ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಪುಸ್ತಕಕ್ಕೆ ವಿದೇಶದಿಂದ ಆರ್ಥಿಕ ನೆರವು ಲಭಿಸಿದೆಯೇ? ಎಂಬ ಬಗ್ಗೆ ತನಿಖೆಗೆ ಆಗ್ರಹ

ಬುಲ್ಡಾಣಾ – ಕಾಮ್ರೇಡ್ ಗೋವಿಂದ ಪನ್ಸಾರೆ ಅವರು ಬರೆದ ‘ಶಿವಾಜಿ ಕೋಣ ಹೋತಾ?’ ಪುಸ್ತಕದಲ್ಲಿನ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ, ಇಲ್ಲಿನ ಶಿವಸೇನಾ ಶಾಸಕ ಶ್ರೀ. ಸಂಜಯ್ ಗಾಯಕ್ವಾಡ್ ಅವರು ಏಪ್ರಿಲ್ 27 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. “ಛತ್ರಪತಿ ಶಿವಾಜಿ ಮಹಾರಾಜರ ತಪ್ಪು ಇತಿಹಾಸವನ್ನು ಬರೆದ ಕಾಮ್ರೇಡ್ ಪನ್ಸಾರೆ ವಿರುದ್ಧ ಮರಣೋತ್ತರ ಮೊಕದ್ದಮೆ ದಾಖಲಿಸಬೇಕು. ಹಾಗೆಯೇ ಮಹಾರಾಜರ ಹೆಸರನ್ನು ಏಕವಚನದಲ್ಲಿ ಬಳಸಿದ ಕಾರಣಕ್ಕೆ ಮತ್ತು ಲೇಖಕರ ಮರಣದ ನಂತರ ಪುಸ್ತಕವನ್ನು ಮುದ್ರಿಸಿದ ಪ್ರಕಾಶಕ ಪ್ರಶಾಂತ್ ಅಂಬಿ ಅವರನ್ನು ಬಂಧಿಸಬೇಕು,” ಎಂದು ಅವರು ಈ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿಯಲ್ಲಿನ ಕೆಲ ಅಂಶಗಳು,
1. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರ ಸೇರಿದಂತೆ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರ ಹೆಸರನ್ನು ಬಳಸಿಕೊಂಡು ಕೆಲವು ಲೇಖಕರು ಮತ್ತು ಪ್ರಕಾಶಕರು ಆರ್ಥಿಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
2. ಈ ಪುಸ್ತಕದ ಮೂಲಕ ಮಹಾರಾಜರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.
3. ಈ ಪುಸ್ತಕಕ್ಕೆ ವಿದೇಶದಿಂದ ಆರ್ಥಿಕ ನೆರವು ದೊರೆತಿದೆಯೇ? ಎಂಬ ಬಗ್ಗೆ ತನಿಖೆಯಾಗಬೇಕು, ಹಾಗೆಯೇ ಪುಸ್ತಕವನ್ನು ಮುದ್ರಿಸುವ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈ ಮನವಿಗೆ ಶಿವಸೇನೆಯ ವಿಜಯ್ ಅಂಭೋರೆ, ಸಂದೀಪ್ ಗಾಯಕ್ವಾಡ್, ಧನಂಜಯ್ ಬಾರೋಟೆ, ಸಂಜಯ್ ಹಾಡೆ, ವಿಜಯಸಿಂಗ್ ರಾಜಪೂರ್, ಜಿಜಾ ರಾಠೋಡ್, ಅನುಜಾ ಸಾವಳೆ, ಆಶಿಶ್ ಜಾಧವ್, ಶ್ರೀಕಾಂತ್ ಗಾಯಕ್ವಾಡ್ ಸೇರಿದಂತೆ ಹಲವು ಪದಾಧಿಕಾರಿಗಳು ಸಹಿ ಹಾಕಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ