ಎಲ್ಲಾ ಓದುಗರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

೧. ಅಧಿಕ ಮಾಸದಲ್ಲಿ ಜ್ಞಾನದಾನಕ್ಕೆ ಇರುವ ವಿಶೇಷ ಮಹತ್ವ
೧೭.೫.೨೦೨೬ ರಿಂದ ೧೫.೬.೨೦೨೬ ರ ಅವಧಿಯಲ್ಲಿ ‘ಅಧಿಕ ಮಾಸ’ ಇದೆ. ‘ಅಧಿಕ ಮಾಸದಲ್ಲಿ ಮಂಗಳಕಾರ್ಯಗಳನ್ನು ಮಾಡದೆ ವಿಶೇಷ ವ್ರತಗಳು ಮತ್ತು ಪುಣ್ಯಕಾರಕ ಕೃತಿಗಳನ್ನು ಮಾಡಬೇಕು’, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ಮಾಸದಲ್ಲಿ ದಾನ ಮಾಡಿದರೆ ಅದರ ಫಲವು ಹಲವು ಪಟ್ಟು ಹೆಚ್ಚಾಗಿ ಸಿಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ವಸ್ತ್ರದಾನ, ಅನ್ನದಾನ ಮತ್ತು ಜ್ಞಾನದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಭಾರತೀಯ ಸಂಸ್ಕೃತಿಯಲ್ಲಿ ‘ಜ್ಞಾನದಾನ ಮಾಡುವುದನ್ನು’ ಸರ್ವಶ್ರೇಷ್ಠವೆಂದು ಪರಿಗಣಿಸಲಾಗುವುದರಿಂದ ಅನೇಕರು ಇದಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ.
೨. ಸನಾತನದ ಸರ್ವಸ್ಪರ್ಶಿ ಗ್ರಂಥಸಂಪತ್ತು : ಜ್ಞಾನದಾನ ಮಾಡಲು ಸರ್ವೋತ್ತಮ ಮಾಧ್ಯಮ !

ಸನಾತನದ ವೈವಿಧ್ಯಮಯ ಮತ್ತು ಸರ್ವಸ್ಪರ್ಶಿ ಗ್ರಂಥಸಂಪತ್ತು ಎಂದರೆ ಶಾಶ್ವತ ಜ್ಞಾನದ ಅಮೂಲ್ಯ ನಿಧಿ ! ಸನಾತನವು ‘ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಧರ್ಮಾಚರಣೆ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಪತ್ಕಾಲದಲ್ಲಿ ಜೀವಿಸಲು ಉಪಾಯಗಳು’ ಇತ್ಯಾದಿ ವಿಷಯಗಳ ಕುರಿತು ಸುಮಾರು ೩೭೦ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಪ್ರಕಟಿಸಿದೆ. ಈ ಗ್ರಂಥಗಳು ಸರಳ ಭಾಷೆಯಲ್ಲಿ ಓದುಗರಿಗೆ ಅಮೂಲ್ಯ ಜ್ಞಾನವನ್ನು ನೀಡುತ್ತವೆ, ಅಷ್ಟೇ ಅಲ್ಲದೆ ಧರ್ಮದ ಬಗ್ಗೆ ಶ್ರದ್ಧೆಯನ್ನೂ ಹೆಚ್ಚಿಸುತ್ತವೆ. ಆದ್ದರಿಂದ, ಈ ಅಧಿಕ ಮಾಸದಲ್ಲಿ ಇಂತಹ ಗ್ರಂಥದಾನದ ಮೂಲಕ ಜ್ಞಾನದಾನ ಮಾಡಿ ಪುಣ್ಯಸಂಚಯದ ಜೊತೆಗೆ ಆಧ್ಯಾತ್ಮಿಕ ಲಾಭವನ್ನು ಪಡೆದುಕೊಳ್ಳಿ.
ಇತರರಿಗೆ ನೀಡಲು ನಿಮಗೆ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು ಬೇಕಿದ್ದರೆ, ಅವುಗಳ ಬೇಡಿಕೆಯನ್ನು ಆದಷ್ಟು ಬೇಗ ಸ್ಥಳೀಯ ವಿತರಕರಿಗೆ ತಿಳಿಸಿ ಅಥವಾ https://sanatanshop.com/shop ಈ ಲಿಂಕ್‌ನಲ್ಲಿ ನೋಂದಾಯಿಸಿ.
ಸಾಧಕರು ಓದುಗರಿಗೆ, ಹಿತೈಷಿಗಳು ಮತ್ತು ಧರ್ಮಪ್ರೇಮಿಗಳಿಗೆ ವಿವಿಧ ವಿಷಯಗಳ ಗ್ರಂಥಗಳ ಮಾಹಿತಿಯನ್ನು ‘ವಾಟ್ಸಾಪ್’ ಮೂಲಕ ಕಳುಹಿಸಿ ಮತ್ತು ಅವರ ಆಸಕ್ತಿಯಂತೆ ಗ್ರಂಥಗಳನ್ನು ಆಯ್ಕೆ ಮಾಡಲು ತಿಳಿಸಿ
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !