ಸನಾತನ ಆಶ್ರಮವು ದೇಶಾದ್ಯಂತದ ಹಿಂದೂಗಳಿಗೆ ಸರಿಯಾದ ದಿಕ್ಕನ್ನು ತೋರಿಸುವ ಕೆಲಸ ಮಾಡುತ್ತಿದೆ! – ಸಂಸದ ಡಾ. ಅನಿಲ್ ಬೋಂಡೆ

  • ಅಮರಾವತಿಯ ಭಾಜಪ ರಾಜ್ಯಸಭಾ ಸಂಸದ ಡಾ. ಅನಿಲ್ ಬೋಂಡೆ ಅವರಿಂದ ರಾಮನಾಥಿ (ಗೋವಾ) ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ!

  • ಹಿಂದೂ ಧರ್ಮದ ತತ್ವಜ್ಞಾನವನ್ನು ಜೀವನದಲ್ಲಿ ಶಾಸ್ತ್ರೀಯವಾಗಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವ ಆಶ್ರಮ!

ಎಡದಿಂದ ಸೌ. ವಸುಧಾ ಬೋಂಡೆ, ಡಾ. ಅನಿಲ್ ಬೋಂಡೆ ಮತ್ತು ಧ್ಯಾನಮಂದಿರದ ಬಗ್ಗೆ ಮಾಹಿತಿ ನೀಡುತ್ತಿರುವ ಶ್ರೀ. ರೋಹಿತ ಸಾಳುಂಖೆ

ರಾಮನಾಥಿ (ಗೋವಾ), ಏಪ್ರಿಲ್ 21 (ವಾರ್ತೆ) – ದೇಶದ ಯುವಕ-ಯುವತಿಯರಿಗೆ ಸರಿಯಾದ ಮಾರ್ಗವನ್ನು ತೋರಿಸುವ ಕೆಲಸವನ್ನು ಸನಾತನ ಸಂಸ್ಥೆ ಮಾಡುತ್ತಿದೆ ಎಂದು ಅಮರಾವತಿಯ ಭಾಜಪ ರಾಜ್ಯಸಭಾ ಸಂಸದ ಹಾಗೂ ಮಹಾರಾಷ್ಟ್ರದ ಮಾಜಿ ಕೃಷಿ ಸಚಿವ ಡಾ. ಅನಿಲ್ ಬೋಂಡೆ ಅವರು ಪ್ರಶಂಸಿಸಿದರು. ಅವರು ಇತ್ತೀಚೆಗೆ ರಾಮನಾಥಿ (ಫೋಂಡಾ, ಗೋವಾ) ಯಲ್ಲಿರುವ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಈ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಅವರ ಪತ್ನಿ ಸೌ. ವಸುಧಾ ಬೋಂಡೆ ಹಾಗೂ ಕೇಂದ್ರ ಸರಕಾರದ ‘ರಾಷ್ಟ್ರೀಯ ಧ್ರುವೀಯ ಮತ್ತು ಸಾಗರ ಸಂಶೋಧನಾ ಕೇಂದ್ರ’ದ ಸಹಾಯಕ ವ್ಯವಸ್ಥಾಪಕ ಶ್ರೀ. ನಿಖಿಲ್ ಗುರವ್ ಉಪಸ್ಥಿತರಿದ್ದರು. ಈ ವೇಳೆ ಸನಾತನ ಸಂಸ್ಥೆಯ ಶ್ರೀ. ರೋಹಿತ್ ಸಾಳುಂಖೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ಅವರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸನಾತನದ ಪೂ. ಪೃಥ್ವಿರಾಜ್ ಹಜಾರೆ ಅವರು ಸಂಸದ ಡಾ. ಬೋಂಡೆ ಅವರನ್ನು ಸತ್ಕರಿಸಿದರು.

ಸತ್ಕಾರದ ಸಂದರ್ಭದಲ್ಲಿ ಎಡದಿಂದ ಪೂ. ಪೃಥ್ವಿರಾಜ ಹಜಾರೆ, ಡಾ. ಅನಿಲ್ ಬೋಂಡೆ ಮತ್ತು ಸೌ. ವಸುಧಾ ಬೋಂಡೆ

ಆಶ್ರಮದ ಕುರಿತು ಮಾತನಾಡಿದ ಡಾ. ಬೋಂಡೆ, “ರಾಮನಾಥಿಯ ಸನಾತನ ಆಶ್ರಮಕ್ಕೆ ಇಂದು ಬರಲು ಸಾಧ್ಯವಾಗಿರುವುದು ನನ್ನ ಸೌಭಾಗ್ಯ. ಇಲ್ಲಿ ನನಗೆ ಒಂದು ವಿಭಿನ್ನವಾದ ಅನುಭೂತಿಯುಂಟಾಯಿತು. ಸನಾತನದ ಸಂಸ್ಥಾಪಕ ಗುರುದೇವ ಡಾ. ಜಯಂತ್ ಅಠವಲೆ ಅವರ ಸಾನ್ನಿಧ್ಯ ಮತ್ತು ಅವರ ತಪಸ್ಸಿನಿಂದ ಈ ಆಶ್ರಮವು ಪಾವನವಾಗಿದೆ. ಇದು ಸದ್ಗುರು ಭಕ್ತರಾಜ್ ಮಹಾರಾಜರ ಆಶೀರ್ವಾದದಿಂದ ನಿರ್ಮಾಣವಾದ ಆಶ್ರಮವಾಗಿದೆ. ಸಮಸ್ತ ಹಿಂದೂಗಳನ್ನು ಜಾಗೃತಗೊಳಿಸುವ ಮತ್ತು ಹಿಂದೂ ಧರ್ಮದ ತತ್ವಜ್ಞಾನವನ್ನು ಜೀವನದಲ್ಲಿ ಶಾಸ್ತ್ರೀಯವಾಗಿ ಪ್ರತ್ಯಕ್ಷವಾಗಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡುವ ಆಶ್ರಮವಿದು. ದೇಶಾದ್ಯಂತದ ಹಿಂದೂಗಳಿಗೆ ಜ್ಞಾನ ಪ್ರಸಾರ ಮಾಡುವುದು ಮತ್ತು ಅವರಿಗೆ ಸರಿಯಾದ ದಾರಿಯನ್ನು ತೋರಿಸುವುದು ಈ ಆಶ್ರಮದ ಮೂಲಕ ನಡೆಯುತ್ತಿದೆ. ನಾನು ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇನೆ. ಸನಾತನದ ಈ ಉನ್ನತ ಕಾರ್ಯಕ್ಕೆ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು,” ಎಂದರು.

ಎಡಭಾಗದಲ್ಲಿ ಶ್ರೀ. ನಿಖಿಲ ಗುರವ್ ಅವರನ್ನು ಸತ್ಕರಿಸುತ್ತಿರುವ ಪೂ. ಪೃಥ್ವಿರಾಜ್ ಹಜಾರೆ

ಅಮರಾವತಿಯ ಲವ್ ಜಿಹಾದ್ ಘಟನೆ ಕೇವಲ ಮಂಜುಗಡ್ಡೆಯ ತುದಿಯಷ್ಟೇ! – ಸಂಸದ ಡಾ. ಅನಿಲ್ ಬೋಂಡೆ

ಅಮರಾವತಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಲವ್ ಜಿಹಾದ್ ಘಟನೆಯ ಬಗ್ಗೆ ಅವರು ಹೀಗೆ ಹೇಳಿದರು:

ಅಮರಾವತಿಯ ‘ಡೆಮೊಗ್ರಾಫಿ’ (ಜನಸಂಖ್ಯಾ ಸ್ವರೂಪ) ಬದಲಾಗುತ್ತಿದೆ. 2001 ರ ಜನಗಣತಿಯ ಪ್ರಕಾರ ಶೇ. 14 ರಷ್ಟಿದ್ದ ಅಮರಾವತಿ ನಗರದ ಮುಸ್ಲಿಂ ಜನಸಂಖ್ಯೆಯು ಈಗ ಶೇ. 25 ಕ್ಕೆ ತಲುಪಿದೆ, ಬಹುಶಃ ಅದಕ್ಕಿಂತಲೂ ಹೆಚ್ಚಿರಬಹುದು. ಇದರಿಂದಾಗಿ ಇಲ್ಲಿ ಲ್ಯಾಂಡ್ ಜಿಹಾದ್, ಲವ್ ಜಿಹಾದ್, ಗೋಹತ್ಯೆಯಂತಹ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಆದ್ದರಿಂದಲೇ ಇಂತಹ ಎಲ್ಲ ಘಟನೆಗಳ ಪ್ರಾರಂಭ ಅಮರಾವತಿಯಿಂದಲೇ ಆಗುತ್ತದೆ. 2022 ರಲ್ಲಿ ತ್ರಿಪುರಾದಲ್ಲಿ ಎಲ್ಲೋ ಮಸೀದಿಯನ್ನು ಸುಡಲಾಗಿದೆ ಎಂದು ಅದರ ಪ್ರತಿಭಟನಾ ಮೆರವಣಿಗೆಯನ್ನು ‘ರಝಾ ಅಕಾಡೆಮಿ’ ಅಮರಾವತಿಯಲ್ಲಿ ನಡೆಸಿತ್ತು.

ಪ್ರಸ್ತುತ ಬೆಳಕಿಗೆ ಬಂದಿರುವ ಹಿಂದೂ ಹುಡುಗಿಯರ ಅಶ್ಲೀಲ ವಿಡಿಯೋಗಳ ಘಟನೆಯು ಕೇವಲ ಒಂದು ಮಂಜುಗಡ್ಡೆಯ ತುದಿಯಷ್ಟೇ (Iceberg’s tip). ಇದರ ವ್ಯಾಪ್ತಿ ಬಹಳ ದೊಡ್ಡದಿದೆ. ಇದರಲ್ಲಿ ಅನೇಕರು ಭಾಗಿಯಾಗಿರಬಹುದು. ಸರಕಾರವು ಅಂತಹವರನ್ನು ಹುಡುಕುವ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಸತ್ಯ ಹೊರಬರಲಿದೆ. ಇಂತಹವರಿಂದ ಸಮಸ್ತ ನಗರವಾಸಿಗಳು, ವಿಶೇಷವಾಗಿ ಯುವತಿಯರು ಎಚ್ಚರದಿಂದಿರುವ ಆವಶ್ಯಕತೆಯಿದೆ.