಾಗುತ್ತದೆ ಎಂಬ ಅರಿವು ಅವರಿಗಾಗಿದೆ. ದೀದಿ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಅಕ್ರಮ ವಲಸಿಗರನ್ನು ಅತಿಥಿಗಳಂತೆ ನೋಡಿಕೊಳ್ಳುತ್ತಾರೆ; ಆದರೆ ಭಾಜಪ ಸರಕಾರ ಬಂದರೆ ಬಾಂಗ್ಲಾದೇಶಿ ನುಸುಳುಕೋರರಿಗೆ ಉಳಿಗಾಲವಿಲ್ಲ. ನಮಗೆ ನಮ್ಮ ದೇಶದ ಮೇಲೆ ಹೇಗೆ ಪ್ರೀತಿಯಿದೆಯೋ, ಹಾಗೆಯೇ ಅವರಿಗೂ ಬಾಂಗ್ಲಾದೇಶದ ಮೇಲೆ ಪ್ರೀತಿ ಇರಬೇಕು ಮತ್ತು ಅವರು ತಮ್ಮ ದೇಶಕ್ಕೆ ಮರಳಬೇಕು,” ಎಂದು ಹುಸೇನ್ ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು