ಅಪಾಯದ ಸುಳಿಯಲ್ಲಿ ಸಿಲುಕಿದ ಹಿಂದುತ್ವ !

ಪ್ರತಿಕಾತ್ಮಕ ಚಿತ್ರ

ವರ್ತಮಾನದಲ್ಲಿ ಹಿಂದೂ ಹುಡುಗಿಯರ ಶೋಷಣೆಯ ಆಘಾತಕಾರಿ ಘಟನೆಗಳು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಹೊರಬರುತ್ತಿವೆ. ‘ಹಿಂದೂ ಹುಡುಗಿಯರ ವಿಷಯದಲ್ಲಿ ಇದೆಲ್ಲಾ ಏನು ನಡೆಯುತ್ತಿದೆ ?’ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಸಹಜವಾಗಿಯೇ ಈ ಪರಿಸ್ಥಿತಿ ದಿಢೀರನೆ ನಿರ್ಮಾಣವಾಗಿಲ್ಲ; ಇದರ ಹಿಂದೆ ಕಳೆದ ಕೆಲವು ವರ್ಷಗಳ ಹಿನ್ನೆಲೆಯಿದೆ. ತಥಾಕಥಿತ ‘ಸ್ವಾತಂತ್ರ್ಯ’ಕ್ಕಾಗಿ ಹಂಬಲಿಸುವ ಮತ್ತು ಆ ಮೂಲಕ ಆಧುನಿಕತೆ ತುತ್ತಾಗುತ್ತಿರುವ ಹುಡುಗಿಯರ ವಿಷಯದಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂಬುದು ವಾಸ್ತವ. ಆಧುನಿಕತೆಗೆ ಮಿತಿಗಳಿವೆ. ಆ ಮಿತಿಗಳನ್ನು ಮೀರಿ ಅಥವಾ ಅವುಗಳನ್ನು ಧಿಕ್ಕರಿಸಿ ಯಾರಾದರೂ ನಡೆದರೆ, ಅದರ ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ. ಏಕೆಂದರೆ ಅತ್ಯಾಧುನಿಕತೆಯನ್ನು ಅಪ್ಪಿಕೊಳ್ಳುವ ಭರದಲ್ಲಿ ನೈತಿಕ ಮೌಲ್ಯಗಳು ಯಾವಾಗ ಕಳಚಿ ಬೀಳುತ್ತವೆ ಎಂಬುದು ಅರಿವಿಗೇ ಬರುವುದಿಲ್ಲ. ಇದೇ ಕಾರಣಕ್ಕಾಗಿ ಹಿಂದೂಗಳು ಸಂಸ್ಕಾರ, ಜಾಗರೂಕತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ.

ಜಿಹಾದಿಗಳು ಹೆಣೆದ ಬಲೆ !

ಪ್ರತಿಕಾತ್ಮಕ ಚಿತ್ರ

ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ನೋಡೋಣ. ಮಲ್ಯಾಳಂ ಚಿತ್ರರಂಗದ ನಟ ಶಿಯಾಸ್ ಕರೀಮ್ ತನ್ನ ಹಿಂದೂ ಗೆಳತಿಯ ಮೇಲೆ ಗೋಮಾಂಸ ತಿನ್ನಲು ಒತ್ತಡ ಹೇರಿದ್ದಾನೆ. ಮಹಾರಾಷ್ಟ್ರದ ಅಮರಾವತಿಯ ಘಟನೆಯಲ್ಲಂತೂ ಮುಸಲ್ಮಾನ ಯುವಕನೊಬ್ಬ ೧೮೦ ಹಿಂದೂ ಹುಡುಗಿಯರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿದ್ದಾನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂದೂ ಹುಡುಗಿಯರು ಮುಸಲ್ಮಾನ ಯುವಕನ ಹಿಂದೆ ಹೇಗೆ ಹೋಗುತ್ತಾರೆ ? ನಾಸಿಕ್‌ನಲ್ಲಿ ನಡೆದ ಘಟನೆಯಂತೂ ಇನ್ನೂ ಆಘಾತಕಾರಿಯಾಗಿದೆ. ಒಂದು ಕಾಲದಲ್ಲಿ ತೀರ್ಥಕ್ಷೇತ್ರಗಳಿಗೆ ಪ್ರಸಿದ್ಧವಾಗಿದ್ದ ನಾಸಿಕ್ ಇಂದು ‘ವ್ಯಾವಸಾಯಿಕ ಜಿಹಾದ್’ನ ಕೇಂದ್ರ ಎಂಬ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡಿದೆ. ಅಲ್ಲಿ ಮತಾಂತರಕ್ಕಾಗಿ ಹಿಂದೂ ಹುಡುಗಿಯರನ್ನೇ ಬಳಸಿಕೊಳ್ಳಲಾಯಿತು. ಒಂದು ಸಂಸ್ಥೆಯಲ್ಲಿ ‘ಹಿಜಾಬ್’ ಧರಿಸಲು ಅವಕಾಶವಿತ್ತು, ಆದರೆ ಬೊಟ್ಟು, ಕುಂಕುಮ ಮತ್ತು ಮೆಹಂದಿ ಹಚ್ಚುವುದನ್ನು ನಿಷೇಧಿಸಲಾಗಿತ್ತು. ಹೀಗಿದ್ದರೂ ಅಲ್ಲಿ ಅನೇಕ ಹಿಂದೂ ಮಹಿಳೆಯರು ಕೆಲಸ ಮಾಡುತ್ತಿದ್ದರು. ಇಲ್ಲಿ ಪ್ರಶ್ನೆಯೆನೆಂದರೆ, ಇದೆಲ್ಲವೂ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ವಿಷಯದಲ್ಲೇ ಏಕೆ ನಡೆಯುತ್ತದೆ ? ಇತರ ಧರ್ಮದ ಹುಡುಗಿಯರ ಪಾಲ್ಗೊಳ್ಳುವಿಕೆ ಇಂತಹ ಘಟನೆಗಳಲ್ಲಿ ತೀರಾ ಕಡಿಮೆ ಇರುವಾಗ, ಹಿಂದೂಗಳೇ ಏಕೆ ಬಲಿಯಾಗುತ್ತಿದ್ದಾರೆ ?

ಹಿಂದೂ ಹುಡುಗಿಯರು ಅಷ್ಟು ಅಗ್ಗವಾಗಿದ್ದಾರೆಯೇ ? ಯಾರೋ ಒಬ್ಬನು ಸಿಹಿಯಾಗಿ ಮಾತನಾಡಿ, ನಂಬಿಕೆ ಗಳಿಸಿ, ಸ್ನೇಹದ ಹೆಸರಿನಲ್ಲಿ ಭಾವನಾತ್ಮಕವಾಗಿ ಹತ್ತಿರವಾಗಿ ನಂತರ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮಾಡುತ್ತಾನೆ. ಬಳಕೆಯಾದ ನಂತರ ಮತ್ತೆ ಇನ್ನೊಬ್ಬ ಹಿಂದೂ ಹುಡುಗಿಯ ಕಡೆಗೆ ಮುಖ ಮಾಡುತ್ತಾನೆ. ಹುಡುಗಿಯರ ಪೋಷಕರು ಅಸಹಾಯಕರಾಗಿ ಇವನ್ನೆಲ್ಲಾ ನೋಡುತ್ತಾ ಕುಳಿತಿರುತ್ತಾರೆ. ಕೆಲವು ಪೋಷಕರಿಗಂತೂ ತಮ್ಮ ಮಗಳು ಏನು ಮಾಡುತ್ತಿದ್ದಾಳೆ, ಯಾರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದಾಳೆ ಎಂಬುದರ ಸುಳಿವೇ ಇರುವುದಿಲ್ಲ. ಅತಿಸ್ವಾತಂತ್ರ್ಯದ ಭರದಲ್ಲಿ ‘ನಾವು ಮಗಳ ಜೀವನವನ್ನು ಹಾಳು ಮಾಡುತ್ತಿದ್ದೇವೆ’ ಎಂಬ ಕಲ್ಪನೆಯೂ ಅವರಿಗೆ ಇರುವುದಿಲ್ಲ. ‘ನನ್ನ ಅಬ್ದುಲ್ ಹಾಗಿಲ್ಲ’ ಎಂದು ಕೆಲವು ಹಿಂದೂ ಹುಡುಗಿಯರು ನಂಬುವಂತೆ, ‘ನನ್ನ ಮಗಳು ಅಂತಹವಳಲ್ಲ’ ಎಂದು ಪೋಷಕರು ಎದೆಯುಬ್ಬಿಸಿ ಹೇಳುತ್ತಾರೆ. ಆದರೆ ಅವಳು ಮುಸಲ್ಮಾನ ಯುವಕನೊಂದಿಗೆ ಮದುವೆಯಾದ ವಾಸ್ತವ ಮುಂದೆ ಬಂದಾಗ ಪೋಷಕರ ಕಾಲ ಕೆಳಗಿನ ಭೂಮಿ ಕುಸಿದಂತಾಗುತ್ತದೆ. ಆದರೆ ಅಷ್ಟರೊಳಗೆ ಕಾಲ ಮಿಂಚಿ ಹೋಗಿರುತ್ತದೆ. ಕೆಲವು ನಗರಗಳಲ್ಲಿ ಹಿಂದೂ ಹುಡುಗಿಯರು ಮುಸಲ್ಮಾನರನ್ನು ವಿವಾಹವಾಗಿ, ಅದನ್ನು ಪೋಷಕರಿಂದ ಮುಚ್ಚಿಟ್ಟಿರುವ ಘಟನೆಗಳು ವಾಸ್ತವದಲ್ಲಿ ನಡೆದಿವೆ. ಹಿಂದೂ ಹುಡುಗಿಯರಿಗೆ ಇದು ಕೇವಲ ‘ಪ್ರೇಮ ಪ್ರಕರಣ’ ಎನಿಸಬಹುದು, ಆದರೆ ವಾಸ್ತವದಲ್ಲಿ ಇದು ಹಿಂದೂ ಧರ್ಮವನ್ನು ನಾಶ ಮಾಡಲು ಜಿಹಾದಿ ಮತಾಂಧರು ಹೆಣೆದ ಬಲೆ ಎಂಬುದು ನೆನಪಿರಲಿ. ಒಮ್ಮೆ ಬಲೆಗೆ ಬಿದ್ದರೆ ಅವಳು ತನ್ನ ‘ಅಸ್ತಿತ್ವ’ವನ್ನೇ ಕಳೆದುಕೊಳ್ಳುತ್ತಾಳೆ. ‘ಹಿಂದೂ ಹುಡುಗಿಯರಿಗೆ ಈ ವಾಸ್ತವ ಏಕೆ ತಿಳಿಯುತ್ತಿಲ್ಲ ? ಅವರು ತಮ್ಮ ಬುದ್ಧಿಯನ್ನು ಅಡವಿಟ್ಟಿದ್ದಾರೆಯೇ ?’ ಎಂಬ ಆಕ್ರೋಶದ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಹಿಂದೂ ಹುಡುಗಿಯರು ತಮ್ಮ ವಿವೇಚನೆಯನ್ನು ಏಕೆ ಕಳೆದುಕೊಳ್ಳುತ್ತಾರೆ ?

ವಶೀಕರಣದ ವಿಷಯವು ಸರಿಯಾಗಿದ್ದರೂ, ‘ನಾವು ಹಿಂದೂಗಳು’ ಎನ್ನುವ ಗುರುತನ್ನೇ ಅಳಿಸಿ ಹಾಕುತ್ತಿದ್ದರೆ, ಇಂತಹ ಹುಡುಗಿಯರಿಗೆ ಸಹಾಯ ಮಾಡುವವರು ಯಾರು ?

ಇತ್ತೀಚೆಗೆ ನಾಸಿಕ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಒಬ್ಬ ಮುಸಲ್ಮಾನ ವ್ಯಕ್ತಿ ಪ್ರತಿಷ್ಠಿತ ಸಂಸ್ಥೆಯೊಂದರ ಉದ್ಯೋಗದ ಜಾಹೀರಾತು ನೀಡಿದ್ದ. ಅದರಲ್ಲಿ ರಾತ್ರಿ ಪಾಳಿ ಕೆಲಸ ಮತ್ತು ಮಹಿಳೆಯರಿಗೆ ವಾಹನ ಸೌಕರ್ಯದ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ಜಾಹೀರಾತನ್ನು ನೋಡಿ ಅನೇಕ ಹಿಂದೂ ಯುವತಿಯರು ತಮ್ಮ ಮಾಹಿತಿಯನ್ನು ಆ ವ್ಯಕ್ತಿಗೆ ನೀಡಿದ್ದಾರೆ. ಮುಂದೆ ಅವರ ಗತಿ ಏನಾಗಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಆ ಯುವತಿಯರಲ್ಲಿ ನಿಮ್ಮ ಮಗಳು, ತಂಗಿ ಅಥವಾ ಗೆಳತಿ ಇರಬಾರದಲ್ಲವೇ ? ಇಸ್ಲಾಮಿಕ್ ಆಕ್ರಮಣಕಾರರು ಆ ಕಾಲದಲ್ಲಿ ಹಿಂದೂ ಮಹಿಳೆಯರ ಮೇಲೆ ಮಾಡಿದ ದೌರ್ಜನ್ಯಗಳೇ ಇಂದು ಮರುಕಳಿಸುತ್ತಿವೆ. ಇಸ್ಲಾಮಿಕ್ ಆಕ್ರಮಣಕಾರರ ಹೆಜ್ಜೆಗುರುತುಗಳನ್ನು ಅಳಿಸಿಹಾಕಬೇಕೋ ಅಥವಾ ಕಾಪಾಡಬೇಕೋ ಎಂಬುದನ್ನು ಹಿಂದೂ ಸಮಾಜವೇ ನಿರ್ಧರಿಸಬೇಕು.

ಜಾತ್ಯತೀತತೆಯ ಪೊರೆಯನ್ನು ಕಳಚಿ ಹಾಕಿ !

ಇದುವರೆಗೆ ನಡೆದ ಘಟನೆಗಳನ್ನು ಗಮನಿಸಿದರೆ ಹಿಂದೂ ಮಹಿಳೆಯರನ್ನೇ ಗುರಿಯಾಗಿಸಿ ‘ಹಿಂದುತ್ವ’ವನ್ನು ಮುಗಿಸುವ ಸಂಚು ಇದರ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ದುರ್ದೈವವೆಂದರೆ ಹಿಂದೂಗಳಿಗೆ ಇದು ಅರ್ಥವಾಗುತ್ತಿಲ್ಲ. ಇಂದಿನ ಹಿಂದೂ ಹುಡುಗಿಯರಿಗೆ ಕುಂಕುಮ, ಟಿಕಲಿ ಇಡಲು ಇಷ್ಟವಿಲ್ಲ, ಆದರೆ ಹಿಜಾಬ್ ಧರಿಸಲು ಇಷ್ಟಪಡುತ್ತಾರೆ. ಅನೇಕ ಹಿಂದೂ ಮಹಿಳೆಯರು ಅಶ್ಲೀಲ ಹಾಡುಗಳಿಗೆ ಕುಣಿದು ‘ರೀಲ್ಸ್’ ಮಾಡುತ್ತಿದ್ದಾರೆ. ಇಂತಹ ಸಮಾಜದ ಭವಿಷ್ಯ ಖಂಡಿತವಾಗಿಯೂ ಭಯಾನಕವಾಗಿದೆ. ಇಂತಹ ಮನೋಭಾವವನ್ನು ಬೆಳೆಸಿಕೊಳ್ಳುವ ಸಮಾಜದಲ್ಲಿ ಇದಕ್ಕಿಂತ ಬೇರೆ ಏನು ತಾನೇ ಸಂಭವಿಸಬಹುದು ? ಹಿಂದೂ ಸಮಾಜವು ಯಾವಾಗ ಎಚ್ಚೆತ್ತುಕೊಳ್ಳುತ್ತದೆ ?” ‘ನನಗೇನು ?’ ಎಂಬ ಮಾನಸಿಕತೆಯನ್ನು ಹಿಂದೂ ಸಮಾಜ ಎಂದು ಬಿಡುತ್ತದೆ ? ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಬೇಕಾದ ಹಿಂದುತ್ವದ ಕಿಚ್ಚು ಇಂದು ಮನೆಯ ಹೊರಗೆ ತೂಗು ಹಾಕಲ್ಪಟ್ಟಿದೆ. ಇಂದು ಹಿಂದುತ್ವದ ಪುನರುಜ್ಜೀವನದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹಿಂದೂಗಳೇ, ನೀವು ಪಹಲ್ಗಾಮ್ ದಾಳಿಯನ್ನು ಮರೆತಿದ್ದೀರಾ ? ‘ಹಿಂದೂ’ ಎಂಬ ಪದ ಕೇಳಿದ ತಕ್ಷಣ ಹತ್ತಿರದಿಂದ ತಲೆಗೆ ಗುಂಡಿಕ್ಕಲಾಗಿತ್ತು. ಹೀಗಿದ್ದರೂ ಇನ್ನು ಎಷ್ಟು ಕಾಲ ಜಾತ್ಯತೀತತೆಯ ಪೊರೆಯನ್ನು ಕಣ್ಣಿಗೆ ಕಟ್ಟಿಕೊಂಡು ಅಲೆಯುತ್ತೀರಿ ? ‘ಸರ್ವಧರ್ಮಸಮಭಾವ’ದ ಬೋಧನೆಯನ್ನು ಇನ್ನು ಎಷ್ಟು ಕಾಲ ಅಪ್ಪಿಕೊಂಡಿರುತ್ತೀರಿ ? ಹಿಂದೂಗಳು ಇದನ್ನು ಅವಶ್ಯವಾಗಿ ಯೋಚಿಸಬೇಕು.

ಧರ್ಮನಿಷ್ಠರಾಗಿ !

ಒಂದು ಘಟನೆಯಲ್ಲಿ, ತಂದೆಯೊಬ್ಬರು ‘ಕೇರಳ ಸ್ಟೋರಿ-೨’ ಚಿತ್ರವನ್ನು ಮಗಳಿಗೆ ತೋರಿಸಲು ಬಯಸಿದ್ದರು. ಆದರೆ ತಾಯಿ ‘ಈಗ ಅವಳಿಗೆ ಇದೆಲ್ಲಾ ತೋರಿಸಬೇಡಿ’ ಎಂದು ಅಡ್ಡಿಪಡಿಸಿದರು. ಇಂದಿನ ಕಾಲದಲ್ಲಿ ‘ಮಕ್ಕಳಿಗೆ ಏನನ್ನು ತೋರಿಸಬೇಕು ?’ ಎಂಬ ಅರಿವು ಪೋಷಕರಿಗೇ ಇಲ್ಲದ ಮೇಲೆ ಅವರು ಮಕ್ಕಳಿಗೆ ಯಾವ ದಿಕ್ಕು ತೋರಿಸಬಲ್ಲರು ? ಶಿಕ್ಷಣ, ಸ್ವಾತಂತ್ರ್ಯ ಮತ್ತು ಉದ್ಯೋಗದ ಭರಾಟೆಯಲ್ಲಿ ಹಿಂದೂಗಳು ಧಾರ್ಮಿಕ ಪರಂಪರೆಗಳನ್ನು ಧಿಕ್ಕರಿಸಿದ್ದಾರೆ. ಆದ್ದರಿಂದಲೇ ಇತರ ಧರ್ಮೀಯರಲ್ಲಿರುವಂತಹ ಧರ್ಮನಿಷ್ಠೆ ಹಿಂದೂಗಳಲ್ಲಿ ಕಾಣಿಸುತ್ತಿಲ್ಲ. ಈ ಎಲ್ಲಾ ಪರಿಸ್ಥಿತಿಯನ್ನು ನೋಡಿದರೆ ಸಂಕಷ್ಟವು ಬಾಗಿಲ ಬಳಿಯಲ್ಲ, ಮನೆಯ ಒಳಗೇ ನುಗ್ಗಿದೆ. ಇದನ್ನು ಎದುರಿಸಲು ಹಿಂದೂಗಳು ತಕ್ಷಣವೇ ಧರ್ಮನಿಷ್ಠರಾಗಬೇಕು. ಇಲ್ಲದಿದ್ದರೆ ಇಂದು ‘ಬಹುಸಂಖ್ಯಾತ’ರಾಗಿರುವ ನೀವು ನಾಳೆ ‘ಅಲ್ಪಸಂಖ್ಯಾತ’ರಾಗುವುದರಲ್ಲಿ ಸಂಶಯವಿಲ್ಲ. ಜಿಹಾದ್ ಎಂಬ ಸಂಕಷ್ಟವನ್ನು ಹಿಂದೂ ಸಂಘಟನೆಯ ಮೂಲಕ ಹಿಮ್ಮೆಟ್ಟಿಸಿ. ಅದಕ್ಕಾಗಿ ಮೊದಲು ಸಂಘಟಿತರಾಗುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.

ಹಿಂದೂಗಳೇ, ಸಂಕಟ ಮನೆ ಹೊಕ್ಕಿದೆ. ಆದ್ದರಿಂದ ಅದರ ಎದುರಿಸಲು ಸಮಯ ಮೀರುವ ಮುನ್ನ ಜಾತ್ಯತೀತತೆಯನ್ನು ತ್ಯಜಿಸಿ ಧರ್ಮನಿಷ್ಠರಾಗಿ!