ಸಾರಸಬಾಗ್ ಅನ್ನು ‘ಶಾಹೀನ್ ಬಾಗ್’ ಆಗಲು ಬಿಡುವುದಿಲ್ಲ! – ಹಿಂದುತ್ವನಿಷ್ಟರ ನಿರ್ಧಾರ

  • ಪುಣೆಯ ಐತಿಹಾಸಿಕ ಸಾರಸಬಾಗ್ ‘ಹಸಿರೀಕರಣ’ದ ವಿರುದ್ಧ ಹಿಂದುತ್ವನಿಷ್ಟರ ಪ್ರತಿಭಟನೆ

  • ಬಕ್ರೀದ್ ಹಿನ್ನೆಲೆಯಲ್ಲಿ ಸಾರಸಬಾಗ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಆಗ್ರಹ

(‘ಶಾಹೀನ್ ಬಾಗ್’ ಎಂಬುದು ದೆಹಲಿಯ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿದ್ದು, ಅಲ್ಲಿ ಮುಸ್ಲಿಮರು ಒಟ್ಟುಗೂಡಿ ಅನೇಕ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿ ಸಾಮಾನ್ಯ ನಾಗರಿಕರನ್ನು ಸಂಕಷ್ಟಕ್ಕೆ ಈಡುಮಾಡಿದ್ದರು.)

ಪುಣೆ – ಸಮಸ್ತ ಪುಣೆಯ ಜನರ ಶ್ರದ್ಧಾಕೇಂದ್ರವೂ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದೂ ಆಗಿರುವ ಸಾರಸಬಾಗ್ ಮತ್ತು ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರದ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಸಾರಸಬಾಗ್ ಎದುರಿನ ಪಾದಚಾರಿ ಮಾರ್ಗದ ಮೇಲೆ ಹಿಂದುತ್ವನಿಷ್ಟ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು. ಈ ಪ್ರತಿಭಟನೆಯಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪೇಶ್ವೆ ಕಾಲದ ಪರಂಪರೆಯನ್ನು ಹೊಂದಿರುವ ಈ ಪವಿತ್ರ ಸ್ಥಳದ ರಕ್ಷಣೆಯಲ್ಲಿ ಆಡಳಿತ ಮಂಡಳಿಯು ಸಂಪೂರ್ಣವಾಗಿ ವಿಫಲವಾಗಿದೆ. ‘ರಂಜಾನ್ ಈದ್’ ಮರುದಿನ ಈ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಜನರು ಜಮಾಯಿಸಿದ ಹಿನ್ನೆಲೆಯಲ್ಲಿ, ಈ ವರ್ಷ ಯಾರ ಒತ್ತಡಕ್ಕೆ ಮಣಿದು ಈ ಅನುಮತಿ ನೀಡಲಾಯಿತು? ಎಂದು ಆಕ್ರೋಶ ಭರಿತ ಪ್ರಶ್ನೆಗಳನ್ನು ಎತ್ತುವ ಮೂಲಕ ಆಡಳಿತದ ಧೋರಣೆಯನ್ನು ಪ್ರತಿಭಟನಾಕಾರರು ಟೀಕಿಸಿದರು.

‘ಸಾರಸಬಾಗ್‌ನಲ್ಲಿ ನಡೆಯುತ್ತಿರುವ ಧಾರ್ಮಿಕ ಅತಿಕ್ರಮಣಕ್ಕೆ ಧಿಕ್ಕಾರ’ ‘ಸಾರಸಬಾಗ್‌ನಲ್ಲಿ ಧಾರ್ಮಿಕ ಅತಿಕ್ರಮಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ‘ಧಾರ್ಮಿಕ ಕ್ಷೇತ್ರದ ಪವಿತ್ರತೆಯನ್ನು ಹಾಳುಮಾಡುವವರಿಗೆ ಧಿಕ್ಕಾರವಿರಲಿ’ ‘ಹಿಂದೂಗಳ ಧಾರ್ಮಿಕ ಕ್ಷೇತ್ರದ ಹಸಿರೀಕರಣವನ್ನು ಸಹಿಸುವುದಿಲ್ಲ’ ‘ಸಾರಸಬಾಗ್‌ನಲ್ಲಿ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ಸಹಿಸುವುದಿಲ್ಲ’ ಇಂತಹ ಘೋಷಣೆಗಳನ್ನು ಕೂಗುವ ಮೂಲಕ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು.

ಮಾರ್ಚ್ 22, 2026 ರಂದು ಸಾರಸಬಾಗ್‌ನಲ್ಲಿ ಅಸಹಜವಾಗಿ ಜನರು ಜಮಾಯಿಸಿದ್ದರು. ಅಲ್ಲಿ ಜಮಾಯಿಸಲು ಅನುಮತಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಬೇಕು, ಹಾಗೂ ಮಂದಿರದ ಆವರಣದಲ್ಲಿ ಅಹಿಂದೂಗಳ ಸಾಮೂಹಿಕ ಕಾರ್ಯಕ್ರಮಗಳಿಗೆ ಶಾಶ್ವತವಾಗಿ ನಿಷೇಧ ಹೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. (ಇಂತಹ ಬೇಡಿಕೆಗಳನ್ನು ಹೇಗೆ ಮಾಡಬೇಕಾಗುತ್ತದೆ? ಸರಕಾರ ಸಕ್ಷಮ ಇಲ್ಲವೇ? – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹ ಬೇಡಿಕೆ ಮತ್ತು ಪ್ರತಿಭಟನೆಗಳನ್ನು ಏಕೆ ಮಾಡಬೇಕಾಗುತ್ತದೆ? ಆಡಳಿತ ಮಂಡಳಿಯ ಅಧಿಕಾರಿಗಳು ನಿದ್ರಿಸುತ್ತಿದ್ದಾರೆಯೇ?