‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ ಸಂಘಟನೆಯ ಆರೋಪ

ನವದೆಹಲಿ – ‘ಆಪರೇಷನ್ ಸಿಂದೂರ್’ನಲ್ಲಿ ಸೋಲನುಭವಿಸಿದ ನಂತರ ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಅಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡಿದೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ತಮ್ಮ ವರ್ಚಸ್ಸನ್ನು ಸುಧಾರಿಸಿಕೊಳ್ಳಲು ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ ಎಂದು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ತನ್ನ ‘ಮುಜಲ್ಲಾ ತಾಲಿಬಾನ್’ ನಿಯತಕಾಲಿಕೆಯಲ್ಲಿ ಆರೋಪಿಸಿದೆ. ಈ ದಾಳಿಗಳಿಂದಾಗಿಯೇ ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಟಿಟಿಪಿ ಹೇಳಿದೆ.
🚨 Pakistan Exposed by TTP! 🚨
Pakistan’s conflict with Afghanistan is a result of its failure to defeat India, alleges TTP.
In its magazine Mujallah Taliban, Tehrik-i-Taliban Pakistan (TTP) claimed that after setbacks in “Operation Sindoor,” Pakistan deliberately shifted… pic.twitter.com/9ku2g76CEH
— Sanatan Prabhat (@SanatanPrabhat) April 27, 2026
ಅಫ್ಘಾನಿಸ್ತಾನವನ್ನು ಸುಲಭ ಗುರಿ ಎಂದು ಭಾವಿಸಿದ ಪಾಕಿಸ್ತಾನ!
ಭಾರತಕ್ಕಿಂತ ಅಫ್ಘಾನಿಸ್ತಾನ ಸುಲಭ ಗುರಿ ಎಂದು ಮುನೀರ್ ಅವರು ಪರಿಗಣಿಸಿದರು. ಮೇ 2025 ರಲ್ಲಿ ಭಾರತದೊಂದಿಗಿನ ಸಂಘರ್ಷದಲ್ಲಿ ಸೋಲನ್ನಪ್ಪಿದ ನಂತರ ಮತ್ತು ಜಗತ್ತಿನಾದ್ಯಂತ ಭಾರತಕ್ಕೆ ಭಾರಿ ಬೆಂಬಲ ಸಿಕ್ಕ ನಂತರ ಮುನೀರ್ ಈ ಮಾರ್ಗ ಆರಿಸಿಕೊಂಡರು. ತಮ್ಮ ಮಿಲಿಟರಿ ಯಶಸ್ಸನ್ನು ಪ್ರದರ್ಶಿಸುವುದು ಮತ್ತು ಪಾಕಿಸ್ತಾನದ ಮೇಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಲಪಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ಟಿಟಿಪಿ ಹೇಳಿದೆ.
ಪಾಕಿಸ್ತಾನವು ಫೆಬ್ರವರಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಬಹಿರಂಗ ಯುದ್ಧ ಘೋಷಿಸಿತು. ‘ಆಪರೇಷನ್ ಗಜ್ಬ್-ಲಿಲ್-ಹಕ್’ ಭಾಗವಾಗಿ ಪಾಕಿಸ್ತಾನಿ ಸೈನ್ಯವು ಅಫ್ಘಾನಿಸ್ತಾನದ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿತು. ಈ ದಾಳಿಗೆ ಅಫ್ಘಾನಿಸ್ತಾನ ಕೂಡ ತಕ್ಕ ಪ್ರತ್ಯುತ್ತರ ನೀಡಿತು. ಎರಡೂ ದೇಶಗಳ ನಡುವಿನ 2,611 ಕಿಲೋಮೀಟರ್ ಉದ್ದದ ಗಡಿಯನ್ನು ‘ಡ್ಯುರಾಂಡ್ ಲೈನ್’ ಎಂದು ಕರೆಯಲಾಗುತ್ತದೆ. ಆದರೆ, ಅಫ್ಘಾನಿಸ್ತಾನ ಈ ರೇಖೆಗೆ ಅಧಿಕೃತ ಮಾನ್ಯತೆ ನೀಡುವುದಿಲ್ಲ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ