ಮಂಗಳೂರಿನ ಕು. ಮೋಕ್ಷಾ ಕುಡ್ವ ಇವಳಿಗೆ ಸಿ.ಬಿ.ಎಸ್.ಸಿ.ಯ ೧೦ ನೇ ತರಗತಿಯಲ್ಲಿ ಶೇ. ೮೮ ರಷ್ಟು ಅಂಕ

ಕು. ಮೋಕ್ಷಾ ಕುಡ್ವ

ಮಂಗಳೂರು – ‘ಇಲ್ಲಿನ ಪ್ರತಿಷ್ಠಿತ ‘ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ.’ ಶಾಲೆಯ ವಿದ್ಯಾರ್ಥಿನಿ ಕು. ಮೋಕ್ಷಾ ಕುಡ್ವ ಇವಳು ಸಿ.ಬಿ.ಎಸ್.ಸಿ.ಯ ೧೦ ನೆಯ ತರಗತಿಯಲ್ಲಿ ಶೇ. ೮೮ ರಷ್ಟು ಅಂಕ ಪಡೆದಿದ್ದಾಳೆ. ಶ್ರೀ. ವಿಜಯೇಂದ್ರ ಕುಡ್ವ ಮತ್ತು ಸನಾತನದ ಸಾಧಕಿ ಸೌ. ಪವಿತ್ರಾ ಕುಡ್ವ ಅವರ ಪುತ್ರಿಯಾಗಿರುವ ಕು. ಮೋಕ್ಷಾ ಸಾಂದರ್ಭಿಕ ಸೇವೆಯನ್ನೂ ಮಾಡುತ್ತಿದ್ದಾಳೆ. ಅವಳು ಯಾವುದೇ ಹೊರಗಿನ ‘ಖಾಸಗಿ ಕಲಿಕಾವರ್ಗ’ಕ್ಕ (ಟ್ಯೂಷನ್‌ಗೆ)ಹೋಗದೇ ಶಾಲೆಯಲ್ಲಿ ಕಲಿಸಿದ್ದನ್ನೇ ಶ್ರದ್ಧೆಯಿಂದ ಕಲಿತು ಈ ಯಶಸ್ಸು ಗಳಿಸಿದ್ದಾಳೆ. ‘ಇದು ಕೇವಲ ಗುರುಕೃಪೆ ಹಾಗೂ ನಿರಂತರ ಪ್ರಯತ್ನದಿಂದ ಸಾಧ್ಯವಾಯಿತು’ ಎಂದು ಕು. ಮೋಕ್ಷಾ ಈ ಸಮಯದಲ್ಲಿ ಕೃತಜ್ಞತಾಪೂರ್ವಕವಾಗಿ ತಿಳಿಸಿದ್ದಾಳೆ.