ಘಾಟ್ಕೋಪರ್‌ನಲ್ಲಿ ಸಣ್ಣ ಹಿಂದೂ ಬಾಲಕಿಯರನ್ನು ಮನೆಗೆ ಕರೆದೊಯ್ದು ಮೌಲ್ವಿಯಿಂದ ಲೈಂಗಿಕ ದೌರ್ಜನ್ಯ !

ಸಿಟ್ಟಿಗೆದ್ದ ಹಿಂದೂಗಳಿಂದ ಮೌಲ್ವಿಗೆ ಥಳಿತ : ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಕ್ಕಾಗಿ ಸಂತ್ರಸ್ತೆಯ ಪೋಷಕರಿಗೂ ಬಂಧನ !

(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ಮುಖಂಡ)

ಮುಂಬಯಿ – ಘಾಟ್ಕೋಪರ್ (ಪಶ್ಚಿಮ) ದಲ್ಲಿ ಪಕ್ಕದ ಮನೆಯ 5 ಮತ್ತು 6 ವರ್ಷ ವಯಸ್ಸಿನ 2 ಹಿಂದೂ ಬಾಲಕಿಯರನ್ನು ಮನೆಗೆ ಕರೆದೊಯ್ದು ಮೌಲ್ವಿ ಫಿರೋಜ್ ಇಕ್ಬಾಲ್ ಶೇಖ್ (ವಯಸ್ಸು 35 ವರ್ಷ) ಎಂಬಾತ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಪೈಶಾಚಿಕ ಕೃತ್ಯದಿಂದ ರೊಚ್ಚಿಗೆದ್ದ ಹಿಂದೂಗಳು ಮೌಲ್ವಿ ಫಿರೋಜ್ ಶೇಖ್‌ನಿಗೆ ಥಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿಂದೂಗಳನ್ನು ಚದುರಿಸಲು ಪೊಲೀಸರು ಯತ್ನಿಸಿದರು. ಪೊಲೀಸರು ಮೌಲ್ವಿ ಫಿರೋಜ್ ಶೇಖ್‌ನನ್ನು ಕರೆದೊಯ್ಯುತ್ತಿದ್ದಾಗ ಗುಂಪು ಅವನನ್ನು ಎಳೆಯಲು ಪ್ರಯತ್ನಿಸಿತು. ಈ ವೇಳೆ ಪೊಲೀಸರು ಮತ್ತು ಗುಂಪಿನ ನಡುವೆಯೂ ವಾಗ್ವಾದ ನಡೆಯಿತು. ಇದರಿಂದಾಗಿ ಪೊಲೀಸರು ಸಂತ್ರಸ್ತ ಬಾಲಕಿಯರ ಪೋಷಕರು ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನೂ ಬಂಧಿಸಿದ್ದಾರೆ.

ಏಪ್ರಿಲ್ 25 ರಂದು ರಾತ್ರಿ 8 ಗಂಟೆಗೆ ಮನೆಯ ಹೊರಗೆ ಆಡುತ್ತಿದ್ದ ಸಣ್ಣ ಹಿಂದೂ ಬಾಲಕಿಯರ ಬಳಿ, ಅವರ ಪೋಷಕರು ತನ್ನ ಮನೆಯಲ್ಲಿದ್ದಾರೆ ಎಂದು ಸುಳ್ಳು ಹೇಳಿ ಮೌಲ್ವಿ ಅವರಿಬ್ಬರನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಅವರ ಬಟ್ಟೆ ಬಿಚ್ಚಿ ಅವರ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿದ್ದಾಗ, ಅವರಲ್ಲಿದ್ದ ಒಬ್ಬ ಬಾಲಕಿ ಭಯಗೊಂಡು ಓಡಿಹೋಗಿದ್ದಾಳೆ. ಅವಳು ನಡೆದ ಘಟನೆಯನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಆ ಸಮಯದಲ್ಲಿ ಸಂತ್ರಸ್ತ ಬಾಲಕಿಯ ತಾಯಿ ತಕ್ಷಣವೇ ಮೌಲ್ವಿಯ ಮನೆಗೆ ಹೋದಾಗ, ಆತ ಇನ್ನೊಬ್ಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಮಹಿಳೆಯು ಬಾಲಕಿಯರನ್ನು ಮೌಲ್ವಿಯ ಮನೆಯಿಂದ ಹೊರತಂದು ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಮುಕ ಮೌಲ್ವಿಯನ್ನು ವಶಕ್ಕೆ ಪಡೆಯಲು ಹಿಂದೂಗಳ ಪ್ರಯತ್ನ !

ಈ ಘಟನೆಯ ನಂತರ ಮೌಲ್ವಿ ಫಿರೋಜ್ ಮನೆಯ ಹೊರಗೆ ಭಾರಿ ಸಂಖ್ಯೆಯಲ್ಲಿ ಆಕ್ರೋಶಗೊಂಡ ಹಿಂದೂಗಳು ಜಮಾಯಿಸಿದರು. ಈ ವೇಳೆ ಪೊಲೀಸರು ಮೌಲ್ವಿ ಫಿರೋಜ್ ಶೇಖ್‌ನನ್ನು ಮನೆಯಿಂದ ಹೊರತಂದು ಪೊಲೀಸ್ ರಕ್ಷಣೆಯಲ್ಲಿ ಕರೆದೊಯ್ಯುತ್ತಿದ್ದಾಗ ಆಕ್ರೋಶಗೊಂಡ ಗುಂಪು ಆತನನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಆಕ್ರೋಶಗೊಂಡ ಗುಂಪಿನ ನಡುವೆ ವಾಗ್ವಾದ ನಡೆಯಿತು.

ಪೋಷಕರ ಬಂಧನ ವಿರೋಧಿಸಿ ಹಿಂದೂಗಳ ಪ್ರತಿಭಟನೆ !

ಆಕ್ರೋಶಗೊಂಡ ಹಿಂದೂಗಳನ್ನು ಚದುರಿಸಲು ಸಂತ್ರಸ್ತ ಬಾಲಕಿಯರ ಪೋಷಕರನ್ನು ಬಂಧಿಸಿದ್ದರಿಂದ ಗುಂಪು ಮತ್ತಷ್ಟು ರೊಚ್ಚಿಗೆದ್ದಿತು. ಪೋಷಕರ ಬಂಧನವನ್ನು ಖಂಡಿಸಿ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಜಮಾಯಿಸಿದರು. ಈ ವೇಳೆ ಮಾಜಿ ಸಂಸದ ಹಾಗೂ ಭಾಜಪ ನಾಯಕ ಕಿರಿಟ್ ಸೋಮಯ್ಯ ನೇತೃತ್ವದಲ್ಲಿ ಹಿಂದೂಗಳು ಘಾಟ್ಕೋಪರ್ ಪೊಲೀಸ್ ಠಾಣೆ ಎದುರು ರಾತ್ರಿ 2 ಗಂಟೆಗೆ ಧರಣಿ ನಡೆಸಿ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಾಜಪ ಶಾಸಕ ಪರಾಗ್ ಷಾ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ಸಂತ್ರಸ್ತರ ಕುಟುಂಬಸ್ಥರನ್ನು ಬಂಧಿಸುವುದು ಎಂದರೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಲ್ಲವೇ ?