ಬಂಗಾಳದ ಪೊಲೀಸ್ ಕಾನ್ಸ್‌ಟೇಬಲ್ ರಾಮಕೃಷ್ಣ ಕಯಾಲ್ ಅವರ ಕರೆ
ಬಂಗಾಳ ಪೊಲೀಸರಿಂದ ಕಯಾಲ್ ಅಮಾನತು

ಕೋಲಕಾತಾ (ಬಂಗಾಳ) – ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಚುನಾವಣೆಯಲ್ಲಿ ಸೋಲಿಸುವಂತೆ ಬಂಗಾಳದ ಪೊಲೀಸ್ ಕಾನ್ಸ್‌ಟೇಬಲ್ ರಾಮಕೃಷ್ಣ ಕಯಾಲ್ ಅವರು ವಿಡಿಯೋ ಮೂಲಕ ಜನರಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಗಾಳ ಪೊಲೀಸರು ಏಪ್ರಿಲ್ 27 ರಂದು ಕಯಾಲ್ ಅವರನ್ನು ಅಮಾನತುಗೊಳಿಸಿದ್ದಾರೆ. ಬಂಗಾಳದಲ್ಲಿ ಏಪ್ರಿಲ್ 29 ರಂದು ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ.
ವಿಡಿಯೋದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಕಯಾಲ್ ಹೇಳಿದ್ದೇನು?
ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ 23 ನಿಮಿಷಗಳ ಈ ವಿಡಿಯೋದಲ್ಲಿ ಕಯಾಲ್ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರಕಾರವು ಬಂಗಾಳವನ್ನು ಇಸ್ಲಾಮೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಪೊಲೀಸ್ ಇಲಾಖೆಯನ್ನು ಇಸ್ಲಾಮೀಕರಣಗೊಳಿಸಿದೆ ಎಂದು ಅವರು ಹೇಳಿದರು. (ಈ ದೂರಿನಲ್ಲಿ ಸತ್ಯಾಂಶವಿದ್ದರೆ, ಭಾಜಪ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಬಂಗಾಳ ಮತ್ತು ಸಮಸ್ತ ಭಾರತೀಯರ ಅಪೇಕ್ಷೆಯಾಗಿದೆ! – ಸಂಪಾದಕರು) ಆಡಳಿತಾತ್ಮಕ ಮಟ್ಟದಲ್ಲಿ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಮತದಾನ ಮಾಡುವ ಜನರಿಗೆ ಕರೆ ನೀಡಿದ ಅವರು, “ತೃಣಮೂಲ ಕಾಂಗ್ರೆಸ್ ಸರಕಾರ ಅಧಿಕಾರದಿಂದ ಹೊರಹೋಗುವಂತೆ ಜನರು ಮತ ಚಲಾಯಿಸಬೇಕು” ಎಂದಿದ್ದಾರೆ. ಬಂಗಾಳದ ಹಿಂದೂಗಳು ನೆನಪಿಡಬೇಕಾದ ಅಂಶವೆಂದರೆ, ತೃಣಮೂಲ ಕಾಂಗ್ರೆಸ್‌ನ ಜಯ ಎಂದರೆ ಅದು ಜಿಹಾದಿ ಶಕ್ತಿಗಳ ಜಯವಾಗಿದೆ. ಈ ಜಿಹಾದಿ ಶಕ್ತಿಗಳು ಹಿಂದೂ ದೇವಾಲಯಗಳನ್ನು ಮತ್ತು ಧಾರ್ಮಿಕ ಸ್ಥಳಗಳನ್ನು ನಾಶಪಡಿಸುತ್ತವೆ ಹಾಗೂ ನಮ್ಮ ದೇವತೆಗಳ ಮೂರ್ತಿಗಳನ್ನು ಅವಮಾನಿಸುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ವಿಶೇಷವೆಂದರೆ, ಕಯಾಲ್ ಅವರು ತಮ್ಮ ಪೊಲೀಸ್ ಸಮವಸ್ತ್ರ ಧರಿಸಿಯೇ ಈ ವಿಡಿಯೋ ಮಾಡಿದ್ದಾರೆ.
ಕೋಲಕಾತಾ ಪೊಲೀಸರ ನಿಲುವು!
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಕಾತಾ ಪೊಲೀಸರು, “ಪೊಲೀಸ್ ಸಿಬ್ಬಂದಿಗಳು ಇಂತಹ ಯಾವುದೇ ವಿಡಿಯೋಗಳನ್ನು ಪ್ರಸಾರ ಮಾಡಬಾರದು ಅಥವಾ ಅವುಗಳನ್ನು ಬೆಂಬಲಿಸಬಾರದು. ಇದು ಸೇವಾ ನಿಯಮಗಳು ಮತ್ತು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ” ಎಂದು ತಿಳಿಸಿದ್ದಾರೆ.
ಭಾಜಪ ಶಾಸಕರ ನಿವಾಸದ ಹೊರಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಬಾಂಬ್ ಎಸೆತ !
ಕೋಲಕಾತಾ (ಬಂಗಾಳ) – ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರಾದಲ್ಲಿರುವ ಭಾಜಪ ಶಾಸಕ ಹಾಗೂ ಚುನಾವಣಾ ಅಭ್ಯರ್ಥಿ ಪವನ್ ಸಿಂಗ್ ಅವರ ನಿವಾಸದ ಹೊರಗೆ ಏಪ್ರಿಲ್ 26 ರ ರಾತ್ರಿ ಕೈಬಾಂಬ್ ಎಸೆಯಲಾಗಿದೆ. ಈ ವೇಳೆ ಗುಂಡಿನ ದಾಳಿಯೂ ನಡೆದಿದೆ. ಇದರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಓರ್ವ ಯೋಧ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಪೊಲೀಸರು 4 ಮಂದಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. (ಆಡಳಿತ ಪಕ್ಷವೇ ಹಿಂಸಾಚಾರದಲ್ಲಿ ತೊಡಗಿರುವುದರಿಂದ ಅದರ ಮೇಲೆ ಈಗ ನಿಷೇಧ ಹೇರಬೇಕು. ಬಂಗಾಳದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗ ಇದನ್ನು ಆದ್ಯತೆಯ ಮೇರೆಗೆ ಮಾಡಬೇಕೆಂದು ನಿರೀಕ್ಷಿಸಲಾಗಿದೆ ! – ಸಂಪಾದಕರು).
ಬಂಧಿತರಾದವರನ್ನು ಕೌಶಿಕ್ ದಾಸ್, ಸಿಕಂದರ್ ಪ್ರಸಾದ್, ಗೋಪಾಲ್ ರಾವತ್ ಮತ್ತು ಶ್ಯಾಮ್‌ದೇವ್ ಶಾ ಎಂದು ಗುರುತಿಸಲಾಗಿದೆ. ಇತರ ಆರೋಪಿಗಳನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಇವರಲ್ಲಿ ಫಿರೋಜ್ ಮತ್ತು ಮುಂಜಲ್ ರಜಕ್ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ