ವಾರಣಾಸಿ: ಅಮಿತ್ ಎಂದು ಸುಳ್ಳು ಹೇಳಿ ಹಿಂದೂ ಯುವತಿಯನ್ನು ವಿವಾಹವಾದ ಅಫ್ತಾಬ್; ಮತಾಂತರಕ್ಕೆ ಒತ್ತಾಯ!

ವಿರೋಧಿಸಿದ್ದಕ್ಕಾಗಿ ಮೈದುನನಿಂದ ಯುವತಿಯ ಮೇಲೆ ಅತ್ಯಾಚಾರ

ವಾರಣಾಸಿ (ಉತ್ತರಪ್ರದೇಶ) – ಅಫ್ತಾಬ್ ಎಂಬ ಮುಸಲ್ಮಾನ ಯುವಕನೊಬ್ಬ ತನ್ನ ಹೆಸರನ್ನು ಅಮಿತ್ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸಿಲುಕಿಸಿದನು. ನಂತರ ಮದುವೆಯ ಆಮಿಷವೊಡ್ಡಿ ಆಕೆಯ ಮೇಲೆ ಹಲವು ಬಾರಿ ಬಲಾತ್ಕಾರ ನಡೆಸಿದನು. ಕೆಲವು ದಿನಗಳ ನಂತರ ಆತ ಹಿಂದೂ ಸಂಪ್ರದಾಯದಂತೆ ಯುವತಿಯನ್ನು ವಿವಾಹವಾದನು. ಅಫ್ತಾಬ್ ಈಗ ಮತಾಂತರಕ್ಕಾಗಿ ಯುವತಿಯ ಮೇಲೆ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ.

೧. ಮದುವೆಯಾದ ಕೆಲವು ಸಮಯದ ನಂತರ ಆ ಯುವಕನ ನಿಜವಾದ ಹೆಸರು ಅಫ್ತಾಬ್ ಅನ್ಸಾರಿ ಎಂದು ಮತ್ತು ಆತ ಮುಸಲ್ಮಾನ ಎಂಬ ಸತ್ಯ ಹೊರಬಂದಿದೆ. ತಾನು ಅನುಭವಿಸಿದ ಈ ವಂಚನೆಯನ್ನು ವಿರೋಧಿಸಿದಾಗ, ಆರೋಪಿ ಮತ್ತು ಆತನ ಕುಟುಂಬದವರು ತನ್ನ ಮೇಲೆ ಹಲ್ಲೆ ನಡೆಸಿ, ಮತಾಂತರಗೊಳ್ಳುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ಆರೋಪಿಯ ಸಹೋದರ ಕೂಡ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂಬ ಗಂಭೀರ ಆರೋಪ ಸಂತ್ರಸ್ತೆ ಮಾಡಿದ್ದಾಳೆ.

೨. ಸಂತ್ರಸ್ತೆಯು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ತನ್ನ ತವರು ಮನೆಗೆ ಬಂದು ಕುಟುಂಬದವರಿಗೆ ಎಲ್ಲ ಮಾಹಿತಿಯನ್ನು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ; ಆದರೆ ಆರೋಪಿಯು ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ, ಅಂದರೆ ‘ಲವ್ ಜಿಹಾದ್’ ವಿರೋಧಿ ಕಾಯಿದೆ ಜಾರಿಯಲ್ಲಿದ್ದರೂ ಇಂತಹ ಘಟನೆಗಳು ಸತತವಾಗಿ ನಡೆಯುತ್ತಿವೆ. ಇದಕ್ಕೆ ಕಾರಣ ಕಠಿಣ ಶಿಕ್ಷೆಯ ಅಭಾವ ಮತ್ತು ಪೊಲೀಸರ ನಿರ್ಲಕ್ಷ್ಯವಾಗಿದೆ. ಇಂತಹ ಘಟನೆಗಳಲ್ಲಿ ಈಗ ಮರಣದಂಡನೆ ಶಿಕ್ಷೆಯಾಗುವಂತೆ ಕಾಯ್ದೆ ತಿದ್ದುಪಡಿ ಮಾಡುವುದು ಮತ್ತು ಪೊಲೀಸರ ಮೇಲೆ ನಿಗಾ ಇಡುವುದು ಅತ್ಯಗತ್ಯವಾಗಿದೆ!