
ಪಾಟಲಿಪುತ್ರ (ಬಿಹಾರ) – ಬಿಹಾರ ರಾಜ್ಯದ ಪೊಲೀಸ್ ಮಹಾನಿರ್ದೇಶಕ ವಿನಯ ಕುಮಾರ ಅವರು ರಾಜ್ಯದ ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿ, ಕರ್ತವ್ಯದ ಮೇಲಿರುವಾಗ ಸಮವಸ್ತ್ರಧಾರಿ ಪೊಲೀಸರು ಹಣೆಯ ಮೇಲೆ ತಿಲಕ ಅಥವಾ ಯಾವುದೇ ರೀತಿಯ ಧಾರ್ಮಿಕ ಚಿಹ್ನೆಗಳನ್ನು ಧರಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅವರು ಮಾತನಾಡುತ್ತಾ, ಪೊಲೀಸರು ಟೋಪಿ ಧರಿಸುವುದು ಮತ್ತು ಬೆಲ್ಟ್ ಹಾಕುವುದು ಕಡ್ಡಾಯವಾಗಿದೆ. ಹಾಗೆ ಮಾಡದ ಪೊಲೀಸರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು. ಸಮವಸ್ತ್ರಧಾರಿ ಪೊಲೀಸರು ಹತ್ತೂ ಬೆರಳುಗಳಿಗೆ ಉಂಗುರಗಳನ್ನು ಧರಿಸುವಂತಿಲ್ಲ. ಮಹಿಳಾ ಪೊಲೀಸರು ಕೂಡ ಕರ್ತವ್ಯದ ಸಮಯದಲ್ಲಿ ಅತಿ ಹೆಚ್ಚು ಅಲಂಕಾರ ಮಾಡಿಕೊಳ್ಳುವುದು ಮತ್ತು ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪೊಲೀಸ್ ಪಡೆಯಲ್ಲಿ ಏಕರೂಪತೆ ಮತ್ತು ವೃತ್ತಿಪರತೆಯನ್ನು ಕಾಪಾಡುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.
ಅನೇಕ ಸಂಘಟನೆಗಳ ಆಕ್ಷೇಪ!
ಈ ಆದೇಶವನ್ನು ‘ವಿಶ್ವಾಮಿತ್ರ ಸೇನಾ’ ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಜಕುಮಾರ ಚೌಬೆ ಅವರು ಖಂಡಿಸಿದ್ದು, ಈ ಆದೇಶವು ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಗಂಧ ಮತ್ತು ತಿಲಕವು ಸನಾತನ ಪರಂಪರೆ ಹಾಗೂ ಶ್ರದ್ಧೆಯ ಸಂಕೇತವಾಗಿದ್ದು, ಅದರ ಮೇಲೆ ನಿಷೇಧ ಹೇರುವುದು ಅಯೋಗ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಿಯಮವೇನು ಹೇಳುತ್ತದೆ?
‘ಬಿಹಾರ ಪೊಲೀಸ್ ಮ್ಯಾನುವಲ್ ೧೯೭೮’ ರ ಪ್ರಕಾರ ಕರ್ತವ್ಯದ ಮೇಲಿರುವ ಯಾವುದೇ ಪೊಲೀಸ್ ಸಿಬ್ಬಂದಿಗೆ ಯಾವುದೇ ಧರ್ಮದ ಚಿಹ್ನೆ, ಸಂಕೇತ ಅಥವಾ ಉಡುಪನ್ನು ಪ್ರದರ್ಶಿಸಲು ಅನುಮತಿಯಿಲ್ಲ. ಇದರಲ್ಲಿ ಹಿಂದೂ ಧರ್ಮದ ತಿಲಕ ಅಥವಾ ಗಂಧ ಮತ್ತು ಇಸ್ಲಾಂ ಧರ್ಮದ ಪ್ರಕಾರ ಬಿಡುವ ಗಡ್ಡದ ಮೇಲೆ ಸಮಾನವಾಗಿ ನಿಷೇಧ ಅನ್ವಯಿಸುತ್ತದೆ. ಸಮವಸ್ತ್ರದಲ್ಲಿರುವ ಪೊಲೀಸ್ ಸಿಬ್ಬಂದಿಯು ಯಾವುದೇ ಒಂದು ಧರ್ಮ ಅಥವಾ ಸಮುದಾಯದ ಪ್ರತಿನಿಧಿಯಂತೆ ಕಾಣದೆ ರಾಜ್ಯದ ಪ್ರತಿನಿಧಿಯಂತೆ ಕಾಣಬೇಕು ಎಂಬುದು ಇದರ ಮೂಲ ಉದ್ದೇಶವಾಗಿದೆ. ಆದಾಗ್ಯೂ, ಈ ನಿಯಮದಲ್ಲಿ ಸಿಖ್ ಧರ್ಮಕ್ಕೆ ವಿಶೇಷ ರಿಯಾಯಿತಿ ನೀಡಲಾಗಿದೆ. ನವರಾತ್ರಿಯಲ್ಲಿ ತಿಲಕ ಇಡಲು ಅಥವಾ ರಂಜಾನ್ ಸಮಯದಲ್ಲಿ ಗಡ್ಡ ಬಿಡಲು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮುಂಚಿತವಾಗಿ ಲಿಖಿತ ರೂಪದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿಯಿಲ್ಲದೆ ಈ ರೀತಿ ಮಾಡುವುದು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!